For Quick Alerts
ALLOW NOTIFICATIONS  
For Daily Alerts

ಇವರು ಬಾಲಿವುಡ್ ನ 10 ಅತೀ ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತಾ?

|

ಮನರಂಜನಾ ಉದ್ಯಮ, ಅದರಲ್ಲೂ ವಿಶೇಷವಾಗಿ ಚಲನಚಿತ್ರ ನಿರ್ಮಾಣ ಕ್ಷೇತ್ರವು ಜಗತ್ತಿನಲ್ಲಿಯೇ ಅತೀ ಹೆಚ್ಚು ಸಂಭಾವನೆಯನ್ನು ಪಾವತಿಸುವ ಉದ್ದಿಮೆಯಾಗಿ ಬೆಳೆದು ನಿಂತಿದೆ. ಇಂದು ಮೆರ್ವ್ ಗ್ರಿಫಿನ್ ಅವರಂತಹ ಜಗತ್ತಿನ ಕೆಲವು ಅತ್ಯಂತ ಶ್ರೀಮಂತ ವ್ಯಕ್ತಿಗಳು, ತಾವು ಹೊಂದಿರುವ ಅಪಾರ ಪ್ರಮಾಣದ ಸಂಪತ್ತಿಗಾಗಿ ಚಲನಚಿತ್ರೋದ್ಯಮಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಲೇಬೇಕು. ಹಾಲಿವುಡ್ ಗೆ ತೀರಾ ಹತ್ತಿರದ ಪೈಪೋಟಿಯನ್ನು ನೀಡುತ್ತಿರುವ ಬಾಲಿವುಡ್ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದಿ ಚಲನಚಿತ್ರ ರಂಗ ಕೂಡಾ ವಿಶ್ವದಲ್ಲಿಯೇ ಅತೀ ಶ್ರೀಮಂತರು ಎನಿಸಿಕೊಂಡಿರುವ ನಟರು ಇದ್ದಾರೆ.

ಚಲನಚಿತ್ರಗಳ ನಿರ್ಮಾಣ ಹಾಗೂ ಟಿಕೇಟ್ ಗಳ ಮಾರಾಟದ ದೃಷ್ಟಿಯಿಂದ ಇಂದು ಬಾಲಿವುಡ್, ಹಾಲಿವುಡ್ ಅನ್ನೂ ಮೀರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಪಾಶ್ಚಾತ್ಯ ನಟರೂ ಸಹ ಇಂದು ಬಾಲಿವುಡ್ ನಲ್ಲಿ ಸಕ್ರಿಯವಾಗಲು ಮುಂದೆ ಬರುತ್ತಿರುವುದು ನಿಜಕ್ಕೂ ಧನಾತ್ಮಕ ಬೆಳವಣಿಗೆಯ ಸಂಕೇತವೇ ಸರಿ. 2018 ಕ್ಕೆ ಅನ್ವಯವಾಗುವಂತೆ ದೇಶದ ಹತ್ತು ಅತ್ಯಂತ ಶ್ರೀಮಂತ ಬಾಲಿವುಡ್ ನಟರ ಕುರಿತಂತೆ ಈ ಕೆಳಗೆ ಪ್ರಸ್ತಾವಿಸಲಾಗಿದೆ. ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

10. ಸೈಪ್ ಅಲಿ ಖಾನ್ (ನಿವ್ವಳ ಆಸ್ತಿ ಮೌಲ್ಯ: 140 ಮಿಲಿಯನ್ ಡಾಲರ್)
 

10. ಸೈಪ್ ಅಲಿ ಖಾನ್ (ನಿವ್ವಳ ಆಸ್ತಿ ಮೌಲ್ಯ: 140 ಮಿಲಿಯನ್ ಡಾಲರ್)

