For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮೂಲಕ ಪೇಟ್ರೋಲ್ ಪೇಮೆಂಟ್ ಮಾಡಿ, ರೂ. 7,500 ಕ್ಯಾಶ್ ಬ್ಯಾಕ್ ಪಡೆಯಿರಿ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಬೇಸತ್ತು ಹೋಗಿದ್ದಾರೆ! ಬೈಕ್ ಅಥವಾ ಕಾರಿಗೆ ಪೆಟ್ರೋಲ್ ಹಾಕಿದ ಮೇಲೆ ಅದಕ್ಕೆ ಕ್ಯಾಶ್ ಬ್ಯಾಕ್ ಸಿಕ್ಕರೆ ಹೇಗಿರುತ್ತದೆ? ಅದು ಕೂಡ ರೂ. 7,500ರ ವರೆಗೆ ಸಿಕ್ಕರೆ ಯಾರು ಬೆಡ ಅಂತಾರೆ ಹೇಳಿ.

By Siddu
|

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಬೇಸತ್ತು ಹೋಗಿದ್ದಾರೆ! ಬೈಕ್ ಅಥವಾ ಕಾರಿಗೆ ಪೆಟ್ರೋಲ್ ಹಾಕಿದ ಮೇಲೆ ಅದಕ್ಕೆ ಕ್ಯಾಶ್ ಬ್ಯಾಕ್ ಸಿಕ್ಕರೆ ಹೇಗಿರುತ್ತದೆ? ಅದು ಕೂಡ ರೂ. 7,500ರ ವರೆಗೆ ಸಿಕ್ಕರೆ ಯಾರು ಬೆಡ ಅಂತಾರೆ ಹೇಳಿ..?

ಹಾಗಿದ್ದರೆ ಇಲ್ಲೊಂದು ಸಿಹಿಸುದ್ದಿ ಇದೆ. ಗ್ರಾಹಕರು ತಮ್ಮ ವಾಹನಗಳಿಗೆ ಪೆಟ್ರೋಲ್ ತಂಬಿಸಿದ ನಂತರ ಪೇಟಿಎಂ ಮೂಲಕ ಪಾವತಿಸಿದರೆ ಕ್ಯಾಶ್ ಬ್ಯಾಕ್ ಸಿಗಲಿದೆ. ಏರ್ಟೆಲ್ ವಿ-ಫೈಬರ್ ಐತಿಹಾಸಿಕ ಆಫರ್.. 3 ತಿಂಗಳು ಅನಿಯಮಿತ ಡೇಟಾ, ಉಚಿತ ಕರೆ, HD ವಿಡಿಯೋ ಸೌಲಭ್ಯ

ಆಗಸ್ಟ್ ನಿಂದ ಆರಂಭ

ಆಗಸ್ಟ್ ನಿಂದ ಆರಂಭ

ಪೇಟಿಎಂ ಸಂಸ್ಥೆ ಈ ಸೇವೆಯನ್ನು ಆಗಸ್ಟ್ ೧ರಿಂದ ಆರಂಭಿಸಿದ್ದು, ಜನೆವರಿ ೧, ೨೦೧೯ರವರೆಗೆ ಈ ಸೌಲಭ್ಯ ಪಡೆಯಬಹುದಾಗಿದೆ.

ಕ್ಯಾಶ್ ಬ್ಯಾಕ್ ನಿಯಮ

ಕ್ಯಾಶ್ ಬ್ಯಾಕ್ ನಿಯಮ

ಪ್ರತಿ ಬಾರಿ ರೂ. ೫೦ಕ್ಕಿಂತ ಹೆಚ್ಚು ಮೊತ್ತದ ವ್ಯವಹಾರ ನಡೆಸಿದರೆ ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ದಿನದಲ್ಲಿ ಎಷ್ಟೇ ಬಾರಿ ಪೇಟ್ರೊಲ್ ತುಂಬಿಸಿ ಪೇಟಿಎಂನಲ್ಲಿ ಹಣ ಸಂದಾಯ ಮಾಡಿದರೂ, ಮೊದಲ ವ್ಯವಹಾರಕ್ಕೆ ಮಾತ್ರ ಕ್ಯಾಶ್ ಬ್ಯಾಕ್ ಲಭ್ಯ.

ರೂ. 7,500 ವರೆಗಿನ ಕ್ಯಾಶ್ ಬ್ಯಾಕ್

ರೂ. 7,500 ವರೆಗಿನ ಕ್ಯಾಶ್ ಬ್ಯಾಕ್

ಪೆಟ್ರೋಲ್ ಬಂಕ್ ನಲ್ಲಿ ಮೊದಲ ಬಾರಿ ಪೇಟಿಎಂ ಮೂಲಕ ಹಣ ಪಾವತಿಸಿದರೆ ವಿದ್ಯುತ್ ಬಿಲ್ ನಲ್ಲಿ ರೂ. 50 ಕ್ಯಾಶ್ ಬ್ಯಾಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಬಳಸಿದ್ದರೆ ರೂ. 10 ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ.
ಎರಡನೇ ಬಾರಿ ಸಿನಿಮಾ ಟಿಕೆಟ್ ಮೇಲೆ ರೂ. 100, ಮೂರನೇ ಬಾರಿ Oyoನಲ್ಲಿ ರೂ. 350, ನಾಲ್ಕನೇ ಬಾರಿ ಡಿಟಿಹೆಚ್ ರಿಚಾರ್ಜ್ ಮೇಲೆ ರೂ. 25 ಕ್ಯಾಶ್ ಬ್ಯಾಕ್ ಸಿಗಲಿದೆ.

ರೂ. 1,350 ಕ್ಯಾಶ್ ಬ್ಯಾಕ್

ರೂ. 1,350 ಕ್ಯಾಶ್ ಬ್ಯಾಕ್

ಪೆಟ್ರೋಲ್ ಪಂಪ್ ನಲ್ಲಿ ಐದನೆಯ ವಹಿವಾಟಿನ ನಂತರ ಮೂವಿ ಟಿಕೆಟ್ ಖರೀದಿಸುವಾಗ ರೂ. 200 ಕ್ಯಾಶ್ ಬ್ಯಾಕ್, 10 ನೇ ಬಾರಿ ಪೆಟ್ರೊಲ್ ಪಂಪ್ ನಲ್ಲಿ ಪೇಟಿಎಂ ಮೂಲಕ ಹಣ ಸಂದಾಯ ಮಾಡಿದರೆ ರೂ. 1,350 ಕ್ಯಾಶ್ ಬ್ಯಾಕ್ ಸಿಗುತ್ತದೆ. ಇದು ಪ್ರತಿ 10ನೇ ವಹಿವಾಟಿನಲ್ಲಿ ರೂ. 1,350 ಕ್ಯಾಶ್ ಬ್ಯಾಕ್ ಸಿಗುತ್ತದೆ.

English summary

Petrol Payment by Paytm, Get Rs. 7,500 Cash back

Pay using Paytm at Petrol Pumps & Get up to ₹7500 Cashback. Valid till 31st January 2019
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X