For Quick Alerts
ALLOW NOTIFICATIONS  
For Daily Alerts

ಬಾಬಾ ರಾಮದೇವ್ ರ ಪತಂಜಲಿ ಸಂಸ್ಥೆಯ ಯಸಸ್ಸಿಗೆ ಕಾರಣಗಳೇನು?

ಭಾರತೀಯ ಮಾರುಕಟ್ಟೆಯಲ್ಲಿ ಪತಂಜಲಿ ಸಂಸ್ಥೆ ಹೊಸ ಛಾಪನ್ನು ಮೂಡಿಸಿದೆ. ಭಾರತದ ಮಾರುಕಟ್ಟೆಗಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕಾಲಿಟ್ಟ ಇ-ಕಾಮರ್ಸ್ ಗ್ರಾಹಕರಿಗೆ ಹೊಸ ಆಯಾಮವೊಂದನ್ನು ಸೃಷ್ಟಿಸಿತು.

By Siddu
|

ಭಾರತೀಯ ಮಾರುಕಟ್ಟೆಯಲ್ಲಿ ಪತಂಜಲಿ ಸಂಸ್ಥೆ ಹೊಸ ಛಾಪನ್ನು ಮೂಡಿಸಿದ್ದು, ಭಾರತದ ಮಾರುಕಟ್ಟೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕಾಲಿಟ್ಟ ಇ-ಕಾಮರ್ಸ್ ಗ್ರಾಹಕರಿಗೆ ಹೊಸ ಆಯಾಮವೊಂದನ್ನು ಸೃಷ್ಟಿಸಿತು.
ಅತಿ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (fast moving consumer goods) ವಿಭಾಗದಲ್ಲಿ ಬರುವ ಸೌಂದರ್ಯ, ಸ್ವಚ್ಛತಾ ಹಾಗೂ ಆರೋಗ್ಯ ಸಂಬಂಧಿ ಉತ್ಪನ್ನಗಳು ಇದುವರೆಗೂ ಕೆಲವೇ ಸಂಸ್ಥೆಗಳ ಹಿಡಿತದಲ್ಲಿತ್ತು. ಈಗ ಈ ವಿಭಾಗಕ್ಕೆ ಕಾಲಿಟ್ಟಿರುವ ಪತಂಜಲಿ ಸಂಸ್ಥೆ ತನ್ನ ಅಸ್ತಿತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದೆ. 20 ರಿಂದ 35 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

 

ಹಾಗಿದ್ದರೆ ಪತಂಜಲಿ ಈ ಮಟ್ಟದ ಯಸಸ್ಸಿನ ನಾಗಾಲೋಟಕ್ಕೆ ಕಾರಣಗಳೇನು ನೋಡೋಣ ಬನ್ನಿ...

ಬ್ರಾಂಡ್ ಮೌಲ್ಯಕ್ಕೆ ಪ್ರಾಮುಖ್ಯತೆ

ಬ್ರಾಂಡ್ ಮೌಲ್ಯಕ್ಕೆ ಪ್ರಾಮುಖ್ಯತೆ

ಸಾಮಾನ್ಯವಾಗಿ ಒಂದು ಸಂಸ್ಥೆಗೆ ಸೇರಿದ ಉತ್ಪನ್ನ ಒಳ್ಳೆಯದಿದ್ದರೆ ಆ ಸಂಸ್ಥೆಯ ಎಲ್ಲಾ ಉತ್ಪನ್ನಗಳು ಒಳ್ಳೆಯದೇ ಇರುತ್ತದೆ ಎಂಬ ಭಾವನೆಯನ್ನು ಗ್ರಾಹಕರು ಹೊಂದಿರುತ್ತಾರೆ. ಆದರೆ ಜನಪ್ರಿಯತೆ ಪಡೆದುಕೊಳ್ಳಲು ಕೇವಲ ಹೆಸರು ಮಾತ್ರವೇ ಇದ್ದರೆ ಸಾಲದು. ಪತಂಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರಕುವ ಇತರ ಸಂಸ್ಥೆಗಳ ಉತ್ಪನ್ನಗಳಿಗೂ ಕಡಿಮೆ ಬೆಲೆಯುಳ್ಳದ್ದಾಗಿವೆ. ಪತಂಜಲಿ ಎಂಬ ಬ್ರಾಂಡ್ ಜನಮಾನಸದಲ್ಲಿ ಗಟ್ಟಿಯಾಗಿ ಕೂತಿದೆ.

ಜನಪ್ರಿಯ ಬ್ರಾಂಡ್ ಅಂಬಾಸಿಡರ್

ಜನಪ್ರಿಯ ಬ್ರಾಂಡ್ ಅಂಬಾಸಿಡರ್

ಯಾವುದೇ ಉತ್ಪನ್ನ ಚೆನ್ನಾಗಿದೆ ಎಂದು ನಾವು ನೀವು ಹೇಳಿದರೆ ಜನ ನಂಬುವುದಿಲ್ಲ. ಪತಂಜಲಿ ಉತ್ಪನ್ನಗಳಲ್ಲಿ ಸ್ವತಃ ಯೋಗಗುರುವೇ ಆಗಿರುವ ಬಾಬಾ ರಾಮ್ ದೇವ್ ರವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಬಳಸಲಾಗಿದ್ದು, ಇವರು ಹೇಳಿದ ಮಾತೇ ವೇದವಾಕ್ಯ ಎಂದು ಜನತೆ ಪರಿಗಣಿಸಿರುವ ಕಾರಣ ಈ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿವೆ.

