For Quick Alerts
ALLOW NOTIFICATIONS  
For Daily Alerts

ಇವರು ದೇಶವನ್ನು ಲೂಟಿ ಮಾಡಿ ಓಡಿ ಹೋದ ದೇಶಭ್ರಷ್ಟರು

By Siddu
|

ಭಾರತವನ್ನು ಲೂಟಿ ಪರಾರಿಯಾಗುತ್ತಿರುವ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಮನಿ ಲಾಂಡರಿಂಗ್ ಪ್ರಕರಣಗಳು ಜೋರಾಗಿ ನಡೆಯುತ್ತಿವೆ. ಕಪ್ಪು ಹಣದಿಂದ ತಪ್ಪಿಸಿಕೊಂಡು ಬ್ಯಾಂಕುಗಳ ಹಣವನ್ನು ದರೋಡೆ ಮಾಡಿ ನಂತರ ಅನೇಕ ಭಾರತೀಯ ಉದ್ಯಮಿಗಳು ಓಡಿ ಹೋಗಿದ್ದಾರೆ. ಮೊನ್ನೆಯವರೆಗೆ ವಿಜಯ್ ಮಲ್ಯ ಬಗ್ಗೆ ಮಾತನಾಡುತ್ತಿದ್ದವರು ಇದೀಗ ನಿರವ್ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ.

ಹಣಕಾಸಿನ ಭ್ರಷ್ಟಾಚಾರಗಳನ್ನು ಮಾಡಿ ಭಾರತದಿಂದ ಓಡಿಹೋದವರ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ಇವರನ್ನು ಕಾನೂನಿನ ಮುಂದೆ ನಿಲ್ಲಿಸಲು ದೇಶಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ದುಖದ ಸಂಗತಿ..

ನಿರವ್ ಮೋದಿ
 

ನಿರವ್ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಆಗಿರುವ ರೂ. 11,300 ಕೋಟಿಗಳ ಹಗರಣ ದೇಶದೆಲ್ಲೆಡೆ ಬಹುವಾಗಿ ಚರ್ಚೆಯಾಗುತ್ತಿದ್ದು, ಇದು ಎಲ್ಲರಿಗೂ ತಿಳಿದಿರುವ ಸಂಗತಿಯೆ. ಮನಿ ಲಾಂಡರಿಂಗ್, ಹಣಕಾಸಿನ ಭೃಷ್ಟಾಚಾರದಲ್ಲಿ ಸಿಲುಕಿರುವ ನಿರವ್ ಮೋದಿ ಬಂಧನದಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಆತ ಪ್ರಸ್ತುತ ಸ್ವಿಟ್ಜರ್ಲೆಂಡ್ ನಲ್ಲಿದ್ದಾರೆ ಎಂದು ನಂಬಲಾಗಿದೆ.

ವಿಜಯ್ ಮಲ್ಯ

ವಿಜಯ್ ಮಲ್ಯ

ಕಿಂಗ್ಫಿಶರ್ ಏರ್ಲೈನ್ಸ್ ಮತ್ತು ಯುಬಿ ಗ್ರೂಪ್ ಮಾಲೀಕ ವಿಜಯ್ ಮಲ್ಯ ಭಾರತದ ತೊರೆದ ಇನ್ನೊಬ್ಬ ವ್ಯಕ್ತಿಯೆನಿಸಿದ್ದಾರೆ. ವಿಜಯ್ ಮಲ್ಯ ವಿರುದ್ಧ ರೂ. 900 ಕೋಟಿ ಭೃಷ್ಟಾಚಾರದ ಅರೋಪವಿದ್ದು, ಅನೇಕ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳನ್ನು ಮಲ್ಯ ಪಾವತಿಸಿಲ್ಲ. ವಿಜಯ್ ಮಲ್ಯ ಇದೀಗ ಲಂಡನ್ ನಲ್ಲಿದ್ದಾರೆ ಹಾಯಾಗಿ ಇದ್ದಾರೆ.

