For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಪ್ರಸಿದ್ದ ಬಿಸಿನೆಸ್ ಲೀಡರ್ಸ್

ಭಾರತದಲ್ಲಿ ಹಲವು ಸಂಘಟಿತ ವ್ಯಾಪಾರಿ ಸಂಸ್ಥೆಗಳಲ್ಲಿ ಗೌರವಯುತ ನಾಯಕರುಗಳಿದ್ದಾರೆ. ಅಂತಹ ಪ್ರಸಿದ್ದ ಬಿಸಿನೆಸ್ ನಾಯಕರುಗಳು ಯಾರಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಇರುತ್ತದೆ ಅಲ್ಲವೆ?

|

ನಮಗೆ ಸ್ಪೂರ್ತಿಯಾಗಬಲ್ಲ, ಸ್ಪೂರ್ತಿಯ ಸೆಲೆ ತುಂಬಬಲ್ಲ ವ್ಯಕ್ತಿಗಳು ಯಾವಾಗಲೂ ಆಕರ್ಷಿತರಾಗುತ್ತಾರೆ! ನಾಯಕ ಮತ್ತು ಒಬ್ಬ ಸಾಮಾನ್ಯ ಮನುಷ್ಯನಿಗಿರುವ ವ್ಯತ್ಯಾಸವೆಂದರೆ ಒಬ್ಬ ನಾಯಕ ತನ್ನ ಚಟುವಟಿಕೆಗಳಿಂದಾಗಿ ಇನ್ನೊಬ್ಬರಿಗೆ ಮಾದರಿಯಾಗುತ್ತಾನೆ. ಒಬ್ಬ ನಾಯಕನಾದವನು ಕಷ್ಟದ ಕೆಲಸವನ್ನು ಸುಲಭದಲ್ಲಿ ಮಾಡಿ ಮುಗಿಸುತ್ತಾನೆ ಮತ್ತು ಇನ್ನೊಬ್ಬರಿಗೆ ಹೇಗೆ ಮಾಡಬೇಕು ಅನ್ನುವುದನ್ನು ತೋರಿಸಿ ಅವರಿಗೆ ಸಹಕರಿಸುತ್ತಾನೆ. ಇನ್ನು ವೃತ್ತಿಪರ ಬದುಕಿನಲ್ಲಿ ನಾಯಕನಾದವರು ಮತ್ತೊಬ್ಬರಿಗೆ ಉದಾಹರಣೆ ನೀಡುತ್ತಾರೆ ಮತ್ತು ಕೆಲಸದ ಉದ್ದೇಶವನ್ನು ಪೂರ್ಣಗೊಳಿಸಲು ಸುಲಭ ಮಾರ್ಗಗಳನ್ನು ಸೂಚಿಸಿ ಕೆಲಸಕ್ಕೆ ಸಹಕರಿಸುತ್ತಾರೆ. ಈ ವೃತ್ತಿಪರ ವ್ಯಕ್ತಿಗಳನ್ನು ಒಂದು ಕಂಪೆನಿಯು ತನ್ನ ಕಷ್ಟದ ಸಮಯದಲ್ಲಿ ಬಹಳವಾಗಿ ಅವಲಂಬನೆಗೆ ಒಳಗಾಗಬೇಕಾಗುತ್ತದೆ.

 

ಒಂದು ಕಂಪೆನಿಯು ಆರೋಗ್ಯಯುತವಾಗಿ ಅಂದರೆ ಉತ್ತಮ ಲಾಭ ಗಳಿಕೆಯೊಂದಿಗೆ ಮುನ್ನಡೆಯಬೇಕಾದರೆ, ಹೀಗೆ ಮತ್ತೊಬ್ಬರಿಗೆ ತಿಳುವಳಿಕೆ ನೀಡುತ್ತಾ, ಉಳಿದ ಕೆಲಸಗಾರರನ್ನು ಹುರಿದುಂಬಿಸಿ ಮುನ್ನಡೆಸುತ್ತಾ ಸಾಗಬೇಕಾದರೆ ಇಂತಹ ನಾಯಕರು ಬಹಳ ಮುಖ್ಯ. ಭಾರತದಲ್ಲಿ ಹಲವು ಸಂಘಟಿತ ವ್ಯಾಪಾರಿ ಸಂಸ್ಥೆಗಳಲ್ಲಿ ಗೌರವಯುತ ನಾಯಕರುಗಳಿದ್ದಾರೆ. ಅಂತಹ ಪ್ರಸಿದ್ದ ಬಿಸಿನೆಸ್ ನಾಯಕರುಗಳು ಯಾರಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಇರುತ್ತದೆ ಅಲ್ಲವೆ? ಮುಂದೆ ಓದಿ..