ಗ್ರಾಹಕನ ಆಯ್ಕೆಯೇ ಇಲ್ಲಿ ಅಂತಿಮ
 

ಗ್ರಾಹಕನ ಆಯ್ಕೆಯೇ ಇಲ್ಲಿ ಅಂತಿಮ

ಗ್ರಾಹಕರ ಆಯ್ಕೆಯನ್ನು ಅರಿತು ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ತಮ್ಮ ಸ್ಪರ್ಧಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿರುವುದೇ ಈ ಪತಂಜಲಿ ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಹೊಸತನ ಅಥವಾ ಬದಲಾವಣೆಗೆ ಹೆಚ್ಚಿನ ಆದ್ಯತೆ

ಹೊಸತನ ಅಥವಾ ಬದಲಾವಣೆಗೆ ಹೆಚ್ಚಿನ ಆದ್ಯತೆ

ಯಾವುದೇ ಸಂಸ್ಥೆಯ ಒಂದೇ ಉತ್ಪನ್ನವನ್ನೇ ನೆಚ್ಚಿಕೊಳ್ಳದೇ ತನ್ನ ಉತ್ಪನ್ನಗಳನ್ನು ಉನ್ನತೀಕರಿಸುತ್ತಾ, ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಲೇ ಮುಂದುವರೆಯಬೇಕು. ಇಂದು ಮಾರುಕಟ್ಟೆಯಲ್ಲಿ ಸಾವಿರಾರು ಉತ್ಪನ್ನಗಳಿದ್ದು ಗ್ರಾಹಕರ ಬೇಡಿಕೆಯನ್ನು ಸಾವಿರ ರೂಪದಲ್ಲಿ ಪೂರೈಸುತ್ತಿದ್ದಾಗ ಇದೇ ಪರಿಯಲ್ಲಿ ಪತಂಜಲಿ ಸಹಾ ತನ್ನ ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ತೋರಿಸಿದೆ. ಈ ವೈವಿಧ್ಯತೆಯನ್ನು ನಕಲು ಮಾಡಲು ಅಥವಾ ಸ್ಪರ್ಧಿಸಲು ಇತರರಿಗೆ ಕಷ್ಟವಾಗಿದೆ ಎಂದು ಈ ವಿಭಾಗದ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಮಾದ್ಯಮದ ಗಮನ ಸೆಳೆದಿರುವುದು

ಮಾದ್ಯಮದ ಗಮನ ಸೆಳೆದಿರುವುದು

ಬಾಬಾ ರಾಮ್ ದೇವ್ ಯೋಗಗುರುಗಳಾಗಿ ಭಾರತದ ಹಾಗು ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಮಾದ್ಯಮ, ಟಿವಿ ಚಾನೆಲ್ ಗಳ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ನೀಡೀದ್ದಾರೆ. ಇದೇಲ್ಲವೂ ಪತಂಜಲಿಯ ಯಸಸ್ಸಿನ ಭಾಗವಾಗಿದೆ.

ಸ್ವದೇಶಿ ಕಂಪನಿ, ಸ್ವದೇಶಿ ಉತ್ಪನ್ನ

ಸ್ವದೇಶಿ ಕಂಪನಿ, ಸ್ವದೇಶಿ ಉತ್ಪನ್ನ

ಪತಂಜಲಿ ದೇಶೀಯ ಕಂಪೆನಿಗಳ ಸಹಯೋಗದೊಂದಿಗೆ ಅಸ್ತಿತ್ವದಲ್ಲಿರುವುದು ಬಹುಮುಖ್ಯ ಸಂಗತಿಯಾಗಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಇರುವುದು ವಿಭಿನ್ನ ವಿಷಯವಾಗಿದೆ. "ಹಮಾರಾ ಎಕ್ ಸಿಂಪಲ್ ಫಂಡಾ ಹೈ (We have a simple principle: we want to replace MNCs) MNCs ಕೊ ಬದಲಿಗೆ ಕಾರ್ನಾ (ನಾವು ಸರಳವಾದ ತತ್ವವನ್ನು ಹೊಂದಿದ್ದೇವೆ: ನಾವು MNC ಗಳನ್ನು ಬದಲಿಸಲು ಬಯಸುತ್ತೇವೆ)" ಎಂದು ರಾಮ್ ದೇವ್ ಹೇಳಿದರು.

English summary

Baba Ramdev, Balkrishna and Patanjali's success

In 1995, Ramdev was a little known yoga teacher in Haridwar when his close associate, Acharya Balkrishna, and him set up Divya Pharmacy - under the aegis of Ramdev 's guru, Swami Shankar Dev's, ashram - to make Ayurvedic and herbal medicines.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X