For Quick Alerts
ALLOW NOTIFICATIONS  
For Daily Alerts

ಜಿಯೋಗೆ ಟಕ್ಕರ್! ಬಿಎಸ್ಎನ್ಎಲ್ ನಿಂದ ಪ್ರತಿದಿನ 20 GB ಡೇಟಾ, ಅನಿಯಮಿತ ಕರೆ ಸೌಲಭ್ಯ

ಟೆಲಿಕಾಂ ವಲಯದಲ್ಲಿ ಹೊಸ ಹೊಸ ಆಫರ್ ಗಳದ್ದೇ ಭಾರೀ ಸದ್ದು! ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ಒಂದರ ಮೇಲೊಂದರಂತೆ ನೂತನ ಕೊಡುಗೆಗಳನ್ನು ಘೋಷಿಸುತ್ತಾ, ಗ್ರಾಹಕರನ್ನು ಸೆಳೆಯುತ್ತಿವೆ..

By Siddu Thoravat
|

ಟೆಲಿಕಾಂ ವಲಯದಲ್ಲಿ ಹೊಸ ಹೊಸ ಆಫರ್ ಗಳದ್ದೇ ಭಾರೀ ಸದ್ದು! ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ಒಂದರ ಮೇಲೊಂದರಂತೆ ನೂತನ ಕೊಡುಗೆಗಳನ್ನು ಘೋಷಿಸುತ್ತಾ, ಗ್ರಾಹಕರನ್ನು ಸೆಳೆಯುತ್ತಿವೆ..

 

ರಿಲಯನ್ಸ್ ಜಿಯೋ ಪರಿಚಯಿಸಿರುವ ಜಿಯೋ ಗೀಗಾ ಫೈಬರ್ ಆಫರ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಹೊಸ ಯೋಜನೆ ಪ್ರಾರಂಭಿಸಿದೆ. ಈ ಆಫರ್ ಗ್ರಾಹಕರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ ಎಂಬುದು ಸಂಸ್ಥೆಯ ಇಂಗಿತ. ಹಾಗಿದ್ದರೆ ಈ ಪ್ಲಾನ್ ಯಾವುದು ನೋಡೋಣ ಬನ್ನಿ.. ಬಿಎಸ್ಎನ್ಎಲ್ ನಿಂದ 1 ವರ್ಷದ ಅವಧಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ

ರೂ. 491 ಹೊಸ ಪ್ಲಾನ್

ರೂ. 491 ಹೊಸ ಪ್ಲಾನ್

ಬಿಎಸ್ಎನ್ಎಲ್ ರೂ. 491 ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುತ್ತಿದೆ.
ವ್ಯಾಲಿಡಿಟಿ: 30 ದಿನ
ಡೇಟಾ: ಪ್ರತಿದಿನ 20GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೂ. 491 ಯೋಜನೆ ಪ್ರಕಾರ, ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಚಂದಾದಾರರು 600 ಜಿಬಿ ಡೇಟಾವನ್ನು 20 ಎಂಬಿಪಿಎಸ್ ವೇಗದಲ್ಲಿ ಪಡೆಯಲಿದ್ದಾರೆ. ಇದಲ್ಲದೆ, ಈ ಬಳಕೆದಾರರು ಎಲ್ಲಾ ನೆಟ್ವರ್ಕ್ ಗಳೊಂದಿಗೆ ಅಪರಿಮಿತ ಧ್ವನಿ ಕರೆಗಳನ್ನು ಮಾಡಬಹುದು. ಜಿಯೋ ಡಬಲ್ ಧಮಾಕಾ! ಜಿಯೋ ಫೋನ್ 2, ಜಿಯೋ ಗೀಗಾ ಫೈಬರ್ ಆಫರ್ ಪಡೆಯೋದು ಹೇಗೆ?

ಫೈಬರ್ ಟು ದಿ ಹೋಮ್ ಪ್ಲಾನ್

ಫೈಬರ್ ಟು ದಿ ಹೋಮ್ ಪ್ಲಾನ್

ಬಿಎಸ್ಎನ್ಎಲ್ ರೂ. 777 ಹಾಗೂ ರೂ. 1277 ಫೈಬರ್ ಟು ದಿ ಹೋಮ್ ಪ್ಲಾನ್ ಪ್ರಾರಂಭಿಸಿದೆ. ರೂ. 777 ಯೋಜನೆಯಡಿ ಗ್ರಾಹಕರು 50 ಎಂಬಿಪಿಎಸ್ ವೇಗದಲ್ಲಿ 500 ಜಿಬಿ ಡೇಟಾ ಪಡೆಯಲಿದ್ದಾರೆ. ರೂ. 1277 ಪ್ಲಾನ್ ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ 750 ಜಿಬಿ ಡೇಟಾ ಸಿಗಲಿದೆ.

ಜಿಯೋ ಗಿಗಾ ಫೈಬರ್ ಪ್ಲಾನ್
 

ಜಿಯೋ ಗಿಗಾ ಫೈಬರ್ ಪ್ಲಾನ್

ಜುಲೈ 15 ರಿಂದ ಜಿಯೋ ಗಿಗಾ ಫೈಬರ್ ಪ್ಲಾನ್ ಆರಂಭವಾಗಲಿದೆ. ಜಿಯೋ ಗೀಗಾ ರೂಟರ್ ಅತ್ಯಂತ ಗರಿಷ್ಠ ವೇಗದ ನೆಟ್ ಸಂಪರ್ಕ ಹಾಗು ಗರಿಷ್ಠ ವೇಗದ ವೈಫೈ ಸೇವೆ ಒದಗಿಸಲಿದೆ. ಜಿಯೋ ಗೀಗಾ ಟಿವಿ, ಜಿಯೋ ಸಿನಿಮಾ ಸೌಲಭ್ಯ ದೊರೆಯಲಿದ್ದು, ೬೦೦ ಟಿವಿ ಚಾನೆಲ್ ಗಳ ವಿಕ್ಷಣೆ ಸಾಧ್ಯವಾಗಲಿದೆ.
ಆದರೆ ಬಿಎಸ್ಎನ್ಎಲ್ ತನ್ನ ಯೋಜನೆಯನ್ನು ಆರಂಭಿಸಿದ್ದು, ರೂ. 491 ಪ್ಲಾನ್ ಸಿಗಲಿದೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಹಾಗೂ ಒಳ್ಳೆ ಸೇವೆ ನೀಡುವುದು ನಮ್ಮ ಉದ್ದೇಶವೆಂದು ಬಿ ಎಸ್ ಎನ್ ಎಲ್ ಹೇಳಿದೆ.

English summary

BSNL introduces Rs 491 broadband plan with 20GB per day

BSNL has introduced a Rs 491 broadband plan, which offers 600GB data at speeds of up to 20Mbps.
Story first published: Monday, July 9, 2018, 10:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X