1. ರತನ್ ಟಾಟಾ

1. ರತನ್ ಟಾಟಾ

ಜೆಆರ್ ಡಿ ಟಾಟಾ ಅವರ ಬದಲಿಗೆ 1991 ರಲ್ಲಿ ಬಹಳ ಪ್ರಸಿದ್ಧಿ ಪಡೆದ ಟಾಟಾ ಕಂಪೆನಿಯ ಅಧ್ಯಕ್ಷರಾದವರು ರತನ್ ಟಾಟಾ. ಟಾಟಾ ಕಂಪೆನಿ ಆರಂಭವಾದಾಗ ನ್ಯೂಯಾರ್ಕ್ ಶಾಖೆಯ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಶೇರುಗಳ ಹಂಚಿಕೆಯ ಮಾರ್ಗದರ್ಶಿಯಾಗಿ ಟಾಟಾ ಕಾರ್ಯನಿರ್ವಹಿಸುತ್ತಿದ್ದರು. 1998 ರಲ್ಲಿ ಟಾಟಾ ಇಂಡಿಕಾ ಪಂಕ್ತಿ ಆರಂಭವಾಗಿದ್ದು ಇವರಿಂದಲೇ. ಇವರ ಇನ್ನೊಂದು ಪ್ರಮುಖ ಸಾಧನೆಯೆಂದರೆ ಆಂಗ್ಲೋಡಚ್ ಅಲ್ಯೂಮಿನಿಯಂ ಮತ್ತು ಸ್ಟೀನ್ ಪ್ರೊಡ್ಯೂಸರ್ ಕೋರಸ್ ಗ್ರೂಪ್ ನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿರುವುದು. ಜನವರಿ 31, 2007 ರಲ್ಲಿ ಪ್ರಪಂಚದಲ್ಲೇ ಇದು ಅತೀ ಹೆಚ್ಚು ಸ್ಟೀಲ್ ಉತ್ಪಾದಿಸುವ ಕಂಪೆನಿಯಾಗಿ ಗುರುತಿಸಿಕೊಂಡಿದ್ದು ಹೆಗ್ಗಳಿಕೆ. ಫೋರ್ಡ್ ಮೋಟಾರ್ ಕಂಪೆನಿ ಆಫ್ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಸ್ಥೆಯ ಸ್ವಾಧೀನತೆ ಪಡೆದು ಯಶಸ್ವಿಯಾಗಿ ನಿರ್ವಹಿಸಿದ್ದು. ಕೇವಲ 1 ಲಕ್ಷಕ್ಕೆ ಕಾರು ಉತ್ಪಾದಿಸಿ ಮಾರಾಟ ಮಾಡಿದ್ದು ಇವರ ಹೆಗ್ಗಳಿಕೆ. ಜನವರಿ 10, 2008 ರಲ್ಲಿ ನ್ಯಾನೋ ಕಾರು ನವದೆಹಲಿಯ ಎಕ್ಪೋದಲ್ಲಿ ಪ್ರದರ್ಶಕ್ಕೆ ಇಡಲಾಗಿತ್ತು. ಇವರ ಈ ಸಣ್ಣ ಬಜೆಟ್ ನ ಕಾರಿನ ಕಲ್ಪನೆಯು ಮಾರ್ಚ್ 23, 2009ಕ್ಕೆ ಮಾರ್ಕೆಟ್ ಗೆ ಲಗ್ಗೆ ಇಟ್ಟಿತ್ತು.

