For Quick Alerts
ALLOW NOTIFICATIONS  
For Daily Alerts

ರೈತರಿಗೆ ಸಿಹಿಸುದ್ದಿ! ರೈತರ 1 ಲಕ್ಷ ಸಾಲ ಮನ್ನಾ, ಷರತ್ತುಗಳೇನು?

ಸಹಕಾರಿ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವುದಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಸಾಲ ಮನ್ನಾ ಪ್ರಯೋಜನ ಯಾರಿಗೆ ಸಿಗಲಿದೆ? ಇದರ ಷರತ್ತುಗಳೇನು? ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

By Siddu Thoravat
|

ರಾಜ್ಯ ಸರ್ಕಾರ ರೈತರಿಗೆ ಸಿಹಿಸುದ್ದಿ ನೀಡಿದೆ. ಸಹಕಾರಿ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವುದಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ರೈತರ ಸಾಲ ಮನ್ನಾ ಪ್ರಯೋಜನ ಯಾರಿಗೆ ಸಿಗಲಿದೆ? ಇದರ ಷರತ್ತುಗಳೇನು? ಎಂಬುದನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

1 ಲಕ್ಷದವರೆಗೆ ಸಾಲ ಮನ್ನಾ

1 ಲಕ್ಷದವರೆಗೆ ಸಾಲ ಮನ್ನಾ

ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ರೂ. 9448 ಕೋಟಿ ವೆಚ್ಚ

ರೂ. 9448 ಕೋಟಿ ವೆಚ್ಚ

ಸಾಲ ಮನ್ನಾ ಯೋಜನೆಯಡಿ ಸುಮಾರು 20.38 ಲಕ್ಷ ರೈತರಿಗೆ ಪ್ರಯೋಜನವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ರೂ. 9448 ಕೋಟಿ ಹೊರೆ ಬೀಳಲಿದೆ.

ಷರತ್ತುಗಳೇನು?

ಷರತ್ತುಗಳೇನು?

ಒಂದು ಕುಟುಂಬದ ಗರಿಷ್ಠ ರೂ. 1 ಲಕ್ಷವರೆಗೆ ಮಾತ್ರ ಸಾಲ ಮನ್ನಾ ಎಂಬ ಷರತ್ತು ಸಡಿಲಗೊಳಿಸಲಾಗಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಯೋಜನೆ ಕಾರ್ಯನಿರತವಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸಹಕಾರಿ ಬ್ಯಾಂಖ್/ಸಂಘಗಳು (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ ಮತ್ತು ಪಿಕಾರ್ಡ್ ಬ್ಯಾಂಕ್) ವಿತರಿಸಿದ ಅಲ್ಪಾವಧಿ ಬೆಳೆ ಸಾಲ ಜುಲೈ 10, 2018ಕ್ಕೆ ಹೊರ ಬಾಕಿ ಸಾಲಕ್ಕೆ ಮಾತ್ರ ಅನ್ವಯ ಆಗುತ್ತದೆ.
ಈ ಅವಧಿಯೊಳಗೆ ಸಾಲ ಪಡೆದು ರೈತರು ಮೃತ ಪಟ್ಟಿದ್ದಲ್ಲಿ ಆ ರೈತರ ವಾರಸುದಾರರಿಗೆ ಈ ಸೌಲಭ್ಯ ಸಿಗುತ್ತದೆ.

ರೈತರ ಖಾತೆಗೆ ಜಮಾ

ರೈತರ ಖಾತೆಗೆ ಜಮಾ

ಜುಲೈ 10, 2018ಕ್ಕೆ ಹೊರಬಾಕಿ ಇರುವ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದರೆ ಸಾಲ ಮನ್ನಾ ಮಾಡಲಾಗುವ ಮೊತ್ತವನ್ನು ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್) ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ.
ರೈತರು ಸಾಲ ಮರುಪಾವತಿ ಮಾಡಿದ್ದರೆ ಸಾಲದ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ?

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ?

ಈ ಪ್ರಶ್ನೆ ಕೂಡ ಅನೇಕರಲ್ಲಿ ಬರುವುದುಂಟು. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವ ಬಗೆಗಿನ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಮುಂಬರುವ ಜುಲೈ-ಆಗಸ್ಟ್ ಒಳಗೆ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡುವುದರ ಬಗ್ಗೆ ರೂಪುರೇಷೆ ತಯಾರಿಸಲಾಗುತ್ತಿದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಯೋಜನೆ ಯಾರಿಗೆ ಅನ್ವಯವಾಗಲ್ಲ

ಯೋಜನೆ ಯಾರಿಗೆ ಅನ್ವಯವಾಗಲ್ಲ

- ಕಳೆದ 3 ವರ್ಷದ ಅವಧಿಯಲ್ಲಿ ಯಾವುದಾದರೂ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂತಹ ರೈತರಿಗೆ ಸಾಲ ಮನ್ನಾ ಪ್ರಯೋಜನ ಲಭ್ಯವಿರುವುದಿಲ್ಲ.
- ಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಅಥವಾ ಇನ್ನಿತರೆ ಕ್ಷೇತ್ರದ ನೌಕರರಾಗಿ ತಿಂಗಳಿಗೆ 20,000ಕ್ಕಿಂತ ಹೆಚ್ಚಿನ ವೇತನ ಅಥವಾ ಪಿಂಚಣಿ ಪಡೆಯುತ್ತಿದ್ದರೆ ಈ ಯೋಜನೆ ಅನ್ವಯ ಆಗಲ್ಲ.
- ಕೃಷಿ ಉತ್ಪನ್ನಗಳನ್ನು ಅಡ ಇಟ್ಟು ನೀಡುವ ಸಾಲ, ಚಿನ್ನಾಭರಣ ಅಡವಿಟ್ಟು ನೀಡುವ ಸಾಲ, ವಾಹನ ಖರೀದಿ ಸಾಲ, ಪಶು ಭಾಗ್ಯ ಯೋಜನೆ ಅಡಿ ಪಶು ಆಹಾರ ಖರೀದಿಗೆ ನೀಡುವ ಸಾಲ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲ, ಸ್ವಸಹಾಯ ಗುಂಪುಗಳಿಗೆ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ನೀಡಿದ್ದ ಸಾಲಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

English summary

1 Lakh Farm Loan Waiver, What are the Condition?

Who will get benefit and what are the conditions from farmer loan waiver by Karnataka government? Here are the guidelines..
Story first published: Friday, August 10, 2018, 11:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X