For Quick Alerts
ALLOW NOTIFICATIONS  
For Daily Alerts

ಈ 24 ವರ್ಷದ ಹುಡುಗ ಭಾರತದ ಅತಿದೊಡ್ಡ ಹೊಟೇಲ್ ಉದ್ಯಮ ನಡೆಸುತ್ತಿದ್ದಾನೆ!

ಪದವಿ ಓದುವ ವಯಸ್ಸಿನಲ್ಲಿಯೇ ಅರ್ಧಕ್ಕೆ ಕಾಲೇಜು ಬಿಟ್ಟು ಕೋಟ್ಯಾಧೀಶನಾದ ಹುಡುಗನ ಸ್ಫೂರ್ತಿದಾಯಕ ಕಥೆ ಇದು.. ನಾವೇಲ್ಲರೂ ಡಿಗ್ರಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಗಳನ್ನು ಓದುತ್ತಾ, ಕೆಲಸ ಗಿಟ್ಟಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಾಡುತ್ತೇವೆ.

By Siddu
|

ಪದವಿ ಓದುವ ವಯಸ್ಸಿನಲ್ಲಿಯೇ ಅರ್ಧಕ್ಕೆ ಕಾಲೇಜು ಬಿಟ್ಟು ಕೋಟ್ಯಾಧೀಶನಾದ ಹುಡುಗನ ಸ್ಫೂರ್ತಿದಾಯಕ ಕಥೆ ಇದು.. ನಾವೇಲ್ಲರೂ ಡಿಗ್ರಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ, ಇನ್ನೀತರ ಕೋರ್ಸ್ ಗಳನ್ನು ಓದುತ್ತಾ, ಕೆಲಸ ಗಿಟ್ಟಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಾಡುತ್ತಿದ್ದರೆ ಈ ಹುಡುಗ ತದ್ವಿರುದ್ದ ದಿಕ್ಕಿಗೆ ಸಾಗಿ ತನ್ನ ಸ್ವಂತ ಪರಿಶ್ರಮದಿಂದಲೇ ಬಹು ಎತ್ತರಕ್ಕೆ ಬೆಳೆದು ನಿಂತಿದ್ದಾನೆ.

ಆತನೇ ಒಯೋ ರೂಮ್ಸ್ (OYO) ಕಂಪನಿಯ ಸಿಇಒ ರಿತೇಶ್ ಅಗರವಾಲ್ . ಈತ ನಡೆದು ಬಂದ ದಾರಿ ಹೂವಿನ ಹಾಸಿಗೆ ಆಗಿರಲಿಲ್ಲ. ಕಲ್ಲುಮುಳ್ಳುಗಳ ಹಾದಿ ಸವೆದಿರುವ ರಿತೇಶ್ ಯುವಕರಿಗೆ ಸ್ಪೂರ್ತಿಯ ಸೆಲೆ.

ಅತಿದೊಡ್ಡ ಹೊಟೇಲ್ ಉದ್ಯಮಿ

ಅತಿದೊಡ್ಡ ಹೊಟೇಲ್ ಉದ್ಯಮಿ

ಕೋಟ್ಯಾಧೀಶನಾಗಿರುವ ರಿತೇಶ್ ಅಗರವಾಲ್ ಒಡಿಶಾ ರಾಜ್ಯದ ಮಧ್ಯಮ ವರ್ಗಕ್ಕೆ ಸೇರಿದವನು. 17ನೇ ವಯಸ್ಸಿನಲ್ಲೇ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದೆ ಹೊರನಡೆದು ದೇಶದ ಅತಿದೊಡ್ಡ ಹೊಟೇಲ್ ಉದ್ಯಮ ಸ್ಥಾಪಿಸಿದನು. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