2. ಆದಿ ಗೋದ್ರೆಜ್
 

2. ಆದಿ ಗೋದ್ರೆಜ್

ಭಾರತೀಯ ಆರ್ಥಿಕತೆ ಸುಧಾರಣೆ ಇರದ ಕಾಲದಲ್ಲೂ ಕೂಡ ಯಶಸ್ಸಿನ ಉತ್ತುಂಗದಲ್ಲೇ ಇರುವಂತೆ ತಮ್ಮ ಗೋದ್ರೆಜ್ ಗ್ರೂಪ್ ಕಂಪೆನಿಯನ್ನು ನೋಡಿಕೊಂಡ ಹೆಗ್ಗಳಿಕೆ ಸೇರಬೇಕಾಗಿರುವುದು ಕಂಪೆನಿಯ ಅಧ್ಯಕ್ಷರಾಗಿರುವ ಆದಿ ಗೋದ್ರೆಜ್ ಅವರಿಗೆ. ಕೈಗಾರಿಕೋದ್ಯಮಿಯಾಗಿ ಮಾತ್ರವಲ್ಲ ಇವರು ಉದಾರದಾನಿಗಳೂ ಕೂಡ ಹೌದು. ಕಂಪೆನಿಯ ನಿರ್ವಹಣೆಯಲ್ಲಿ ಹಲವು ಬದಲಾವಣೆಯನ್ನು ತಂದು, ಸುಧಾರಣೆ ಮಾಡಿದ್ದು ಇವರ ಸಾಧನೆ. ಭಾರತ ಆರ್ಥಿಕತೆ ಸುಸ್ಥಿರವಾಗಿರದ ಸಂದರ್ಭದಲ್ಲಿ ಕಂಪೆನಿಯ ಕೆಲವು ನಿಯಮಗಳನ್ನು ಬದಲಿಸಿ, ಹೊಸ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿದ್ದು ಆದಿ ಗೋದ್ರೆಜ್ ಅವರು. ದಶಕಗಳಿಂದ ಕಂಪೆನಿಯಲ್ಲಿದ್ದು ನಿಯಮಗಳಿಗೆ ನಾಂದಿ ಹಾಡಿ 2000 ನೇ ಇಸವಿಯಲ್ಲಿ ತಮ್ಮ ಕಂಪೆನಿಯ ಪ್ರತಿ ಘಟಕವನ್ನು ಸ್ವತಂತ್ರ ಘಟಕಗಳನ್ನಾಗಿ ಬೇರ್ಪಡಿಸಿದರು. ವಿಶ್ವ ವನ್ಯಜೀವಿ ನಿಧಿ (WWF) ನ ಪ್ರಮುಖ ವಕೀಲರು ಇವರು. ಮುಂಬೈ ನ ವಿಕ್ರೋಲಿ ಪಟ್ಟಣ ಇವರ ಕಾರಣದಿಂದಾಗಿ ಈಗ ಸ್ನೇಹಪೂರ್ವಕ ವ್ಯಾಪಾರಿ ಆವರಣವಾಗಿ ಮಾರ್ಪಟ್ಟಿದೆ. ಇಲ್ಲಿನ 150 ಎಕರೆಯ ಉಷ್ಣ ವಲಯದ ಪೊದೆಯಂತ ವಾತಾವರಣದಲ್ಲಿ ತಮ್ಮ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗಾಗಿ ಶಾಲೆಯನ್ನೂ ನಿರ್ಮಿಸಲಾಗಿದೆ.

