For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

ದೇಶದ ಪ್ರಮುಖ ಎಚ್‌ಡಿಎಫ್‌ಸಿ ಬ್ಯಾಂಕ್ ನಿಗದಿತ ಠೇವಣಿಗಳ ಮೇಲಿನ ಬಡ್ಡಿದರವನ್ನು 100 ಬೇಸಿಸ್ ಪಾಯಿಂಟ್ ಅಂದರೆ ಶೇ. 1 ರಷ್ಟು ಹೆಚ್ಚಿಸಿದೆ. ಹೊಸ ಬಡ್ಡಿದರಗಳು ಏಪ್ರಿಲ್ 24 ಮಂಗಳವಾರದಿಂದ ಜಾರಿಯಾಗಿವೆ.

|

ದೇಶದ ಪ್ರಮುಖ ಎಚ್‌ಡಿಎಫ್‌ಸಿ ಬ್ಯಾಂಕ್ ನಿಗದಿತ ಠೇವಣಿಗಳ ಮೇಲಿನ ಬಡ್ಡಿದರವನ್ನು 100 ಬೇಸಿಸ್ ಪಾಯಿಂಟ್ ಅಂದರೆ ಶೇ. 1 ರಷ್ಟು ಹೆಚ್ಚಿಸಿದೆ. ಹೊಸ ಬಡ್ಡಿದರಗಳು ಏಪ್ರಿಲ್ 24 ಮಂಗಳವಾರದಿಂದ ಜಾರಿಯಾಗಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

ಬ್ಯಾಂಕ್ ನ ಈ ಪ್ರಮುಖ ಹೆಜ್ಜೆಯಿಂದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಶೇ. 7ರಷ್ಟು ಹಾಗು ಹಿರಿಯ ನಾಗರಿಕರಿಗೆ ಶೇ. 7.5ರಷ್ಟು ಬಡ್ಡಿದರ ಸಿಗಲಿದೆ. ಒಂದು ಕೋಟಿಗಿಂತ ಹೆಚ್ಚಿನ ಠೇವಣಿ ಇಡುವ ಗ್ರಾಹಕರಿಗೆ ಇದಕ್ಕಿಂತ ಹೆಚ್ಚಿನ ಬಡ್ಡಿದರ ಲಭ್ಯವಾಗಲಿದೆ.
ಪ್ರಸ್ತುತ, ಎಚ್ಡಿಎಫ್ಸಿ ಬ್ಯಾಂಕ್ 7.9 ಲಕ್ಷ ಕೋಟಿಗಳ ಠೇವಣಿ ಮೂಲವನ್ನು ಹೊಂದಿದ್ದು, ದೇಶದ ಬ್ಯಾಂಕಿನ ಠೇವಣಿಗಳ 7 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿ ತಿಂಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ ಗಳಿಗೆ ಹೆಚ್ಚಿಸಿತ್ತು. ಈಗ, ಇತರ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾರ್ಚ್ 30, 2018 ರಂದು ಬ್ಯಾಂಕುಗಳಲ್ಲಿ ಒಟ್ಟು ರೂ. 115 ಲಕ್ಷ ಕೋಟಿ ಜಮೆ ಇತ್ತು. ಠೇವಣಿ ಮೊತ್ತದ ಹೆಚ್ಚಳದ ಪ್ರಕಾರ ಇದು ಕೇವಲ ಶೇ. 6.7ರಷ್ಟು ಮಾತ್ರ. ಹಿಂದಿನ ವರ್ಷದಲ್ಲಿ ಇದು ಶೇ. 15.3 ಆಗಿತ್ತು.

ಬುಧವಾರ, 10 ವರ್ಷದ ಬೆಂಚ್ ಮಾರ್ಕ್ ಬಾಂಡ್ ಇಳುವರಿ 60 ಬೇಸಿಸ್ ಪಾಯಿಂಟ್ ಹೆಚ್ಚಾಗಿದೆ. ಇದು ಶೇ. 7.13 ರಿಂದ ಶೇ. 7.73 ರಷ್ಟು ಹೆಚ್ಚಾಗಿದೆ.

English summary

HDFC Bank hikes interest on FDs

The bank has hiked interest rates on fixed deposits (FDs) under Rs 1 crore. The new rates are effective from April 24.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X