For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ರೂ. 500 ಕ್ಯಾಶ್ ಬ್ಯಾಕ್ ಆಫರ್!

ರಿಲಯನ್ಸ್ ಜಿಯೋ ಹೊಸ ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಲ್ಲಿ ಗ್ರಾಹಕರು ರೂ. 500 ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ.

By Siddu Thoravat
|

ರಿಲಯನ್ಸ್ ಜಿಯೋ ಹೊಸ ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಲ್ಲಿ ಗ್ರಾಹಕರು ರೂ. 500 ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಜಿಯೋ ಫೈ ಡಿವೈಸ್ ಹಾಗು ಪೋಸ್ಟ್ ಪೇಡ್ ಕನೆಕ್ಷನ್ ಹೆಚ್ಚಿಸಲು ಜಿಯೋ ಈ ವಿಶೇಷ ಕ್ಯಾಶ್ ಬ್ಯಾಕ್ ಯೋಜನೆಯನ್ನು ತನ್ನ ಗ್ರಾಹಕರಿಗೆ ಘೋಷಿಸಿದೆ.
ರೂ. 500 ಕ್ಯಾಸ್ ಬ್ಯಾಕ್ ಮೊತ್ತವನ್ನು ಅರ್ಹ ಗ್ರಾಹಕರ ಪೋಸ್ಟ್ಪೇಡ್ ಖಾತೆಯಲ್ಲಿ ಹಾಕಲಾಗುವುದು ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

ವೈಫೈ ರೂಟರ್

ವೈಫೈ ರೂಟರ್

ಕಳೆದ ಸಾಲಿನ ಸೆಪ್ಟೆಂಬರ್ ನಲ್ಲಿ ಕಂಪನಿ ಜಿಯೊಫಿ 4ಜಿ ರೂಟರ್ ಅನ್ನು ರೂ. 1,999ಗೆ ಪರಿಚಯಿಸಲಾಗಿತ್ತು. ಈ ಬಾರಿ ಇದರ ಬೆಲೆಯನ್ನು ರೂ. 999 ಗೆ ಇಳಿಸಲಾಗಿದೆ. ಈ ಕೊಡುಗೆ ಜುಲೈ 3 ರಿಂದ ಶುರುವಾಗಿದೆ.

ಡೇಟಾ ಕಾರ್ಡ್ ಎಲ್ಲಿ ಲಭ್ಯ

ಡೇಟಾ ಕಾರ್ಡ್ ಎಲ್ಲಿ ಲಭ್ಯ

ಜಿಯೋಫೈ ಡೇಟಾ ಕಾರ್ಡ್ ಜಿಯೋ ಸ್ಟೋರ್ ನಲ್ಲಿ ಲಭ್ಯವಾಗಲಿದ್ದು, ಜತೆಗೆ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಲ್ಲಿಯೂ ಸಿಗಲಿದೆ. ಜಿಯೋಫಿ ಕ್ಯಾಶ್ ಬ್ಯಾಕ್ ಆಫರ್ ಪಡೆಯಲು ಇಚ್ಚಿಸುವವರು ರೂಟರ್ ಜೊತೆ ಹೊಸ ಸಿಮ್ ಖರೀದಿಸಬೇಕು. 12 ತಿಂಗಳ ನಂತರ ಗ್ರಾಹಕರಿಗೆ ರೂ. 500 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

ರೂ. 199 ಪ್ಲಾನ್

ರೂ. 199 ಪ್ಲಾನ್

ಪ್ರಸ್ತುತ ಇರುವ ರೂ. 199 ಪ್ಲಾನ್ ಅಡಿಯಲ್ಲಿ ಎಸ್ಎಂಎಸ್, ಉಚಿತ ಧ್ವನಿ ಕರೆ, 25 ಜಿಬಿ ಡೇಟಾ ಸೌಲಭ್ಯವಿದೆ. ಜತೆಗೆ ಜಿಯೋ ಆ್ಯಪ್ ನ ಚಂದಾದಾರತ್ವ ಕೂಡ ಸಿಗಲಿದೆ.

Read more about: jio reliance finance news telecom
English summary

Jio's Cashback Offer: Here's How Postpaid Users Can Get JioFi Device

Reliance JioFi Cashback Offer: Customers purchasing a new JioFi connection along with a postpaid SIM from Reliance Jio are eligible for this offer.
Story first published: Tuesday, July 3, 2018, 17:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X