3. ಅಜೀಮ್ ಪ್ರೇಮ್ ಜಿ

3. ಅಜೀಮ್ ಪ್ರೇಮ್ ಜಿ

ಎಮ್.ಎಚ್ ಪ್ರೇಮ್ ಜೀ ನಿಧನದ ನಂತರ ವಿಪ್ರೋ ಲಿಮಿಟೆಡ್ ಕಂಪೆನಿಯ ಅಧ್ಯಕ್ಷ ಸ್ಥಾನವನ್ನು ಸಣ್ಣ ವಯಸ್ಸಿನಲ್ಲೇ ಪಡೆದುಕೊಂಡವರು ಅಜೀಮ್ ಪ್ರೇಮ್ ಜಿ. 1966 ರಲ್ಲಿ ಕೇವಲ 21 ವರ್ಷದವರಿದ್ದಾಗ ಪ್ರೇಮ್ ಜಿ ತಮ್ಮ ಕುಟುಂಬದ ವ್ಯವಹಾರವನ್ನು ವಹಿಸಿಕೊಂಡರು. ನಂತರದ ದಿನಗಳಲ್ಲಿ ಈ ಸಂಸ್ಥೆ Western India Vegetable Product Company ಎಂದು ಹೆಸರುವಾಸಿಯಾಗಲು ಆರಂಭವಾಯ್ತು. ವಿಪ್ರೋ ಸಂಸ್ಥೆ ತನ್ನ ವೈವಿದ್ಯೀಕರಣದಿಂದಲೇ ಪ್ರಸಿದ್ಧಿ ಪಡೆದಿದೆ. ಅದಕ್ಕೆ ಪ್ರಮುಖ ಕಾರಣರಾದ ಪ್ರೇಮ್ ಜೀ ಅವರಿಗೆ ಧನ್ಯವಾದ ಹೇಳಲೇಬೇಕು. ಲೈಟ್ ಬಲ್ಬ್ ತಯಾರಿಕೆಯಿಂದ ಆರಂಭಿಸಿ ನಂತರದ ದಿನಗಳಲ್ಲಿ ಸೋಪು, ಶಾಂಪೂ, ಮಕ್ಕಳಿಗೆ ಅಗತ್ಯವಿರುವ ವಸ್ತುಗಳು, ಪೌಡರ್ ಹೀಗೆ ವಿವಿಧ ವಸ್ತುಗಳನ್ನು ತಯಾರಿಸಲು ಆರಂಭಿಸಲಾಯ್ತು. 1980 ರ ಸುಮಾರಿಗೆ ಕಂಪೆನಿಯು ಇನ್ಫರ್ಮೇಷನ್ ಟೆಕ್ನಾಲಜಿ ಮಾರ್ಕೆಟಿಗೆ ಲಗ್ಗೆ ಇಟ್ಟಿದ್ದು. 1975 ರಲ್ಲಿ IBM ಸಂಸ್ಥೆ ಆರಂಭವಾದ ನಂತರ ಇದನ್ನು ಆರಂಭಿಸಲಾಯಿತು. ತಮ್ಮ ಆಧುನಿಕ ವ್ಯವಹಾರ ಜ್ಞಾನದಿಂದಲೇ ಅಜೀಮ್ ಪ್ರೇಮ್ ಜಿ ಮನೆಮಾತಾಗಿದ್ದಾರೆ.

4. ಮುಖೇಶ್ ಅಂಬಾನಿ

4. ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ನ ವ್ಯವಸ್ಥಾಪರ ನಿರ್ದೇಶಕ ಮತ್ತು ಅಧ್ಯಕ್ಷರೂ ಆಗಿರುವ ಮುಖೇಶ್ ಅಂಬಾನಿ ಸದ್ಯ ಏಷ್ಯಾದಲ್ಲಿಯೇ ಮತ್ತು ಪ್ರಪಂಚದಲ್ಲಿಯೇ ತಮ್ಮ ಸಿರಿಸಂಪತ್ತಿನಿಂದಲೇ ಪ್ರಸಿದ್ಧಿ ಪಡೆದಿರುವವರು. ಸದ್ಯ ಅವರ ಸಂಪತ್ತು ಬರೋಬ್ಬರಿ 145000 ಕೋಟಿಗೂ ಮೀರಿದೆ. 1991 ರಲ್ಲಿ ಅವರು ಈ ಕಂಪೆನಿಯ ಒಂದು ಭಾಗವಾಗಿದ್ದು ಮತ್ತು ಜಾಮನಗರದ ಪೆಟ್ರೋಲಿಯಂ ಶುದ್ಧೀಕರಣ ಘಟಕ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಸದ್ಯ ಇಲ್ಲಿ ಒಂದು ವರ್ಷಕ್ಕೆ 33 ಮಿಲಿಯನ್ ಟನ್ ಅಥವಾ 1.2 ಮಿಲಿಯನ್ ಬ್ಯಾರಲ್ ನಷ್ಟು ಪೆಟ್ರೋಲಿಯಂನ್ನು ಪ್ರತಿದಿನ ಉತ್ಪಾದಿಸಲಾಗುತ್ತದೆ. ಪೆಟ್ರೋಕೆಮಿಕಲ್, ವಿದ್ಯುತ್, ಬಂದರು ಕ್ಷೇತ್ರ ಹೀಗೆ ಹಲವು ವಿವಿಧ ಕ್ಷೇತ್ರಗಳಲ್ಲಿ ಈ ತಮ್ಮ ಕಂಪನಿಯು ಕಾರ್ಯೋನ್ಮುಖವಾಗುವಂತೆ ಇವರು ನೋಡಿಕೊಂಡಿದ್ದಾರೆ.