ಒಯೋ ರೂಮ್ಸ್ ಸ್ಟಾರ್ಟ್ಅಪ್

ಒಯೋ ರೂಮ್ಸ್ ಸ್ಟಾರ್ಟ್ಅಪ್

ರಿತೇಶ್ ಕನಸು ಸಣ್ಣದ್ದಾಗಿರಲಿಲ್ಲ. ಶ್ರೇಷ್ಠ, ಉತ್ತಮ ಗುಣಮಟ್ಟದ ಬಾಡಿಗೆ ರೂಮ್ ಗಳನ್ನು ಗ್ರಾಹಕರಿಗೆ ಒದಗಿಸುವುದು ಇತನ ಗುರಿಯಾಗಿತ್ತು. ಇದರ ಸಾಕಾರಕ್ಕಾಗಿ ಹುಟ್ಟಿಕೊಂಡಿದ್ದು ಒಯೋ ರೂಮ್ಸ್ (OYO) ಸ್ಟಾರ್ಟ್ಅಪ್. ಇತ್ತೀಚಿಗೆ ಫೋರ್ಬ್ಸ್ ನಿಯತಕಾಲಿಕೆಯ ೩೦ ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ರಿತೇಶ್ ಅಗರವಾಲ್ ಸ್ಥಾನಪಡೆದಿದ್ದಾರೆ.

ಸಿಮ್ ಕಾರ್ಡ್ ಮಾರಾಟ
 

ಸಿಮ್ ಕಾರ್ಡ್ ಮಾರಾಟ

ತನ್ನ 22ನೇ ವಯಸ್ಸಿನಲ್ಲಿ ಮಿಲಿಯನೇರ್ ಆದ ರಿತೇಶ್ ತನ್ನ ಕನಸಿನ ಶಿಖರವೆರಲು ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ತನ್ನ ದಿನಿತ್ಯದ ಖರ್ಚಿಗಾಗಿ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡಿದನು. ಇಂಜೀನಿಯರಿಂಗ್ ಕಾಲೇಜಿನ ಪ್ರವೇಶ ಪರೀಕ್ಷೆಯನ್ನು ಬಿಟ್ಟು ಉದ್ಯಮದತ್ತ ಹೊರಳಿದರು.

ಏಕೈಕ ಡ್ರಾಪ್ ಔಟ್ ಹುಡುಗ

ಏಕೈಕ ಡ್ರಾಪ್ ಔಟ್ ಹುಡುಗ

ಈತನ ಐಐಎಂ, ಐಐಟಿ, ಎಚ್ಬಿಎಸ್ ಮತ್ತು ಐವಿ (IIMs, IITs, HBS and Ivy ) ಲೀಗ್ ಗಳಿಂದ ಡ್ರಾಪ್ ಔಟ್ ಆಗಿ ಹೊರಗುಳಿದ ಏಕೈಕ ಹುಡುಗ ಅಂದ್ರೆ ರಿತೇಶ್. ಭಾರತದಲ್ಲಿ ನಾನು ಸ್ಮಾರ್ಟ್ ಮತ್ತು ಉತ್ತಮ ಗುಣಮಟ್ಟ ಹೊಂದಿರುವ ಡ್ರಾಪ್ಔಟ್ ಆದವವರನ್ನು ನೋಡಿಲ್ಲ ಎಂದು ತಮಾಷೆಯಾಗಿ ರಿತೇಶ್ ಹೇಳುತ್ತಾರೆ.

ಮೊದಲ ಫಂಡ್

ಮೊದಲ ಫಂಡ್

ತನ್ನ ಕನಸಿನ ಒಯೋ ರೂಮ್ಸ್ ಕಟ್ಟಲು ಸಾಲ ಪಡೆಯಲು ಮುಂದಾದರು. ಸ್ಠರ್ಟ್ಅಪ್ ಕಟ್ಟುವ ಸಾಹಸದಲ್ಲಿ ತೊಡಗಿರುವಾಗ ಹಲವರ ಪರಿಚಯವಾಯಿತು. ಆ ಸಂದರ್ಭದಲ್ಲಿ 'ವೆಂಚರ್ ನರ್ಸರಿ' ಸಂಪರ್ಕ ಸಾಧಿಸಿ ಮುಂಬೈಗೆ ತೆರಳಿದರು. ಮೂರು ತಿಂಗಳ ಕಾರ್ಯಕ್ರಮದ ನಂತರ ಸುಮಾರು ರೂ. 30 ಲಕ್ಷ ಫಂಡ್ ಪಡೆದರು.

