For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಎಸ್ಬಿಐ ಮಿನಿಮಮ್ ಬ್ಯಾಲೆನ್ಸ್ ನಿಯಮದ ಬಗ್ಗೆ ಹೇಳಿದ್ದೇನು?

ಭಾರತೀಯ ಸ್ಟೇಟ್ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಠೇವಣಿ) ಮೊತ್ತದ ಮೇಲೆ ವಿಧಿಸಲಾಗುತ್ತಿದ್ದ ದಂಡದ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

By Siddu Thoravat
|

ಭಾರತೀಯ ಸ್ಟೇಟ್ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಠೇವಣಿ) ಮೊತ್ತದ ಮೇಲೆ ವಿಧಿಸಲಾಗುತ್ತಿದ್ದ ದಂಡದ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಎಸ್ಬಿಐ ತನ್ನ ಮಿನಿಮಮ್ ಬ್ಯಾಲೆನ್ಸ್ ಮೇಲಿನ ನಿಯಮಗಳನ್ನು ಸಡಿಲಗೊಳಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ.

ಗುಡ್ ನ್ಯೂಸ್! ಎಸ್ಬಿಐ ಮಿನಿಮಮ್ ಬ್ಯಾಲೆನ್ಸ್ ನಿಯಮದ ಬಗ್ಗೆ ಹೇಳಿದ್ದೇನ

ತನ್ನ ಒಟ್ಟು ಉಳಿತಾಯ ಖಾತೆಗಳಲ್ಲಿ ಶೇ. 40 ರಷ್ಟು ಖಾತೆಗಳನ್ನು ಕನಿಷ್ಠ ಠೇವಣಿಯಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ಏಪ್ರೀಲ್ ತಿಂಗಳಿನಿಂದ ಕನಿಷ್ಠ ಠೇವಣಿ ಮೊತ್ತವನ್ನು ಇಳಿಕೆ ಮಾಡಲಾಗಿದ್ದು, ಎಲ್ಲಾ ಉಳಿತಾಯ ಖಾತೆಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಶೇ. 40ರಷ್ಟು ಇಳಿಕೆ ಮಾಡಲಾಗಿದೆ. ಅದಾಗ್ಯೂ, 2017-18ರಲ್ಲಿ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಉಳಿಸದೆ ಇದ್ದುದಕ್ಕಾಗಿ ಗ್ರಾಹಕರಿಂದ ರೂ. 5,000 ಕೋಟಿ ದಂಡ ಸಂಗ್ರಹವಾಗಿದೆ.

ಎಸ್‌ಬಿಐ ಖಾತೆಗಳನ್ನು ಮೆಟ್ರೋ, ನಗರ, ಅರೆ ನಗರ ಮತ್ತು ಗ್ರಾಮೀಣ ಎಂದು ನಾಲ್ಕು ವಿಧದಲ್ಲಿ ವರ್ಗೀಕರಣ ಮಾಡಿದೆ. ಎಲ್ಲಾ ವಿಧದ ಖಾತೆಗಳಿಗೂ ಬೇರೆ ಬೇರೆ ಪ್ರಮಾಣದಲ್ಲಿ ಕನಿಷ್ಠ ಠೇವಣಿ ಮೊತ್ತ ನಿಗದಿ ಮಾಡಲಾಗಿದೆ.

ಮೆಟ್ರೋ ರೂ. 3000
ನಗರ ರೂ. 2000
ಅರೆ ನಗರ ರೂ. 2000
ಗ್ರಾಮೀಣ ರೂ. 1000
ದಂಡದ ಮೊತ್ತವನ್ನು ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಶೇ. 70 ರಷ್ಟು ಮತ್ತು ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ. 75 ರಷ್ಟು ಕಡಿತ ಮಾಡಲಾಗಿದೆ ಎಂದು ಎಸ್ಬಿಐ ಮೂಲ ತಿಳಿಸಿದೆ.

Read more about: sbi money finance news banking
English summary

SBI Minimum Balance Rules

SBI said the move on average monthly Minimum Balance Rules.
Story first published: Tuesday, August 7, 2018, 17:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X