For Quick Alerts
ALLOW NOTIFICATIONS  
For Daily Alerts

ತೈಲ ದರ ನಿಯಂತ್ರಣಕ್ಕಾಗಿ ದೀರ್ಘಕಾಲೀನ ಪರಿಹಾರಕ್ಕೆ ಕಾರ್ಯಪ್ರವೃತ್ತ: ರವಿ ಶಂಕರ ಪ್ರಸಾದ್‌

ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ಒದಗಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದೆ.

|

ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ಒದಗಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದೆ.

 
ತೈಲ ದರ ನಿಯಂತ್ರಣಕ್ಕಾಗಿ ದೀರ್ಘಕಾಲೀನ ಪರಿಹಾರಕ್ಕೆ ಕಾರ್ಯಪ್ರವೃತ್ತ

ಕಳೆದ ವರ್ಷದ ಜೂನ್ ತಿಂಗಳಿನಿಂದ ಪ್ರತಿ ದಿನ ತೈಲ ಬೆಲೆ ಪರಿಷ್ಕರಣೆ ನಿಯಮ ಜಾರಿಗೊಳಿಸಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 19 ದಿನಗಳ ಕಾಲ ತೈಲ ಬೆಲೆ ಪರಿಷ್ಕರಣೆ ತಡೆಹಿಡಿಯಲಾಗಿತ್ತು. ತದನಂತರದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ದರ ಸತತವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

 

ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಬೆಲೆ ಬಿಕ್ಕಟ್ಟಿನ ಬಗ್ಗೆ, ಕೇಂದ್ರ ಸರಕಾರವು ತೈಲ ದರವನ್ನು ನಿಯಂತ್ರಿಸಲು ದೀರ್ಘಕಾಲೀನ ಪರಿಹಾರಕ್ಕೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಕೇಂದ್ರ ಸಚಿವ ರವಿ ಶಂಕರ ಪ್ರಸಾದ್‌ ಹೇಳಿದ್ದಾರೆ.

ಮೇ 14 ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ ರೂ. 2.54 ಮತ್ತು ರೂ. 2.41ರಷ್ಟು ತುಟ್ಟಿಯಾಗಿವೆ.

Read more about: petrol money finance news
English summary

India to take a 'long-term' view on fuel pricing: Law Minister Ravi Shankar Prasad

India to take a 'long-term' view on fuel pricing: Law Minister Ravi Shankar Prasad
Story first published: Thursday, May 24, 2018, 18:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X