For Quick Alerts
ALLOW NOTIFICATIONS  
For Daily Alerts

2029 ರವರೆಗೆ ಮೋದಿ ಆಳ್ವಿಕೆ ನಡೆಸುತ್ತಾರೆ! ಅರ್ಥವ್ಯವಸ್ಥೆ ಮೇಲೆ ಮೋದಿ ಪ್ರಭಾವ ಏನು?

By Siddu
|

ಪ್ರಧಾನಿ ನರೇಂದ್ರ ಮೋದಿಯವರ ವಾರ್ಷಿಕ ವೇತನ ಎಷ್ಟು ಗೊತ್ತೆ?

ಪ್ರಾಬಲ್ಯತೆ - ಅರ್ಥವ್ಯವಸ್ಥೆ
 

ಪ್ರಾಬಲ್ಯತೆ - ಅರ್ಥವ್ಯವಸ್ಥೆ

ಅಂತರಾಷ್ಟ್ರೀಯ ಮಟ್ಟದ ಬಲಿಷ್ಠತೆಯನ್ನು ಆ ದೇಶದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಗಣಿಸಿದರೆ ಅಮೆರಿಕಾ ಮತ್ತು ಚೀನಾ ಮೊದಲೆರಡು ಸ್ಥಾನದಲ್ಲಿ ವೇಗವಾಗಿ ಬೆಳೆಯುತ್ತಿವೆ.

ಆದರೆ ಸುದೀರ್ಘ ಜಾಗತಿಕ ಸವಾಲುಗಳಾದ ಹವಾಮಾನ ಬದಲಾವಣೆ, ಬಡತನ ಅಥವಾ ಶಾಂತಿ ಸೌಹಾರ್ದತೆ ಮುಂತಾದ ವಿಷಯಗಳು ಬಂದಾಗ ಯಾವ ದೆಶದ ನಾಯಕರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂಬುದನ್ನು ಗುರುತಿಸುವುದು ಕೂಡಾ ಮುಖ್ಯವಾಗಿದೆ.

ಇದರಲ್ಲಿ ಪ್ರಜಾಪ್ರಭುತ್ವವಾದಿಗಳು, ಸರ್ವಾಧಿಕಾರಿಗಳು ಅಥವಾ ಎಲ್ಲವುಗಳ ನಡುವಿನ ಸಂಭಾವ್ಯ ಪ್ರತಿಸ್ಪರ್ಧಿಗಳನ್ನು ನಿಯಂತ್ರಿಸುವವರು ಕೂಡ ಇದ್ದಾರೆ.

ಅರ್ಥವ್ಯವಸ್ಥೆ ಮೇಲೆ ಮೋದಿಯ ಪ್ರಭಾವ

ದೇಶದ ಆರ್ಥಿಕತೆಯನ್ನು ಸುಧಾರಿಸಲು ಪ್ರಧಾನಿ ಮೋದಿಯವರು ಕಳೆದ ಮೂರುವರೆ ವರ್ಷಗಳಲ್ಲಿ ಹಲವು ಮಹತ್ವಪೂರ್ಣ ಹೆಜ್ಜೆಗಳನ್ನಿಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ನೋಟು ನಿಷೇಧ, ಜಿಎಸ್ಟಿ ಜಾರಿ ಪ್ರಮುಖ ನಿರ್ಧಾರಗಳಾಗಿವೆ. ವಿದೇಶದಲ್ಲಿರುವ ಕಪ್ಪುಹಣ ತರುವ ನಿಟ್ಟಿನಲ್ಲಿ ಸ್ವಿಟ್ಜರ್ಲ್ಯಾಂಡ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ.

ಜಾಗತಿಕ ಆರ್ಥಿಕತೆ ಹಾಗು ನಾಯಕತ್ವದ ಮೇಲೆ ಪ್ರಭಾವ ಬೀರಬಲ್ಲ 11 ದೇಶಗಳ ನಾಯಕರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1. ಮಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯಾ

