For Quick Alerts
ALLOW NOTIFICATIONS  
For Daily Alerts

ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ 10 ರಿಟೇಲ್ ಬಿಸಿನೆಸ್

ಭಾರತ ದೇಶದಲ್ಲಿ, ಚಿಲ್ಲರೆ ವ್ಯಾಪಾರ ಶೇ. 50 ಕಿಂತ ಹೆಚ್ಚಿನ ಜನರ ಉಸಿರು ಎಂದು ಹೇಳಿದರೆ ತಪ್ಪಾಗಲಾರದು. ಚಿಲ್ಲರೆ ವ್ಯಾಪಾರಿ, ತನಗೊಂದಿಷ್ಟು ಲಾಭವನ್ನು ಮೀಸಲಿಟ್ಟು, ವಿವಿಧ ರೀತಿಯ ಸರಕು ಮತ್ತು ಸೇವೆಗಳನ್ನು, ಗ್ರಾಹಕರಿಗೆ ನೇರವಾಗಿ ಮಾರಾಟ.

By Siddu Thoravat
|

ಭಾರತ ದೇಶದಲ್ಲಿ, ಚಿಲ್ಲರೆ ವ್ಯಾಪಾರ ಶೇ. 50 ಕಿಂತ ಹೆಚ್ಚಿನ ಜನರ ಉಸಿರು ಎಂದು ಹೇಳಿದರೆ ತಪ್ಪಾಗಲಾರದು. ಚಿಲ್ಲರೆ ವ್ಯಾಪಾರಿ, ತನಗೊಂದಿಷ್ಟು ಲಾಭವನ್ನು ಮೀಸಲಿಟ್ಟು, ವಿವಿಧ ರೀತಿಯ ಸರಕು ಮತ್ತು ಸೇವೆಗಳನ್ನು, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಪದ್ದತಿಯನ್ನು ಚಿಲ್ಲರೆ ವ್ಯಾಪಾರ ಎಂದು ಹೇಳಬಹುದು. ಇದು ದೇಶದಲ್ಲೇ, ಅತ್ಯಂತ ಲಾಭದಾಯಕ ವ್ಯಾಪಾರ ಎಂದು ಪರಿಗಣಿಸಲ್ಪಡುತ್ತದೆ. ಕೆಲವು ವರ್ಷಗಳ ಹಿಂದೆ, ಚಿಲ್ಲರೆ ವ್ಯಾಪಾರವನ್ನು ಅಸಂಘಟಿತ ವಲಯಕ್ಕೆ ಸೇರಿಸಲಾಗಿತ್ತು. ಆದರೆ, ದೈತ್ಯ ವ್ಯವಹಾರದಂತಹ ಶಾಪಿಂಗ್ ಮಾಲ್ ಗಳು, ಮಾರುಕಟ್ಟೆಗೆ ಬಂದು, ಚಿಲ್ಲರೆ ವ್ಯಾಪಾರದಲ್ಲಿ ಅಗಾಧ ಬದಲಾವಣೆಯನ್ನು ತಂದಿವೆ. ಚಿಲ್ಲರೆ ವ್ಯವಹಾರದಲ್ಲಿ ವಿವಿಧ ರೀತಿಯ ಅವಕಾಶಗಳು ಹುಟ್ಟಿಕೊಂಡಿವೆ. ಕಡಿಮೆ ಬಂಡವಾಳವನ್ನು ಹೂಡಿ, ಕಡಿಮೆ ಶ್ರಮದಲ್ಲಿ ಲಾಭದಾಯಕ ವೃತ್ತಿಯು ನಿಮ್ಮದಾಗಿಸಿಕೊಳ್ಳಬಹುದು. ಚಿಕ್ಕ ವ್ಯವಹಾರದಿಂದ, ಆತ್ಯುತ್ತಮ ಮಟ್ಟಕ್ಕೂ ಸಾಗುವ ಅವಕಾಶವಿದೆ.