ಒಂದು ಕಾಲದಲ್ಲಿ ಬಾಲಿವುಡ್ ನ ಪ್ರಖ್ಯಾತ ನಟಿಯೆಂದೆನಿಸಿಕೊಂಡಿದ್ದ ಶರ್ಮಿಳಾ ಠಾಗೋರ್ ಅವರ ಪುತ್ರನಾಗಿರುವ ಸೈಪ್ ಅಲಿ ಖಾನ್, ಇಂದು ಓರ್ವ ಪ್ರಮುಖ ಬಾಲಿವುಡ್ ನಟ ಹಾಗೂ ಜೊತೆಗೆ ನಿರ್ಮಾಪಕನೂ ಹೌದು. ಇಸವಿ 1993 ರಲ್ಲಿ "ಪರಂಪರಾ" ಎಂಬ ಹೆಸರಿನ ಸಿನೆಮಾದ ಮೂಲಕ ಚಲನಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಸಾರ್ವಜನಿಕ ದೃಷ್ಟಿಯಿಂದ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ 2001 ರ ದಿಲ್ ಚಾಹ್ತಾ ಹೈ ಮತ್ತು 2003 ರ ಕಲ್ ಹೋ ನ ಹೋ ಚಲನಚಿತ್ರಗಳು ಸೈಪ್ ಅವರನ್ನು ಖ್ಯಾತಿಯ ಉತ್ತುಂಗದತ್ತ ಒಯ್ದವು. ಸೈಪ್ ಅವರ ಯಶಸ್ವಿ ವೃತ್ತಿ ಜೀವನಕ್ಕೆ ಹೊಸ ಭಾಷ್ಯ ಬರೆದ ಇತರ ಕೆಲವು ಚಲನಚಿತ್ರಗಳೆಂದರೆ 2004 ರ ಹಮ್ ತುಮ್, 2005 ರ ಪರಿಣೀತಾ, 2006 ರ ಓಂಕಾರ್, 2009 ರ ಲವ್ ಆಜ್ ಕಲ್ ಹಾಗೂ 2013 ರ ರೇಸ್ ಇವೇ ಮೊದಲಾದವುಗಳು. ತನ್ನ ವೃತ್ತಿಜೀವನದಲ್ಲಿಅತ್ಯುತ್ತಮ ನಟನಿಗಾಗಿ ಕೊಡಲ್ಪಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪದ್ಮಶ್ರೀ ಹಾಗೂ ಆರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನೂ ಸೈಪ್ ಅಲಿ ಖಾನ್ ಅವರು ಬಾಚಿಕೊಂಡಿದ್ದಾರೆ. ಭಾರತದ ಟಾಪ್ 10 ಅತೀ ಶ್ರೀಮಂತ ಖ್ಯಾತ ಸೆಲೆಬ್ರೆಟಿಗಳು

9. ಜಾನ್ ಅಬ್ರಹಾಂ (ನಿವ್ವಳ ಆಸ್ತಿ ಮೌಲ್ಯ: 55 ಮಿಲಿಯನ್ ಡಾಲರ್)

ಒಂದು ಕಾಲದಲ್ಲಿ ಓರ್ವ ಮಾಡೆಲ್ ಆಗಿದ್ದ ಜಾನ್ ಅಬ್ರಹಾಂ ಇಂದು ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ಯಶೋಗಾಥೆಯನ್ನು ಹಾಡಿರುವ ಓರ್ವ ನಟ ಹಾಗೂ ನಿರ್ಮಾಪಕ. 2003 ರಲ್ಲಿ "ಜಿಸ್ಮ್" ಎಂಬ ಚಿತ್ರದ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿರಿಸಿದ ಜಾನ್ ಅಂದಿನಿಂದ ಇಂದಿನವರೆಗಿನ ಕಿರು ಅವಧಿಯಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ. ಜಾನ್ ಅವರು ಐವತ್ತಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದು, ಅವುಗಳ ಪೈಕಿ ಧೂಮ್ (2004), ಜಿಂದಾ (2006), ಬಾಬುಲ್ (2006), ಟ್ಯಾಕ್ಸಿ ನಂ. 9211 (2006), ಹೌಸ್ ಪುಲ್ 2 (2012), ರೇಸ್ 2 (2013), ಮತ್ತು ಡಿಷೂಮ್ (2016) ನಂತಹ ಕೆಲವು ಚಲನಚಿತ್ರಗಳು ಖ್ಯಾತ ಬಾಲಿವುಡ್ ನಟರ ಪಟ್ಟಿಯಲ್ಲಿ ಜಾನ್ ಅವರಿಗೂ ಸ್ಥಾನವನ್ನು ಗಳಿಸಿಕೊಟ್ಟಿವೆ.

