For Quick Alerts
ALLOW NOTIFICATIONS  
For Daily Alerts

ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿವರಗಳನ್ನು ಬದಲಾಯಿಸುವಾಗ ಈ 5 ವಿಷಯಗಳು ಗೊತ್ತಿರಬೇಕು

ಚಂದಾದಾರರು ಯುಐಡಿಎಐ (ಇಂಡಿಯನ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಅಧಿಕೃತ ವೆಬ್ಸೈಟ್- uidai.gov.in. ಮೂಲಕ ಆನ್ಲೈನ್ ​​ಆಧಾರ್ ಕಾರ್ಡ್ ವಿಳಾಸವನ್ನು ನವೀಕರಿಸಬಹುದು.

By Siddu
|

ಚಂದಾದಾರರು ಯುಐಡಿಎಐ (ಇಂಡಿಯನ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಅಧಿಕೃತ ವೆಬ್ಸೈಟ್- uidai.gov.in. ಮೂಲಕ ಆನ್ಲೈನ್ ​​ಆಧಾರ್ ಕಾರ್ಡ್ ವಿಳಾಸವನ್ನು ನವೀಕರಿಸಬಹುದು. ಆಧಾರ್ ಕಾರ್ಡ್ಲ್ಲಿನ ಇತರ ನವೀಕರಣಗಳಿಗಾಗಿ ಬಳಕೆದಾರ ಹತ್ತಿರದ ಆಧಾರ್ ಕೇಂದ್ರವನ್ನು ಭೇಟಿ ಮಾಡಬೇಕು ಎಂದು ಯುಐಡಿಎಐ ತನ್ನ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ. ಯುಐಡಿಎಐ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನೀಡುವವರು. ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಓಟಿಪಿ (ಒನ್ ಟೈಮ್ ಪಾಸ್ವರ್ಡ್) ಕಳುಹಿಸಲ್ಪಡುತ್ತದೆ. ಇದು ದೃಢೀಕರಣ ಸೇವೆಯನ್ನು ಸಕ್ರಿಯಗೊಳಿಸಲು ಚಂದಾದಾರರಿಗೆ ಸಹಾಯ ಮಾಡುತ್ತದೆ.ಅಲ್ಲದೆ, ನವೀಕರಿಸಿದ ಇಮೇಲ್ ಐಡಿ ಮೂಲಕ ಆಧಾರ್ ಬಳಕೆದಾರರಿಗೆ ಸಂಬಂಧಿಸಿದ ಎಲ್ಲಾ ಇಮೇಲ್ ಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಆಧಾರ್ ಕಾರ್ಡ್  ವಿವರಗಳನ್ನು ಬದಲಾಯಿಸುವಾಗ ಈ 5 ವಿಷಯ ಗೊತ್ತಿರಬೇಕು

ಆಧಾರ್ ಕಾರ್ಡ್ ವಿವರ ನವೀಕರಿಸುವ ಬಗ್ಗೆ ಗೊತ್ತಿರಬೇಕಾದ 5 ವಿಷಯಗಳು:

1. ಯುಐಡಿಎಐ ಒದಗಿಸಿದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಬಳಕೆದಾರರು ತಮ್ಮ ಆಧಾರ್ ಡೇಟಾವನ್ನು ನವೀಕರಿಸುತ್ತಿರಬೇಕು.

2. ಬಳಕೆದಾರರು ಯುಐಡಿಎಐನ ಪೋರ್ಟಲ್ ಮೂಲಕ ಆಧಾರ್ ನಲ್ಲಿ ತಮ್ಮ ವಿಳಾಸದಲ್ಲಿ ನವೀಕರಣ ಅಥವಾ ತಿದ್ದುಪಡಿಯನ್ನು ಕೋರಬಹುದು. ಯುಐಡಿಎಐ ಪೋರ್ಟಲ್ ನಲ್ಲಿ 'ಚೆಕ್ ಸ್ಟೇಟಸ್ - ಅಪ್ಡೇಟ್ ಮಾಡಲಾದ ಆನ್ಲೈನ್' ಲಿಂಕ್ ಮೂಲಕ ಈ ಸೌಲಭ್ಯವನ್ನು ಪ್ರವೇಶಿಸಬಹುದು.

3. ಯುಐಡಿಎಐ ಪೋರ್ಟಲ್ ಮೂಲಕ ಬಳಕೆದಾರರು ತಮ್ಮ ವಿಳಾಸ ಬದಲಾವಣೆ ಮಾಡಬಹುದು.

4. ಆಧಾರ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆಯನ್ನು ಕೋರುವುದಕ್ಕಾಗಿ, ಬಯೋಮೆಟ್ರಿಕ್ ದೃಢೀಕರಣದ ಅಗತ್ಯವಿದೆ. ಯುಐಡಿಎಐನ ವೆಸ್ಬೈಟ್ ನಲ್ಲಿ ಉಲ್ಲೇಖಿಸಿರುವಂತೆ ಇದನ್ನು ಪೋಸ್ಟ್ ಅಥವಾ ಆನ್ಲೈನ್ ​​ಮೂಲಕ ಮಾಡಲಾಗುವುದಿಲ್ಲ. ಆಧಾರ್ ಮೊಬೈಲ್ ಸಂಖ್ಯೆಯಲ್ಲಿ ಬದಲಾವಣೆ ಕೋರಲು ಆಧಾರ್ ಹೊಂದಿರುವವರು ನೋಂದಣಿ ಕೇಂದ್ರಗಳನ್ನು ಭೇಟಿ ಮಾಡಬೇಕು.

5. ಆಧಾರ್ ಚಂದಾದಾರರು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇಮೇಲ್ ಐಡಿ ಅನ್ನು ನವೀಕರಿಸಬಹುದು.

English summary

5 Things To Know About Changing Details In Your Aadhaar Card

UIDAI is the issuer of the 12-digit Aadhaar number as well as Aadhaar card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X