5. ಕುಮಾರ್ ಮಂಗಲಮ್ ಬಿರ್ಲಾ

5. ಕುಮಾರ್ ಮಂಗಲಮ್ ಬಿರ್ಲಾ

ಆದಿತ್ಯ ಬಿರ್ಲಾ ಕಂಪೆನಿಯ ಅಧ್ಯಕ್ಷರೂ ಆಗಿರುವ ಇವರು ಚಾರ್ಟೆಡ್ ಅಕೌಂಟೆಂಟ್ ಕೂಡ ಹೌದು. ಲಂಡನ್ ನ ಬ್ಯೂಸಿನೆಸ್ ಸ್ಕೂನ್ ನಲ್ಲಿ ಎಂಬಿಎ ಮುಗಿಸಿ ಬಂದಿರುವ ಇವರು ಬಹಳ ಗೌರವಯುತವಾದ ವ್ಯಕ್ತಿಗಳಲ್ಲಿ ಒಬ್ಬರು. ಇವರು ಹಲವು ವಿಧಧ ಜವಾಬ್ದಾರಿಗಳನ್ನು ಹೊತ್ತುಕೊಂಡವರು. ಸೆಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಪೋರೇಟ್ ಗರ್ವನೆನ್ಸ್ ದಾಖಲಾತಿ ನೀಡಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. BITS ಪಿಲಾನಿ ಸಂಸ್ಥೆಯ ಪ್ರಧಾನಾಧಿಕಾರಿ ಅಥವಾ ಕುಲಪತಿಗಳಾಗಿ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ. ಹೈದ್ರಾಬಾದ್, ದುಬೈ, ಗೋವಾಗಳಲ್ಲಿ ಇದರ ಶಾಖೆಗಳಿವೆ. ಜಿಡಿ ಬಿರ್ಲಾ ಮೆಡಿಕಲ್ ರಿಸರ್ಚ್ ಮತ್ತು ಎಜುಕೇಷನಲ್ ಪೌಂಡೇಷನ್ ನ ಮಾರ್ಗದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

6. ಅನಿಲ್ ಅಂಬಾನಿ

6. ಅನಿಲ್ ಅಂಬಾನಿ

ರಿಲಯನ್ಸ್ ಅನಿಲ್ ಧೀರೂಬಾಯಿ ಅಂಬಾನಿ ಗ್ರೂಪ್ ಕಂಪೆನಿಯ ಅಧ್ಯಕ್ಷರಾಗಿರು ಅನಿಲ್ ಅಂಬಾನಿಯವರು 1983 ರಲ್ಲಿ ಉಪಾಧ್ಯಕ್ಷರಾಗಿ ಸಂಸ್ಥೆಗೆ ಸೇರಿಕೊಳ್ಳುತ್ತಾರೆ. ದೇಶದ ಪ್ರಮುಖ ಮಾರ್ಕೆಟಿಂಗ್ ವ್ಯವಹಾರಗಳಲ್ಲಿ ಬೆನ್ನುಲುಬಾಗಿ ನಿಂತಿರುವವರೇ ಅನಿಲ್ ಅಂಬಾನಿ ಎಂದರೆ ಅತಿಶಯೋಕ್ತಿ ಆಗಲಾರದು. Adlabs ಸಂಸ್ಥೆಯ ಹುಟ್ಟಿಗೆ ಕಾರಣ ಇವರೇ. ಸದ್ಯ ಚಿತ್ರ ನಿರ್ಮಾಣ, ಚಿತ್ರ ಹಂಚಿಕೆ ಮತ್ತು ಭಾರತದ ಅತ್ಯುತ್ತಮ ಥಿಯೇಟರ್ ಗಳನ್ನು ಹೊಂದಿರುವುದು ಇದೇ ಸಂಸ್ಥೆಯಾಗಿದ್ದು, ಇದು ಅನಿಲ್ ಅಂಬಾನಿಯವರ ಕೂಸಾಗಿದೆ. ಹಾಲಿವುಡ್ ಫಿಲ್ಮ್ ಮೇಕರ್ Steven Spielberg ಜೊತೆ ಕೈಗೂಡಿಸಿ 825 ಮಿಲಿಯನ್ ಯುಎಸ್ ಡಾಲರ್ ಬೆಲೆಬಾಳುವ ಫಿಲ್ಮ್ ಮೇಕಿಂಗ್ ಗೆ ಕೈಹಾಕಿದ್ದಾರೆ. ಸ್ಪೋರ್ಟ್ಸ್ ಕ್ಲಬ್ ಗಳಲ್ಲೂ ಇವರಿಗೆ ಭಾರೀ ಉತ್ಸಾಹವಿದೆ.

