For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್‌ 2018: ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೊಸ್, ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ

ಫೋರ್ಬ್ಸ್‌ ನಿಯತಕಾಲಿಕೆ 2018ರ ಜಗತ್ತಿನ ಅತ್ಯಂತ ಸಿರಿವಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಜೆಫ್ ಬೆಜೊಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದೇಶದ ಅತಿ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್ ಮುಖ್ಯಸ್ಥ ಮ

By Siddu
|

ಫೋರ್ಬ್ಸ್‌ ನಿಯತಕಾಲಿಕೆ 2018ರ ಜಗತ್ತಿನ ಅತ್ಯಂತ ಸಿರಿವಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಜೆಫ್ ಬೆಜೊಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದೇಶದ ಅತಿ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

 

ಅಂಬಾನಿ ನಂಬರ್ 1

ಅಂಬಾನಿ ನಂಬರ್ 1

ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡುತ್ತಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸತತವಾಗಿ ಕಳೆದ 11 ವರ್ಷಗಳಿಂದ ಮುಕೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಸುಮಾರು ರೂ. 2.60 ಲಕ್ಷ ಕೋಟಿ ಸಂಪತ್ತು ಹೊಂದಿರುವ ಅಂಬಾನಿ ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಜಾಗತಿಕವಾಗಿ ಕಳೆದ ವರ್ಷ 33ನೇ ಸ್ಥಾನದಲ್ಲಿದ್ದ ಅಂಬಾನಿ ಈ ಬಾರಿ ವರ್ಷ 19ನೇ ಸ್ಥಾನಕ್ಕೆ ಏರಿದ್ದಾರೆ. ಮುಕೇಶ್ ಅಂಬಾನಿಯ ಆಸ್ತಿ ಶೇ. 72.84ರಷ್ಟು ಏರಿಕೆಯಾಗಿದೆ.

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೆಜೊಸ್

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೆಜೊಸ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಫೋರ್ಬ್ಸ್‌ ನಿಯತಕಾಲಿಕೆ 2018ರ ಪಟ್ಟಿಯಲ್ಲಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಜೆಫ್ ಬೆಜೊಸ್ ರೂ. 7.28 ಲಕ್ಷ ಕೋಟಿ ಮೌಲ್ಯದ ಒಡೆಯರಾಗಿದ್ದು, ಅಮೆಜಾನ್‌ನ ಷೇರುಗಳ ಮೌಲ್ಯ ಒಂದು ವರ್ಷದಲ್ಲಿ ಶೇ. 59ರಷ್ಟು ಹೆಚ್ಚಾಗಿದೆ.

ಬಿಲ್ ಗೇಟ್ಸ್
 

ಬಿಲ್ ಗೇಟ್ಸ್

ಸತತ ಕಳೆದ 18 ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಬಿಲ್ ಗೇಟ್ಸ್ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಲ್ ಗೇಟ್ಸ್ ನಿವ್ವಳ ಮೌಲ್ಯವು 91.2 ಬಿಲಿಯನ್ ಡಾಲರ್ ಆಗಿದೆ. ಮೂರನೇ ಸ್ಥಾನದಲ್ಲಿ ವಾರೆನ್ ಬಫೆಟ್ ಇದ್ದಾರೆ.

ಭಾರತದ ಅಗ್ರ ಶ್ರೀಮಂತರು

ಭಾರತದ ಅಗ್ರ ಶ್ರೀಮಂತರು

1. ಮುಕೇಶ್ ಅಂಬಾನಿ (ರೂ. 2.60 ಲಕ್ಷ ಕೋಟಿ)
2. ಅಜೀಂ ಪ್ರೇಮ್ ಜಿ (ರೂ. 1.20 ಲಕ್ಷ ಕೋಟಿ)
3. ಲಕ್ಷ್ಮಿ ಮಿತ್ತಲ್ (ರೂ. 1.18 ಲಕ್ಷ ಕೋಟಿ)
4. ಶಿವ ನಾಡಾರ್ (ರೂ. 93 ಸಾವಿರ ಕೋಟಿ)
5. ದಿಲೀಪ್ ಸಾಂಘ್ವಿ (ರೂ. 81 ಸಾವಿರ ಕೋಟಿ)

ಭಾರತದ ಅಗ್ರ ಮಹಿಳಾ ಶ್ರೀಮಂತರು

ಭಾರತದ ಅಗ್ರ ಮಹಿಳಾ ಶ್ರೀಮಂತರು

1. ಸಾವಿತ್ರಿ ಜಿಂದಾಲ್ (8.8 ಬಿಲಿಯನ್ ಡಾಲರ್)
2. ಕಿರಣ್ ಮಜುಂದಾರ್ (3.6 ಬಿಲಿಯನ್ ಡಾಲರ್)
3. ಸ್ಮಿತಾ ಕೃಷ್ಣ (2.9 ಬಿಲಿಯನ್ ಡಾಲರ್)
4. ಅನು ಅಗಾ (1.4 ಬಿಲಿಯನ್ ಡಾಲರ್)
5. ಅನು ಅಗಾ (1.1 ಬಿಲಿಯನ್ ಡಾಲರ್)

English summary

Forbes Billionaires List For 2018:.Mukesh ambani India's Richest

India has 121 billionaires -- 19 more than last year -- making them the third largest group of the ultra-rich after those from the US and China, according to Forbes, the business magazine that produces an annual list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X