For Quick Alerts
ALLOW NOTIFICATIONS  
For Daily Alerts

ಕಂಪನಿಗಳು ಉದ್ಯೋಗಿಗಳ ಪಿಎಫ್ ಹಣ ವಂಚಿಸಿದರೆ ಇಪಿಎಫ್ಒ ತಿಳಿಸಲಿದೆ

ಉದ್ಯೋಗದಾತ ಕಂಪನಿಗಳು ಉದ್ಯೋಗಿಗಳ ಪಿಎಫ್ ಖಾತೆಗೆ ಪ್ರತಿ ತಿಂಗಳೂ ನಿಗದಿತ ಅವಧಿಯಲ್ಲಿ ತಮ್ಮ ಪಾಲನ್ನು ನೀಡದೇ ಹೋದರೆ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ಚಂದಾದಾರರಿಗೆ ತಿಳಿಸಲಿದೆ ಎಂದು ಹೇಳಿದೆ.

|

ಉದ್ಯೋಗದಾತ ಕಂಪನಿಗಳು ಉದ್ಯೋಗಿಗಳ ಪಿಎಫ್ ಖಾತೆಗೆ ನಿಗದಿತ ಅವಧಿಯಲ್ಲಿ ತಮ್ಮ ಪಾಲನ್ನು ನೀಡದೇ ಹೋದರೆ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ಚಂದಾದಾರರಿಗೆ ತಿಳಿಸಲಿದೆ ಎಂದು ಹೇಳಿದೆ.

 
ಕಂಪನಿಗಳು ಉದ್ಯೋಗಿಗಳ ಪಿಎಫ್ ಹಣ ವಂಚಿಸಿದರೆ ಇಪಿಎಫ್ಒ ತಿಳಿಸಲಿದೆ

ಹಲವು ಕಂಪನಿಗಳು ತಮ್ಮ ಕೊಡುಗೆ ಮೊತ್ತವನ್ನು ಪಿಎಫ್ ಖಾತೆಗೆ ಹಾಕದೆ ಉದ್ಯೋಗಿಗಳಿಗೆ ವಂಚನೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಇನ್ನುಮುಂದೆ ಇಪಿಎಫ್ಒ ವಂಚನೆಗಳ ಕುರಿತು ತನ್ನ ಉದ್ಯೋಗಿಗಳಿಗೆ ಎಸ್ಎಂಎಸ್/ಇಮೇಲ್‌ ಸಂದೇಶವನ್ನು ಕಳುಹಿಸಲಿದೆ. ಕಂಪನಿಗಳು ಉದ್ಯೋಗಿಗಳ ಪಿಎಫ್ ಹಣವನ್ನು ವಂಚಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಇಪಿಎಫ್ಒ ಇದನ್ನು ತಡೆಗಟ್ಟಲು ಮುಂದಾಗಿದೆ.

 

ಪ್ರಸ್ತುತ ಇಪಿಎಫ್ಒ ಸಂಸ್ಥೆ ಪಿಎಫ್ ಖಾತೆಗೆ ಉದ್ಯೋಗಿಗಳ ಕೊಡುಗೆ ಮೊತ್ತ ಜಮೆಯಾದಾಗ ಮಾತ್ರ (ಯುಎಎನ್ ನೋಂದಣಿಯಾಗಿರಬೇಕು) ಎಸ್‌ಎಂಎಸ್‌ ಮತ್ತು ಇಮೇಲ್‌ ಮೂಲಕ ಸಂದೇಶವನ್ನು ಕಳುಹಿಸುತ್ತಿದೆ. ಆದರೆ ಇದೀಗ ಉದ್ಯೋಗದಾತರು ಹಣ ಜಮೆ ಮಾಡದ ಸಂದರ್ಭದಲ್ಲೂ ಎಸ್ಎಂಎಸ್ ಕಳುಹಿಸಲಿದೆ ಎಂದು ತಿಳಿಸಿದೆ.

ಪ್ರತಿ ತಿಂಗಳು ಪಿಎಫ್ ಖಾತೆಗೆ ಎಷ್ಟು ಹಣ ಜಮೆಯಾಗಿದೆ, ಖಾತೆಯಲ್ಲಿ ಎಷ್ಟು ಹಣ ಇದೆ, ಉದ್ಯೋಗದಾತರು ಎಷ್ಟು ಹಣ ಜಮಾ ಮಾಡಿದ್ದಾರೆ ಇತ್ಯಾದಿ ವಿವರಗಳ ಬಗ್ಗೆ ಸಂದೇಶ/ಇಮೇಲ್ ಮುಖಾಂತರ ಇಪಿಎಫ್ಒ ಮಾಹಿತಿ ನೀಡಲಿದೆ. ಮಿಸ್ಡ್ ಕಾಲ್ ಸೌಲಭ್ಯವಿದೆ. ಜತೆಗೆ ಆನ್ಲೈನ್ ನಲ್ಲಿ ಇ-ಪಾಸ್ಬುಕ್ ಪರಿಶೀಲಿಸಬಹುದಾಗಿದೆ.

English summary

EPFO to inform members if employers delay depositing their contribution

Retirement fund body EPFO on Wednesday said that it will inform its subscribers if contributions are not deposited by their employers with the body for a given month in due time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X