8. ಸಂಜಯ್ ದತ್ (ನಿವ್ವಳ ಆಸ್ತಿ ಮೌಲ್ಯ: 55 ಮಿಲಿಯನ್ ಡಾಲರ್)

ಜನಪ್ರಿಯವಾಗಿ "ಡೆಡ್ಲಿ ದತ್" ಎಂದು ಕರೆಯಲ್ಪಡುವ ಖ್ಯಾತ ಚಲನಚಿತ್ರ ನಟ ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ಅವರು ಓರ್ವ ಚಲನಚಿತ್ರ ನಿರ್ಮಾಪಕ ಹಾಗೂ ನಟ. 1993 ರಿಂದ 2016 ರವರೆಗೂ ಸಂಜಯ್ ಅವರು ಶಸ್ತ್ರಾಸ್ತ್ರ/ಮಾರಕಾಸ್ತ್ರಗಳ ಅಕ್ರಮ ದಾಸ್ತಾನು ಹೊಂದಿದ್ದಕ್ಕಾಗಿ ಅಪರಾಧಿ ಎಂದು ಪರಿಗಣಿತನಾಗಿದ್ದರೂ ಸಹ ಇವರು ಬಾಲಿವುಡ್ ನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅಭಿನಯ ಕ್ಷೇತ್ರಕ್ಕೆ ಇಸವಿ 1981 ರಲ್ಲಿ ಕಾಲಿರಿಸಿದ ಸಂಜಯ್ ಅವರು ಇದುವರೆಗೂ ನೂರಕ್ಕಿಂತಲೂ ಅಧಿಕ ಸಂಖ್ಯೆಯ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

7. ರಣಬೀರ್ ಕಪೂರ್ (ನಿವ್ವಳ ಆಸ್ತಿ ಮೌಲ್ಯ: 66 ಮಿಲಿಯನ್ ಡಾಲರ್)
 

7. ರಣಬೀರ್ ಕಪೂರ್ (ನಿವ್ವಳ ಆಸ್ತಿ ಮೌಲ್ಯ: 66 ಮಿಲಿಯನ್ ಡಾಲರ್)

ರಣಬೀರ್ ತಾರಾಮಣಿಗಳ ವಂಶದ ಕುಡಿ ಆಗಿರುವುದರಿಂದ ತನ್ನ ಹೆತ್ತವರಾದ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರಿಂದಲೇ ನಟನಾ ಪ್ರತಿಭೆಯನ್ನು ಬಳುವಳಿಯಾಗಿ ಪಡೆದುಕೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಂದು ರಣಬೀರ್ ಅವರು ಬಾಲಿವುಡ್ ಚಲನಚಿತ್ರೋದ್ಯಮದ ಖ್ಯಾತ ನಟ ಹಾಗೂ ನಿರ್ಮಾಪಕರೆಂದೆನಿಸಿಕೊಂಡಿದ್ದಾರೆ. 2007 ರ ಸಾವರಿಯಾ ಚಲನಚಿತ್ರದ ಮೂಲಕ ರಣಬೀರ್ ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಬಾನೆತ್ತರಕ್ಕೆ ಚಿಮ್ಮಲು ಅವರಿಗೆ ನೆರವಾದ ಅವರ ಅಭಿನಯದ ಕೆಲವು ಚಿತ್ರಗಳೆಂದರೆ ರಾಕೆಟ್ ಸಿಂಗ್: ಸೇಲ್ಸ್ ಮನ್ ಆಫ಼್ ದ ಇಯರ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿಯಂತಹ ಕೆಲವು ಚಿತ್ರಗಳು. ತನ್ನ ಜನಪ್ರಿಯತೆಯ ಕಾರಣದಿಂದಾಗಿ ಅನೇಕ ಬ್ರಾಂಡೆಡ್ ಕಂಪನಿಗಳ ರಾಯಭಾರತ್ವವನ್ನು ರಣಬೀರ್ ಅವರು ಪಡೆದುಕೊಂಡಿದ್ದರಿಂದ, ಇವೆಲ್ಲವೂ ಅವರ ಆಸ್ತಿ ಮೌಲ್ಯಾಂಕನಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿವೆ. ತನ್ನ ಅಮೋಘ ಅಭಿನಯ ಪ್ರತಿಭೆಯ ಕಾರಣಕ್ಕಾಗಿ ರಣಬೀರ್ ಕಪೂರ್ ಅವರಿಗೆ ಇದುವರೆಗೆ ಐದು ಪಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. ರಣಬೀರ್ ಕಪೂರ್ ಅವರು ಮುಂಬಯಿ ಸಿಟಿ ಪುಟ್ಬಾಲ್ ಕ್ಲಬ್ ನ ಸಹಮಾಲೀಕನೂ ಹೌದು.

