For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ಬಂಪರ್ ಆಫರ್! 45 ದಿನಗಳವರೆಗೆ ಉಚಿತ ಕರೆ, 100 SMS ಸೌಲಭ್ಯ

ಏರ್ಟೆಲ್ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದು 45 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ. ಉಚಿತ ಕರೆಗಳೊಂದಿಗೆ ಹೆಚ್ಚುವರಿಯಾಗಿ ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ ಒದಗಿಸಲಿದೆ.

By Siddu Thoravat
|

ದೂರಸಂಪರ್ಕ ಸಂಸ್ಥೆಗಳು ತನ್ನ ಪ್ರಿಪೇಡ್ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ಒದಗಿಸುವ ಪ್ಲಾನ್ ಗಳನ್ನು ಘೋಷಿಸುತ್ತ ಬಂದಿವೆ. ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗದ ದಿಕ್ಕೆ ಬದಲಾಗಿದ್ದು, ಎಲ್ಲಾ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಗಳ ಮುಖಾಂತರ ಕಾರ್ಯಪ್ರವೃತ್ತವಾಗಿವೆ.

 

ಏರ್ಟೆಲ್ ಕೂಡ ತನ್ನ ಪ್ರಿಪೇಡ್ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದು, ಇದೀಗ ಹೊಸ ಪ್ಲಾನ್ ಪರಿಚಯಿಸಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ರೂ. 299 ಪ್ಲಾನ್

ರೂ. 299 ಪ್ಲಾನ್

ಏರ್ಟೆಲ್ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದು 45 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ. ಉಚಿತ ಕರೆಗಳೊಂದಿಗೆ ಹೆಚ್ಚುವರಿಯಾಗಿ ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ ಒದಗಿಸಲಿದೆ.

ಹೆಚ್ಚುವರಿ ಸೌಲಭ್ಯ

ಹೆಚ್ಚುವರಿ ಸೌಲಭ್ಯ

ರೂ. 299 ಪ್ರಿಪೇಡ್ ಯೋಜನೆಯೊಂದಿಗೆ ರೋಮಿಂಗ್ ನಲ್ಲಿ SMS ಸೌಲಭ್ಯವನ್ನು ವಿಸ್ತರಿಸಲಾಗುವುದು. ಇನ್ನೊಂದೆಡೆ ಏರ್ಟೆಲ್ ಪ್ರಿಪೇಡ್ ಚಂದಾದಾರರು ಟಾಕ್ ಟೈಮ್ ಬಗ್ಗೆ ಚಿಂತೆ ಮಾಡಬೇಕಿಲ್ಲ. ಜಿಯೋದಂತೆ ಏರ್ಟೆಲ್ ನಲ್ಲಿ ಕೂಡ ಅನಿಯಮಿತ ಕರೆ FUP ಇಲ್ಲದೆ ಸಿಗಲಿದೆ. ಈ ಯೋಜನೆಯ ನ್ಯೂನತೆಯೆಂದರೆ ಯಾವುದೇ ಡೇಟಾ ಪ್ರಯೋಜನ ಇಲ್ಲದಿರುವುದು.

ಇನ್ನಿತರ ಯೋಜನೆಗಳು
 

ಇನ್ನಿತರ ಯೋಜನೆಗಳು

ಏರ್ಟೆಲ್ ಸಂಸ್ಥೆ ರೂ. 299 ಪ್ಲಾನ್ ನೊಂದಿಗೆ ಪ್ರಿಪೇಯ್ಡ್ ಗ್ರಾಹಕರಿಗಾಗಿ ರೂ. 249, ರೂ. 349 ಪ್ಲಾನ್ ಕೂಡ ಶುರು ಮಾಡಿದೆ. ಆದರೆ ಈ ಎರಡು ಪ್ಲಾನ್ ಗಳಲ್ಲಿ ಗ್ರಾಹಕರು ಉಚಿತ ಕರೆ ಸವಲಭ್ಯ ಕೇವಲ 28 ದಿನಗಳವರೆಗೆ ಮಾತ್ರ ಪಡೆಯಬಹುದಾಗಿದೆ.

ವೋಡಾಫೋನ್ ಗೆ ಟಕ್ಕರ್

ವೋಡಾಫೋನ್ ಗೆ ಟಕ್ಕರ್

ಜೊತೆಗೆ ಏರ್ಟೆಲ್ ರೂ. 1,199 ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದ್ದು, ಈ ಹಿಂದೆ ಇದ್ದ 90 ಜಿಬಿ ಡೇಟಾವನ್ನು 120 ಜಿಬಿ ಡೇಟಾಗೆ ಏರಿಸಿದೆ. ವೋಡಾಫೋನ್ ನ ರೂ.1299 ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ ರೂ. 1, 199 ಪ್ಲಾನ್ ನಲ್ಲಿ ಬದಲಾವಣೆ ತಂದಿದೆ. ಇದು ಹೆಚ್ಚು ಡೇಟಾ ಬಳಕೆ ಮಾಡುವ ಮಾಡುವ ಗ್ರಾಹಕರಿಗೆ ಉಪಯುಕ್ತ.

Read more about: airtel telecom business finance news
English summary

Airtel introduces Rs 299 voice-only prepaid plan with 45 days validity

Airtel has rolled out a new voice-only prepaid plan, that is worth Rs 299. This plan offers unlimited voice calls, alongside 100 daily SMSes.
Story first published: Tuesday, July 24, 2018, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X