For Quick Alerts
ALLOW NOTIFICATIONS  
For Daily Alerts

ನೌಕರರಿಗೆ ಸಿಹಿಸುದ್ದಿ! ವೇತನ ಮಿತಿ ರೂ. 21 ಸಾವಿರಕ್ಕೆ ಹೆಚ್ಚಳ

ಸರ್ಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ! ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಅಡಿಯಲ್ಲಿ ಕಡ್ಡಾಯ ಇಪಿಎಫ್ ಮಾಸಿಕ ವೇತನದ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ.

By Siddu
|

ಸರ್ಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ! ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಅಡಿಯಲ್ಲಿ ಕಡ್ಡಾಯ ಇಪಿಎಫ್ ಮಾಸಿಕ ವೇತನದ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ. ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೆಲವು ತಿದ್ದುಪಡಿಗಳೊಂದಿಗೆ ಹಣಕಾಸು ಸಚಿವಾಲಯಕ್ಕೆ ಮರು ಕಳುಹಿಸಲಾಗಿದೆ ಎಂದು ಜೀ ನ್ಯೂಸ್ ಬಿಸಿನೆಸ್ ವೆಬ್ಸೈಟ್ ಮೂಲಗಳು ತಿಳಿಸಿವೆ. ಮಾತೃಶ್ರೀ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

ಸಂಬಳದ ಮಿತಿ ಏರಿಕೆ

ಸಂಬಳದ ಮಿತಿ ಏರಿಕೆ

ಕೆಲವು ತಿದ್ದುಪಡಿಗಳೊಂದಿಗೆ ವೇತನ ಮಿತಿಯನ್ನು ಹೆಚ್ಚಿಸುವ ಕುರಿತು ಹಣಕಾಸು ಸಚಿವಾಲಯಕ್ಕೆ ಮರು ಕಳುಹಿಸಲಾಗಿರುವ ಪ್ರಸ್ತಾಪದ ಅನುಸಾರ ರೂ. 15,000 ದಿಂದ ರೂ. 21,000 ಸಾವಿರ ಕಡ್ಡಾಯ ಕೂಲಿ ಮಿತಿಯನ್ನು ಹೆಚ್ಚಿಸಬೇಕೆಂದು ತಿಳಿಸಿದೆ.
ಹಣಕಾಸು ಸಚಿವಾಲಯವು ಈ ತಿದ್ದುಪಡಿಗಳನ್ನು ಒಪ್ಪಿದ್ದು, ಪ್ರಸ್ತಾಪವನ್ನು ಶೀಘ್ರದಲ್ಲೇ ಅಂಗೀಕರಿಸಬಹುದು.

ಇಪಿಎಫ್ಒ ಸದಸ್ಯರ ಸಂಖ್ಯೆ ಹೆಚ್ಚಳ

ಇಪಿಎಫ್ಒ ಸದಸ್ಯರ ಸಂಖ್ಯೆ ಹೆಚ್ಚಳ

ಪ್ರಸ್ತಾಪವನ್ನು ಕೇಂದ್ರೀಯ ಮಂಡಳಿಗೆ (ಸಿಬಿಟಿ) ಮರು ಕಳುಹಿಸಲಾಗುತ್ತದೆ. ವೇತನ ಮಿತಿ ರೂ. 21,000 ಹೆಚ್ಚಳ ದಿಂದ ಇಪಿಎಫ್ಒ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬಹುದು.

ಸಾಮಾಜಿಕ ಭದ್ರತೆ

ಸಾಮಾಜಿಕ ಭದ್ರತೆ

ಇಪಿಎಫ್ಒ ಸಂಸ್ಥೆ ಹೆಚ್ಚಿನ ಜನರನ್ನು ಸಾಮಾಜಿಕ ಭದ್ರತೆಯ ಅಡಿಯಲ್ಲಿ ತರಬಹುದು ಎಂದು ನಿರೀಕ್ಷಿಸಲಾಗಿದೆ. ಸಂಘಟಿತ ವಲಯ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಿಸಲು ಹಿಂದೆ ಚರ್ಚಿಸಲಾಗಿದೆ. ಆದರೆ ಹಣಕಾಸು ಸಚಿವಾಲಯ ಕೆಲವು ಕಾರಣಗಳಿಂದಾಗಿ ಅದನ್ನು ನಿರಾಕರಿಸಿದೆ.

ಹೆಚ್ಚುವರಿ ಹೊರೆ

ಹೆಚ್ಚುವರಿ ಹೊರೆ

ಹೆಚ್ಚುವರಿ ಖರ್ಚುವೆಚ್ಚಗಳಿಗೆ ಕಾರಣವಾಗುವುದರಿಂದ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲು ಸರ್ಕಾರವು ಯೋಜನೆಯನ್ನು ನಿಷೇಧಿಸಲು ನಿರ್ಧರಿಸಿದೆ. ಸದಸ್ಯರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಅಂದಾಜು ಮಾಡಲು ಮತ್ತು ಸರ್ಕಾರದ ಖಜಾನೆ ಮೇಲೆ ಆಗಬಹುದಾದ ಪರಿಣಾಮಗಳನ್ನು ಕೇಳಿದೆ.

ಇಪಿಎಸ್ ಹೆಚ್ಚಳ

ಇಪಿಎಸ್ ಹೆಚ್ಚಳ

ವೇತನ ಮಿತಿಯ ಈ ಹೆಚ್ಚಳವು ಉದ್ಯೋಗಿ ಪಿಂಚಣಿ ಯೋಜನೆಗೆ(ಇಪಿಎಸ್) ಸರ್ಕಾರದ ನೀಡಲಿರುವ ಕೊಡುಗೆಯ ಪ್ರಮಾಣವನ್ನು ಹೆಚ್ಚಿಸಲಿದೆ.

ಪಿಎಫ್, ಪಿಂಚಣಿ ಪ್ರಯೋಜನ

ಪಿಎಫ್, ಪಿಂಚಣಿ ಪ್ರಯೋಜನ

ಕಡ್ಡಾಯ ವೇತನದ ಮಿತಿ (ನಿರ್ಧರಿಸಿದ ಮಿತಿ) ಅಡಿಯಲ್ಲಿ ಬರುವ ನೌಕರರು ಇಪಿಎಫ್ಓ ಅಡಿಯಲ್ಲಿ ಕಡ್ಡಾಯವಾಗಿ ಒಳಪಡಲಿದ್ದು, ಪಿಎಫ್ ಮತ್ತು ಪಿಂಚಣಿ ಪ್ರಯೋಜನಗಳನ್ನು ಆನಂದಿಸಲಿದ್ದಾರೆ. ನಿರ್ಧರಿಸಿದ ಮಿತಿಗಿಂತ ಹೆಚ್ಚು ಹಣವನ್ನು ಗಳಿಸುವವರಿಗೆ ಇದು ಐಚ್ಛಿಕ ಯೋಜನೆಯಾಗಿದೆ.

English summary

Proposal to increase mandatory cover limit under EPFO sent to Finance Ministry

A proposal to increase the monthly wage ceiling for mandatory Employees’ Provident Fund (EPF) cover under the Employees Provident Fund Organization (EPFO) has been sent to the Finance Ministry.
Story first published: Wednesday, July 18, 2018, 13:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X