6. ಹೃತಿಕ್ ರೋಶನ್ (ನಿವ್ವಳ ಆಸ್ತಿ ಮೌಲ್ಯ: 70 ಮಿಲಿಯನ್ ಡಾಲರ್)

ಹೃತಿಕ್ ರೋಶನ್ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಬಾಲಿವುಡ್ ಚಿತ್ರೋದ್ಯಮದ ಅತ್ಯಂತ ಜನಪ್ರಿಯ ನಟ ಎಂದೆನಿಸಿಕೊಂಡಿದ್ದಾರೆ. ಅಭಿನಯ ಕ್ಷೇತ್ರಕ್ಕೆ ಸಕ್ರಿಯವಾಗಿ ಕಾಲಿಡುವುದಕ್ಕೆ ಮುನ್ನ ಹೃತಿಕ್ ಅವರು ಕಹೋನಾ ಪ್ಯಾರ್ ಹೈ (2000) ನಂತಹ ತನ್ನ ತಂದೆಯ ನಿರ್ಮಾಣದ ನಾಲ್ಕು ಅತ್ಯಂತ ಯಶಸ್ವಿ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಆರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ವೃತ್ತಿಜೀವನದಲ್ಲಿ ಅತೀ ವೇಗದ ಬೆಳವಣಿಗೆಯನ್ನು ಸಾಧಿಸಲು ಅವರಿಗೆ ನೆರವಾದ ಚಲನಚಿತ್ರಗಳೆಂದರೆ ಅವು ಕೋಯಿ ಮಿಲ್ ಗಯಾ (2003), ಕ್ರಿಶ್ (2006), ಧೂಮ್ 2, ಕ್ರಿಶ್ 3 (2013). ಇವೇಲ್ಲವುಗಳ ಜೊತೆಗೆ ಹೃತಿಕ್ ಅವರು ಅಂತರಾಷ್ಟ್ರೀಯ ಕಂಪನಿಗಳೊಂದಿಗೆ ಹಾಗೂ ಇತರ ಜನಪ್ರಿಯ ಬ್ರಾಂಡೆಡ್ ಕಂಪನಿಗಳ ರಾಯಭಾರತ್ವವನ್ನೂ ಪಡೆದುಕೊಂಡಿರುವುದರಿಂದ ಅವರ ಒಟ್ಟು ಆಸ್ತಿ ಮೌಲ್ಯವು ಗಣನೀಯ ಪ್ರಮಾಣದ್ದಾಗಿದೆ.

5. ಅಕ್ಷಯ್ ಕುಮಾರ್ (ನಿವ್ವಳ ಆಸ್ತಿ ಮೌಲ್ಯ: 185 ಮಿಲಿಯನ್ ಡಾಲರ್)

ಬಾಲಿವುಡ್ ನ ಅತ್ಯುತ್ತಮ ನಟರುಗಳ ಪೈಕಿ ಜಗತ್ತಿನಾದ್ಯಂತ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ಇಪ್ಪತ್ತು ನಟರ ಪೈಕಿ ಒಬ್ಬರೆಂದು ಫೋರ್ಬ್ಸ್ ನಿಯತಕಾಲಿಕೆಯಿಂದ ಶ್ಲಾಘನೆಗೊಳಗಾಗಿರುವ, ಮಾರ್ಷಲ್ ಆರ್ಟ್ಸ್ ಪಟು ಹಾಗೂ ಚಿತ್ರ ನಿರ್ಮಾಪಕನೂ ಆಗಿರುವ ವ್ಯಕ್ತಿ ಅಕ್ಷಯ್ ಕುಮಾರ್ ಆಗಿದ್ದಾರೆ. ತೊಂಭತ್ತರ ದಶಕದಿಂದಲೂ ರಜತ ಪರದೆಯಲ್ಲಿ ಸಕ್ರಿಯರಾಗಿರುವ ಅಕ್ಷಯ್ ಕುಮಾರ್ ಖಿಲಾಡಿ ಸೀರೀಸ್, ವಕ್ತ್ ಹಮಾರಾ ಹೈ 1993, ಮೋಹ್ರಾ 1994, ಸಪೂತ್ 1996 ನಂತಹ ಚಲನಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇವುಗಳ ಜೊತೆಗೆ ತನ್ನ ವೃತ್ತಿಜೀವನದಲ್ಲಿ ಅಕ್ಷಯ್ ಅವರು ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳ ಪೈಕಿ ವಿಮರ್ಶಾತ್ಮಕ ಹಾಗೂ ವಾಣಿಜ್ಯಾತ್ಮಕ ದೃಷ್ಟಿಯಿಂದ ಬಹು ಯಶಸ್ಸನ್ನು ಕಂಡ ತೀರಾ ಇತ್ತೀಚಿಗಿನ ಕೆಲವು ಚಲನಚಿತ್ರಗಳೆಂದರೆ ಭಗಂ ಭಾಗ್ (2006), ಹೌಸ್ ಪುಲ್ 2 (2012), ಹಾಲಿಡೇ (2014), ಏರ್ ಲಿಫ಼್ಟ್ (2016), ಹಾಗೂ ಹೌಸ್ ಪುಲ್ 3 (2016) ಚಲನಚಿತ್ರಗಳಾಗಿವೆ.

