For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಕೌನ್ಸಿಲ್, ಜನಸಾಮಾನ್ಯರಿಗೆ ಬಂಪರ್! 88 ಸರಕುಗಳ ಮೇಲಿನ ತೆರಿಗೆ ಕಡಿತ

ಜಿಎಸ್ಟಿ ಜಾರಿಯಾದ ನಂತರ ಅಸಮಾದಾನ ವ್ಯಕ್ತಪಡಿಸಿದವರೇ ಹೆಚ್ಚು. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ! ದಿನನಿತ್ಯ ಬಳಕೆಯ ಹಲವಾರು ಸರಕುಗಳ ಮೇಲಿನ ತೆರಿಗೆಯನ್ನು ಜಿಎಸ್ಟಿ ಮಂಡಳಿ ಇಳಿಕೆ ಮಾಡಿದೆ.

By Siddu
|

ಜಿಎಸ್ಟಿ ಜಾರಿಯಾದ ನಂತರ ಅಸಮಾದಾನ ವ್ಯಕ್ತಪಡಿಸಿದವರೇ ಹೆಚ್ಚು. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ! ದಿನನಿತ್ಯ ಬಳಕೆಯ ಹಲವಾರು ಸರಕುಗಳ ಮೇಲಿನ ತೆರಿಗೆಯನ್ನು ಜಿಎಸ್ಟಿ ಮಂಡಳಿ ಇಳಿಕೆ ಮಾಡಿದೆ.

ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ನ 28ನೇ ಸಭೆಯಲ್ಲಿ ಕೆಲ ಸರಕುಗಳು ತೆರಿಗೆ ಮುಕ್ತ ಮಾಡಿದ್ದರೆ, ಇನ್ನೂ ಕೆಲ ಸರಕುಗಳ ತೆರಿಗೆಯನ್ನು ಇಳಿಸಲಾಗಿದೆ. ಒಟ್ಟು 88 ಸರಕುಗಳ ಮೇಲಿನ ತೆರಿಗೆ ಇಳಿಸಲು ಜಿಎಸ್ಟಿ ಕೌನ್ಸಿಲ್ ಅನುಮೋದನೆ ನೀಡಿತು. ರಾಜ್ಯ ಸರ್ಕಾರದಿಂದ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ..

ತೆರಿಗೆಮುಕ್ತ ಉತ್ಪನ್ನಗಳು

ತೆರಿಗೆಮುಕ್ತ ಉತ್ಪನ್ನಗಳು

ತುಂಬಾ ಚರ್ಚೆಗೆ ಗ್ರಾಸವಾಗಿದ್ದ ಸ್ಯಾನಿಟರಿ ಪ್ಯಾಡ್ ಮೇಲಿನ ಜಿಎಸ್ಟಿಯನ್ನು ಕೊನೆಗೂ ತೆಗೆಯಲಾಗಿದೆ. ಸ್ಯಾನಿಟರಿ ಪ್ಯಾಡ್  ಮೇಲಿದ್ದ ಶೇ. 12ರಷ್ಟು ಜಿಎಸ್ಟಿಯನ್ನು ಈಗ ಸಂಪೂರ್ಣವಾಗಿ ತೆರಿಗೆಮುಕ್ತಗೊಳಿಸಲಾಗಿದೆ.
ಜೊತೆಗೆ ರಾಖಿಗಳನ್ನು ತೆರಿಗೆಮುಕ್ತ ಮಾಡಲಾಗಿದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
- ಮಾರ್ಬಲ್
- ಸ್ಟೋನ್
- ಮರದ ದೇವರ ಮೂರ್ತಿಗಳು
- ಸ್ಯಾನಿಟರಿ ಪ್ಯಾಡ್
- ರಾಖಿ
- ಪೊರಕೆಗೆ ಬಳಸಲಾಗುವ ಕಚ್ಚಾ ಸಾಮಗ್ರಿ  ನಿಮಗಿದು ಗೊತ್ತೆ..? ಜಿಎಸ್ಟಿ ತೆರಿಗೆ ಹೆಸರಲ್ಲಿ ಗ್ರಾಹಕರನ್ನು ಮೋಸ ಮಾಡ್ತಾರೆ! ತಪ್ಪದೇ ಓದಿ..