 

ಒಂದು ಚಿಕ್ಕ ಚಿಲ್ಲರೆ ವ್ಯಪಾರವನ್ನು, ಎಷ್ಟರಮಟ್ಟಿಗಾದರು ವ್ಯವಹಾರವನ್ನು ವೃದ್ಧಿಸಿಕೊಳ್ಳಬಹುದು. ಚಿಲ್ಲರೆ ವ್ಯಾಪಾರದಲ್ಲಿರುವ ಯಶಸ್ಸಿನ ಗುಟ್ಟು, ಅಲ್ಲಿ ಮಾರುವ ಉತ್ಪನ್ನಗಳ ಗುಣ, ವ್ಯಪಾರದ ಸ್ಥಳ ಮತ್ತು ಗ್ರಾಹಕರ ಸಹಾಯದಲ್ಲಿ ಅಡಗಿದೆ. ಮನೆಯಿಂದಲೇ ಚಿಲ್ಲರೆ ವ್ಯವಹಾರವನ್ನು, ಪ್ರಾರಂಭಿಸುವವರು ಇದ್ದಾರೆ.
ಚಿಲ್ಲರೆ ವ್ಯಾಪಾರದಲ್ಲಿ, ವಿವಿಧ ರೀತಿಯ ವ್ಯವಹಾರಗಳಿವೆ. ಇವುಗಳನ್ನು ವ್ಯಪಾರದ ಗಾತ್ರದ ಮೂಲಕ ವಿಂಗಡಿಸಬಹುದು. ಅವು ಯಾವುದೆಂದರೆ,

ಚಿಕ್ಕ ಚಿಲ್ಲರೆ ವ್ಯಪಾರ, ಡಿಪಾರ್ಟ್ಮೆಂಟ್ಲ್ ಸ್ಟೋರ್, ಸೂಪರ್ ಮಾರುಕಟ್ಟೆ, ಆನ್ಲೈನ್ ಸ್ಟೋರ್, ಫ್ರಾಂಚೈಸಿ ಸ್ಟೋರ್.ಇವುಗಳಲ್ಲಿ, ನಿಮ್ಮ ಆಸಕ್ತಿ ಮತ್ತು ಹೂಡುವ ಬಂಡವಾಳದ ಆಧಾರದ ಮೇಲೆ ವಿವಿಧ ರೀತಿಯಲ್ಲಿ ಆಯ್ದುಕೊಳ್ಳಬಹುದು. ಹಾಗಾದರೆ, ಚಿಲ್ಲರೆ ವ್ಯಾಪಾರದಲ್ಲಿ ಲಾಭದಾಯಕ ದಾರಿಯನ್ನು ಹುಡುಕುತ್ತಿರುವ, ಕ್ರಿಯಾತ್ಮಕ ಯುವಕರು ನಿವಾಗಿದ್ದರೆ, ನಿಮಗಾಗಿ ಅತೀ ಕಡಿಮೆ ಬಂಡವಾಳಾದಲ್ಲಿ ಪ್ರಾರಂಭಿಸುವ ಚಿಲ್ಲರೆ ವ್ಯಾಪಾರದ ಅವಕಾಶಗಳು.

1. ಕಿರಾಣಿ ಅಂಗಡಿ

1. ಕಿರಾಣಿ ಅಂಗಡಿ

ಲಾಭದಾಯಕ ಚಿಲ್ಲರೆ ವ್ಯಪಾರದಲ್ಲಿ ಕಿರಾಣಿ ಅಂಗಡಿಯೂ ಒಂದು. ಕಡಿಮೆ ಬಂಡವಾಳದಿಂದ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಅಂಗಡಿಯನ್ನು ವಸತಿ ವಠಾರದಲ್ಲಿ ಇಡುವುದು ಸೂಕ್ತ. ಮನೆಗಳಿಗೆ ದಿನನಿತ್ಯ ಬೇಕಾದಿರುವ ವಸ್ತುಗಳು ಸಿಗುವಂತಿದ್ದರೆ, ಜನರು ಖರೀದಿಸಲು ಇಚ್ಛಿಸುತ್ತಾರೆ. ಇದಕ್ಕೆ ಯಾವುದೇ ರೀತಿಯ ವಿಶೇಷ ಕೌಶಲ್ಯಗಳು ಬೇಕಾಗುವುದಿಲ್ಲ. ಇದೊಂದು ಮಾಸದ ವ್ಯಪಾರವಾಗಿದೆ. ಎಲ್ಲಾ ತಲೆಮಾರಿನವರು ಈ ವ್ಯವಹಾರದಲ್ಲಿ ಮುಳುಗಿ ಎದ್ದವರೆ.

