For Quick Alerts
For Daily Alerts
ಡಿಜಿಟಲ್ ಪೇಮೆಂಟ್ ವಹಿವಾಟು 2070.98 ಕೋಟಿ ಏರಿಕೆ ಕಂಡರೆ, ವಂಚನೆ ರೂ. 149.62 ಕೋಟಿ
|
ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಬೃಹತ್ ಉತ್ತೇಜನ ನೀಡುತ್ತಿರುವ ಇ-ಪೇಮೆಂಟ್ ವ್ಯವಹಾರಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ.
2017-18ರ ಸಾಲಿನಲ್ಲಿ ಇ-ಪೇಮೆಂಟ್ ಸುಮಾರು ರೂ. 2070.98 ಕೋಟಿ ಏರಿಕೆ ದಾಖಲಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 2013-14ರಲ್ಲಿ, ರೂ. 220 ಕೋಟಿ ಇ-ವಹಿವಾಟು ದಾಖಲಿಸಿದೆ.
2018-19ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೂ. 3,013 ಕೋಟಿ ಡಿಜಿಟಲ್ ಪೇಮೆಂಟ್ ವ್ಯವಹಾರಗಳ ಗುರಿ ಹೊಂದಿದೆ.
ಏತನ್ಮಧ್ಯೆ, ಇತ್ತೀಚಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾಹಿತಿಯ ಪ್ರಕಾರ, 2015-16ರಲ್ಲಿ ಒಟ್ಟು 1,191 ವಂಚನೆಗಳು ನಡೆದಿದ್ದವು. ಇದು 2017-18ರ ಹಣಕಾಸಿನ ವರ್ಷದಲ್ಲಿ 2,488ಕ್ಕೆ ಏರಿತು.
2015-16ರ ಹಣಕಾಸಿನ ವರ್ಷದಲ್ಲಿ ವಂಚನೆಯಾದ ಒಟ್ಟು ಮೊತ್ತ ರೂ. 40.20 ಕೋಟಿ. ಮುಂದಿನ 2016-17ರಲ್ಲಿ ರೂ 43.18 ಕೋಟಿ ತಲುಪಿ, 2017-18ರಲ್ಲಿ ಮೂರು ಪಟ್ಟು ಹೆಚ್ಚಾಗಿ ರೂ. 149.62 ಕೋಟಿಗೆ ಏರಿತು.
English summary