7. ವಿಜಯ್ ಮಲ್ಯ

7. ವಿಜಯ್ ಮಲ್ಯ

1984 ರಲ್ಲಿ ವಿಜಯ್ ಮಲ್ಯ ಯುಬಿ ಗ್ರೂಪ್ ನ ಅಧ್ಯಕ್ಷರಾಗುತ್ತಾರೆ. ಅವರ ಪ್ರಮುಖ ಸಾಧನೆಗಳನ್ನು ಇಲ್ಲಿ ಬರೆಯಲಾಗಿದೆ. 2007 ರಲ್ಲಿ Whyte & Mackay ಸ್ವಾಧೀನಪಡಿಸಿಕೊಂಡು, whiskey and scotch ನ ಪ್ರಮುಖ ಉತ್ಪಾದಕರಾಗಿ ಗುರುತಿಸಿಕೊಂಡರು. 595 ಮಿಲಿಯನ್ ಪೌಂಡ್ ನಷ್ಟು ಉತ್ಪಾದನೆ ಮಾಡಲಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇವರದ್ದೇ ಆಗಿತ್ತು. 2005 ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ಆರಂಭಿಸಿದರು. ಏರ್ ಡೆಕ್ಕನ್ ನ ಶೇಕಡಾ 26 ರಷ್ಟು ಶೇರನ್ನು ತಾವು ಖರೀದಿಸಿ ಅದನ್ನು ಕಿಂಗ್ ಫಿಶರ್ ರೆಡ್ ಎಂದು ಮರುನಾಮಕರಣ ಮಾಡಿದರು. 2000ನೇ ಇಸವಿಯಲ್ಲಿ ಒಬ್ಬ ರಾಜಕಾರಣಿಯಾಗಿ ಕೂಡ ಇವರು ಗುರುತಿಸಿಕೊಂಡರು. ಸುಬ್ರಮಣ್ಯನ್ ಸ್ವಾಮಿಯ ಸ್ಥಾನಕ್ಕೆ ಜನತಾ ಪಕ್ಷಕ ಅಧ್ಯಕ್ಷರಾಗಿ ಇವರು ಆಯ್ಕೆಯಾದರು. Spyker F1 ಟೀಮ್ ನ್ನು ಸ್ವಾಧೀನತೆ ಮಾಡಿಕೊಂಡಿರುತ್ತಾರೆ. ನೆದರ್ ಲ್ಯಾಂಡ್ ಮೂಲದ Mol family ಸಂಸ್ಥೆಯನ್ನು 88 ಮಿಲಿಯನ್ ಯೂರೋ ಗೆ ಖರೀದಿಸಿ ಅದನ್ನು ಫೋರ್ಸ್ ಇಂಡಿಯಾ ಎಂದು 2008 ರಲ್ಲಿ ಮರುನಾಮಕರಣ ಮಾಡಲಾಗಿದೆ. 2004 ರಲ್ಲಿ ಲಂಡನ್ ನಲ್ಲಿ ಹರಾಜಿಗೆ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಕತ್ತಿಯನ್ನು 175 ಸಾವಿರ ಪೌಂಡ್ ಗಳಿಗೆ ಖರೀದಿಸಿ ದೇಶಕ್ಕೆ ಮರಳಿಸಿದ ಹೆಗ್ಗಳಿಕೆ ವಿಜಯ್ ಮಲ್ಯಗೆ ಸೇರಬೇಕು. ಮಾರ್ಚ್ 2009 ರಲ್ಲಿ ಮಹತ್ಮಾ ಗಾಂಧಿಯವರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು 1.8 ಮಿಲಿಯನ್ ಡಾಲರ್ ಗೆ ಹರಾಜಿನಲ್ಲಿ ಖರೀದಿಸಿದ ಹೆಗ್ಗಳಿಕೆ ಇವರಿಗಿದೆ. ಈಗ ಸಾಲದ ಸುಳಿಗೆ ಸಿಕ್ಕು ದೇಶ ತೊರೆದು ವಿದೇಶದಲ್ಲಿ ವಾಸವಾಗಿದ್ದಾರೆ.

