For Quick Alerts
ALLOW NOTIFICATIONS  
For Daily Alerts

ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಆರಂಭ! ನೋಂದಣಿ ಹೇಗೆ?

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಯೋಜನೆ ನೋಂದಣಿ ಕೆಲವ ದಿನಗಳಲ್ಲಿ ಪ್ರಾರಂಭವಾಗಲಿದ್ದು.

By Siddu
|

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಯೋಜನೆ ನೋಂದಣಿ ಕೆಲವ ದಿನಗಳಲ್ಲಿ ಪ್ರಾರಂಭವಾಗಲಿದ್ದು, ರಿಲಯನ್ಸ್ ಕಂಪನಿ ಬ್ರಾಡ್ಬ್ಯಾಂಡ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಮತ್ತೊಂದು ದರ ಸಮರಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಜಿಯೋ ಡಬಲ್ ಧಮಾಕಾ! ಜಿಯೋ ಫೋನ್ 2, ಜಿಯೋ ಗೀಗಾ ಫೈಬರ್ ಆಫರ್ ಪಡೆಯೋದು ಹೇಗೆ?

ನೋಂದಣಿ ಆರಂಭ

ನೋಂದಣಿ ಆರಂಭ

ಸ್ವಾತಂತ್ರ್ಯ ದಿನಾಚರಣೆಯ ದಿನ ಆಗಸ್ಟ್ 15 ರಿಂದ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಲಿದೆ. ಇದು 1Gbps ವರೆಗಿನ ಡೌನ್ಲೋಡ್ ವೇಗವನ್ನು ಒದಗಿಸಲಿದ್ದು, ಮನೆ ಮತ್ತು ಎಂಟರ್ಪ್ರೈಸ್ Wi-Fi ಜಾಲಗಳು ಮಾತ್ರವಲ್ಲದೇ ಟಿವಿಗಳು ಮತ್ತು ಸ್ಮಾರ್ಟ್ ಹೋಮ್ ಗೂ ಪ್ರವೇಶ ನೀಡಲಿದೆ. ಆರಂಭದಲ್ಲಿ ಸುಮಾರು 1,100 ನಗರಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮೈಜಿಯೋ ಆಪ್ ಮತ್ತು ಜಿಯೋ ಡಾಟ್ ಕಾಮ್ ಮೂಲಕ ನೋಂದಣಿ ಮಾಡಬಹುದು.

ಬ್ರಾಡ್ ಬ್ಯಾಂಡ್ ಯೋಜನೆ

ಬ್ರಾಡ್ ಬ್ಯಾಂಡ್ ಯೋಜನೆ

ಜಿಯೋ ಫೈಬರ್ ಯೋಜನೆಯಲ್ಲಿ ಇನ್ನೂ ಅಧಿಕೃತ ಯೋಜನೆಗಳಿಲ್ಲ. ಆದರೆ, ಗ್ರಾಹಕರು ರೂಟರ್ ಗಾಗಿ ರೂ. 4,500 ಪಾವತಿಸಬೇಕಿದ್ದು, ಇದು ಮರುಪಾವತಿಸಬಹುದಾದ ಮೊತ್ತವಾಗಿರುತ್ತದೆ. ಅಂದರೆ ಆರಂಭಿಕ ಹಂತದಲ್ಲಿ ರೂ. 4,500 ಭದ್ರತಾ ಠೇವಣಿ ಇಡಬೇಕಾಗುತ್ತದೆ.

ಜಿಯೋ ಗಿಗಾಫೈಬರ್ ಇನ್ಸ್ಟಾಲೆಷನ್
 

ಜಿಯೋ ಗಿಗಾಫೈಬರ್ ಇನ್ಸ್ಟಾಲೆಷನ್

ಜಿಯೊ ಗಿಗಾಫೈಬರ್ ನೆಟ್ವರ್ಕ್ ಅನ್ನು ಇನ್ಸ್ಟಾಲೆಷನ್ ಮಾಡಲು ಕಂಪನಿಯು ನಿಮ್ಮ ಮನೆ ಅಥವಾ ಕಚೇರಿಯಲ್ಲಿ Jio GigaRouter ಅನ್ನು ಒದಗಿಸುತ್ತದೆ. ಈ ರೂಟರ್ "ವಾಲ್-ಟು-ವಾಲ್ ಗೆ ಹೆಚ್ಚಿನ ವೇಗದ Wi-Fi ಕವರೇಜ್ ಒದಗಿಸುತ್ತದೆ.

ಡೌನ್ಲೋಡ್ ವೇಗ

ಡೌನ್ಲೋಡ್ ವೇಗ

ಪ್ರಸ್ತುತ ಕಂಪನಿಯು 1Gbps ಡೌನ್ಲೋಡ್ ವೇಗ ಮತ್ತು 100Mbps ಅಪ್ಲೋಡ್ ವೇಗವನ್ನು ಹೊಂದಿದ್ದು, ಅನಿಯಮಿತ ಇಂಟರ್ನೆಟ್ ಸೇವೆಯನ್ನು ನೀಡಲಿದೆ.

ಸೇವೆಯ ಲಭ್ಯತೆ

ಸೇವೆಯ ಲಭ್ಯತೆ

ಆರಂಭಿಕ ಹಂತದಲ್ಲಿ ಜಿಯೋ ಫೈಬರ್ ಸೇವೆ ಎಲ್ಲೆಡೆ ಸಿಗದಿದ್ದರೂ ಮುಂದಿನ ಹಂತದಲ್ಲಿ ಇದನ್ನು ವಿಸ್ತರಿಸಲಾಗುತ್ತದೆ. ಪ್ರತಿ ತಿಂಗಳ ಪ್ಯಾಕೇಜ್ ದರವನ್ನು ಇನ್ನೂ ನಿಗದಿಪಡಿಸಿಲ್ಲವಾದರೂ, ಈ ದರ ಇತರ ಕಂಪನಿಗಳಿಗೆ ಹೋಲಿಸಿದರೆ ಆಕರ್ಷಕವಾಗಿರಲಿದೆ.

English summary

Jio GigaFiber Broadband Offer! How to Register

The Jio GigaFiber registrations begin on August 15 but it is just that - registrations
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X