For Quick Alerts
ALLOW NOTIFICATIONS  
For Daily Alerts

ರೈತರಿಗೆ ಬಂಪರ್ ಕೊಡುಗೆ! 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ, ಬಡವರ ಖಾಸಗಿ ಸಾಲ ಮನ್ನಾ

ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲ ಮನ್ನಾ ಮಾಡಿದ್ದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸುಸ್ತಿ ಸಾಲ ಮನ್ನಾ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದೆ.

By Siddu
|

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ನಾಡಿನ ರೈತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ! ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲ ಮನ್ನಾ ಮಾಡಿದ್ದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸುಸ್ತಿ ಸಾಲ ಮನ್ನಾ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

 

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರಾಷ್ಟ್ರೀಕೃತ ಬ್ಯಾಂಕುಗಳ ರೂ. 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ ಘೋಷಿಸಿದ್ದಾರೆ. ಇದರಿಂದ 17 ಲಕ್ಷ ಮಂದಿ ರೈತರು ಸುಸ್ತಿ ಸಾಲ ಮನ್ನಾದ ಲಾಣ ಪಡೆಯಲಿದ್ದಾರೆ. 5 ಲಕ್ಷ ಮನೆ ನಿರ್ಮಾಣ ಹಾಗು ರೈತರ ಸಾಲ ಮನ್ನಾ: ಕುಮಾರಸ್ವಾಮಿ

ಚಾಲ್ತಿ ಬೆಳೆ ಸಾಲ ಮನ್ನಾ

ಚಾಲ್ತಿ ಬೆಳೆ ಸಾಲ ಮನ್ನಾ

ಸುಸ್ತಿ ಸಾಲ ಮನ್ನಾ ಮಾಡುವ ಜೊತೆಗೆ ರೂ. 25 ಸಾವಿರದವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಚಾಲ್ತಿ ಬೆಳೆ ಸಾಲ ಮನ್ನಾ ಪ್ರಯೋಜನವನ್ನು ಸುಮಾರು 6 ಲಕ್ಷ ಮಂದಿ ಪಡೆಯಲಿದ್ದಾರೆ.

ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಎಷ್ಟು?
 

ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಎಷ್ಟು?

ರೂ. 2 ಲಕ್ಷ ವರೆಗಿನ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಜೊತೆಗೆ ರೂ. 25 ಸಾವಿರದವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ ರೂ. 32,000 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಆರ್ಥಿಕ ಸಂಪನ್ಮೂಲ ಹೊಂದಾಣಿಕೆ

ಆರ್ಥಿಕ ಸಂಪನ್ಮೂಲ ಹೊಂದಾಣಿಕೆ

ಇಷ್ಟೊಂದು ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲಿರುವುದರಿಂದ ಸಂಪನ್ಮೂಲ ಹೊಂದಾಣಿಕೆ ಕೂಡ ಸವಾಲಿನದ್ದಾಗಿದೆ. ಸರ್ಕಾರದ ಖಜಾನೆಗಳಿಂದ ಆರ್ಥಿಕ ಸಂಪನ್ಮೂಲಗಳ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಸಾಲ ಮನ್ನಾ ತೆಗೆದಿರಿಸಲಾದ ಮೊತ್ತ

ಸಾಲ ಮನ್ನಾ ತೆಗೆದಿರಿಸಲಾದ ಮೊತ್ತ

ಸಾಲ ಮನ್ನಾ ಮಾಡಲು 2018-19ನೇ ಸಾಲಿನಲ್ಲಿ ರೂ. 6,500 ಕೋಟಿ, 2019-20 ಸಾಲಿಗೆ ರೂ. 8656 ಕೋಟಿ, 2020-21 ಸಾಲಿಗೆ ರೂ. 7876 ಕೋಟಿ ಹಾಗು 2021-22ರ ಸಾಲಿಗಾಗಿ ರೂ. 7231 ಕೋಟಿಗಳನ್ನು ತೆಗೆದಿರಿಸಲಾಗಿದೆ. ಒಟ್ಟು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುವುದು.

ಬಡವರ ಖಾಸಗಿ ಸಾಲ ಮನ್ನಾ

ಬಡವರ ಖಾಸಗಿ ಸಾಲ ಮನ್ನಾ

ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿ ಅಂಗಡಿ, ಲೇವಾದೇವಿಗರರಲ್ಲಿ ರೈತರು, ಭೂರಹಿತ ಕೃಷಿ ಕಾರ್ಮಿಕರು, ಬಡ ವರ್ಗದವರು ಮಾಡಿರುವ ಸಾಲ ಮನ್ನ ಮಾಡಲಾಗುವುದು. ಕರ್ನಾಟಕ ಋಣ ಪರಿಹಾರ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ ತರಲು ನಿರ್ದರಿಸಿ ಶೀಘ್ರದಲ್ಲೇ ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಲಾಗುವುದು.

ಬಡವರ ಖಾಸಗಿ ಸಾಲ ಮನ್ನಾ

ಬಡವರ ಖಾಸಗಿ ಸಾಲ ಮನ್ನಾ

ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿ ಅಂಗಡಿ, ಲೇವಾದೇವಿಗರರಲ್ಲಿ ರೈತರು, ಭೂರಹಿತ ಕೃಷಿ ಕಾರ್ಮಿಕರು, ಬಡ ವರ್ಗದವರು ಮಾಡಿರುವ ಸಾಲ ಮನ್ನ ಮಾಡಲಾಗುವುದು. ಕರ್ನಾಟಕ ಋಣ ಪರಿಹಾರ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ ತರಲು ನಿರ್ದರಿಸಿ ಶೀಘ್ರದಲ್ಲೇ ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಲಾಗುವುದು.

ಕರ್ನಾಟಕ ಋಣ ಪರಿಹಾರ ಕಾಯ್ದೆ ನಿಯಮ?

ಕರ್ನಾಟಕ ಋಣ ಪರಿಹಾರ ಕಾಯ್ದೆ ನಿಯಮ?

ವಾರ್ಷಿಕ ಆದಾಯ ರೂ. 1.20 ಲಕ್ಷಕಿಂತ ಕಡಿಮೆ ಇದ್ದವರಿಗೆ ಹಾಗು ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಮಾತ್ರ ಈ ಕಾಯಿದೆ ಅನ್ವಯವಾಗಲಿದೆ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಆರ್​ಬಿಐ ಅನುಮತಿ ಪಡೆದಿರುವ ಖಾಸಗಿ ಬ್ಯಾಂಕುಗಳು, ಸಣ್ಣ ಫೈನಾನ್ಸ್​, ಸೊಸೈಟಿಗಳು, ಎಲ್ಐಸಿ ಈ ಕಾಯ್ದೆ ಅನ್ವಯವಾಗುವುದಿಲ್ಲ ಎಂದಿದ್ದಾರೆ. ರೈತರಿಗೆ ಸಿಹಿಸುದ್ದಿ! ರೈತರ 1 ಲಕ್ಷ ಸಾಲ ಮನ್ನಾ, ಷರತ್ತುಗಳೇನು?

English summary

Farm Loan Waiver: CM HD Kumaraswamy announced Upto 2 Lakh Loan waiver

CM HD Kumaraswamy announced Government will Farm Loan Waiver Upto 2 Lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X