8. ಆನಂದ್ ಮಹೀಂದ್ರ

8. ಆನಂದ್ ಮಹೀಂದ್ರ

ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಹೀಂದ್ರ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರ ಅವರನ್ನು 1991ರಲ್ಲಿ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಂಪೆನಿಗೆ ಸೇರಿಸಿಕೊಳ್ಳಲಾಗುತ್ತದೆ. 1997ರಲ್ಲಿ ಇವರು ಎಂಡಿ ಆಗುತ್ತಾರೆ ಮತ್ತು ಜನವರಿ 2003 ರಲ್ಲಿ ಕಂಪೆನಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇವರು ಕೋಟಕ್ ಮಹೀಂದ್ರ ಫೈನಾನ್ಸ್ ನ ಪ್ರಚಾರಕರಾಗಿದ್ದರು. 2003 ರಲ್ಲಿ ಈ ಫೈನಾನ್ಸ್ ಕಂಪೆನಿ ಕೋಟಕ್ ಮಹೀಂದ್ರ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ. ಭಾರತದ ಹಾರ್ವಡ್ ಬ್ಯೂಸಿನೆಸ್ ಸ್ಕೂಲ್ ಅಸೋಸಿಯೇಷನ್ ನ ಸ್ಥಾಪಕರೂ ಕೂಡ ಹೌದು. ಇವರ ಕರಿಯರ್ ನ ಮತ್ತೊಂದು ಪ್ರಮುಖ ಸಾಧನೆಯೆಂದರೆ 2009 ರಲ್ಲಿ ಸತ್ಯಂ ಕಂಪ್ಯೂಟರ್ ನ ಟೆಕ್ ಮಹೀಂದ್ರವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿತು.

9. ನಾರಾಯಣ್ ಮೂರ್ತಿ

9. ನಾರಾಯಣ್ ಮೂರ್ತಿ

ನಾರಾಯಣ ಮೂರ್ತಿಯವರು 1981 ರಿಂದ 2002 ರ ವರೆಗೆ ಇನ್ಪೋಸಿಸ್ ಸಂಸ್ಥೆಯ ಮಾರ್ಗದರ್ಶಕ ಮತ್ತು ಅಧ್ಷಕ್ಷರಾಗಿ ಕಾರ್ಯನಿರ್ವಹಿಸಿದರು. ಸದ್ಯ ಅವರು ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಜಾಗತಿಕ ಪ್ರಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 174 ಕೋಟಿ ಬೆಲೆಬಾಳುವ ಇನ್ಫೋಸಿಸ್ ಷೇರ್ ನ್ನು ಮಾರಾಟ ಮಾಡಿದ ನಂತರ ನಾರಾಯಣ ಮೂರ್ತಿಯವರು, ಆ ಹಣದ ಸಹಾಯದೊಂದಿಗೆ Catamaran Venture Fund ಹೆಸರಿನಲ್ಲಿ ನಿಧಿ ಸಂಗ್ರಹ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅವರ ಪತ್ನಿ ಸುಧಾ ಮೂರ್ತಿ ಕೂಡ ಅವರ ಇನ್ಫೋಸಿಸ್ ಷೇರುಗಳನ್ನು ಮಾರಾಟ ಮಾಡಿ 430 ಕೋಟಿ ಸಂಪಾದಿಸಿದ್ದು, ಅವರೂ ಇದರಲ್ಲಿ ಕೈಜೋಡಿಸಿರುತ್ತಾರೆ. ಕೊಳ್ಳುವವರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ನಾರಾಯಣ ಮೂರ್ತಿಯವರು ಎಲ್ಲಾ ದೇಶದ ಮತ್ತು ಎಲ್ಲಾ ಧರ್ಮದವರು ತಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದು, ಅಹ್ಲಾದಕರ ಮತ್ತು ಸಭ್ಯ ವಾತಾವರಣವನ್ನು ಕಂಪೆನಿಯಲ್ಲಿ ಸೃಷ್ಟಿಸಿದ್ದಾರೆ.

10. ಕಿರಣ್ ಮಜುಂದಾರ್ ಷಾ

10. ಕಿರಣ್ ಮಜುಂದಾರ್ ಷಾ

1976 ರಲ್ಲಿ 10 ಸಾವಿರ ರೂಪಾಯಿ ಬಂಡವಾಳದೊಂದಿಗೆ ಮೊದಲ ಬಾರಿಗೆ ಬಯೋಕಾನ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಲಾಯಿತು. ಕಿರಣ್ ಮಜುಂದಾರ್ ಷಾ ಈ ಸಂಸ್ಥೆಯ ಅಧ್ಯಕ್ಷರು. ಪಪ್ಪಾಯ ಹಣ್ಣುಗಳಿಂದ ಕಿಣ್ವಗಳನ್ನು ಹೊರತೆಗೆಯುವಿಕೆ ಪ್ರಕ್ರಿಯೆಯನ್ನು ಮಾಡುವ ಮೊದಲ ಸಂಸ್ಥೆ ಇದು. ಕಂಪೆನಿ ಆರಂಭಿಸಲು ಇವರು ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ನಿರಾಕರಿಸಲಾಯಿತು. ಅದಕ್ಕೆ ಕಾರಣ ಕಂಪೆನಿಯ ಬಳಿ ಸರಿಯಾದ ಬಂಡವಾಳ ಮತ್ತು ಬಯೋಟೆಕ್ನಾಲಜಿ ಇಲ್ಲದೇ ಇರುವುದು. ಆದರೆ ಇವರ ಮಾರ್ಗದರ್ಶನದಲ್ಲಿ ಸದ್ಯ ಕಂಪೆನಿ ದೇಶದ ಜೀವಶಾಸ್ತ್ರ ಔಷಧೀಯ ಸಂಸ್ಥೆಯಾಗಿ ಮಾರ್ಪಟ್ಟಿದೆ.