ಲಲಿತ್ ಮೋದಿ

ಲಲಿತ್ ಮೋದಿ

ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಐಪಿಎಲ್ ನಿರ್ವಾಹಕ ಲಲಿತ್ ಮೋದಿ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಮನಿ ಲಾಂಡರಿಂಗ್, ಬಿಸಿಸಿಐನಲ್ಲಿನ ಆರ್ಥಿಕ ನಿರ್ಬಂಧಗಳ ಕಾರಣದಿಂದ ನಿಷೇಧಿಸಿತು.

ಕ್ರಿಕೆಟ್ ಆಡಳಿತಾಧಿಕಾರಿಯಾಗಿ ಲಲಿತ್ ಮೋದಿ ಮನಿ ಲಾಂಡರಿಂಗ್ ಆರೋಪಿಯೆನಿಸಿದರು. ಪ್ರಸ್ತುತ ಯುಕೆಯಲ್ಲಿ ವಾಸವಾಗಿದ್ದಾರೆ.

ದೀಪಕ್ ತಲ್ವಾರ್
 

ದೀಪಕ್ ತಲ್ವಾರ್

ಕಾರ್ಪೋರೇಟ್ ಲಾಬಿಸ್ಟ್ ದೀಪಕ್ ತಲವಾರ್ ಸುಮಾರು ರೂ. 1000 ಕೋಟಿ ಲಂಚದ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಐದು ಪ್ರಕರಣಗಳನ್ನು ದಾಖಲಿಸಿದೆ. ವಾಯುಯಾನ ಹಗರಣದಲ್ಲೂ ಕೂಡ ಇವರ ಹೆಸರು ಎಂದು ನಂಬಲಾಗಿದೆ. ಕಳೆದ ವರ್ಷ ಜೂನ್ ನಲ್ಲಿ ಐಟಿ ಅಧಿಕಾರಿಗಳು ಇವರ ಮನೆ ಮೇಲೆ ದಾಳಿ ನಡೆಸಿದ್ದರು.

ವಿಮಾನಯಾನ ವಲಯದಲ್ಲಿ ಸಕ್ರಿಯವಾಗಿರುವ ದೀಪಕ್ ತಲ್ವಾರ್ ಮತ್ತು ಟೆಲಿಕಾಂ ಮತ್ತು ವಾಯುಯಾನ ವ್ಯವಹಾರಗಳ ದಲ್ಲಾಳಿ. ಯುಪಿಎ ಆಡಳಿತದ ಅವಧಿಯಲ್ಲಿ ತನ್ನ ಗ್ರಾಹಕರ ಅನುಕೂಲಕ್ಕಾಗಿ ಅಧಿಕಾರಿಗಳಿಗೆ ಲಂಚ ನೀಡಿದ್ದರು ಎಂದು ತನಿಖೆಯು ತಿಳಿಸಿದೆ. ಪ್ರಸ್ತುತ ತಲ್ವಾರ್ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿದ್ದಾರೆ.

ಸಂಜಯ್ ಭಂಡಾರಿ

ಸಂಜಯ್ ಭಂಡಾರಿ

ಶಸ್ತ್ರಾಸ್ತ್ರ ವಿತರಕ ಆಗಿರುವ ಸಂಜಯ್ ಭಂಡಾರಿಯನ್ನು ತೆರಿಗೆ ವಂಚನೆ ಪ್ರಕರಣದ ಅಡಿ ಜಾರಿ ನಿರ್ದೇಶನಾಲಯವು ರೂ. 26 ಕೋಟಿ ಆರೋಪವಿದೆ. ಸಂಜಯ್ ಭಂಡಾರಿಯನ್ನು ದೆಹಲಿ ನ್ಯಾಯಾಲಯವು ಅಧಿಕೃತ ಸೆಕ್ಟ್ ಆಕ್ಟ್ ಅಡಿಯಲ್ಲಿ ದೋಷಾರೋಪಣೆ ಮಾಡಿದೆ. ಈ ಸಮಯದಲ್ಲಿ ದೇಶ ತೊರೆದಿದ್ದು, ನೇಪಾಳದಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

English summary

5 Indian Businessman Who left the Country Due To Scam

Read about 5 Indian offenders who run away from the country due to their scam.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more