For Quick Alerts
ALLOW NOTIFICATIONS  
For Daily Alerts

ರಾತ್ರಿ 9ರ ನಂತರ ಎಟಿಎಂಗಳಿಗೆ ಹಣ ತುಂಬುವಂತಿಲ್ಲ: ಗೃಹ ಸಚಿವಾಲಯ

ಸರ್ಕಾರ ಎಟಿಎಂ ಗ್ರಾಹಕರಿಗೆ ಪ್ರಮುಖವಾದ ಸುದ್ದಿ ನೀಡಿದೆ. 2019ರ ಫೆಬ್ರವರಿ ತಿಂಗಳಿನಿಂದ ನಗರ ಪ್ರದೇಶದ ಎಟಿಎಂಗಳಿಗೆ ರಾತ್ರಿ 9ರ ನಂತರ ಹಾಗು ಗ್ರಾಮೀಣ ಪ್ರದೇಶದ ಎಟಿಎಂಗಳಿಗೆ ಸಂಜೆ 6ರ ನಂತರ ಹಣ ತುಂಬುವಂತಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

By Siddu
|

ಸರ್ಕಾರ ಎಟಿಎಂ ಗ್ರಾಹಕರಿಗೆ ಪ್ರಮುಖವಾದ ಸುದ್ದಿ ನೀಡಿದೆ. 2019ರ ಫೆಬ್ರವರಿ ತಿಂಗಳಿನಿಂದ ನಗರ ಪ್ರದೇಶದ ಎಟಿಎಂಗಳಿಗೆ ರಾತ್ರಿ 9ರ ನಂತರ ಹಾಗು ಗ್ರಾಮೀಣ ಪ್ರದೇಶದ ಎಟಿಎಂಗಳಿಗೆ ಸಂಜೆ 6ರ ನಂತರ ನಗದು ತುಂಬುವಂತಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗೃಹ ಸಚಿವಾಲಯದ ಅಧಿಸೂಚನೆ ಪ್ರಕಾರ, 4 ಗಂಟೆಯ ಒಳಗಾಗಿ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿನ ಎಟಿಎಂಗಳಿಗೆ ನಗದು ತುಂಬಬೇಕಾಗುತ್ತದೆ.

ದೇಶದಾದ್ಯಂತ 8,000 ಕ್ಕಿಂತಲೂ ಹೆಚ್ಚು ಖಾಸಗೀ ಸ್ವಾಮ್ಯದ ನಗದು ತುಂಬುವ ವ್ಯಾನ್ ಗಳಿದ್ದು, ಇವು ಬ್ಯಾಂಕುಗಳ ಪರವಾಗಿ ಪ್ರತಿನಿತ್ಯ ಸುಮಾರು ರೂ. 15,000 ಕೋಟಿ ನಿರ್ವಹಣೆ ಮಾಡುತ್ತವೆ. ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

ಫೆಬ್ರವರಿ 8ರಿಂದ ಜಾರಿ

ಫೆಬ್ರವರಿ 8ರಿಂದ ಜಾರಿ

ಗೃಹ ಸಚಿವಾಲಯ ಹೊಸ ಅಧಿಸೂಚನೆ 2019ನೇ ಸಾಲಿನ ಫೆಬ್ರವರಿ 8ರಿಂದ ಜಾರಿಯಾಗಲಿದೆ. ಹಣ ಸಾಗಣೆ ಮಾಡುವ ವಾಹನಕ್ಕೆ ಇಬ್ಬರು ಸಶಸ್ತ್ರಧಾರಿಗಳು ಕಡ್ಡಾಯವಾಗಿ ಇರಬೇಕಾಗುತ್ತದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಹೊಸ ನಿಯಮ ಜಾರಿಗೆ ಕಾರಣ

ಹೊಸ ನಿಯಮ ಜಾರಿಗೆ ಕಾರಣ

ಈಗಾಗಲೇ ಹಲವು ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಎಟಿಎಂಗಳಿಗೆ ನಗದು ಹಣ ಸಾಗಿಸುವ ವಾಹನಗಳ ಮೇಲೆ ದಾಳಿ ನಡೆಸಿ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಎಟಿಎಂಗಳಿಗೆ ಹಣ ತುಂಬುವ ಬ್ಯಾಂಕುಗಳಿಗೆ, ಏಜೆನ್ಸಿಗಳಿಗೆ ಹೊಸ ಅದಿಸೂಚನೆ ಹೊರಡಿಸಿದೆ. ಎಟಿಎಂಗಳಿಗೆ ಹಣ ಭರ್ತಿ ತುಂಬುವವರು ರಾತ್ರಿ ವೇಳೆ ಕೆಲಸ ಮಾಡುವಂತಿಲ್ಲ.

ಗೃಹ ಸಚಿವಾಲಯದ ಆದೇಶದಲ್ಲಿ ಏನಿದೆ?

ಗೃಹ ಸಚಿವಾಲಯದ ಆದೇಶದಲ್ಲಿ ಏನಿದೆ?

ಒಂದು ಬಾರಿ ಕೇವಲ ರೂ. 5 ಕೋಟಿ ಮಾತ್ರ ಸಾಗಿಸಲು ಅವಕಾಶ. ವಾಹನಕ್ಕೆ ಜಿಪಿಆರ್‌ಎಸ್‌, ಸಣ್ಣ ಸಿಸಿಟಿವಿ, ಒಬ್ಬ ಚಾಲಕ, ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು. ಇಬ್ಬರು ಭದ್ರತಾ ಸಿಬ್ಬಂದಿಗಳಿರಬೇಕು (ಒಬ್ಬ ಚಾಲಕನ ಪಕ್ಕ, ಇನ್ನೊಬ್ಬ ಹಿಂದೆ ಕುಳಿತಿರಬೇಕು). ಹಣ ಭರ್ತಿ ಮಾಡುವಾಗ ಅಥವಾ ಖಾಲಿ ಮಾಡುವಾಗ ಹಾಗು ಟೀ/ಊಟಕ್ಕೆ ಹೋಗುವಾಗ ಒಬ್ಬ ಗನ್‌ ಮ್ಯಾನ್‌ ಜತೆಯಲ್ಲಿರಬೇಕು.

English summary

No ATMs to be refilled with cash after 9 pm: Home Ministry

No ATM will be replenished with cash after 9 pm in cities and 6 pm in rural areas from February next year.
Story first published: Monday, August 20, 2018, 13:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X