Englishहिन्दी മലയാളം தமிழ் తెలుగు

ಅಂಚೆ ಕಚೇರಿ ಪೇಮೆಂಟ್ ಬ್ಯಾಂಕಿಂಗ್ ಏಪ್ರಿಲ್ 1ರಿಂದ ಆರಂಭ

Posted By: Siddu
Subscribe to GoodReturns Kannada

ಅಂಚೆ ಕಚೇರಿ ಗ್ರಾಹಕರಿಗೆ ಸಿಹಿಸುದ್ದಿ ಇದ್ದು, ಅಂಚೆ ಕಚೇರಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಏಪ್ರಿಲ್ 1ರಿಂದ ಆರಂಭವಾಗಲಿದೆ.
ಅಂಚೆ ಕಚೇರಿ ಪೇಮೆಂಟ್ ಬ್ಯಾಂಕಿಂಗ್ ವಿಸ್ತರಣಾ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಏಪ್ರಿಲ್ 1ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ.

ದೇಶದ 3ನೇ ಪೇಮೆಂಟ್ ಬ್ಯಾಂಕ್

ಏಪ್ರಿಲ್ ನಿಂದ ಸೇವೆ ಪ್ರಾರಂಭಿಸಲಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಭಾರತದ ಮೂರನೇ ದೊಡ್ಡ ಪೇಮೆಂಟ್ ಬ್ಯಾಂಕ್ ಎನಿಸಲಿದೆ. ಏರ್ಟೆಲ್ ಹಾಗು ಪೇಟಿಎಂ ಮೊದಲೆರಡು ಸ್ಥಾನಗಳಲ್ಲಿವೆ.
ದೇಶದಾದ್ಯಂತ ಒಟ್ಟು 1.55 ಲಕ್ಷ ಪೋಸ್ಟ್ ಆಫೀಸ್ ಗಳಲ್ಲಿ ಸೇವೆ ಆರಂಭವಾಗಲಿದೆ. ಪೋಸ್ಟ್ ಮಾಸ್ಟರ್ ಹಾಗೂ ಅಂಚೆ ಕಚೇರಿ ಶಾಖೆಗಳ ಮೂಲಕ ಈ ಸೇವೆ ಜನರನ್ನು ತಲುಪಲಿದೆ. ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಖಾತೆ ಇದೆಯೇ? ಇಲ್ಲಿ ನೋಡಿ...

650 ಶಾಖೆಗಳು

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) 650 ಶಾಖೆಗಳಲ್ಲಿ ಅಂತರ್ಜಾಲ ಕೆಲಸ ಮಾಡಲಿದೆ. ದೇಶದಾದ್ಯಂತ ಪೇಮೆಂಟ್ ಬ್ಯಾಂಕ್ ಸೇವೆ ವ್ಯಾಪಿಸಿಕೊಂಡರೆ ಆರ್ಥಿಕ ನೆಟ್ವರ್ಕ್ ಮತ್ತಷ್ಟು ಬಲಗೊಳ್ಳಲಿದೆ ಎಂದು ಭಾರತೀಯ ಅಂಚೆ ಇಲಾಖೆ ಹೇಳಿದೆ.

1 ಲಕ್ಷ ಹಣ ಜಮೆ

ಗ್ರಾಹಕರು ಅಂಚೆ ಕಚೇರಿ ಪಾವತಿ ಬ್ಯಾಂಕ್ ನಲ್ಲಿ 1 ಲಕ್ಷದವರೆಗೆ ಹಣ ಜಮೆ ಮಾಡಬಹುದು. ಹಣ ಜಮಾ, ವರ್ಗಾವಣೆಯ ಜತೆಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ. ಇಲ್ಲಿ ಸಾಲ ಸೌಲಭ್ಯ ಇರುವುದಿಲ್ಲ.

English summary

Indian Post Office Payments Bank to start work from April

Indian Post Office Payments Bank to start work from April.
Story first published: Saturday, March 31, 2018, 15:54 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns