For Quick Alerts
ALLOW NOTIFICATIONS  
For Daily Alerts

ವಿಶ್ವದ 10 ಶ್ರೀಮಂತ ದೇಶಗಳಲ್ಲಿ ಭಾರತದ ಸ್ಥಾನವೆಷ್ಟು?

ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಭಾರತ ಜಗತ್ತಿನ ಗಮನ ತನ್ನತ್ತ ಸೆಳೆಯುತ್ತಿದೆ. ಭಾರತ ಜಗತ್ತಿನ ಆರನೇ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುಮಾರು ರೂ. 560 ಲಕ್ಷ ಕೋಟಿ ಸಂಪತ

By Siddu
|

ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಭಾರತ ಜಗತ್ತಿನ ಗಮನ ತನ್ನತ್ತ ಸೆಳೆಯುತ್ತಿದೆ. ಭಾರತ ಜಗತ್ತಿನ ಆರನೇ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುಮಾರು ರೂ. 560 ಲಕ್ಷ ಕೋಟಿ ಸಂಪತ್ತನ್ನು ಹೊಂದಿದೆ.

 

ಆಫ್ರಾಏಷಿಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೆಷನ್ ರಿವ್ಯೂ ಪ್ರಕಾರ ಈ ವಿಷಯವನ್ನು ತಿಳಿಸಲಾಗಿದೆ. ಜಗತ್ತಿನ ಯಾವ ದೇಶಗಳು ಅಗ್ರ ಸ್ಥಾನದಲ್ಲಿವೆ, ಪರಿಗಣೆಯ ಮಾನದಂಡಗಳೇನು ನೋಡೋಣ ಬನ್ನಿ.. ಅತಿ ವೇಗವಾಗಿ ಅಭಿವೃದ್ದಿಯಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

ಪರಿಗಣನೆಯ ಮಾನದಂಡ

ಪರಿಗಣನೆಯ ಮಾನದಂಡ

ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಆಸ್ತಿ, ನಗದು, ಈಕ್ವಿಟಿಗಳು, ಉದ್ಯಮ ಹಿತಾಸಕ್ತಿಗಳನ್ನು ಸಮಗ್ರ ಸಂಪತ್ತು ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಲದ ಮೊತ್ತ ಇರುವುದಿಲ್ಲ. ಇದರಲ್ಲಿ ಸರಕಾರಿ ನಿಧಿಗಳನ್ನು ಸೇರಿಸುವುದಿಲ್ಲ. ಹೆಚ್ಚಿನ ಜನಸಂಖ್ಯೆಯ ಕಾರಣದಿಂದಾಗಿ ದೊಡ್ಡ ದೇಶಗಳು ಹೆಚ್ಚು ಪ್ರಯೋಜನವನ್ನು ಹೊಂದಿವೆ. ಭಾರತ ಹಲವಾರು ವಲಯಗಳಲ್ಲಿ ಬೆಳವಣಿಗೆ ಕಂಡಿದ್ದರಿಂದ ಸಂಪತ್ತಿನ ಪ್ರಮಾಣ 10 ವರ್ಷಗಳಲ್ಲಿ ಶೇ. 200 ಏರಿಕೆಯಾಗಿದೆ. ಭಾರತದ ಟಾಪ್ 10 ಅತಿ ಶ್ರೀಮಂತ ರಾಜ್ಯಗಳು

ಅಮೆರಿಕಾ

ಅಮೆರಿಕಾ

ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ ಆಫ್ರಾಏಷಿಯಾ ಬ್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರೂ. 4254 ಲಕ್ಷ ಕೋಟಿ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದೆ. ಇಲ್ಲಿ ಜಗತ್ತಿನ ಹೆಚ್ಚು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಗಳು, ಇ-ಕಾಮರ್ಸ್ ಕಂಪನಿಗಳು ಮತ್ತು ಉದ್ಯಮಿಗಳು ಇದ್ದಾರೆ. ಐಟಿ, ಬಿಟಿ ಮತ್ತು ಕೈಗಾರಿಕೊದ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಹೊಂದಿದೆ.

