For Quick Alerts
ALLOW NOTIFICATIONS  
For Daily Alerts

ರಫೇಲ್ ಡೀಲ್: ಕಾಂಗ್ರೆಸ್ ವಿರುದ್ಧ ಅನಿಲ್ ಅಂಬಾನಿ ನೋಟಿಸ್ ಜಾರಿ

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ದೇಶದಾದ್ಯಂತ ಭಾರೀ ಚರ್ಚೆಯಾಗಿತ್ತು.

By Siddu Thoravat
|

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ದೇಶದಾದ್ಯಂತ ಭಾರೀ ಚರ್ಚೆಯಾಗಿತ್ತು.

 

ಹಗರಣದಲ್ಲಿ ರಿಯಲನ್ಸ್ ಭಾಗಿಯಾಗಿದೆ ಎಂದು ಆರೋಪ ಮಾಡಿದ ರಾಹುಲ್ ಗಾಂಧಿ ವಿರುದ್ಧ ಅನಿಲ್ ಅಂಬಾನಿ ಎರಡು ಪತ್ರ ಬರೆದಿದ್ದರು. ಇದೀಗ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ವಿರುದ್ಧ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ಈ ನಿಯಮ ಕಡ್ಡಾಯ!

ತಪ್ಪು ಮಾಹಿತಿ ನಿಲ್ಲಿಸಿ

ತಪ್ಪು ಮಾಹಿತಿ ನಿಲ್ಲಿಸಿ

ರಫೆಲ್ ಡೀಲ್‌ಗೆ ಸಂಬಂಧಂತೆ ಕಾಂಗ್ರೆಸ್‌ ಮತ್ತು ಪಕ್ಷದ ವಕ್ತಾರರು ರಿಲಯನ್ಸ್ ಡಿಫೆನ್ಸ್ ವಿರುದ್ಧ ಅನಗತ್ಯ, ಅವಹೇಳನಕಾರಿ ಹೇಳಿಕೆ ಅಥವಾ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ನೋಟಿಸ್ ತಿಳಿಸಲಾಗಿದೆ. ರಣ್‌ದೀಪ್‌ ಸುರ್ಜೇವಾಲಾ, ಅಭಿಷೇಕ್‌ ಮನು ಸಿಂಘ್ವಿ, ಅಶೋಕ್‌ ಚವಾಣ್‌, ಸಂಜಯ್‌ ನಿರುಪಮ್‌, ಮುಂತಾದ ಕಾಂಗ್ರೆಸ್ ನಾಯಕರ ವಿರುದ್ಧ ನೋಟಿಸ್‌ ಜಾರಿಗೊಳಿಸಲಾಗಿದೆ.

ಯುಪಿಎ ಅವಧಿಯಲ್ಲಿ ಒಪ್ಪಂದ

ಯುಪಿಎ ಅವಧಿಯಲ್ಲಿ ಒಪ್ಪಂದ

ಇದು ಯುಪಿಎ ಅವಧಿಯಲ್ಲಾದ ಒಪ್ಪಂದ. ಫ್ರಾನ್ಸ್‌ ದೇಶದ ಡಸಾಲ್ಟ್‌ ಏವಿಯೇಶನ್‌ ಕಂಪನಿ 36 ರಫೆಲ್‌ ಯುದ್ಧ ವಿಮಾನ ತಯಾರಿಸಿ ಕೊಡುವ ಬಗ್ಗೆ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದನ್ವಯ 18 ರಫೆಲ್‌ ಯುದ್ಧ ವಿಮಾನವನ್ನು ಡಸಾಲ್ಟ್ ಕಂಪನಿ ತಯಾರಿಸಿದರೆ ಉಳಿದ ಯುದ್ಧ ವಿಮಾನಗಳನ್ನು ಎಚ್‌ಎಎಲ್ ಸಹಭಾಗಿತ್ವದಲ್ಲಿ ತಯಾರಿಸುವುದಾಗಿತ್ತು. ಆದರೆ ರಿಲಯನ್ಸ್‌ ಡಿಫೆನ್ಸ್ ಸಂಸ್ಥೆಗೆ ಯದ್ಧ ವಿಮಾನ ತಯಾರಿಕೆಗೆ ಅವಕಾಶ ಕೊಟ್ಟಿದ್ದು ಯಾಕೆ ಎಂಬುದು ಕಾಂಗ್ರೆಸ್ ಪ್ರಶ್ನೆಯಾಗಿದೆ.

 

ಜೈವೀರ್ ಶೆರ್ಗಿಲ್ ಪ್ರತಿಕ್ರಿಯೆ

ರಿಲಯನ್ಸ್ ಸಂಸ್ಥೆಯ ನೋಟಿಸ್ ಗೆಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಜೈವೀರ್ ಶೆರ್ಗಿಲ್, ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇಂತಹ ಬೇದರಿಕೆಗಳಿಗೆ ಬಗ್ಗುವುದಿಲ್ಲ. ದೇಶದ ತೆರಿಗೆದಾರನಾದ ನನಗೆ ಸರ್ಕಾರ 42 ಸಾವಿರ ಕೋಟಿ ಹೆಚ್ಚು ಹಣ ನೀಡಿದ್ದೇಕೆ ಎಂಬುದನ್ನು ತಿಳಿಯುವ ಅಧಿಕಾರವಿದೆ ಎಂದಿದ್ದಾರೆ. 

English summary

Rafale Deal: Anil Ambani issues notice to Congress Leaders

Anil Amabani owned Reliance Infrastructure, Reliance Defence and Reliance Defence sent a notice to Congress spokesperson Jaiveer Shergill.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X