For Quick Alerts
ALLOW NOTIFICATIONS  
For Daily Alerts

ಈ 11 ಬ್ಯಾಂಕುಗಳು ಎಟಿಎಂಗಳನ್ನು ಮುಚ್ಚುತ್ತಿವೆ, ಇದರಲ್ಲಿ ನಿಮ್ಮ ಬ್ಯಾಂಕ್ ಇದೆಯೇ ನೋಡಿ..

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾಂಪ್ಟ್ ಆಕ್ಟಿವ್ ಆಕ್ಷನ್ (ಪಿಸಿಎ) ಪಟ್ಟಿಯಲ್ಲಿ ಬರುವ ಬ್ಯಾಂಕುಗಳು ತಮ್ಮ ಎಟಿಎಂಗಳನ್ನು ಮುಚ್ಚಲು ಪ್ರಾರಂಭಿಸಿವೆ.

By Siddu
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾಂಪ್ಟ್ ಆಕ್ಟಿವ್ ಆಕ್ಷನ್ (ಪಿಸಿಎ) ಪಟ್ಟಿಯಲ್ಲಿ ಬರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಎಟಿಎಂಗಳನ್ನು ಮುಚ್ಚಲು ಪ್ರಾರಂಭಿಸಿವೆ.

ರಿಸರ್ವ್ ಬ್ಯಾಂಕಿನ ರೆಗ್ಯುಲೇಟರಿ ಆರ್ಡರ್ ನಂತರ ತಮ್ಮ ಬ್ಯಾಂಕುಗಳ ವೆಚ್ಚವನ್ನು ಕಡಿಮೆ ಮಾಡಲು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಿಂದ ಹಿಡಿದು ಕೆನರಾ ಬ್ಯಾಂಕಿನವರೆಗೆ ತಮ್ಮ ಎಟಿಎಂಗಳನ್ನು ಮುಚ್ಚುವಿಕೆಯ ಪ್ರಕ್ರಿಯೆ ಪ್ರಾರಂಭಿಸಿವೆ.

ಆರ್ಬಿಐ ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ 1,635 ಎಟಿಎಂಗಳನ್ನು ನಿರ್ಬಂಧಿಸಿವೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

ಬ್ಯಾಂಕುಗಳ ಪಟ್ಟಿ

ಬ್ಯಾಂಕುಗಳ ಪಟ್ಟಿ

ಆರ್ಬಿಐನ ಪಿಸಿಎ (ಪಿಸಿಎ) ಪಟ್ಟಿಯಲ್ಲಿ ಬರುವ ಬ್ಯಾಂಕುಗಳು ಕಳೆದ ವರ್ಷದ ಹಲವಾರು ಎಟಿಎಂ ಮುಚ್ಚಿವೆ. ಇದು ಕಳೆದ ವರ್ಷ ಗ್ರಾಮೀಣ ಭಾರತ ಒಳಗೊಂಡಂತೆ ಶೇ. 22 ಪ್ರತಿಶತ ನಗದು ವಿತ್ ಡ್ರಾವಲ್ ಹೆಚ್ಚಿರುವ ಸಂದರ್ಭದಲ್ಲಿ ಸಂಭವಿಸಿದೆ.
ಈ ಪಟ್ಟಿಯಲ್ಲಿ ಅಲಹಾಬಾದ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಒಳಗೊಂಡಿವೆ. ಜತೆಗೆ ಪಂಜಾಬ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ತನ್ನ ಎಟಿಎಂ ಮುಚ್ಚಿದೆ. ರಿಸರ್ವ್ ಬ್ಯಾಂಕಿನ ರೆಗ್ಯುಲೇಟರಿ ಆರ್ಡರ್ ನಂತರ ಎಟಿಎಂಗಳನ್ನು ಮುಚ್ಚಲಾಗುತ್ತಿದೆ.

