For Quick Alerts
ALLOW NOTIFICATIONS  
For Daily Alerts

ಒಂದೇ ದಿನದಲ್ಲಿ ಫೇಸ್ಬುಕ್ ಕಂಪನಿ ಷೇರುಗಳು ನಷ್ಟ ಕಂಡಿದ್ದು ನೋಡಿದ್ರೆ ಶಾಕ್ ಆಗ್ತಿರಾ!

ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ಬುಕ್ ಕಂಪನಿಯ ಷೇರುಗಳ ಬೆಲೆ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೇವಲ ಒಂದೇ ದಿನದಲ್ಲಿ 8 ಲಕ್ಷ ಕೋಟಿ ಸಂಪತ್ತು ನಷ್ಟವಾಗಿದೆ.

By Siddu
|

ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ಬುಕ್ ಕಂಪನಿಯ ಷೇರುಗಳ ಬೆಲೆ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೇವಲ ಒಂದೇ ದಿನದಲ್ಲಿ 8 ಲಕ್ಷ ಕೋಟಿ ಸಂಪತ್ತು ನಷ್ಟವಾಗಿದೆ. ಇದು ಅಮೆರಿಕಾದ ಷೇರು ಮಾರುಕಟ್ಟೆಯ ಚರಿತ್ರೆಯಲ್ಲಿ ದಾಖಲೆಯ ಷೇರುಮೌಲ್ಯ ಕುಸಿತ ಇದಾಗಿದೆ. ಇಲ್ಲಿಯವರೆಗೆ ಈ ಮಟ್ಟದಲ್ಲಿ ಕಂಪನಿಯೊಂದರ ಷೇರುಗಲು ಕುಸಿದಿರಲಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಮಾರ್ಕ್ ಜುಕರ್ಬರ್ಗ್ ಮೇಲೆ ಪರಿಣಾಮ

ಮಾರ್ಕ್ ಜುಕರ್ಬರ್ಗ್ ಮೇಲೆ ಪರಿಣಾಮ

ಫೇಸ್ಬುಕ್ ಸಂಸ್ಥಾಪಕ ಸಿಇಒ ಮಾರ್ಕ್ ಜುಕರ್ಬರ್ಗ್ ಅವರ ಸಂಪತ್ತಿ ಮೇಲೂ ಕೂಡ ಈ ಷೆರು ಮರುಕಟ್ಟೆ ಕುಸಿತ ಪರಿಣಾಮ ಬೀರಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಇವರ ಸಂಪತ್ತು ಸುಮಾರು ಒಂದು ಲಕ್ಷ ಕೋಟಿಯಷ್ಟು ಕುಸಿತ ಕಂಡಿದೆ.

ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಆದಾಯ ವೃದ್ಧಿ

ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಆದಾಯ ವೃದ್ಧಿ

ಫೇಸ್‌ಬುಕ್‌ ಕಮಪನಿಯ ದಾಯವು 2018ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್‌) ಶೇ.42ರಷ್ಟು ವೃದ್ಧಿಯಾಗಿತ್ತು. ಅಂದರೆ 1320 ಕೋಟಿ ಡಾಲರ್‌ಗೂ ಅಧಿಕ ಆದಾಯ ಪಡೆದಿತ್ತು. ವಾಲ್‌ಸ್ಟ್ರೀಟ್‌ ಮಾರುಕಟ್ಟೆ ಸುಮಾರು 1330 ಕೋಟಿ ಡಾಲರ್‌ ಆದಾಯವನ್ನು ಅಂದಾಜಿಸಿತ್ತು.

ಮಾಹಿತಿ ದುರ್ಬಳಕೆ ಷೇರುಗಳ ಬೆಲೆ ಕುಸಿತಕ್ಕೆ ಕಾರಣ

ಮಾಹಿತಿ ದುರ್ಬಳಕೆ ಷೇರುಗಳ ಬೆಲೆ ಕುಸಿತಕ್ಕೆ ಕಾರಣ

ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಹೊತ್ತಿರುವ ಫೇಸ್ಬುಕ್ ಸಂಸ್ಥೆಯ ಷೇರುಗಳ ಬೆಲೆಯಲ್ಲಿ ಈಗ ಶೇ. 19 ರಷ್ಟು ಕುಸಿತ ಆಗಿದೆ. ಯುರೋಪಿನಲ್ಲಿ ಜಾರಿಯಾಗಿರುವ ಬಳಕೆದಾರರ ಖಾಸಗಿತನ ರಕ್ಷಿಸುವ ಹೊಸ ನೀತಿ ಫೇಸ್ಬುಕ್ ಜಾಹೀರಾತು ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ಷೇರುಗಳ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ನಾನಾ ವಿವಾದ, ಆರೋಪಗಳು

ನಾನಾ ವಿವಾದ, ಆರೋಪಗಳು

ಕಳೆದ ಕೆಲ ತಿಂಗಳುಗಳಲ್ಲಿ ನಾನಾ ವಿವಾದಗಳು ಫೇಸ್ಬುಕ್ ಸುತ್ತಿಕೊಂಡಿದ್ದು, ಅನೇಕ ಆರೋಪಗಳು ಕೇಳಿಬಂದಿದ್ದವು.
ಇದು ಕೂಡ ಭವಿಷ್ಯದಲ್ಲಿ ಆದಾಯ ಕುಸಿತದ ಭೀತಿಯನ್ನು ಸೃಷ್ಟಿಸಿದೆ. ಮತ್ತೊಂದೆಡೆ ಫೇಸ್‌ಬುಕ್‌ ಮೂಲಕ ನಕಲಿ ಸುದ್ದಿ, ಹಾನಿಕಾರಕ ಸಂದೇಶಗಳು ಪ್ರಚಾರ ಪಡೆಯುತ್ತಿರುವುದು ಕೂಡ ಫೇಸ್ಬುಕ್ ಮೇಲೆ ಪರಿಣಾಮ ಬೀರಿದೆ.

ಜುಕರ್ ಬರ್ಗ್ ಹೇಳಿದ್ದೇನು?

ಜುಕರ್ ಬರ್ಗ್ ಹೇಳಿದ್ದೇನು?

ಸಂಸ್ಥೆಯ ಸುರಕ್ಷತೆಗೆ ಗಮನಾರ್ಹ ಮೊತ್ತವನ್ನು ವೆಚ್ಚ ಮಾಡಬೇಕಾಗಿದ್ದು, ಇದು ಫೇಸ್ಬುಕ್ ಸಂಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಮಾರ್ಕ್ ಜುಕರ್ ಬರ್ಗ್, ಫೇಸ್ಬುಕ್ ಸಿಇಒ

English summary

$16 billion. This is how much Mark Zuckerberg lost in one day

Other big Facebook investors also took a hit as disappointing second-quarter results obliterated $119 billion of market value, the most ever in a day for a U.S. company.
Story first published: Saturday, July 28, 2018, 11:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X