11. ಸುಬ್ರಮಣ್ಯಮ್ ರಾಮದೊರೈ

11. ಸುಬ್ರಮಣ್ಯಮ್ ರಾಮದೊರೈ

ಸದ್ಯ ಟಾಟಾ ಕನ್ಸಟೆನ್ಸಿ ಸರ್ವೀಸ್ ನ ಉಪಾಧ್ಯಕ್ಷರಾಗಿರುವ ಸುಬ್ರಮಣ್ಯಮ್ ಅವರು ತಮ್ಮ ಕರಿಯರ್ ಅನ್ನು ಒಬ್ಬ ಸಾಧಾರಣ ಜ್ಯೂನಿಯರ್ ಇಂಜಿನಿಯರ್ ಆಗಿ ಆರಂಭಿಸಿದರು. 1979 ರಲ್ಲಿ ಅಮೇರಿಕಾದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸುವ ಮತ್ತು ಪ್ರಸಿದ್ಧಿಗೊಳಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಯಿತು. ನಂತರ ಇವರು ಹಿಂತುರುಗಿ ನೋಡಿದ್ದೇ ಇಲ್ಲ. 16 ವಿವಿಧ ಡೆವಲಪ್ ಮೆಂಟ್ ಶಾಖೆಗಳನ್ನು ತೆರೆದರು. ಕ್ವಾಲಿಟಿ ಪ್ರೋಗ್ರಾಮ್ಸ್ ನೀಡುವುದರಲ್ಲಿ ಇವರು ಪ್ರಸಿದ್ಧರು. ಇವರ ಸಾಧನೆಗೆ ಕಂಪೆನಿಯೂ ಕೂಡ ಹಲವು ಭಾರಿ ಇವರನ್ನು ಶ್ಲಾಘಿಸಿದೆ.

12. ಶಿವ ನಾಡರ್

12. ಶಿವ ನಾಡರ್

ಎಚ್.ಸಿ.ಎಲ್ ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಇವರು ಭಾರತದಲ್ಲಿ ಟೆಲಿ ಡಿಜಿಟಲ್ ಕ್ಯಾಲ್ಕುಲೇಟರ್ ಮಾರಾಟ ಮಾಡುವ ಮೊದಲ ಸಂಸ್ಥೆ ಮೈಕ್ರೋಕಾಂಪ್ ಆರಂಭಿಸಿರುವ ಹೆಗ್ಗಳಿಕೆ ಹೊಂದಿರುತ್ತಾರೆ. 1976 ರಲ್ಲಿ ಎಚ್.ಸಿ.ಎಲ್ ಸಂಸ್ಥೆ 187 ಸಾವಿರ ಬಜೆಟ್ ನಲ್ಲಿ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಉತ್ತರ ಪ್ರದೇಶ ಸರ್ಕಾರ 26 ಶೇಕಡಾ ಷೇರುಗಳನ್ನು ಹಂಚಿಕೊಂಡು ಇದರ ಸಹಭಾಗಿಯಾಯಿತು. ನಡಾರ್ ಅವರ ಮಾರ್ಗದರ್ಶನದೊಂದಿಗೆ ಈ ಸಂಸ್ಥೆ 1999 ರಲ್ಲಿ ಸ್ವತಂತ್ರ ಸಾರ್ವಜನಿಕ ಸಂಸ್ಥೆಯಾಗಿ ಮಾರ್ಪಟ್ಟಿತ್ತು.

Read more about: business money finance news
English summary

Top 10 Business Leaders of India

Most top ten Respected Business Leaders of India – Conglomerate Organisations.
Story first published: Monday, May 21, 2018, 10:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X