For Quick Alerts
ALLOW NOTIFICATIONS  
For Daily Alerts

ಮನೆ ಬಾಗಿಲಿಗೆ 100 ಸರ್ಕಾರಿ ಸೇವೆಗಳು ಲಭ್ಯ, ಅವು ಯಾವುವು ಗೊತ್ತೆ?

ಅಗಸ್ಟ್ ನಂತರದಲ್ಲಿ ಸರ್ಕಾರಿ ಸೇವೆಗಳಿಗಾಗಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

By Siddu Thoravat
|

ಸಾರ್ವಜನಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಜಾತಿ ಪ್ರಮಾಣ ಪತ್ರ ಹಾಗು ಡ್ರೈವಿಂಗ್ ಲೈಸೆನ್ಸ್ ಒಳಗೊಂಡಂತೆ ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳು ನಿಮ್ಮ ಮನೆ ಬಾಗಿಲಿಗೆ ತಲುಪಲಿವೆ.
ಹೌದು, ಇನ್ನುಮುಂದೆ ನೀವು ಉದ್ದದ ಸರತಿ ಸಾಲಿನಲ್ಲ ನಿಲ್ಲಬೇಕಾದ ಅಗತ್ಯವಿಲ್ಲ! ಸುಮಾರು ನೂರಕ್ಕೂ ಹೆಚ್ಚು ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಅವೇಲ್ಲವೂ ಕೂಡ ಹೋಂ ಡೆಲಿವರಿ ಆಗಲಿವೆ.

 

ಆಮ್ ಆದ್ಮಿ ಡೋರ್ ಸ್ಟೆಪ್ ಸರ್ವಿಸ್

ಆಮ್ ಆದ್ಮಿ ಡೋರ್ ಸ್ಟೆಪ್ ಸರ್ವಿಸ್

ದೆಹಲಿ ಜನರಿಗೆ ನಿಜಕ್ಕೂ ಸಂತಸದಸ ಸುದ್ದಿ. ಅಗಸ್ಟ್ ನಂತರದಲ್ಲಿ ಸರ್ಕಾರಿ ಸೇವೆಗಳಿಗಾಗಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಇದು ಆಮ್ ಆದ್ಮಿ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾಗಲಿದ್ದು, ಮನೆ ಬಾಗಿಲಿಗೆ ತಲುಪಿಸುವ ಸೇವೆ ಮುಂದಿನ ತಿಂಗಳು ಆರಂಭವಾಗಲಿದೆ.

ಪ್ರತಿ ತಿಂಗಳು 35 ಸೇವೆ ಸೇರ್ಪಡೆ

ಪ್ರತಿ ತಿಂಗಳು 35 ಸೇವೆ ಸೇರ್ಪಡೆ

ಪ್ರತಿ ತಿಂಗಳು 30 ರಿಂದ 35 ಸೇವೆಗಳನ್ನು ಡೋರ್ ಸ್ಟೆಪ್ ಸರ್ವಿಸ್ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ 100 ಸೇವೆಗಳ ಪಟ್ಟಿ ಸಿದ್ಧವಾಗಿದೆ.

ಸಿಗಲಿರುವ ಪ್ರಮುಖ ಸೇವೆಗಳು
 

ಸಿಗಲಿರುವ ಪ್ರಮುಖ ಸೇವೆಗಳು

ಪಿಂಚಣಿ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಜನನ ಹಾಗೂ ಮರಣ ಪತ್ರವನ್ನು ಕೂಡ ಪಡೆಯಬಹುದಾಗಿದೆ. ಈ ಸೇವೆಗಳನ್ನು ಪಡೆಯಲು ಮನೆಯಲ್ಲಿಯೇ ಕುಳಿತು ಅರ್ಜಿ ತುಂಬಿದರೆ ಸಾಕು.

ಕಾಲ್ ಸೆಂಟರ್ ಸೌಲಭ್ಯ

ಕಾಲ್ ಸೆಂಟರ್ ಸೌಲಭ್ಯ

ಸರ್ಕಾರಿ ಸೇವೆಗಳ ಸೌಲಭ್ಯ ಪಡೆಯಲು ಸರ್ಕಾರ ಒಂದು ಕಾಲ್ ಸೆಂಟರ್ ಸಂಖ್ಯೆ ನೀಡಲಿದೆ. ಆ ನಂಬರ್ ಗೆ ಕರೆ ಮಾಡಿ ಯಾವ ಸೇವೆ ಬೇಕೆಂಬುದನ್ನು ತಿಳಿಸಬೇಕು. ತದನಂತರ ಕಾಲ್ ಸೆಂಟರ್ ಉದ್ಯೋಗಿಗಳು ಕರೆ ಮಾಡಿ ತಮ್ಮ ಸೇವೆ ಕುರಿತು ಮಾಹಿತಿ ನೀಡಲಿದ್ದಾರೆ.

ಸೇವಾ ವೈಖರಿ

ಸೇವಾ ವೈಖರಿ

ಕೇಜ್ರವಾಲ್ ನೇತೃತ್ವದ ಡೋರ್ ಸ್ಟೆಪ್ ಸೇವೆಯನ್ನು 300 ಮೊಬೈಲ್ ಸಹಾಯಕರು ಆರಂಭಿಸಲಿದ್ದಾರೆ. ಇವರು ಸಾರ್ವಜನಿಕರಿಂದ ದಾಖಲೆ ಪಡೆದು ಪರಿಶೀಲಿಸಿದ ನಂತರ ಸಂಬಂಧಿಸಿದ ಇಲಾಖೆಗೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸುವರು. ಪ್ರಮಾಣ ಪತ್ರ ಸಿದ್ಧವಾದ ಮೇಲೆ ಇಲಾಖೆಯು ಅರ್ಜಿದಾರರಿಗೆ ಹಾಗೂ ಮೊಬೈಲ್ ಸಹಾಯಕರಿಗೆ ಎಸ್ಎಂಎಸ್ ಕಳುಹಿಸಲಿದೆ.

English summary

100 public services to be delivered at doorstep

Around 100 public services, including driving licence and caste certificates, at their doorstep under a proposed scheme of the Delhi government.
Story first published: Wednesday, July 4, 2018, 12:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X