2. ಬೇಕರಿ ಅಂಗಡಿ

2. ಬೇಕರಿ ಅಂಗಡಿ

ಮತ್ತೊಂದು ಉತ್ಸಾಹದಾಯಕ, ಚಿಲ್ಲರೆ ವ್ಯಾಪಾರವೆಂದರೆ, ಸಿಹಿತಿನಿಸುಗಳನ್ನು ಮಾರಾಟ ಮಾಡುವ ಬೇಕಾರಿಗಳು. ಸಿಹಿತಿನಿಸುಗಳು, ಯಾವುದೇ ಹಬ್ಬ - ಹರಿದಿನಗಳು, ಮದುವೆ ಕಾರ್ಯಕ್ರಮಗಳು ಮತ್ತು ಎಂತಹದ್ದೇ ಸಮಾರಂಭಗಳ ಅವಿಭಾಜ್ಯ ಅಂಗವೆಂದು ಹೇಳಬಹುದು. ಈ ಕೆಲಸಕ್ಕೆ, ನಿಮ್ಮ ಕೈ ರುಚಿಯು ತುಂಬಾ ಮುಖ್ಯವಾಗುತ್ತದೆ. ಇಲ್ಲದಿದ್ದರೂ, ಮತ್ತೊಂದು ಕಡೆಯಿಂದ ಆಹಾರಗಳನ್ನು ತರಿಸಿ ಮಾರಾಟಮಾಡಬಹುದು. ರುಚಿ ಜನರಿಗೆ ಇಷ್ಟವಾಗುವುದು ಮುಖ್ಯ. ಸಿಹಿತಿನಿಸುಗಳು ಮಾಡುವಲ್ಲಿ ನಿಮಗೆ ಆಸಕ್ತಿ ಇದ್ದರೆ, ಇದು ನಿಮಗೆ ಲಾಭದಾಯಕ. ಇದನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬಹುದು.

3. ಐಸ್ಕ್ರೀಮ್ ಅಂಗಡಿ
 

3. ಐಸ್ಕ್ರೀಮ್ ಅಂಗಡಿ

ಐಸ್ಕ್ರೀಮ್ ಮತ್ತು ಅದಕ್ಕೆ ಸಂಬಂಧಪಡುವ ಉತ್ಪನ್ನಗಳ ವ್ಯಾಪಾರ ಲಾಭದಾಯಕವಾಗಿರುತ್ತದೆ, ಎಂದು ಹೇಳಬಹುದು. ಅದಕ್ಕಾಗಿ ನೀವು, ಸರಿಯಾದ ಸ್ಥಳ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಆರಿಸಬೇಕಾಗುತ್ತದೆ. ಅಥವಾ ಯಾವುದಾದರೂ ಪ್ರಖ್ಯಾತ ಹೊಂದಿರುವ ಐಸ್ಕೀಮ್ ಕಂಪೆನಿಯ ಪ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. ಇದಕ್ಕೂ ಹೆಚ್ಚಿನ ಬಂಡವಾಳ ಬೇಕಾಗುವುದಿಲ್ಲ.

4. ತರಕಾರಿ ಅಂಗಡಿ

4. ತರಕಾರಿ ಅಂಗಡಿ

ಭಾರತದಲ್ಲಿ ತರಕಾರಿ ವ್ಯಾಪಾರವು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸವಯವವಾಗಿ ಬೆಳೆದು ಮಾರುವಂತಹ ತರಕಾರಿಗಳಿಗೆ, ಬಹಳ ಬೇಡಿಕೆ ಇದೆ. ಈ ಕೆಲಸವನ್ನು ಹೇಗೆ ಬೇಕಾದರೂ ಪ್ರಾರಂಭಿಸಬಹುದು. ಸ್ವಂತವಾಗಿ ಮತ್ತು ನಗರ ಪಂಚಾಯತಿಗಳಿಂದಲೂ ಇದಕ್ಕೆ ಅನುವು ಮಾಡಿ ಕೊಡುತ್ತಾರೆ. ಇದರಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳಿವೆ. ಅದು ಇತ್ತೀಚಿನ ದಿನಗಳಲ್ಲಿ ಏತೇಚ್ಛವಾಗಿ ಬೆಳೆಯುತ್ತಲೂ ಇದೆ. ರೈತರಿಂದ, ಪ್ರತಿದಿನ ನಿಮಗೆ, ತರಕಾರಿಯನ್ನು ಖರೀದಿಸಲು ಸಾಧ್ಯವಿದ್ದರೆ, ತರಕಾರಿ ಅಂಗಡಿ ನಿಮಗೆ ಲಾಭದಾಯಕ.