ಕ್ರೌನ್ ಪ್ರಿನ್ಸ್ ಮಹಮ್ಮದ್ ಬಿನ್ ಸಲ್ಮಾನ್ ಇನ್ನೂ ರಾಜನಾಗಿಲ್ಲ. ಆದರೆ ಅವರು ಸೌದಿ ಅರೇಬಿಯಾವನ್ನು ಈಗಾಗಲೇ 32 ನೇ ವಯಸ್ಸಿನಲ್ಲಿ ಪರಿಣಾಮಕಾರಿಯಾಗಿ ನಡೆಸುತ್ತಿದ್ದಾರೆ. ಅವರ ತಂದೆ ಕಿಂಗ್ ಸಲ್ಮಾನ್ ಗೆ 82 ವರ್ಷವಾಗಿದೆ. ಇವರು ದೇಶದ ರಾಜಕೀಯ, ಸಂಸ್ಕೃತಿ, ಸಮಾಜ ಮತ್ತು ಆರ್ಥಿಕತೆಯನ್ನು ದೀರ್ಘಕಾಲದವರೆಗೆ ನಡೆಸಿಕೊಂಡು ಹೋದರೆ 50 ವರ್ಷಗಳ ಕಾಲ ನಾಯಕತ್ವದಲ್ಲಿರುತ್ತಾರೆ ಎಂದು ವಿಶ್ಲೇಷಿಸಲಾಗಿದೆ.

2017 - Named crown prince

2018 - Projected aramco IPO date

2030 - Plans for transformation of Saaudi arabia run through 2030

2044 - Price could be in power for decades

2. ಕಿಮ್ ಜೋಂಗ್ ಉನ್, ಉತ್ತರ ಕೊರಿಯಾ

ಸರ್ವಾಧಿಕಾರಿ ಖ್ಯಾತಿಯ ಕಿಮ್ ಜೋಂಗ್ ಉನ್ ಪರಮಾಣು, ಕ್ಷೀಪಣಿ ಪರೀಕ್ಷೆ, ಪ್ರಬಲ ಅಣ್ವಸ್ತ್ರ ಮೂಲಕ ಉದ್ದಟನ ತೋರುತ್ತಾ ಯುದ್ದದಾಹದಲ್ಲಿದ್ದಾರೆ. ಇದು ಸುತ್ತಮುತ್ತಲ ದೇಶಗಳಲ್ಲಿ ನಡುಕ ಹುಟ್ಟಿಸಿದೆ. ಕಿಮ್ ಜೋಂಗ್ ಉನ್ ಸರ್ವಾಧಿಕಾರದಿಂದಾಗಿ ಹಲವು ವರ್ಷಗಳವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

3. ಕ್ಸಿ ಜಿನ್ ಪಿಂಗ್, ಚೀನಾ
 

3. ಕ್ಸಿ ಜಿನ್ ಪಿಂಗ್, ಚೀನಾ

ಚೀನಾದ ಅಧ್ಯಕ್ಷ ಕ್ಸಿ ಜಿಂನ್ ಪಿಂಗ್ ಎಲ್ಲಿಯವರೆಗೆ ಉಳಿಯುತ್ತಾರೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ.

2012 - Xi takes power

2017 - Consolidate position at communist party congress

2018 - China repeals term limits for president

4. ವ್ಲಾಡಿಮಿರ್ ಪುಟಿನ್, ರಷ್ಯಾ

18 ವರ್ಷಗಳ ಕಾಲ ರಷ್ಯಾವನ್ನು ಆಳಿದ ವ್ಲಾದಿಮಿರ್ ಪುಟಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ 77 ಪ್ರತಿಶತವನ್ನು ಗೆದ್ದಿದ್ದಾರೆ. ಕ್ರಮಬದ್ದವಾಗಿ ಎಲ್ಲಾ ಹಂತಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

2000- First election victory

2008-12- Maintains control as PM

2018- Putin expected to win another election

5. ರೆಸೆಪ್ ತೈಯೆಪ್ ಎರ್ಡಾಗನ್, ಟರ್ಕಿ

2019 ರ ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಪುನಹ ಆಯ್ಕೆಯಾದರೆ ರೆಸೆಪ್ ತೈಯೆಪ್ ಎರ್ಡಾಗನ್ ಇನ್ನಷ್ಟು ಪ್ರಭಾವಶಾಲಿಯಾಗಬಹುದು. 2029 ರವರೆಗೆ ಇವರು ಅಧಿಕಾರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

6. ನರೇಂದ್ರ ಮೋದಿ

ಭಾರತದ ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಮೋದಿ 2019ರ ಚುನಾವಣೆಯಲ್ಲಿ ಜಯಗಳಿಸುವ ನಿರೀಕ್ಷೆಯಿದೆ. 2024ರ ಮೂರನೇ ಅವಧಿಗೂ ಕೂಡ ಮೋದಿ ಮುಂದುವರೆಯಲಿದ್ದಾರೆ ಎಂದು ವಿಶ್ಲೇಷಲಾಗಿದೆ.

