For Quick Alerts
ALLOW NOTIFICATIONS  
For Daily Alerts

ಜಿಯೋ ಮುಂದಿನ ಆಫರ್! 100Mbps ಬ್ರಾಡ್ಬ್ಯಾಂಡ್, ವಿಡಿಯೋ, ಅನಿಯಮಿತ ಕರೆ

ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಸೆಪ್ಟೆಂಬರ್ 2016 ರಿಂದ ಪರೀಕ್ಷಿಸುತ್ತಿದೆ.

By Siddu
|

ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಸೆಪ್ಟೆಂಬರ್ 2016 ರಿಂದ ಪರೀಕ್ಷಿಸುತ್ತಿದೆ. ಈ ವರ್ಷದ ಅಂತ್ಯದಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆಯನ್ನು ಶುರು ಮಾಡಲಿದ್ದು, ಗ್ರಾಹಕರಿಗೆ ಪ್ಲಾನ್ ಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲಿದೆ.
ಜಿಯೋ ಬ್ರಾಡ್ಬ್ಯಾಂಡ್ ಸೇವೆ ಪ್ರಾರಂಭಿಸುವ ಭರ್ಜರಿ ತಯಾರಿಯಲ್ಲಿದ್ದು, ಶೀಘ್ರದಲ್ಲೇ ಸೇವೆ ಶುರುಮಾಡಲಿದೆ ಎನ್ನಲಾಗಿದೆ.

ತಿಂಗಳಿಗೆ ರೂ. 1000

ತಿಂಗಳಿಗೆ ರೂ. 1000

ತಿಂಗಳಿಗೆ ರೂ. 1000ಕ್ಕಿಂತ ಕಡಿಮೆ ಮೊತ್ತದಲ್ಲಿ ಜಿಯೋ ತನ್ನ ಗ್ರಾಹಕರಿಗೆ 100 ಎಂಬಿಪಿಎಸ್ ಇಂಟರ್ನೆಟ್, ವಿಡಿಯೋ ಹಾಗೂ ಧ್ವನಿ ಕರೆಗಳನ್ನು ನೀಡಲಿದೆ ಎನ್ನಲಾಗಿದೆ.

ಫೈಬರ್-ಟು-ದಿ-ಹೋಮ್

ಫೈಬರ್-ಟು-ದಿ-ಹೋಮ್

ಫೈಬರ್-ಟು-ದಿ-ಹೋಮ್ (FTTH) ಮಾದರಿಯ ಆಧಾರದ ಮೇಲೆ, ಜಿಯೋ ಫೈಬರ್ ಸೇವೆಗಳು VoIP (ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್) ಫೋನ್ ಮತ್ತು ಜಿಯೊ ಟಿವಿಗಳ ಜತೆಗೆ ಅನಿಯಮಿತ ಕರೆ ಮಾಡುವ ಸೇವೆ ಒಳಗೊಂಡಿರುತ್ತದೆ.

ಶೇ. 20ರಷ್ಟು ಅಗ್ಗ

ಶೇ. 20ರಷ್ಟು ಅಗ್ಗ

ಮಾರುಕಟ್ಟೆಯಲ್ಲಿ ಈಗಿರುವ ಬ್ರಾಡ್ ಬ್ಯಾಂಡ್ ಸೇವೆಗಳಿಗಿಂತ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಶೇ. 20ರಷ್ಟು ಅಗ್ಗವಾಗಿರಲಿದೆ ಎನ್ನಲಾಗಿದೆ! ಅಂದರೆ ಇ ಯೋಜನೆ ಬೆಲೆ ಒಂದು ಸಾವಿರಗಿಂತ ಕಡಿಮೆಯಿರುವ ಸಾಧ್ಯತೆಯಿದೆ.

ಮಾರುಕಟ್ಟೆ ತಲ್ಲಣ!

ಮಾರುಕಟ್ಟೆ ತಲ್ಲಣ!

ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಏಕಸ್ವಾಮ್ಯದತ್ತ ಹೆಜ್ಜೆ ಹಾಕುತ್ತಿದ್ದು, ಇದೀಗ ಬ್ರಾಡ್ ಬ್ಯಾಂಡ್ ಸೇವೆ ಮಾರುಕಟ್ಟೆಯಲ್ಲಿ ತಲ್ಲಣ ಉಂಟುಮಾಡಲಿದೆ!! ಗ್ರಾಹಕರು ಇಂಟರ್ನೆಟ್ ಸೇವೆ, ಕರೆ, ವಿಡಿಯೋ ಕಾಲಿಂಗ್ ಜೊತೆ ಟಿವಿಯನ್ನು ಕೂಡ ನೋಡಬಹುದಾಗಿದೆ.

Read more about: ಜಿಯೋ jio telecom money savings
English summary

Reliance Jio’s next Offer: 100 mbps broadband, calls, videos

Reliance Jio broadband, which is slated for launch by the end of this year, will come with unlimited calling through a VoIP phone as well as JioTV
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X