ಚೀನಾ
 

ಚೀನಾ

ಚೀನಾ ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜತೆಗೆ ಏಷಿಯಾದ ಮೊದಲ ಶ್ರೀಮಂತ ದೇಶ. 24,803 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದು, ನವೋದ್ಯಮಗಳ ಸಾಲಿನಲ್ಲಿ ಚೀನಾ ಮುಂಚೂಣಿಯಲ್ಲಿ ನಿಲ್ಲುವ ದೇಶವಾಗಿದೆ. ಚೀನಾದಲ್ಲಿ ಅನೇಕ ಪ್ರಸಿದ್ದ ಇ-ಕಾಮರ್ಸ್ ಮತ್ತು ಕೈಗಾರಿಕೊದ್ಯಮಗಳಿದ್ದು, ಸಂಪತ್ತಿನಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ.

ಜಪಾನ್

ಜಪಾನ್

ಏಷಿಯಾದ ಎರಡನೇ ಶ್ರೀಮಂತ ದೇಶ ಜಪಾನ್. ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 19,522 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ಜಪಾನ್ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ.

ಇಂಗ್ಲೆಂಡ್

ಇಂಗ್ಲೆಂಡ್

ಇಂಗ್ಲೆಂಡ್ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಗಳನ್ನು ಆರಂಭಿಸುವ ವಿಷಯದಲ್ಲಿ ಅಮೆರಿಕಾ ನಂತರದಲ್ಲಿ ಎರಡನೇ ಸ್ಥಾನದಲ್ಲಿದೆ. ಯು.ಕೆ ಒಟ್ಟು ಸಂಪತ್ತು 9,919 ಬಿಲಿಯನ್ ಡಾಲರ್ ಆಗಿದೆ.

ಜರ್ಮನಿ

ಜರ್ಮನಿ

ಪಶ್ಚಿಮ ಯುರೋಪಿಯನ್ ದೇಶವಾಗಿರುವ ಜರ್ಮನಿ, ಇದು ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಜರ್ಮನಿಯ ಒಟ್ಟು ಸಂಪತ್ತು 9,660 ಬಿಲಿಯನ್ ಡಾಲರ್.

ಭಾರತ

ಭಾರತ

ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಭಾರತ, ತನ್ನ ಹೆಚ್ಚಿನ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ. ಭಾರತವು ಒಟ್ಟು ರೂ. 560 ಲಕ್ಷಕೋಟಿ (8,230 ಬಿಲಿಯನ್ ಡಾಲರ್) ಸಂಪತ್ತನ್ನು ಹೊಂದಿದೆ.
ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ, ತಂತ್ರಜ್ಞಾನ ರಹಿತ, ಸ್ಟಾರ್ಟ್ಅಪ್, ಇ-ಕಾಮರ್ಸ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಲ್ಲದೇ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾವನ್ನು ಭಾರತಕ್ಕೆ ಹೋಲಿಸಿದರೆ ಇದರ ಜನಸಂಖ್ಯೆ ತೀರಾ ಕಡಿಮೆ. ಆಸ್ಟ್ರೇಲಿಯಾ 6,142 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ದೇಶವಾಗಿದೆ.

ಕೆನಡಾ

ಕೆನಡಾ

ಕೆನಡಾ ಸಿರಿವಂತ ದೇಶಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇದರ ಒಟ್ಟು ಸಂಪತ್ತು 6,393 ಬಿಲಿಯನ್ ಡಾಲರ್ ಆಗಿದೆ.

ಪ್ರಾನ್ಸ್

ಪ್ರಾನ್ಸ್

ಪ್ರಾನ್ಸ್ ಕೂಡ ಪಶ್ಚಿಮ ಯುರೋಪಿಯನ್ ದೇಶ. ಇದು ವಿಶ್ವದಲ್ಲಿನ ಪ್ರಸಿದ್ದ ಪ್ರವಾಸೋದ್ಯಮ ದೇಶವಾಗಿದೆ.
ಇದು 6,649 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ.

ಇಟಲಿ

ಇಟಲಿ

ಇಟಲಿ ಜಗತ್ತಿನ ಸಿರಿವಂತ ದೇಶಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ನಿಂತಿದೆ. ಇದು 4,276 ಬಿಲಿಯನ್ ಡಾಲರ್ ಹೊಂದಿದೆ.

English summary

India sixth wealthiest country in the world

India is the sixth wealthiest country in the world with a total wealth of $8,230 billion, while the US is the richest nation globally, says a report.
Story first published: Monday, May 21, 2018, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X