2014- ಚುನಾವಣಾ ಗೆಲುವು

2019- ಎರಡನೇ ಬಾರಿ ಗೆಲ್ಲುವ ನಿರೀಕ್ಷೆ

2024- 2024ರ ಚುನಾವಣೆಯಲ್ಲಿ ಸಮರ್ಥ ಪ್ರತಿಸ್ಪರ್ಧಿ ಇಲ್ಲದೆ 2029ರವರೆಗೆ ಅಧಿಕಾರ ಸಾಧ್ಯತೆ

7. ಅಲಿ ಖಮೆನಿ, ಇರಾನ್

ಇರಾನಿಯನ್ ಅಧ್ಯಕ್ಷ ಅಲಿ ಖಮೇನಿ ಪ್ರಸ್ತುತ 78 ವರ್ಷ ವಯಸ್ಸಿನವರಾಗಿದ್ದು, 2027 ರವರೆಗೆ ಆಳ್ವಿಕೆ ನಡೆಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

8. ಎಮ್ಯಾನುಯೆಲ್ ಮ್ಯಾಕ್ರಾನ್, ಫ್ರಾನ್ಸ್

ಪ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಎರಡನೇ ಬಾರಿಗೆ ಯಶಸ್ವಿಯಾಗಿ 2027 ರವರೆಗೆ ಅಧಿಕಾರದಲ್ಲಿರುತ್ತಾರೆ.

9. ನಿಕೋಲಾಸ್ ಮಡುರೊ, ವೆನೆಜುವೆಲಾ

ವಿವಿಧ ತೊಂದರೆಗಳು ಮತ್ತು ಹಣಕಾಸಿನ ಬಿಕ್ಕಟ್ಟು ಹೊಂದಿರುವ ವೆನೆಜುವೆಲಾವನ್ನು ಯಶಸ್ವಿಯಾಗಿ ನಡೆಸುವಲ್ಲಿ ನಿಕೋಲಸ್ ಮಡುರೊ ಮುಂಚೂಣಿಯಲ್ಲಿದ್ದಾರೆ. ಮುಂದಿನ 2024ರಲ್ಲಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ.

10. ಡೊನಾಲ್ಡ್ ಟ್ರಂಪ್, ಅಮೆರಿಕಾ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಚುನಾವಣೆಯಲ್ಲಿ ಗೆದ್ದರೆ, ಅವರು 2024 ರವರೆಗೆ ಅಧ್ಯಕ್ಷರಾಗುತ್ತಾರೆ. ಇವರು 2016 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ.

11. ಬೆಂಜಮಿನ್ ನೇತನ್ಯಾಹು, ಇಸ್ರೇಲ್

ಬೆಂಜಮಿನ್ ರಾಜಕೀಯದಲ್ಲಿ ಭಾರೀ ಅನುಭವ ಹೊಂದಿದ್ದು, 2019ರಲ್ಲಿ ಪೊಲೀಸ್ ತನಿಖೆಯ ಫಲವಾಗಿ ಪುನರ್ ಚುನಾವಣೆ ಸಾಧ್ಯತೆ ಇದೆ. ಬೆಂಜಮಿನ್ 2023ರವರೆಗೆ ಅಧಿಕಾರದಲ್ಲಿರುವ ಸಾಧ್ಯತೆ ಇದೆ.

ಆರ್ಥಿಕ ಅಭಿವೃದ್ಧಿಯಲ್ಲಿ ಜನಕಲ್ಯಾಣ ಯೋಜನೆಗಳ ಪಾತ್ರ

ನರೇಂದ್ರ ಮೋದಿಯವರು ದೇಶದ ಸಮಗ್ರ ಸುಧಾರಣೆಗಾಗಿ ಹಲವು ಜನಕಲ್ಯಾಣ ಹಾಗು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ತಂದಿರುವುದು ಭಾರತದ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿದೆ. ಅಂತಹ ಯೋಜನೆಗಳಲ್ಲಿ ಜನ್ ಧನ್ ಯೋಜನೆ, ಮುದ್ರಾ ಯೋಜನೆ, ಅವಾಸ್ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ದಿ ಯೋಜನೆ, ಫಸಲ್ ಬಿಮಾ ಯೋಜನೆ, ಮೋದಿಕೇರ್, ಡಿಜಿಟಲ್ ಇಂಡಿಯಾ ಮುಂತಾದ ಯೋಜನೆಗಳು ಪ್ರಮುಖವೆನಿಸಿವೆ.

English summary

Narendra Modi may Rule till 2019! Which country leader stays longer?

Modi, 67, is by far the most popular Indian politician; the opposition Congress Party is weak and lacks a charismatic leader
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more