For Quick Alerts
ALLOW NOTIFICATIONS  
For Daily Alerts

ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ!

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಬಿಪಿಎಲ್ ಕಾರ್ಡುದಾರರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

By Siddu Thoravat
|

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಬಿಪಿಎಲ್ ಕಾರ್ಡುದಾರರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದು, ಇದರಲ್ಲಿ ತುಂಬಾ ಜನರು ಬಿಪಿಎಲ್ ಕಾರ್ಡ್ ಗೆ ಆಧಾರ್ ನಂಬರ್ ಜೋಡಣೆ ಮಾಡಿಲ್ಲ.

ಆಧಾರ್ ಜೋಡಣೆಗೆ ಅವಕಾಶ

ಆಧಾರ್ ಜೋಡಣೆಗೆ ಅವಕಾಶ

ಆಧಾರ್ ಸಂಖ್ಯೆ ಲಿಂಕ್ ಮಾಡದೆ ಇರುವುದರಿಂದ ಪಡಿತರ ವಿತರಣೆಗೆ ತೊಂದರೆಯಾಗುತ್ತಿದ್ದು, ಅಂತವರಿಗಾಗಿ ಆಧಾರ್ ಜೋಡಣೆ ಮಾಡಲು ಇನ್ನೊಂದು ಅವಕಾಶ ನೀಡಲಾಗುತ್ತಿದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಹೆಚ್ಚು ಅಕ್ಕಿ!

ಅನ್ನಭಾಗ್ಯ ಯೋಜನೆಯಡಿ ಹೆಚ್ಚು ಅಕ್ಕಿ!

ಸಿದ್ದರಾಮಯ್ಯನವರು ಪರಿಚಯಿಸಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅಕ್ಕಿ ಪ್ರಮಾಣವನ್ನು 2 ಕೆಜಿ ಹೆಚ್ಚಿಸುವ ಪ್ರಸ್ತಾಪವಿದ್ದು, ಶೀಘ್ರದಲ್ಲಿಯೇ ಈ ನಿರ್ಧಾರಕ್ಕೆ ಬರಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ತಿಳಿಸಿದ್ದಾರೆ.

ಅವ್ಯವಹಾರ ತಡೆಗೆ ಕ್ರಮ
 

ಅವ್ಯವಹಾರ ತಡೆಗೆ ಕ್ರಮ

ಮಾರುಕಟ್ಟೆಯಲ್ಲಿ ರೂ. 19ಕ್ಕೆ ಸಿಗುತ್ತಿರುವ ಒಂದು ಕೆಜಿ ರಾಗಿಯನ್ನು ರೂ. 25.47 ಖರೀದಿಸುತ್ತಿರುವ ಇಲಾಖೆ ಕ್ರಮವನ್ನು ಪರಿಶೀಲಿಸಲಾಗುವುದು. ಅನಗತ್ಯವಾಗಿ ಆಗುತ್ತಿರುವ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ. ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಆಗಿದೆ ಪ್ರಮುಖ ದೊಡ್ಡ ಬದಲಾವಣೆ..

English summary

Good news! State Government Giving Benefits to BPL Card holders

Good news! State Government Giving Benefits to BPL Card holders
Story first published: Wednesday, June 20, 2018, 12:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X