ಹೂಡಿಕೆದಾರ ಬೆಜುಲ್ ಸೋಮಯ್ಯ ಆಕರ್ಷಿತರಾದರು

ಹೂಡಿಕೆದಾರ ಬೆಜುಲ್ ಸೋಮಯ್ಯ ಆಕರ್ಷಿತರಾದರು

ಅಗರ್ವಾಲ್ ಅವರು 2014 ರಲ್ಲಿ ಸಾಹಸೋದ್ಯಮ ಹೂಡಿಕೆದಾರ ಬೆಜುಲ್ ಸೋಮಯ್ಯ ಸಭೆ ನಡೆಸುವಾಗ, ಅವರ ರಕ್ಸ್ಯಾಕ್ ತಕ್ಷಣ ಗಮನ ಸೆಳೆಯಿತು. ಯುವ ವಾಣಿಜ್ಯೋದ್ಯಮಿಯ ಕನಸಿನ ಬಗ್ಗೆ ಕುತೂಹಲದಿಂದ ಸೋಮಯ್ಯ ಕೇಳಿದಾಗ ರಿತೇಶ್ ನೀಡಿದ ಉತ್ತರವನ್ನು ಕೇಳಲು ಆಶ್ಚರ್ಯಚಕಿತರಾದರು. ಅದೃಷ್ಟವನ್ನು ಬೆನ್ನತ್ತಿ ಹೋರಟ ಒಡಿಶಾದ ಹದಿಹರೆಯದ ಹುಡುಗ ಮನೆ ಬಿಟ್ಟು ತೆರಳಿದ್ದನು.

ಉದ್ಯಮಕ್ಕೆ ಸ್ಪೂರ್ತಿ ರಿಮೋಟ್!

ಉದ್ಯಮಕ್ಕೆ ಸ್ಪೂರ್ತಿ ರಿಮೋಟ್!

ಚಿಕ್ಕ ವಯಸ್ಸಿನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿದ್ದಾಗ ರಿತೇಶ್ ಗೆ ತನ್ನ ಇಷ್ಟದ ಚಾನೆಲ್ ನೋಡಲು ಸಾಧ್ಯವಾಗುತ್ತಿರಲಿಲ್ಲ. ರಿಮೋಟ್ ಬೇರೆಯವರ ಕೈಯಲ್ಲಿರುತಿತ್ತು. ಇದರ ಪ್ರೇರಣೆ ಹಿನ್ನೆಲೆಯಲ್ಲಿಯೇ ಹೋಟೆಲ್ ರೂಮ್ ಬುಕ್ ಮಾಡುವ ಒಯೋ ರೂಮ್ಸ್ ನಲ್ಲಿ 'ರಿಮೋಟ್ ನಿಮ್ಮದೇ, ನಿಮ್ಮದೇ ಆಯ್ಕೆಗಳು' ಎಂದು ಆರಂಭ ಮಾಡಿದರು. ಅಂದರೆ ಇಲ್ಲಿ ಗ್ರಾಹಕರ ಇಷ್ಟದ ಹೊಟೇಲ್ ಗಳು ಹಾಗೂ ಅಗತ್ಯಕ್ಕೆ ತಕ್ಕ ಹೊಟೇಲ್ ಗಳು ಒದಗಿಸುವುದು ಇವರ ಉದ್ದೇಶವಾಗಿತ್ತು.

160 ನಗರಗಳಲ್ಲಿ ಒಯೋ

160 ನಗರಗಳಲ್ಲಿ ಒಯೋ

ಪ್ರಸ್ತುತ ದೇಶದ 160 ನಗರಗಳಲ್ಲಿ ಜಿಯೋ ಸಂಸ್ಥೆ ಕಾರ್ಯನಿರತವಾಗಿದೆ. ಸದ್ಯ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಓಯೋ ಇದೀಗ ಮಲೇಷ್ಯಾ, ಚೀನಾ, ಇಂಡೋನೇಷ್ಯಾ, ನೇಪಾಳ, ದುಬೈ ಹಾಗೂ ಲಂಡನ್ ದೇಶಗಳಿಗೆ ತನ್ನ ಸೇವೆ ವಿಸ್ತರಿಸಿದೆ. ರಿಣಾಮ ಇಂದು ಓಯೋ ಕಂಪನಿ ಹೆಮ್ಮರವಾಗಿ ಬೆಳೆದಿದೆ.

English summary

This 24 Year old Boy runs India's largest Hotel Business

Ritesh Agarwal is the only dropout heading a team of people from IIMs, IITs, HBS and Ivy leagues.
Story first published: Monday, August 20, 2018, 11:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X