ಅಗ್ಗದ ವಸ್ತುಗಳು (ಶೇ. 28 ರಿಂದ 18ಕ್ಕೆ ಇಳಿದ ಉತ್ಪನ್ನಗಳು)

ಅಗ್ಗದ ವಸ್ತುಗಳು (ಶೇ. 28 ರಿಂದ 18ಕ್ಕೆ ಇಳಿದ ಉತ್ಪನ್ನಗಳು)

- ವಾಷಿಂಗ್ ಮಷೀನ್
- ರೆಫ್ರಿಜರೇಟರ್
- ಎಲ್ಲ ಬಗೆಯ ಚರ್ಮದ ಉತ್ಪನ್ನಗಳು
- ಶೌಚಾಲಯ ನೈರ್ಮಲ್ಯಕ್ಕೆ ಬಳಸುವ ಸಾಧನಗಳು
- ಮಿಕ್ಸರ್, ಗ್ರೈಂಡರ್
- ಶೇವರ್ಸ್, ಹೇರ್ ಡ್ರೈಯರ್
- ವಾಟರ್ ಕೂಲರ್, ವಾಟರ್ ಹೀಟರ್
- 68 ಇಂಚ್ ವರೆಗಿನ ಟಿವಿಗಳು
- ವಿಡಿಯೋ ಗೇಮ್ಸ್
- ವ್ಯಾಕ್ಯೂಮ್ ಕ್ಲೀನರ್
- ಟ್ರೇಲರ್ಸ್ ಮತ್ತು ಸೆಮಿ ಟ್ರೇಲರ್ಸ್
- ಲೀಥಿಯಂ ಐರನ್ ಬ್ಯಾಟರಿ
- ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆ
- ಪೇಂಟ್, ವಾರ್ನಿಸ್  ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

ಶೇ. 18 ರಿಂದ 12ಕ್ಕೆ ಇಳಿಕೆ

ಶೇ. 18 ರಿಂದ 12ಕ್ಕೆ ಇಳಿಕೆ

- ಬಿದಿರಿನ ನೆಲಹಾಸಿಗೆ
- ಹ್ಯಾಂಡ್ ಬ್ಯಾಗ್
- ಆಭರಣ ಪೆಟ್ಟಿಗೆ
- ಆರ್ಟ್ ಸ್ಟೋನ್
- ಅಲಂಕಾರಿಕ ಕನ್ನಡಿ ಫ್ರೇಮ್
- ಗಾಜಿನ ಭರಣಿ, ಹೂಕುಂಡ
- ಕಲೆಗಾರಿಕೆ ಇರುವ ಕಬ್ಬಿಣ, ಅಲ್ಯುಮಿನಿಯಮ್
- ಕುಸುರಿಗಾರಿಕೆ ಇರುವ ದೀಪ (ಪಂಚಲೋಹ)

ಶೇ. 12 ರಿಂದ 5ಕ್ಕೆ ಇಳಿಕೆ

ಶೇ. 12 ರಿಂದ 5ಕ್ಕೆ ಇಳಿಕೆ

- ಎಥೆನಾಲ್
- ರೂ. ೧೦೦೦ ವರೆಗಿನ ಪಾದರಕ್ಷೆ, ಟೋಪಿ
- ಕೈಮಗ್ಗದ ಜಮಖಾನ
- ಫಾಸ್ಫಾರಿಕ್ ಆಸಿಡ್
- ಹ್ಯಾಂಡ್ ಮೇಡ್ ಟೆಕ್ಸ್ಟೈಲ್ ಫ್ಲೋರ್ ಕವರಿಂಗ್
- ಕೈಯಿಂದ ತಯಾರಿಸಿದ ಲೇಸ್

ಜಿಎಸ್ಟಿ ರಿಟರ್ನ ಸುಲಭ

ಜಿಎಸ್ಟಿ ರಿಟರ್ನ ಸುಲಭ

ಸರ್ಕಾರ ಜಿಎಸ್ಟಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳೀಕರಣ ಮಾಡಿದೆ. ರೂ. ೫ ಕೋಟಿವರೆಗೆ ವಹಿವಾಟು ಮಾಡುವ ಉದ್ಯಮಿಗಳು ಪ್ರತಿ ತಿಂಗಳ ಬದಲು ಮೂರು ತಿಂಗಳಿಗೊಮ್ಮೆ ರಿಟರ್ನ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ.

ಜಿಎಸ್ಟಿ ನೋಂದಣಿ ಕೊನೆ ದಿನ

ಜಿಎಸ್ಟಿ ನೋಂದಣಿ ಕೊನೆ ದಿನ

ಹೊಸ ಜಿಎಸ್ಟಿ ಅಡಿಯಲ್ಲಿ ಇನ್ನೂ ನೋಂದಾಯಿಸದ ತೆರಿಗೆದಾರರಿಗೆ ಆಗಸ್ಟ್ 31 ರವರೆಗೆ ಅಂತಿಮ ಗಡುವು ನೀಡಲಾಗುವುದು ಹಾಗು ಯಾವುದೇ ತಡವಾದ ದಂಡವನ್ನು ಬಿಟ್ಟುಬಿಡಲಾಗುವುದು.

English summary

GST Council, Bumper to the common man! Tax cuts on 88 goods

The Council has also decided to fully exempt sanitary napkins from GST, from the existing 12 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X