For Quick Alerts
ALLOW NOTIFICATIONS  
For Daily Alerts

ಹೊಸ 100 ರೂಪಾಯಿ ನೋಟು ಬಿಡುಗಡೆ! ಇಂಟರೆಸ್ಟಿಂಗ್ ವಿಶೇಷತೆಗಳೇನು ಗೊತ್ತೆ?

ನೇರಳೆ ಬಣ್ಣದ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದೆ. ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಅದರಲ್ಲಿನ ವಿಶೇಷ ಲಕ್ಷಣಗಳೇನು ಎಂಬುದು ಹಲವರ ಕುತೂಹಲ ಆಗಿರಬಹುದು.

By Siddu
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗುರುವಾರ ಹೊಸ 100 ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ.

ನೇರಳೆ ಬಣ್ಣದ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದೆ. ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಅದರಲ್ಲಿನ ವಿಶೇಷ ಲಕ್ಷಣಗಳೇನು ಎಂಬುದು ಹಲವರ ಕುತೂಹಲಕ್ಕೆ ಕಾರಣವಾಗಿದೆ..! ಹೊಸ 100 ರೂಪಾಯಿ ನೋಟು ಬಿಡುಗಡೆ! ಫಸ್ಟ್ ಲುಕ್ ಹೇಗಿದೆ?

ಕೆನ್ನೇರಳೆ ಬಣ್ಣ

ಕೆನ್ನೇರಳೆ ಬಣ್ಣ

ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಇತಿಹಾಸ, ಸಂಸ್ಕೃತಿ, ಪರಂಪರೆ

ಇತಿಹಾಸ, ಸಂಸ್ಕೃತಿ, ಪರಂಪರೆ

ಗುಜರಾತಿನ ಪಟಾನ್ ನಲ್ಲಿ ಹರಿಯುವ ಸರಸ್ವತಿ ನದಿ ತೀರದಲ್ಲಿರುವ ಮೆಟ್ಟಿಲುಗಳಿರುವ 'ರಾಣಿ ಕಿ ವಾವ್' ಚಿತ್ರ ನೋಟಿನ ಹಿಂಬದಿಯಲ್ಲಿದೆ. ಇದು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಸಾರಲಿದೆ. ಹನ್ನೊಂದನೇ ಶತಮಾನದ ರಾಜ ಭೀಮನ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ರಾಣಿ ಕಿ ವಾವ್ ವಿಶ್ವ ಪಾರಂಪಾರಿಕ ತಾಣವೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ.

ನೋಟಿನ ಅಳತೆ

ನೋಟಿನ ಅಳತೆ

ಪ್ರಸ್ತುತ ಚಲಾವಣೆಯಲ್ಲಿರುವ ರೂ. 100 ನೋಟು 73mm x 157mm ಗಾಳತೆ ಹೊಂದಿದೆ. ಹೊಸ ನೋಟಿನ ಸುತ್ತಳತೆ 66 mm × 142mm ಇರಲಿದೆ. ಹೊಸ ನೋಟು ಅಳತೆಯಲ್ಲಿ ಹತ್ತು ರೂಪಾಯಿ ನೋಟಿಗಿಂತ ಸಲ್ಪ ದೊಡ್ಡದಾಗಿ ಇರಲಿದೆ. ಹಳೆ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರಲಿವೆ.

ಹೊಸ ನೋಟಿನ ಹೆಗ್ಗಳಿಕೆ

ಹೊಸ ನೋಟಿನ ಹೆಗ್ಗಳಿಕೆ

ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳ ಹೆಗ್ಗಳಿಕೆ ಎಂದರೆ ಇವು ಮೊದಲ ಮೇಡ್ ಇನ್ ಇಂಡಿಯಾ ನೋಟುಗಳಾಗಿವೆ. ನೋಟು ತಯಾರಿಸಲು ಬೇಕಾಗುವ ಎಲ್ಲಾ ವಸ್ತುಗಳನ್ನು ಸ್ವದೇಶಿ ಕಂಪನಿಗಳಿಂದ ಬಳಸಿಕೊಳ್ಳಲಾಗಿದ್ದು, ನೋಟಿನ ವಿನ್ಯಾಸಕ್ಕೆ ಬಳಸಲಾದ ಕಾಗದ ಭಾರತದಲ್ಲೇ ತಯಾರಾಗಿದೆ. ನೋಟಿನಲ್ಲಿರುವ ಭದ್ರತಾ ಫೀಚರ್ಸ್ ಗಳನ್ನ ಭಾರತೀಯ ಕಂಪನಿಗಳೇ ವಿನ್ಯಾಸ ಮಾಡಿವೆ.

ನೋಟಿನ ಹಿಂಬಾಗದ ವಿಶೇಷತೆ

ನೋಟಿನ ಹಿಂಬಾಗದ ವಿಶೇಷತೆ

- ನೋಟಿನ ಎಡಭಾಗದಲ್ಲಿ ಮುದ್ರಣ ವರ್ಷ
- ಘೋಷಣೆಯೊಂದಿಗೆ ಸ್ವಚ್ ಭಾರತ್ ಲೋಗೊ
- ಭಾಷಾ ಫಲಕ
- ರಾನಿ ಕಿ ವಾವ್ ವಿಶಿಷ್ಟ ಚಿತ್ರ

- ದೇವನಾಗರಿಯಲ್ಲಿ १०० ಸಂಖ್ಯೆ

ಹಳೆ ನೋಟುಗಳ ಗತಿ?

ಹಳೆ ನೋಟುಗಳ ಗತಿ?

ಹೊಸ ನೋಟುಗಳು ಚಲಾವಣೆಗೆ ಬಂದ ಮೇಲೂ ಕೂಡ ಹಳೆ ರೂ. 100 ನೋಟುಗಳು ಸಹ ಮಾರುಕಟ್ಟೆಯಲ್ಲಿ ಹೊಸ ನೋಟಿನ ಜೊತೆಗೆ ಚಾಲ್ತಿಯಲ್ಲಿರಲಿವೆ ಎಂದು ಆರ್ಬಿಐ ತಿಳಿಸಿದೆ. ಹಿಗಾಗಿ ಸಾರ್ವಜನಿಕರು ಚಿಂತಿಸಬೇಕಾದ ಅಗತ್ಯವಿಲ್ಲ.

ಎಟಿಎಂಗಳಲ್ಲಿ ಸೂಕ್ತ ಬದಲಾವಣೆ ಅಗತ್ಯ

ಎಟಿಎಂಗಳಲ್ಲಿ ಸೂಕ್ತ ಬದಲಾವಣೆ ಅಗತ್ಯ

ಹೊಸ ಮುಖಬೆಲೆಯ ರೂ. 100ಗಳನ್ನು ಎಟಿಎಂಗಳಲ್ಲಿ ಪಡೆಯಲು ಸುಕ್ತವಾದ ಬದಲಾವಣೆ ಮಾಡಬೇಕಾಗಿದೆ. ಈಗಾಗಲೇ ರೂ. 2000, 500, 200 ಮುಖಬೆಲೆಯ ನೋಟುಗಳಿಗಾಗಿ ಎಟಿಎಂಗಳಲ್ಲಿ ಬದಲಾವಣೆ ಮಾಡಲಾಗಿದೆ.

Read more about: rbi money finance news banking
English summary

RBI Releases Rs 100 New Note: Here are the Features..

The Reserve Bank of India has released the first look and salient features of the Rs 100 denomination banknote in a statement released on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X