For Quick Alerts
ALLOW NOTIFICATIONS  
For Daily Alerts

ರೈತರಿಗೆ ಭರ್ಜರಿ ಕೊಡುಗೆ! 14 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಣೆ

ದೇಶದ ರೈತರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭರ್ಜರಿ ಉಡುಗೊರೆ ಕೊಟ್ಟಿದೆ. ಭತ್ತ, ರಾಗಿ, ಜೋಳ ಒಳಗೊಂಡಂತೆ ೧೪ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿದೆ. ಜೊತೆಗೆ ಕೆಲ ಬೆಳೆಗಳಿಗಿರುವ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲಾಗಿದೆ

By Siddu Thoravat
|

ದೇಶದ ರೈತರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭರ್ಜರಿ ಉಡುಗೊರೆ ಕೊಟ್ಟಿದೆ. ಭತ್ತ, ರಾಗಿ, ಜೋಳ ಒಳಗೊಂಡಂತೆ ೧೪ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿದೆ. ಜೊತೆಗೆ ಕೆಲ ಬೆಳೆಗಳಿಗಿರುವ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲಾಗಿದೆ.

ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ಪಕ್ಷಗಳು ತೊಡಗಿದ್ದು, ಕೇಂದ್ರ ಸರ್ಕಾರ ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಮುಖಾಂತರ ರೈತರಿಗೆ ಆಕ‍ರ್ಷಣೀಯ ಕೊಡುಗೆ ನೀಡಿದೆ. ಕುಮಾರಸ್ವಾಮಿ ಮೊದಲ ಬಜೆಟ್: ಸಾಲಮನ್ನಾ ಸೇರಿದಂತೆ ಬಜೆಟ್ ನಿರೀಕ್ಷೆಗಳೇನು?

ಬತ್ತ, ಜೋಳ ಬೆಂಬಲ ಬೆಲೆ

ಬತ್ತ, ಜೋಳ ಬೆಂಬಲ ಬೆಲೆ

ಪ್ರಮುಖ ಮುಂಗಾಉ ಬೆಳೆಯಾಗಿರುವ ಬತ್ತದ ಬೆಲೆಯನ್ನು ಶೇ. ೧೩ರಷ್ಟು ಹೆಚ್ಚಿಸಲಾಗಿದೆ. ಹಿಂದೆ ಕ್ವಿಂಟಲ್ ಗೆ ರೂ. ೧೫೫೦ ಇದ್ದ ಬೆಲೆಯನ್ನು ರೂ. ೧೭೫೦ಕ್ಕೆ ಏರಿಸಲಾಗಿದೆ. ಜೋಳಕ್ಕೆ ಕ್ವಿಂಟಲ್ ಗೆ ಶೇ. ೪೦ರಷ್ಟು, ರೂ. ೧೭೦೦ ರಿಂದ ರೂ. ೨೪೩೦ಕ್ಕೆ ಹೆಚ್ಚಿಸಲಾಗಿದೆ.

ಸರ್ಕಾರಕ್ಕೆ ಹೊರೆ

ಸರ್ಕಾರಕ್ಕೆ ಹೊರೆ

ಸರ್ಕಾರದ ಈ ನೂತನ ಬೆಂಬಲ ಬೆಲೆಗಳಿಂದಾಗಿ ಕೇಂದ್ರಕ್ಕೆ ರೂ. ೩೩ ಸಾವಿರ ಕೋಟಿಗಿಂತ ಹೆಚ್ಚಿನ ಹೊರೆ ಬೀಳಲಿದೆ. ಆದರೆ ಕೇಂದ್ರದ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಹೆಚ್ಚಿನ ರೈತರಿಗೆ ಸಮಾಧಾನ ತಂದಿಲ್ಲ ಎನ್ನಲಾಗಿದೆ.

ಬಡ್ಡಿದರ ಇಳಿಕೆ

ಬಡ್ಡಿದರ ಇಳಿಕೆ

ಕಳೆದ ಬಾರಿ ರೂ. 3 ಲಕ್ಷದವರೆಗಿನ ಅಲ್ಪಾವಧಿ ಬೆಳೆ ಸಾಲದ ಬಡ್ಡಿದರವನ್ನು ಶೇ. ೪ಕ್ಕೆ ಇಳಿಕೆ ಮಾಡಲಾಗಿದ್ದು, ಹಿಂದೆ ಶೇ. ೭ರಷ್ಟು ಬಡ್ಡಿದರವಿತ್ತು. ಅಂದರೆ ಈಗ ಶೇ. ೩ರಷ್ಟು ಇಳಿಕೆ ಮಾಡಿ ಶೇ. ೪ರಷ್ಟು ನಿಗದಿಪಡಿಸಲಾಗಿದೆ.

English summary

Govt approves hike in MSP for 14 Kharif crops: Check revised support price

The Centre on Wednesday raised the minimum support price (MSP) at which the government will buy all Kharif crops for the 2018-19 season.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X