For Quick Alerts
ALLOW NOTIFICATIONS  
For Daily Alerts

ಚೀನಾ-ಅಮೇರಿಕಾ ಟ್ರೇಡ್ ವಾರ್: ಭಾರತದ ಮೇಲಾಗುವ ಪರಿಣಾಮಗಳೇನು?

By Siddu
|

ಚೀನಾದ ಷೇರು ಮಾರುಕಟ್ಟೆ ಶಾಂಘೈ ಕಂಪೋಸಿಟ್ ಇಂಡೆಕ್ಸ್ ಮಂಗಳವಾರದಂದು ಶೇ. 3.8 ರಷ್ಟು ಭಾರಿ ಕುಸಿತವನ್ನು ದಾಖಲಿಸಿದೆ. ಚೀನಾ ಹಾಗೂ ಅಮೇರಿಕಾ ಮಧ್ಯದ ವ್ಯಾಪಾರ, ವಹಿವಾಟು ಸಂಬಂಧಗಳು ದಿನೇ ದಿನೇ ಹದಗೆಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಏಶಿಯಾದ ಪ್ರಮುಖ ಷೇರು ಮಾರುಕಟ್ಟೆಗಳಾದ ಹಾಂಗ್‌ಕಾಂಗ್ (ಶೇ. 2.8 ಕುಸಿತ), ತೈವಾನ್ (ಶೇ. 1.7 ಕುಸಿತ) ಮತ್ತು ಸೌತ್ ಕೊರಿಯಾ (ಶೇ. 1.5 ಕುಸಿತ) ಗಳಿಗೆ ಸಹ ಈ ಬಿಕ್ಕಟ್ಟಿನ ಬಿಸಿ ತಟ್ಟಿದ್ದು ಎಲ್ಲ ಕಡೆಯೂ ಕುಸಿತ ಕಂಡು ಬಂದಿತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಇಲ್ಲಿನ ನಿಫ್ಟಿ ಶೇ. 0.83 ಕುಸಿತ ದಾಖಲಿಸಿತು.

ಈ ಜಾಗತಿಕ ಟ್ರೇಡ್ ವಾರ್‌ನಿಂದ (ವ್ಯಾಪಾರ ಯುದ್ದ) ಭಾರತ ಗಳಿಸಿಕೊಳ್ಳುವುದು ಹಾಗೂ ಕಳೆದುಕೊಳ್ಳುವುದು ಏನನ್ನು? ಸಾಮಾನ್ಯವಾಗಿ ವ್ಯವಹಾರದ ಯುದ್ಧಗಳಲ್ಲಿ ಯಾರೂ ಜಯಶಾಲಿಗಳಾಗುವುದಿಲ್ಲ. ಎಲ್ಲರೂ ಕಳೆದುಕೊಳ್ಳುವವರೇ ಆಗುತ್ತಾರೆ. ತೀರಾ ರಕ್ಷಣಾತ್ಮಕ ಕ್ರಮಗಳಿಂದ ಸಹಜವಾಗಿಯೇ ಜಾಗತಿಕ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ. ಒಟ್ಟಾರೆಯಾಗಿ ಈ ಟ್ರೇಡ್ ವಾರ್‌ನಿಂದ ಉಂಟಾಗಬಹುದಾದ ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆ: ಕೊನೆ ದಿನಾಂಕ 25-06-2018, ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು?

1. ಟ್ರೇಡ್ ವಾರ್‌ಗಳಿಂದ ಚೀನಾದ ಆರ್ಥಿಕ ಬೆಳವಣಿಗೆಗೆ ಬಿದ್ದಿರುವ ಪೆಟ್ಟಿನಿಂದ ವಸ್ತುಗಳು ಹಾಗೂ ವಿಶೇಷವಾಗಿ ಲೋಹಗಳ ಬೆಲೆಯಲ್ಲಿ ಏನು ವ್ಯತ್ಯಾಸವಾಗಬಹುದು?
 

1. ಟ್ರೇಡ್ ವಾರ್‌ಗಳಿಂದ ಚೀನಾದ ಆರ್ಥಿಕ ಬೆಳವಣಿಗೆಗೆ ಬಿದ್ದಿರುವ ಪೆಟ್ಟಿನಿಂದ ವಸ್ತುಗಳು ಹಾಗೂ ವಿಶೇಷವಾಗಿ ಲೋಹಗಳ ಬೆಲೆಯಲ್ಲಿ ಏನು ವ್ಯತ್ಯಾಸವಾಗಬಹುದು?