5. ಟೀ ಅಂಗಡಿ

5. ಟೀ ಅಂಗಡಿ

ಅತ್ಯಂತ ಕಡಿಮೆ ಬಂಡವಾಳ ಮತ್ತು ಕಡಿಮೆ ಲಾಭ ಹೊಂದಿರುವ ಚಿಲ್ಲರೆ ವ್ಯಾಪಾರವೆಂದರೆ, ಟೀ ವ್ಯಪಾರ. ಟೀ ಅಂಗಡಿಯಲ್ಲಿ, ಇಡುವ ಸ್ಥಳ ಮತ್ತು ಮಾಡುವ ರೀತಿಯಲ್ಲಿ ಯಶಸ್ಸನ್ನು ಕಾಣಬಹುದು. ಇದನ್ನು ನೀವು ಸ್ವಂತ ಅಂಗಡಿಯಾಗಿಯೂ ಪ್ರಾರಂಭಿಸಬಹುದು ಅಥವಾ ಯಾವುದಾದರು ಪ್ರಖ್ಯಾತ ಬ್ರಾಂಡ್ ಗಳ, ಫ್ರಾಂಚೈಸಿಯಾದರು ತೆಗೆದುಕೊಳ್ಳಬಹುದು.

6. ಹಾರ್ಡ್ವೇರ್ ಅಂಗಡಿ

6. ಹಾರ್ಡ್ವೇರ್ ಅಂಗಡಿ

ಒಂದು ಚಿಕ್ಕ ಹಾರ್ಡ್ವೇರ್ ಅಂಗಡಿಯನ್ನು, ವಸತಿ ವಠಾರ ಅಥವಾ ಕಚೇರಿಗಳ ಸುತ್ತಮುತ್ತಲಿನಲ್ಲಿ ಪ್ರಾರಂಭಿಸುವುದು ಲಾಭದಾಯಕವಾಗಿದೆ. ಇದರಲ್ಲಿ ಎಲ್ಲಾತರಹದ ಹಾರ್ಡ್ವೇರ್ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಸಂಬಂಧಪಡುವ ವಸ್ತುಗಳನ್ನು ಇಡಬಹುದು. ಇದಕ್ಕೂ ಮಧ್ಯಮ ಬಂಡವಾಳ ಹೂಡಿಕೆಯೂ ಸಾಕಾಗುತ್ತದೆ.

7. ವಾಹನಗಳ ಬಿಡಿ ಭಾಗಗಳ ಅಂಗಡಿ

7. ವಾಹನಗಳ ಬಿಡಿ ಭಾಗಗಳ ಅಂಗಡಿ

ವಾಹನಗಳ ಬಿಡಿ ಭಾಗಗಳ ವ್ಯಾಪಾರವು ಸದಾ ಲಾಭದಾಯಕವಾಗಿಯೇ ಇರುತ್ತದೆ. ಏಕೆಂದರೆ, ಇತ್ತೀಚಿನ ಜನಸಂದನಿಗಿಂತ ವಾಹನಗಳ ಸಂದಣಿಗಳೇ ಹೆಚ್ಚುತ್ತಿದೆ. ಹಾಗಾಗಿ ವಾಹನಗಳ ಬಿಡಿ ಭಾಗಗಳ ಬೇಡಿಕೆಯೂ ಹೆಚ್ಚುತ್ತಿರುತ್ತದೆ. ಈ ವ್ಯಪಾರವನ್ನು ಪ್ರಾರಂಭಿಸುವುದಾದರೆ, ಎಲ್ಲಾ ರೀತಿಯ ಬ್ರಾಂಡೆಡ್ ಮತ್ತು ಬ್ರಾಂಡೆಡ್ ಅಲ್ಲದ ವಸ್ತುಗಳನ್ನು ಇಡುವುದು ಉತ್ತಮ. ಇದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

