For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬ್ಯಾಂಕಿಂಗ್ ವಹಿವಾಟು ಏರಿಕೆ: ಎಸ್ಬಿಐ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೊಬೈಲ್ ಬ್ಯಾಂಕಿಂಗ್ ವಹಿವಾಟು ರೂ. 3,360 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಿರೀಕ್ಷಿಸಿದೆ.

|

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೊಬೈಲ್ ಬ್ಯಾಂಕಿಂಗ್ ವಹಿವಾಟು ರೂ. 3,360 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಿರೀಕ್ಷಿಸಿದೆ.

 
ಮೊಬೈಲ್ ಬ್ಯಾಂಕಿಂಗ್ ವಹಿವಾಟು ಏರಿಕೆ: ಎಸ್ಬಿಐ

ಒಟ್ಟಾರೆ ವಹಿವಾಟು ರೂ. 7,56,000 ಕೋಟಿಗೆ ತಲುಪಲಿದೆ ಎಂದು ಎಸ್‌ಬಿಐ ಅಂದಾಜಿಸಿದೆ. ಬ್ಯಾಂಕುಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡಿರುವ ಗ್ರಾಹಕರ ಸಂಖ್ಯೆ ಮಾರ್ಚ್‌ 31ರ ಅಂತ್ಯದ ವೇಳೆಗೆ 305 ಲಕ್ಷ ತಲುಪಿದೆ ಎಂದು ಎಸ್ಬಿಐ ಉಪ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರಾ ತಿಳಿಸಿದ್ದಾರೆ.

 

ಟೆಲಿಕಾಂ ಕ್ಷೇತ್ರದಲ್ಲಿನ ಸ್ಪರ್ಧೆ, ಡಿಜಿಟಲೀಕರಣದಿಂದಾಗಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿದೆ. ಡೇಟಾ ಸೌಲಭ್ಯ ಹೆಚ್ಚೆಚ್ಚು ಸಿಗುತ್ತಿದ್ದು, ವೈ-ಫೈ, 3ಜಿ, 4ಜಿ ಲಭ್ಯತೆಯಿಂದ ಬ್ಯಾಂಕಿಂಗ್‌ ವಹಿವಾಟು ಹೆಚ್ಚು ಸುಲಭಗೊಂಡಿದೆ. ಕಳೆದ ಸಾಲಿನಲ್ಲಿ ರೂ. 6 ಲಕ್ಷ ಕೋಟಿ ಮೊತ್ತದ 2,706 ಲಕ್ಷದಷ್ಟು ಮೊಬೈಲ್‌ ಬ್ಯಾಂಕಿಂಗ್‌ ವಹಿವಾಟುಗಳು ನಡೆದಿದ್ದವು.

ಇಂಟರ್‌ನೆಟ್‌ ಬ್ಯಾಂಕಿಂಗ್‌, ಪಾಯಿಂಟ್‌ ಆಫ್‌ ಸೇಲ್‌, ಮೊಬೈಲ್ ಬ್ಯಾಂಕಿಂಗ್‌ ಮತ್ತು ಎಟಿಎಂಗಳ ಮೂಲಕ ಶೇ. 80ರಷ್ಟು ವಹಿವಾಟು ನಡೆಯುತ್ತಿರುವುದರಿಂದ ಬ್ಯಾಂಕ್‌ ಶಾಖೆಗಳಲ್ಲಿನ ವಹಿವಾಟು ಶೇ. 20ರಷ್ಟಕ್ಕೆ ಇಳಿದಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

English summary

Mobile Banking Transactions to grow: SBI

Mobile Banking Transactions to grow: SBI
Story first published: Thursday, June 14, 2018, 16:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X