ಚೀನಾ ಜಗತ್ತಿನ ಅತಿ ದೊಡ್ಡ ಲೋಹಗಳ ಬಳಕೆದಾರ ದೇಶವಾಗಿದೆ. ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಈ ಮೂಲ ಬಳಕೆಯ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆಗಳಿವೆ. ಚಿನ್ನದ ಮೇಲೆ ಅಂತಹ ಯಾವುದೇ ಪರಿಣಾಮ ಆಗದೇ ಇದರ ಬೆಲೆ ಹೆಚ್ಚಾಗಲಿದೆ.

ಈಗ ಚೀನಾದ ಆರ್ಥಿಕತೆ ಯಾವ ಪ್ರಮಾಣದಲ್ಲಿ ನಿಧಾನಗತಿ ಪಡೆಯಲಿದೆ ಹಾಗೂ ಜಾಗತಿಕವಾಗಿ ಅದರಿಂದಾಗುವ ಪರಿಣಾಮಗಳ ಆಧಾರದಲ್ಲಿ ಕಚ್ಚಾ ತೈಲದ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ.

2. ವ್ಯಾಪಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂಲ ಲೋಹಗಳ ಬೆಲೆ ಇಳಿಕೆ ಭಾರತಕ್ಕೆ ಲಾಭಕರವೆ?

ಮೂಲ ಲೋಹಗಳ ಬೆಲೆ ಇಳಿಕೆಯಿಂದ ಭಾರತಕ್ಕೆ ಲಾಭವಾಗಲಿದೆ ಎಂದು ಹೇಳಲಾಗದು. ಕಂಪನಿಗಳ ಆದಾಯ ಕಡಿಮೆಯಾಗಿ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು.

3. ಚೀನಾ ಕಚ್ಚಾ ತೈಲ ಖರೀದಿ ನಿಲ್ಲಿಸಿದರೆ ಯುಎಸ್ ತೈಲ ಬೆಲೆಗಳ ಮೇಲಾಗುವ ಪರಿಣಾಮವೇನು?

ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ವುಡ್ ಮ್ಯಾಕೆಂಜಿ ಪ್ರಕಾರ, ಚೀನಾ ದೇಶವು ಪಶ್ಚಿಮ ಆಫ್ರಿಕಾ ಹಾಗೂ ಇನ್ನಿತರ ಕಡೆಗಳಿಂದ ಯುಎಸ್ ಗುಣಮಟ್ಟಕ್ಕೆ ಹತ್ತಿರವಾದ ಕಚ್ಚಾ ತೈಲವನ್ನು ಖರೀದಿಸಬಹುದಾಗಿದೆ. ಚೀನಾ ದೂರವಾದರೆ ಅದರಷ್ಟೇ ದೊಡ್ಡ ಮತ್ತೊಂದು ಕಚ್ಚಾ ತೈಲ ಮಾರ್ಕೆಟ್ ಯುಎಸ್‌ಗೆ ಸಿಗುವುದು ದುರ್ಲಭ. ಹೀಗೊಂದು ಪರಿಸ್ಥಿತಿ ಉದ್ಭವಿಸಿದ್ದೇ ಆದಲ್ಲಿ, ಉಳಿದೆಲ್ಲ ವಿಷಯಗಳು ಸಹಜವಾಗಿದ್ದರೆ ಭಾರತಕ್ಕೆ ಈ ಸ್ಥಿತಿಯ ಲಾಭ ದೊರಕಲಿದೆ.

ಟ್ರೇಡ್ ವಾರ್‌ನಿಂದ ಕಚ್ಚಾ ತೈಲ ಬೆಲೆಗಳು ಕುಸಿತವಾದರೂ ಜಾಗತಿಕ ವಹಿವಾಟಿನಲ್ಲಾಗುವ ಏರುಪೇರು ಹಾಗೂ ವಿಶ್ವಾಸದ ಕೊರತೆಯಿಂದ ಭಾರತದ ಆರ್ಥಿಕತೆಗೆ ಅಂಥ ಪ್ರಯೋಜನಗಳೇನೂ ಆಗಲಾರವು ಎನ್ನುತ್ತಾರೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಆರ್ಥಿಕ ತಜ್ಞ ಅನುಭೂತಿ ಸಹಾಯ್.