4. ಅಮೀರ್ ಖಾನ್ (ನಿವ್ವಳ ಆಸ್ತಿ ಮೌಲ್ಯ: 185 ಮಿಲಿಯನ್ ಡಾಲರ್)

ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಖ್ಯಾತನಾಮರ ಪೈಕಿ ಒಬ್ಬರೆಂದೆನಿಸಿಕೊಂಡಿರುವವರು ಅಮೀರ್ ಖಾನ್. ಅಮೀರ್ ಖಾನ್ ಓರ್ವ ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಹೌದು. ಪ್ರಾರಂಭದಲ್ಲಿ ಖಯಾಮತ್ ಸೇ ಖಯಾಮತ್ ತಕ್ (1988) ಹಾಗೂ ರಾಖ್ (1989) ನಂತಹ ಚಲನಚಿತ್ರಗಳು ಖ್ಯಾತಿಯನ್ನು ತಂದುಕೊಟ್ಟವು. 2001 ರಲ್ಲಿ ಅಮೀರ್ ತನ್ನದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಘಜನಿ (2008), 3 ಈಡಿಯೆಟ್ಸ್ (2009), ಧೂಮ್ 3 (2013) ಮತ್ತು ಪಿಕೆ (2014) ಯಂತಹ ಸಾಲು ಸಾಲು ಸೂಪರ್ ಹಿಟ್ ಚಲನಚಿತ್ರಗಳನ್ನು ಬಿಡುಗಡೆಗೊಳಿಸಿದರು. ಬಾಕ್ಸ್ ಆಫೀಸ್ ಅನ್ನು ಸಾರ್ವಕಾಲಿಕವಾಗಿ ಕೊಳ್ಳೆ ಹೊಡೆದ ಚಲನಚಿತ್ರಗಳೆಂಬ ಹೆಗ್ಗಳಿಕೆಗೆ ಇಂದಿಗೂ ಈ ಚಿತ್ರಗಳು ಪಾತ್ರವಾಗಿವೆ.

3. ಸಲ್ಮಾನ್ ಖಾನ್ (ನಿವ್ವಳ ಆಸ್ತಿ ಮೌಲ್ಯ: 220 ಮಿಲಿಯನ್ ಡಾಲರ್)

