For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನಿಂದ 1 ವರ್ಷದ ಅವಧಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ

ಬಿಎಸ್ಎನ್ಎಲ್ ಘೋಷಿಸಿರುವ ಹೊಸ ಯೋಜನೆ ಬರೋಬ್ಬರಿ ಒಂದು ವರ್ಷದ ಅವಧಿಯನ್ನು ಹೊಂದಿದೆ. ಈ ಒಂದು ವರ್ಷದ ವ್ಯಾಲಿಡಿಟಿಯಲ್ಲಿ ಗ್ರಾಹಕರ ಪ್ರತಿನಿತ್ಯ 2GB ಡೇಟಾ ಸೌಲಭ್ಯ ಪಡೆಯಲಿದ್ದಾರೆ.

By Siddu
|

ಟೆಲಿಕಾಂ ಕ್ಷೇತ್ರ ಹೊಸ ಹೊಸಆಫರ್ ಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ! ಜಿಯೋ ಪ್ರವೇಶದ ನಂತರ ನಂತರ ದರ ಸಮರದಲ್ಲಿ ತೊಡಗಿರುವ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಶತಪ್ರಯತ್ನ ಮಾಡುತ್ತಿವೆ.
ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಮ ಕಂಪನಿಯಾಗಿರುವ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಯೊಂದನ್ನು ಘೋಷಿಸಿದೆ. ಈ ಹೊಸ ಪ್ಲಾನ್ ನ ವಿವರ ಇಲ್ಲಿದೆ ನೋಡಿ.. ಜಿಯೋ ಭರ್ಜರಿ ಆಫರ್! ಪ್ರತಿದಿನ 5.5GB ಡೇಟಾ, ಅನಿಯಮಿತ ಕರೆ ಸೌಲಭ್ಯ

ಒಂದು ವರ್ಷ ವ್ಯಾಲಿಡಿಟಿ

ಒಂದು ವರ್ಷ ವ್ಯಾಲಿಡಿಟಿ

ಬಿಎಸ್ಎನ್ಎಲ್ ಘೋಷಿಸಿರುವ ಹೊಸ ಯೋಜನೆ ಬರೋಬ್ಬರಿ ಒಂದು ವರ್ಷದ ಅವಧಿಯನ್ನು ಹೊಂದಿದೆ. ಈ ಒಂದು ವರ್ಷದ ವ್ಯಾಲಿಡಿಟಿಯಲ್ಲಿ ಗ್ರಾಹಕರ ಪ್ರತಿನಿತ್ಯ 2GB ಡೇಟಾ ಸೌಲಭ್ಯ ಪಡೆಯಲಿದ್ದಾರೆ.

ರೂ. 1999 ಪ್ಲಾನ್

ರೂ. 1999 ಪ್ಲಾನ್

ವ್ಯಾಲಿಡಿಟಿ: 365 ದಿನ 

4G ಡೇಟಾ: ಪ್ರತಿದಿನ 2GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ವರ್ಷಕ್ಕೆ 730 ಜಿಬಿ ಡೇಟಾ ಹಾಗೂ 36500 ಎಸ್ಎಂಎಸ್ ಗ್ರಾಹಕರಿಗೆ ಸಿಗಲಿದೆ.

ರೀಚಾರ್ಜ್ ಅವಧಿ

ರೀಚಾರ್ಜ್ ಅವಧಿ

ಈ ಪ್ಲಾನ್ ಜೂನ್ 22 ರಿಂದ ಸೆಪ್ಟೆಂಬರ್ 22 ರವರೆಗೆ ರಿಚಾರ್ಜ್ ಮಾಡಲು ಲಭ್ಯವಿದೆ. ಮಾಹಿತಿ ಪ್ರಕಾರ ಚೆನ್ನೈ, ತಮಿಳನಾಡು ವಲಯಗಳಿಗೆ ಮಾತ್ರ ಈ ಪ್ಲಾನ್ ನೀಡಲಾಗಿದೆ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ಬಿಎಸ್ಎನ್ಎಲ್ ಜಿಯೋ ನೀಡುತ್ತಿರುವ ದೀರ್ಘಾವಧಿ ಪ್ಲಾನ್ ಗೆ ಟಕ್ಕರ್ ನೀಡುವ ಸಲುವಾಗಿ ಈ ಪ್ಲಾನ್ ಪರಿಚಯಿಸಿದೆ. ಈಗಾಗಲೇ ಜಿಯೋ ಕೂಡ ರೂ. 1999 ಪ್ಲಾನ್ ಘೋಷಿಸಿದ್ದು, 180 ದಿನಗಳ ವ್ಯಾಲಿಡಿಟಿಗೆ 125 ಜಿಬಿ ಡೇಟಾ ಲಭ್ಯವಾಗಲಿದೆ.

English summary

BSNL launched prepaid plan with everyday 2GB data, unlimited calling for 1 year

BSNL launched prepaid plan with everyday 2GB data, unlimited calling for 1 year
Story first published: Thursday, June 28, 2018, 14:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X