4. ಯುಎಸ್‌ ರಕ್ಷಣಾ ನೀತಿಯಿಂದ ಭಾರತದ ಮೇಲಾಗುವ ದುಷ್ಪರಿಣಾಮವೇನು?
 

4. ಯುಎಸ್‌ ರಕ್ಷಣಾ ನೀತಿಯಿಂದ ಭಾರತದ ಮೇಲಾಗುವ ದುಷ್ಪರಿಣಾಮವೇನು?

ಯುಎಸ್ ಹಾಗೂ ಚೀನಾ ಮಧ್ಯದ ಪ್ರತೀಕಾರಾತ್ಮಕ ತೆರಿಗೆ ವಿಧಿಸುವಿಕೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸ್ಪಷ್ಟತೆಯಿಲ್ಲ. ಆದರೂ ಗಡಿಗಳ ಮಧ್ಯದ ಹೂಡಿಕೆಯ ಬಂಡವಾಳ ಹರಿವಿನ ಮೇಲೆ ಈ ಬೆಳವಣಿಗೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುತ್ತಾರೆ ಕೋಟಕ್ ಮಹಿಂದ್ರಾ ಬ್ಯಾಂಕ್‌ನ ಆರ್ಥಿಕ ತಜ್ಞೆ ಉಪಾಸನಾ ಭಾರದ್ವಾಜ್.

5. ಬಂಡವಾಳ ಹರಿವಿನ ಮೇಲೆ ಟ್ರೇಡ್ ವಾರ್ ಪರಿಣಾಮ ಬೀರಲಿದೆಯೆ?

ಬಂಡವಾಳ ಹರಿವಿನ ಮೇಲೆ ಪರಿಣಾಮಗಳಾಗಲಿದ್ದರೂ ಇದಕ್ಕೆ ಸಂಪೂರ್ಣ ಟ್ರೇಡ್ ವಾರ್ ಮಾತ್ರ ಕಾರಣವಾಗಿರಲಾರದು. ಮಾರುಕಟ್ಟೆಯಲ್ಲಿ ಸದ್ಯ ಸುಲಭವಾಗಿ ಲಭ್ಯವಿರುವ ಸರಳ ಬಂಡವಾಳದ ಹಣ ನಿಧಾನವಾಗಿ ಕರಗುತ್ತಿದೆ. ಎನ್ನುತ್ತಾರೆ ಕೇರ್ ರೇಟಿಂಗ್ಸ್‌ನ ಚೀಫ್ ಎಕನಾಮಿಸ್ಟ್ ಮದನ್ ಸಬ್ನವೀಸ್.

ಯುಎಸ್ ಫೆಡರಲ್ ಸರಕಾರ ತನ್ನ ವಿತ್ತೀಯ ನೀತಿಯನ್ನು ಬಿಗಿಗೊಳಿಸುತ್ತಿದೆ ಎಂದು ಯುಎನ್‌ಸಿಟಿಎಡಿ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

6. ಯುಎಸ್‌ಗೆ ರಫ್ತು ಹೆಚ್ಚಿಸುವ ಮೂಲಕ ಭಾರತ ಲಾಭ ಮಾಡಿಕೊಳ್ಳಬಹುದೆ?

ಸದ್ಯದ ಯುಎಸ್-ಚೀನಾ ಟ್ರೇಡ್ ವಾರ್ ಭಾರತಕ್ಕೆ ಒಂದು ಅವಕಾಶವೂ ಆಗಿದೆ. ಟೆಕ್ಸ್‌ಟೈಲ್, ಗಾರ್ಮೆಂಟ್ಸ್, ವಜ್ರ ಹಾಗೂ ಆಭರಣಗಳ ರಫ್ತಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಡಬಹುದಾಗಿದ್ದು, ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಭಾರದ್ವಾಜ್.