ಬಾಲಿವುಡ್ ನ ಅತ್ಯಂತ ಜನಪ್ರಿಯ ಹಾಗೂ ವಾಣಿಜ್ಯಾತ್ಮಕವಾಗಿ ಅತ್ಯಂತ ಯಶಸ್ಸನ್ನು ಸಾಧಿಸಿರುವ ನಟರುಗಳ ಪೈಕಿ ಸಲ್ಮಾನ್ ಖಾನ್ ರನ್ನು ಬಾಲಿವುಡ್ ನ ವ್ಯಾಘ್ರ ಅಥವಾ ಬಾಕ್ಸ್ ಆಫೀಸ್ ಕಿಂಗ್ ಎಂದೂ ಸಂಬೋಧಿಸುವುದುಂಟು. ಸಲ್ಮಾನ್ ಓರ್ವ ವೃತ್ತಿಪರ ನಟ, ದೂರದರ್ಶನದ ಕಾರ್ಯಕ್ರಮಗಳ ನಿರ್ವಾಹಕ ಹಾಗೂ ಓರ್ವ ನಿರ್ಮಾಪಕ. ಬಾಲಿವುಡ್ ಚಲನಚಿತ್ರಗಳ ಇತಿಹಾಸದಲ್ಲಿಯೇ ಸಿಕ್ಕಾಪಟ್ಟೆ ಹಣ ಗಳಿಸಿದ ದಾಖಲೆಯುಳ್ಳ ಸುಲ್ತಾನ್ (2016), ಭಜರಂಗಿ ಭಾಯಿಜಾನ್ (2015), ದಬಾಂಗ್ (2010) ಹಾಗೂ ಬಾಡಿಗಾರ್ಡ್ (2011) ನಂತಹ ಕೆಲವು ಅಮೋಘ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಇಸವಿ 2014-2015 ರ ಸಾಲಿನಲ್ಲಿ ಖಾನ್ ಅವರು ಅತೀ ಹೆಚ್ಚು ಸಂಭಾವನೆಯನ್ನು ಪಡೆದ ನಟ ಆಗಿರುವುದರೊಂದಿಗೆ ದೇಶದ ಅತ್ಯಂತ ಜನಪ್ರಿಯ ನಟನೆಂದೂ ಕರೆಸಿಕೊಂಡಿದ್ದರು.

2. ಅಮಿತಾಭ್ ಬಚ್ಚನ್ (ನಿವ್ವಳ ಆಸ್ತಿ ಮೌಲ್ಯ: 220 ಮಿಲಿಯನ್ ಡಾಲರ್)

ಬಾಲಿವುಡ್ ನ ಶಹೆನ್ ಷಾ ಅಥವಾ ಬಿಗ್ ಬಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಮಿತಾಭ್ ಬಚ್ಚನ್ ಅವರು ಸಾರ್ವಕಾಲಿಕವಾಗಿ ಬಾಲಿವುಡ್ ಚಲನಚಿತ್ರ ಜಗತ್ತಿನ ಅತ್ಯಂತ ಪ್ರಭಾವೀ ನಟ ಎಂದೆನಿಸಿಕೊಂಡಿದ್ದಾರೆ. ಬರೋಬ್ಬರಿ ನಾಲ್ಕು ದಶಕಗಳಿಗಿಂತಲೂ ಸುಧೀರ್ಘಾವಧಿಯಿಂದ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದು ಇನ್ನೂರಕ್ಕಿಂತಲೂ ಅಧಿಕ ಸಂಖ್ಯೆಯ ಚಲನಚಿತ್ರಗಳಲ್ಲಿ ನಟಿಸಿರುವ ಅಮಿತಾಭ್ ಅವರು ನಿಜ ಅರ್ಥದಲ್ಲಿ ಬಾಲಿವುಡ್ ನ ದಂತಕಥೆಯೇ ಆಗಿದ್ದಾರೆ.
ತನ್ನ ವೃತ್ತಿ ಜೀವನದಲ್ಲಿ ಕಲಾ ಜಗತ್ತಿಗೆ ತಾನು ನೀಡಿರುವ ಕೊಡುಗೆಗಾಗಿ ಭಾರತ ಸರಕಾರ ಪದ್ಮಶ್ರೀ, ಪದ್ಮಭೂಷಣ್, ಪದ್ಮವಿಭೂಷಣ್ ನಂತಹ ಹಲವಾರು ಪ್ರಶಸ್ತಿಗಳು ದೊರೆತಿವೆ. ಅದ್ವಿತೀಯ ವೃತ್ತಿ ಪರತೆಯನ್ನು ಮೆರೆದಿರುವುದಕ್ಕಾಗಿ ಅಮಿತಾಭ್ ಅವರಿಗೆ ಫ಼್ರೆಂಚ್ ಸರಕಾರವು ನೈಟ್ ಆಪ್ ದ ಲೆಜಿಯನ್ ಆಫ್ ಹಾನರ್ ಎಂಬ ಗೌರವವನ್ನು ನೀಡಿದೆ. ವಿಶೇಷವಾಗಿ ಭಾರತ ದೇಶದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಅಮಿತಾಭ್ ಬಚ್ಚನ್ ಅವರು ಓರ್ವ ಮಾನವತಾವಾದಿಯೂ ಹೌದು.