8. ಐ.ಟಿ ಹಾರ್ಡ್ವೇರ್ ಮಳಿಗೆ

8. ಐ.ಟಿ ಹಾರ್ಡ್ವೇರ್ ಮಳಿಗೆ

ಐ.ಟಿ ಹಾರ್ಡ್ವೇರ್ ವ್ಯಪಾರ ಎಂದ ತಕ್ಷಣ ನೆನಪಾಗೋದು, ಲಾಪಟಾಪ್ ಗಳು, ಡೇಸ್ಕ್ಟಾಪ್ ಗಳು, ಹಾರ್ಡ್ ಡಿಸ್ಕ್ ಗಳು, ಮೌಸ್ ಗಳು ಮತ್ತು ಸ್ಪೀಕರ್ ಗಳು. ಈ ವ್ಯಾಪಾರದಲ್ಲಿ ನೀವು ಯಶಸ್ಸನ್ನು ಕಾಣಬೇಕಾದರೆ, ಅಂಗಡಿ ಇಡುವ ಸ್ಥಳದ ಜನಸಂಖ್ಯೆ ಮತ್ತು ವಸ್ತುಗಳಿಗಿರುವ, ಬೇಡಿಕೆಯ ಮೇಲೆ ನಿಂತಿರುತ್ತದೆ. ಎಲ್ಲಾ ಕೆಲಸಕ್ಕೂ ತೂಗಿಸಿಕೊಂಡರೆ, ಇದಕ್ಕೆ ಹೆಚ್ಚಿನ ಬಂಡವಾಳ ಬೇಕಾಗಬಹುದು. ಅದು ಒಂದು ಬಾರಿ ಮಾತ್ರ. ಇದನ್ನು ಕಡಿಮೆ ಬಂಡವಾಳದಿಂದಲೂ ಪ್ರಾರಂಭಿಸಬಹುದಾಗಿದೆ.

9. ಉಡುಗೊರೆ ಅಂಗಡಿ

9. ಉಡುಗೊರೆ ಅಂಗಡಿ

ನಗರಗಳಲ್ಲಿ ಹೆಚ್ಚಾಗಿ, ಉಡುಗೊರೆ ಅಂಗಡಿಗಳು ಲಾಭದಕಡೆಗೆ ಸಾಗುತ್ತಿರುತ್ತದೆ. ಇದೊಂದು ಯಶಸ್ವಿ ವ್ಯವಹಾರವೂ ಹೌದು. ಉಡುಗೊರೆ ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಖರೀದಿಸುವ ವಸ್ತು. ಉದಾಹರಣೆಗೆ, ಮದುವೆ, ವಾರ್ಷಿಕೋತ್ಸವ ಮತ್ತು ಇತರೆ ಸಮಾರಂಭಗಳಲ್ಲೂ ಬೇಡಿಕೆ ಇರುತ್ತದೆ. ಇತ್ತೀಚಿಗೆ ಜನರು ಪ್ರಾಯೋಗಿಕ ಮತ್ತು ಹೊಸತನ ತುಂಬಿರುವ ಉಡುಗೊರೆಗಳನ್ನು ಇಷ್ಟಪಡುತ್ತಾರೆ. ನೀವು ಇಂತಹ ಆಕರ್ಷಿತ ವಸ್ತುಗಳನ್ನು ಇಟ್ಟರೆ, ನಿಮ್ಮ ವ್ಯಾಪಾರ ಯಶಸ್ಸು ಕಾಣುವುದರಲ್ಲಿ ಸಂದೇಹವೇ ಇಲ್ಲ.

10. ಪುಸ್ತಕ ಮತ್ತು ಶಾಲೆಗೆ ಸಂಬಂಧ ಪಡುವ ವಸ್ತುಗಳು.(Stationery)

10. ಪುಸ್ತಕ ಮತ್ತು ಶಾಲೆಗೆ ಸಂಬಂಧ ಪಡುವ ವಸ್ತುಗಳು.(Stationery)

ಪುಸ್ತಕ ಮತ್ತು ಅದಕ್ಕೆ ಸಂಬಂಧ ಪಡುವ ವಸ್ತುಗಳನ್ನು ಮಾರಾಟಕ್ಕಿಟ್ಟರೆ, ಉತ್ತಮ. ಪೆನ್ನು, ಪೆನ್ಸಿಲ್ ಮತ್ತು ಇತರೆ ವಸ್ತುಗಳು ಶಾಲೆ ಮತ್ತು ಕಛೇರಿಗಳಿಗೆ ಉಪಯೋಗ ಇರುವ ಕಾರಣ, ಅಂತಹ ಸ್ಥಳದಲ್ಲಿ ಪ್ರಾರಂಭಿಸಿದರೆ, ವ್ಯಾಪಾರದಲ್ಲಿ ಯಶಸ್ಸು ಕಾಣಬಹುದು. ಇದಕ್ಕೆ ಯಾವುದೇ ರೀತಿಯ ವಿಶೇಷ ಕೌಶಲ್ಯ ಕೂಡ ಬೇಕಾಗುವುದಿಲ್ಲ.

English summary

10 Retail Business Ideas with Low Investment

A retail business means selling product or services to the customer directly for earning a profit. A person running a retail business is called as a retailer.
Story first published: Friday, July 6, 2018, 10:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X