ಆದರೂ ಯುಎಸ್‌ನೊಂದಿಗೆ ಚೀನಾ ಹೊಂದಿರುವ ವಿಶಾಲವಾದ ರಫ್ತು ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುವುದು ಭಾರತಕ್ಕೆ ಕಷ್ಟದ ವಿಷಯವೇ ಸರಿ. ಯುಎಸ್‌ನ ರಫ್ತು ಮಾರುಕಟ್ಟೆಯಲ್ಲಿ ಚೀನಾದಷ್ಟು ಎತ್ತರಕ್ಕೆ ಬೆಳೆಯುವುದು ಸದ್ಯದ ಸ್ಥಿತಿಯಲ್ಲಿ ಭಾರತದಿಂದ ಸಾಧ್ಯವಾಗಲಾರದು.

7. ರೂಪಾಯಿ ಮತ್ತಷ್ಟು ದುರ್ಬಲವಾಗಲಿದೆಯೇ?

ವ್ಯಾಪಾರ ಬಿಕ್ಕಟ್ಟಿಗಿಂತಲೂ ಬಂಡವಾಳದ ಹರಿವಿನ ಪರಿಣಾಮದಿಂದ ರೂಪಾಯಿ ಬೆಲೆ ಕುಸಿತ ಕಾಣಲಿದೆ ಎನ್ನುತ್ತಾರೆ ಸಬ್ನವೀಸ್. ಸದ್ಯದ ಪರಿಸ್ಥಿತಿಯಲ್ಲಿ ಡಾಲರ್ ಎದುರು ರೂಪಾಯಿ 70ಕ್ಕೂ ಕೆಳಗಿಳಿಯುವ ಸಾಧ್ಯತೆಗಳಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

8. ಸ್ಥಳೀಯ ಮಾರುಕಟ್ಟೆ ಆಧರಿತ ಕಾರಣದಿಂದ ಭಾರತದ ಮೇಲೆ ಕಡಿಮೆ ಪರಿಣಾಮವಾಗಲಿದೆಯೆ?

ಒಟ್ಟಾರೆ ರಫ್ತು ಹಾಗೂ ಆಮದು ವ್ಯವಹಾರಗಳು ಭಾರತದ ಜಿಡಿಪಿಯ ಶೇ. 42ರಷ್ಟು ಆದಾಯ ತರುತ್ತಿವೆ ಎಂಬುದನ್ನು ಪ್ರಮುಖವಾಗಿ ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಹಣಕಾಸಿಗಾಗಿ ಹೊರಗಿನ ಬಂಡವಾಳ ಹರಿವನ್ನು ಅವಲಂಬಿಸಿರುವ ಭಾರತ 'ಚಾಲ್ತಿ ಲೆಕ್ಕದ ಕೊರತೆ' (Current Account Deficit) ಅನುಭವಿಸುತ್ತಿದೆ.

ಕೊನೆ ಮಾತು

ಟ್ರೇಡ್ ವಾರ್ (ವ್ಯಾಪಾರ ಯುದ್ದ) ಮಿತಿ ಮೀರಿದರೆ ಭಾರತದ ಆರ್ಥಿಕ ಬೆಳವಣಿಗೆ ಹಾಗೂ ಬಂಡವಾಳ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮಗಳಾಗುವುದು ಖಂಡಿತ. ಪ್ರಸಕ್ತ ಜಾಗತಿಕ ಆರ್ಥಿಕ ವ್ಯವಸ್ಥೆ ನಿಧಾನವಾಗಿ ಕುಸಿದು ಹೋಗಬಹುದಾದ ಆತಂಕ ಈಗ ಪ್ರಮುಖವಾಗಿ ಎಲ್ಲರನ್ನೂ ಕಾಡುತ್ತಿದೆ. ಈ ಟ್ರೇಡ್ ವಾರ್‌ನ ದೂರಗಾಮಿ ಪರಿಣಾಮಗಳು ಕೇವಲ ವ್ಯಾಪಾರ, ವ್ಯವಹಾರ ಅಷ್ಟೇ ಅಲ್ಲದೆ ಆಯಾ ದೇಶಗಳ ರಾಜಕೀಯ ಪರಿಸ್ಥಿತಿಗಳನ್ನು ಪಲ್ಲಟಗೊಳಿಸುವ ಹಂತಕ್ಕೂ ಹೋಗಬಹುದು.

Read more about: india economy money finance news usa
English summary

How US-China trade war will affect on India

There is no question that economic growth and asset markets will be badly hurt by a full-blown US-China trade war
Story first published: Thursday, June 21, 2018, 12:41 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more