1. ಶಾರುಖ್ ಖಾನ್

ಎಸ್ ಆರ್ ಕೆ ಅಥವಾ ಬಾಲಿವುಡ್ ಬಾದಷಹ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಶಾರುಖ್ ಖಾನ್ ಬಾಲಿವುಡ್ ಚಲನಚಿತ್ರ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಶಾರುಖ್ ಖಾನ್ 2018 ರ ಹತ್ತು ಅತ್ಯಂತ ಶ್ರೀಮಂತ ಬಾಲಿವುಡ್ ನಟರ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನಲಂಕರಿಸಿದ್ದಾರೆ. ನೂರಕ್ಕೂ ಅಧಿಕ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಾರುಖ್ ಖಾನ್ ತನ್ನ ವೃತ್ತಿಜೀವನದಲ್ಲಿ ಹದಿನೈದು ಫಿಲ್ಮ್ ಫೇರ್ ಪ್ರಶಸ್ತಿಗಳೊಂದಿಗೆ ಹಲವು ಇನ್ನಿತರ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಚಲನಚಿತ್ರರಂಗದ ಪ್ರತಿಷ್ಟಿತ ಹೆಸರುಗಳಲ್ಲಿ ಶಾರುಖ್ ಅವರ ಹೆಸರೂ ಒಂದಾಗಿದ್ದು, ಅವರ ಹೆಸರಿನ ಜೌನ್ನತ್ಯವು ಬಾಲಿವುಡ್ ಗಷ್ಟೇ ಸೀಮಿತವಾಗಿಲ್ಲ ಬದಲಿಗೆ ಅಂತರಾಷ್ಟ್ರೀಯ ಮಟ್ಟದವರೆಗೂ ಚಾಚಿಕೊಂಡಿದೆ. ಶಾರುಖ್ ಅವರು ಭಾರತ ಸರಕಾರದಿಂದ ಪದ್ಮಶ್ರೀ ಪಡೆದುಕೊಂಡಿದ್ದಾರೆ.

ಕೊನೆ ಮಾತು

ಹಣಕಾಸಿನ ಗಳಿಕೆಗೆ ಸಂಬಂಧಪಟ್ಟ ಹಾಗೆ ಹೇಳುವುದಾದರೆ, ಮನರಂಜನಾ ಜಗತ್ತು ನಿಮಗೆ ಕುಬೇರನ ಖಜಾನೆಯನ್ನೇ ಕೊಡಮಾಡಬಲ್ಲದು. ಆದರೆ ಅದನ್ನು ಸಾಧ್ಯವಾಗಿಸಿಕೊಳ್ಳುವುದು ಮಾತ್ರ ನಿಮ್ಮ ಕೌಶಲ್ಯ ಮತ್ತು ನಿಮಗಿರುವ ಪ್ರತಿಭೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಗದಲ್ಲಿ ಬರುವ ಈ ಎಲ್ಲಾ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಹಾಗೂ ತನ್ಮೂಲಕ ತಾವು ಮಾಡುವ ಕೆಲಸಗಳಲ್ಲಿ ನಿಷ್ಣಾತರಾಗಿರುವವರು ಆಗಿದ್ದಾರೆ. ಒಂದು ವೇಳೆ ನೀವೂ ಸಹ ಓರ್ವ ಯಶಸ್ವಿ ನಟನಾಗಬೇಕೆಂಬ ಹಂಬಲವುಳ್ಳವರು ಆಗಿದ್ದಲ್ಲಿ, ನಾವು ಈ ಮೇಲೆ ಪ್ರಸ್ತಾವಿಸಿರುವ ನಟರ ಆತ್ಮಚರಿತ್ರೆಗಳನ್ನು ಸಂಶೋಧಿಸಿರಿ. ಅವರ ಹೆಜ್ಜೆಯ ಗುರುತುಗಳನ್ನು ಅನುಸರಿಸಿರಿ. ಹೀಗೆ ಮಾಡುವುದರ ಮೂಲಕ ನೀವೂ ಸಹ ಮುಂದೊಂದು ದಿನ ಅವರುಗಳಂತೆಯೇ ಓರ್ವ ಮಹಾನ್ ನಟ ಆಗಬಹುದು.

Read more about: bollywood money finance news india
English summary

Top 10 Richest Bollywood Actors, Who is number 1?

The top 10 richest Bollywood actors as of 2018 in India we have.
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more