For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ: ವಾಲ್‌ಮಾರ್ಟ್

ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಒಪ್ಪಂದವು ಭಾರತದಲ್ಲಿ ಸುಮಾರು 10 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವಾಲ್‌ಮಾರ್ಟ್ ಸಿಇಒ ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.

|

ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಒಪ್ಪಂದವು ಭಾರತದಲ್ಲಿ ಸುಮಾರು 10 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವಾಲ್‌ಮಾರ್ಟ್ ಸಿಇಒ ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.

ಇದರಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೇರಿದ್ದು, ಯುಎಸ್ ಮೂಲದ ರಿಟೇಲ್ ದೈತ್ಯ ವಾಲ್‌ಮಾರ್ಟ್ ಕಂಪನಿ ಫ್ಲಿಪ್ಕಾರ್ಟ್ ನ ಶೇ. 77 ರಷ್ಟು ಪಾಲನ್ನು 16 ಶತಕೋಟಿ ಡಾಲರ್ ಗೆ ಖರೀದಿಸಿದೆ.

ಭಾರತದಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ: ವಾಲ್‌ಮಾರ್ಟ್

ವಾಲ್‌ಮಾರ್ಟ್ ಸ್ಥಳೀಯ ಸರಕುಗಳನ್ನು ಖರೀದಿಸುವುದರಿಂದ ಭಾರತದ ಆರ್ಥಿಕತೆಗೆ ಲಾಭವಾಗಲಿದೆ. ಹೀಗಾಗಿ ಅಸಂಖ್ಯ ಉದ್ಯೋಗಗಳು ಪ್ರತ್ಯಕ್ಷ-ಪರೋಕ್ಷವಾಗಿ ಸೃಷ್ಟಿಯಾಗಲಿವೆ. ವಾಲ್‌ಮಾರ್ಟ್ ಫ್ಲಿಪ್ಕಾರ್ಟ್ ಒಪ್ಪಂದಕ್ಕೆ ಸರ್ಕಾರದಿಂದ ಬೆಂಬಲ ಸಿಗುವ ಭರವಸೆ ಇದೆ ಎಂದು ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಒಪ್ಪಂದವನ್ನು ಘೋಷಿಸಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಥವಾ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ. ಫ್ಲಿಪ್‌ಕಾರ್ಟ್ ಜತೆಗಿನ ವಹಿವಾಟಿಗೆ ಸಂಬಂಧಿಸಿದಂತೆ ಅಗತ್ಯವಾದ ತೆರಿಗೆ ಪಾವತಿಸಲಾಗುವುದು ಹಾಗು ತೆರಿಗೆ ನಿಯಮಗಳನ್ನು ಪಾಲಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪೂರೈಕೆ ಘಟಕ ಅಭಿವೃದ್ಧಿಪಡಿಸುವುದರ ಮುಖಾಂತರ ಹಾಗು ಹೂಡಿಕೆಯೊಂದಿಗೆ ಹೊಸ ಪ್ರತ್ಯಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಸಣ್ಣ ಉದ್ಯಮಗಳನ್ನು ಬೆಂಬಲಿಸಲಾಗುವುದು. ಸ್ಟಾರ್ಟ್‌ಅಪ್‌ ಮತ್ತು ಇ-ಕಾಮರ್ಸ್ಕ್ಷೇತ್ರಗಳು ಭಾರತದ ಆರ್ಥಿಕತೆಯನ್ನು ಮುನ್ನಡೆಸಲಿವೆ ಎಂದು ಹೇಳಿದ್ದಾರೆ.

English summary

Flipkart deal to create 10 million jobs in India: Walmart

Walmart CEO Doug McMillon has said that the Flipkart-Walmart deal will create around 10 million jobs in India.
Story first published: Friday, May 11, 2018, 16:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X