For Quick Alerts
ALLOW NOTIFICATIONS  
For Daily Alerts

ಬಾಬಾ ರಾಮದೇವ್ ಅವರ ಪತಂಜಲಿ ಸ್ವದೇಶಿ ಸಿಮ್ ಕಾರ್ಡ್ ಬಿಡುಗಡೆ, ಗ್ರಾಹಕರಿಗೆ ಸಿಗಲಿರುವ ಸೌಲಭ್ಯಗಳೇನು?

ದೇಶದಾದ್ಯಂತ ಪತಂಜಲಿ ಉತ್ಪನ್ನಗಳು ಭಾರೀ ಜನಪ್ರಿಯತೆ ಗಳಿಸಿದ್ದು, ಎಲ್ಲರ ನೆಚ್ಚಿನ ಸರಕುಗಳಾಗುತ್ತಿವೆ. ಇದೀಗ ಪತಂಜಲಿ ತನ್ನ ವ್ಯಾಪ್ತಿಯನ್ನು ದೂರಸಂಪರ್ಕ ಕ್ಷೇತ್ರಕ್ಕೂ ಪಸರಿಸಲು ಸಜ್ಜಾಗಿದೆ.

By Siddu
|

ಪತಂಜಲಿ ಕಂಪನಿಯು ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಆದ ನಂತರ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಟೆಲಿಕಾಂ ವಲಯವನ್ನು ಪ್ರವೇಶಿಸಿದೆ. ದೇಶದಾದ್ಯಂತ ಪತಂಜಲಿ ಉತ್ಪನ್ನಗಳು ಭಾರೀ ಜನಪ್ರಿಯತೆ ಗಳಿಸಿದ್ದು, ಎಲ್ಲರ ನೆಚ್ಚಿನ ಸರಕುಗಳಾಗುತ್ತಿವೆ. ಇದೀಗ ಪತಂಜಲಿ ತನ್ನ ವ್ಯಾಪ್ತಿಯನ್ನು ದೂರಸಂಪರ್ಕ ಕ್ಷೇತ್ರಕ್ಕೂ ಪಸರಿಸಲು ಸಜ್ಜಾಗಿದೆ. ನರೇಂದ್ರ ಮೋದಿ ಸರ್ಕಾರದ ಈ ಯೋಜನೆಯಿಂದ 6 ತಿಂಗಳಲ್ಲಿ ರೂ. 5 ಕೋಟಿ ಗಳಿಸುವುದು ಹೇಗೆ?

 

ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್

ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್

ಬಾಬಾ ರಾಮದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ಗಳನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮೈತ್ರಿಯೊಂದಿಗೆ ಪ್ರಾರಂಭಿಸಿದ್ದಾರೆ. ಆರಂಭದಲ್ಲಿ, ಪತಂಜಲಿಯ ಉದ್ಯೋಗಿಗಳು ಮತ್ತು ಕಚೇರಿ ಅಧಿಕಾರಿಗಳು ಕೇವಲ ಸಿಮ್ ಕಾರ್ಡ್ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಸಿಮ್ ಸೌಲಭ್ಯಗಳು

ಸಿಮ್ ಸೌಲಭ್ಯಗಳು

ರೂ. 144 ರಿಚಾರ್ಜ್ ಮಾಡಿದಲ್ಲಿ ಗ್ರಾಹಕರು 2 ಜಿಬಿ ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ. ಜತೆಗ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ನೀಡಲಿದೆ. ಪತಂಜಲಿ ನೌಕರರಿಗೆ ಮಾತ್ರ ಲಭ್ಯವಿರುವ ಈ ಸಿಮ್ ಸದ್ಯದಲ್ಲಿಯೇ ಗ್ರಾಹಕರಿಗೂ ಸಿಗಲಿದೆ.

ಶೇ. 10ರಷ್ಟು ರಿಯಾಯಿತಿ
 

ಶೇ. 10ರಷ್ಟು ರಿಯಾಯಿತಿ

ಸಿಮ್ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾದ ನಂತರ, ಗ್ರಾಹಕರು ಈ ಕಾರ್ಡ್ ನೊಂದಿಗೆ ಪತಂಜಲಿಯ ಉತ್ಪನ್ನಗಳ ಮೇಲೆ ಶೇ. 10 ರಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ.

ರೂ. 5 ಲಕ್ಷ ವರೆಗೆ ಜೀವ ವಿಮೆ

ರೂ. 5 ಲಕ್ಷ ವರೆಗೆ ಜೀವ ವಿಮೆ

ಇಷ್ಟೇ ಅಲ್ಲ ಈ ಸಿಮ್ ಕಾರ್ಡ್ ಗ್ರಾಹಕರಿಗೆ ರೂ. 2.5 ಲಕ್ಷ ವರೆಗೆ ವೈದ್ಯಕೀಯ ವಿಮೆ ಹಾಗೂ ರೂ. 5 ಲಕ್ಷದವರೆಗೆ ಜೀವ ವಿಮೆ ಸಿಗಲಿದೆ.
ಬಿಎಸ್ಎನ್ಎಲ್ ಸ್ವದೇಶಿ ನೆಟ್ವರ್ಕ್ ಸಂಸ್ಥೆಯಾಗಿದ್ದು, ಪತಂಜಲಿ ಕೂಡ ಸ್ವದೇಶಿ ಕಂಪನಿಯಾಗಿದೆ. ಎರಡೂ ಸೇರಿ ದೇಶ ಸೇವೆ ಮಾಡಲಿವೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

English summary

Baba Ramdev's Patanjali launches Swadeshi Samriddhi SIM cards

Baba Ramdev launched Swadeshi Samriddhi SIM cards, in alliance with Bharat Sanchar Nigam Limited (BSNL)
Story first published: Tuesday, May 29, 2018, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X