For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ ರೂ. 4 ಹೆಚ್ಚಳ ಸಾಧ್ಯತೆ!

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ. 4 ರವರೆಗೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟಿಸ್ ತನ್ನ ವರದಿಯಲ್ಲಿ ತಿಳಿಸಿದೆ.

By Siddu
|

ಕರ್ನಾಟಕದ ಚುನಾವಣೆಯ ಹಿನ್ನೆಲೆಯಲ್ಲಿ ಸುಮಾರು ಹದಿನೈದು ದಿನಗಳಿಗಿಂತ ಹೆಚ್ಚು ಕಾಲ ಯತಾಸ್ಥಿತಿಯಲ್ಲಿದ್ದ ಪೆಟ್ರೋಲ್ ಹಾಗು ಡೀಸೆಲ್ ದರಗಳು ಕಳೆದ ನಾಲ್ಕು ದಿನಗಳಿಂದ ಏರುತ್ತಲೇ ಸಾಗಿದೆ.

ಚುನಾವಣೆ ಪೂರ್ವದ ಹತ್ತೊಂಬತ್ತು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದ ಪರಿಷ್ಕರಣೆಯನ್ನು ಮತ್ತೆ ಜಾರಿಗೆ ಬಂದಿದೆ. ಅಂತರಾಷ್ಟ್ರೀಯ ಇಂಧನ ಮತ್ತು ವಿನಿಮಯ ದರಗಳಲ್ಲಿ ಏರುಪೇರುಗಳಿಗೆ ಅನುಗುಣವಾಗಿ ದಿನನಿತ್ಯದ ಬೆಲೆಗಳನ್ನು ಬದಲಾಯಿಸುವ ಸ್ವಾತಂತ್ರ್ಯವಿದ್ದರೂ, ರಾಜ್ಯ ತೈಲ ಕಂಪನಿಗಳು ಚುನಾವಣೆ ಹಿನ್ನೆಲೆಯಲ್ಲಿ ಪರಿಷ್ಕರಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವಾರ್ಷಿಕ ವೇತನ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟ

ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟ

ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 69 ಪೈಸೆ ಹಾಗು ಡೀಸೆಲ್ ದರ 86 ಪೈಸೆಗಳಷ್ಟು ಏರಿಕೆ ಕಂಡಿದೆ. ಈ ದರ ಹೆಚ್ಚಳದಿಂದ ತೈಲ ಬೆಲೆ ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ಇಂಧನ ಬೆಲೆಗಳ ಪರಿಷ್ಕರಣೆ ತಡೆಹಿಡಿಯಲಾಗಿದ್ದರಿಂದ ತೈಲ ಮಾರಾಟ ಸಂಸ್ಥೆಗಳ ಲಾಭ ಕಡಿಮೆಯಾಗಿದೆ.

ಪ್ರತಿ ಲೀಟರ್‌ ರೂ. 4 ಹೆಚ್ಚಳ ಅಗತ್ಯ

ಪ್ರತಿ ಲೀಟರ್‌ ರೂ. 4 ಹೆಚ್ಚಳ ಅಗತ್ಯ

ತೈಲ ಸಂಸ್ಥೆಗಳು ಚುನಾವಣೆ ಮುಂಚಿನ ಲಾಭದ ಮಟ್ಟಕ್ಕೆ ಹಿಂದಿರುಗಬೇಕಾದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ. 4 ರವರೆಗೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟಿಸ್ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಮುಖ ನಗರಗಳಲ್ಲಿನ ದರ
 

ಪ್ರಮುಖ ನಗರಗಳಲ್ಲಿನ ದರ

ಬೆಂಗಳೂರು:
ಪೆಟ್ರೋಲ್: 75.83/ಲೀಟರ್
ಡೀಸೆಲ್: 68.23/ಲೀಟರ್

ಮುಂಬೈ:
ಪೆಟ್ರೋಲ್: 83.45/ಲೀಟರ್
ಡೀಸೆಲ್: 71.42/ಲೀಟರ್

ದೆಹಲಿ:
ಪೆಟ್ರೋಲ್: 75.61/ಲೀಟರ್
ಡೀಸೆಲ್: 67.08/ಲೀಟರ್

ಚೆನ್ನೈ:
ಪೆಟ್ರೋಲ್: 78.46/ಲೀಟರ್
ಡೀಸೆಲ್: 70.8/ಲೀಟರ್

ಹೈದರಾಬಾದ್:
ಪೆಟ್ರೋಲ್: 80.09/ಲೀಟರ್
ಡೀಸೆಲ್: 72.91/ಲೀಟರ್

 

English summary

Petrol, Diesel Prices Likely To Increase By Rs 4 Per Litre

A Rs 4 per litre increase in petrol and diesel prices is in the offing if state-owned fuel retailers are to return to pre-Karnataka poll hiatus margin levels, brokerage firms said.
Story first published: Friday, May 18, 2018, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X