ಹೆಚ್ಚು ಎಟಿಎಂಗಳನ್ನು ಮುಚ್ಚಿಸಿರುವ ಬ್ಯಾಂಕುಗಳು

ಹೆಚ್ಚು ಎಟಿಎಂಗಳನ್ನು ಮುಚ್ಚಿಸಿರುವ ಬ್ಯಾಂಕುಗಳು

ಅತಿಹೆಚ್ಚು ಎಟಿಎಂಗಳನ್ನು ಮುಚ್ಚಲ್ಪಟ್ಟ ಬ್ಯಾಂಕುಗಳ ಪಟ್ಟಿಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಇದೆ. ಇದು ಶೇ. ೧೫ರಷ್ಟು ಎಟಿಎಂಗಳನ್ನು ಮುಚ್ಚಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಎಟಿಎಂಗಳ ಸಂಖ್ಯೆ 3,500 ಆಗಿತ್ತು. ಅದು ಈಗ ಕೇವಲ 3,000 ಮಾತ್ರ. ಇದರ ನಂತರ ಕೆನರಾ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಗಳು ಶೇ. ​​7.6 ರಷ್ಟು ಎಟಿಎಂಗಳನ್ನು ಮುಚ್ಚಿವೆ.

ಆರ್ಬಿಐನ ಪಿಸಿಎ ಪಟ್ಟಿಯಲ್ಲಿರದಿದ್ದರೂ ಎಟಿಎಂ ಮುಚ್ಚಿದ ಬ್ಯಾಂಕ್
 

ಆರ್ಬಿಐನ ಪಿಸಿಎ ಪಟ್ಟಿಯಲ್ಲಿರದಿದ್ದರೂ ಎಟಿಎಂ ಮುಚ್ಚಿದ ಬ್ಯಾಂಕ್

ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಆರ್ಬಿಐನ ಪಿಸಿಎ ಪಟ್ಟಿಯಲ್ಲಿ ಇರದಿದ್ದರೂ ಕೂಡ ಎಟಿಎಂಗಳನ್ನು ಕಡಿತಗೊಳಿಸುತ್ತಿವೆ. ಬ್ಯಾಂಕ್ ಆಫ್ ಬರೋಡಾವು 2000 ಎಟಿಎಂಗಳನ್ನು ಮುಚ್ಚಿದ್ದರೆ, ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 1000 ಎಟಿಎಂಗಳನ್ನು ಮುಚ್ಚಿದೆ.

ಖಾಸಗಿ ಬ್ಯಾಂಕ್ ಎಟಿಎಂಗಳ ಸಂಖ್ಯೆಯಲ್ಲಿ ಹೆಚ್ಚಳ

ಖಾಸಗಿ ಬ್ಯಾಂಕ್ ಎಟಿಎಂಗಳ ಸಂಖ್ಯೆಯಲ್ಲಿ ಹೆಚ್ಚಳ

ಖಾಸಗಿ ಬ್ಯಾಂಕುಗಳ ಎಟಿಎಂಗಳ ಸಂಖ್ಯೆಯು ಹೆಚ್ಚಾಗಿದೆ. ಆದರೆ ಸರ್ಕಾರಿ ಬ್ಯಾಂಕುಗಳ ಎಟಿಎಂಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತಿದೆ. ಖಾಸಗಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು (SFBs) ತಮ್ಮ ಕೊರತೆಯನ್ನು ನೀಗಿಸಿವೆ. ಹೊಸ ಫಿನೊ ಪೇಮೆಂಟ್ ಬ್ಯಾಂಕ್ 2700 ಎಟಿಎಂ ಯಂತ್ರಗಳನ್ನು ಸ್ಥಾಪಿಸಿದೆ. ಅದೇ ರಿತಿ ಸಕಾ್ರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 500 ಹೊಸ ಎಟಿಎಂಗಳನ್ನು ಸ್ಥಾಪಿಸಿದೆ. ಖಾಸಗಿ ಬ್ಯಾಂಕುಗಳು 2016 ರಿಂದ 2017 ರ ನಡುವೆ 7,500 ಹೊಸ ಎಟಿಎಂಗಳನ್ನು ಸ್ಥಾಪಿಸಿವೆ.

Read more about: rbi banking money finance news
English summary

11 public sector banks under PCA may experience worsening of bad loan problem

Here you will know the reason why PCA Banks going to shutters down of their atm.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X