For Quick Alerts
ALLOW NOTIFICATIONS  
For Daily Alerts

ಡಿಗ್ರಿ (Degree) ಇಲ್ಲದಿದ್ದರೂ ಈ 15 ಕಂಪನಿಗಳಲ್ಲಿ ನೌಕರಿ ಪಡೆಯಬಹುದು

By Siddu
|

ಜಾಗತಿಕವಾಗಿ ಉದ್ಯೋಗ ವಲಯ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದರ ಜೊತೆಗೆ ಉದ್ಯೋಗ ಪಡೆಯಲು ಕಡ್ಡಾಯವಾಗಿದ್ದ ಮಾನದಂಡಗಳು ಸಹ ಬದಲಾಗುತ್ತಿವೆ.

ಒಳ್ಳೆಯ ಕಂಪನಿಯಲ್ಲಿ ನೌಕರಿ ಗಿಟ್ಟಿಸಬೇಕಾದರೆ ಕನಿಷ್ಠ ಒಂದು ಶೈಕ್ಷಣಿಕ ಡಿಗ್ರಿ (ಪದವಿ ಶಿಕ್ಷಣ) ಬೇಕೆ ಬೇಕು ಎನ್ನುವ ಕಾಲವೊಂದಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಈ ಕನಿಷ್ಠ 'ಡಿಗ್ರಿ'ಯ ಮಾನದಂಡ ಸಡಿಲಗೊಳ್ಳುತ್ತಿರುವುದು ಕಂಡು ಬರುತ್ತದೆ. ಜಗತ್ತಿನ ಹಲವಾರು ಪ್ರಖ್ಯಾತ ಕಂಪನಿಗಳು ಸಹ 'ಡಿಗ್ರಿ' ವಿಷಯದಲ್ಲಿ ತಮ್ಮ ನಿಯಮವನ್ನು ಬದಲಾಯಿಸಿಕೊಳ್ಳತೊಡಗಿವೆ.

ಶೈಕ್ಷಣಿಕ ಡಿಗ್ರಿ ಇಲ್ಲದಿದ್ದರೂ ವ್ಯಕ್ತಿಯಲ್ಲಿ ಪ್ರತಿಭೆ ಇದ್ದು, ಕಂಪನಿಗೆ ಆತನಿಂದ ಪ್ರಯೋಜನವಾಗುವುದಾದರೆ ಮೇಲ್ಮಟ್ಟದ ಹುದ್ದೆಗಳಿಗೆ ಸಹ ಅಂಥವರನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದೆ ಬರುತ್ತಿರುವುದು ಕಾಲಚಕ್ರ ಬದಲಾಗಿರುವುದರ ಸಂಕೇತವಾಗಿದೆ. ಹೀಗಾಗಿ ಪ್ರತಿಭೆ ಇದ್ದವರು ತಮ್ಮಲ್ಲಿ ಡಿಗ್ರಿ ಇಲ್ಲವಲ್ಲಾ ಎಂದು ಕೊರಗುವುದು ತಪ್ಪಲಿದೆ.

 

ಕಾಲೇಜು ಮೆಟ್ಟಿಲನ್ನೇ ತುಳಿಯದ ಅನೇಕರು ಈ ಜಗತ್ತಿನಲ್ಲಿ ಅದ್ಭುತವಾದುದನ್ನು ಸಾಧಿಸುವುದನ್ನು ನಾವೆಲ್ಲ ನೋಡಿದ್ದೇವೆ. ಅವರು ಜಗತ್ತಿನಲ್ಲಿ ವಿಶಿಷ್ಟವಾದವರು. ಅಂಥ ವ್ಯಕ್ತಿಗಳನ್ನು ಗುರುತಿಸಲು ನಾವೆಲ್ಲ ಪ್ರಯತ್ನಿಸಬೇಕಿದೆ ಎನ್ನುತ್ತಾರೆ ಗೂಗಲ್ ಕಂಪನಿಯ ಸಾರ್ವಜನಿಕ ಕಾರ್ಯಾಚರಣೆ ವಿಭಾಗದ ಮಾಜಿ ವೈಸ್ ಪ್ರೆಸಿಡೆಂಟ್ ಲಾಸ್ಲೊ ಬೊಕ್.

ಅರ್ನಸ್ಟ್ ಆಂಡ್ ಯಂಗ್ ಕಂಪನಿಯ ಮ್ಯಾನೇಜಿಂಗ್ ಪಾರ್ಟನರ್ ಮ್ಯಾಗಿ ಸ್ಟಿವೆಲ್ ಹೇಳುವುದು ಹೀಗೆ;

ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..

ನಾಲ್ಕು ವರ್ಷ ಕಾಲೇಜಿನಲ್ಲಿ ಕಲಿತು, ಪುಸ್ತಕಗಳಲ್ಲಿನ ಜ್ಞಾನ ಪಡೆದವರು ಮಾತ್ರ ಜಾಣರಲ್ಲ. ಕಾಲೇಜಿಗೆ ಹೋಗದಿದ್ದರೂ ಪ್ರತಿಭೆ, ಮುನ್ನುಗ್ಗುವ ಛಲ ಹಾಗೂ ಧೈರ್ಯವಿರುವವರು ಸಹ ಈ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ಹೀಗಾಗಿ ಡಿಗ್ರಿ ಇಲ್ಲದವರಿಗೂ ಈಗ ಪ್ರಮುಖ ಕಂಪನಿಗಳು ತಮ್ಮಲ್ಲಿ ಕೆಲಸದ ಅವಕಾಶವನ್ನು ನೀಡುತ್ತಿವೆ.

ಪ್ರಸ್ತುತ ಡಿಗ್ರಿ ಇಲ್ಲದಿದ್ದರೂ ಯಾವ ಕಂಪನಿಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ. ಪದವಿ ರಹಿತರನ್ನೂ ನೇಮಕಾತಿ ಮಾಡಿಕೊಳ್ಳುತ್ತಿರುವ ಪ್ರಮುಖ 15 ಕಂಪನಿಗಳು ಹಾಗೂ ಲಭ್ಯವಿರುವ ಹುದ್ದೆಗಳು ಹೀಗಿವೆ.

1. ಗೂಗಲ್ (Google)

ಕಂಪನಿ ರೇಟಿಂಗ್: 4.4

ನೇಮಕಾತಿ ಹುದ್ದೆಗಳು: ಪ್ರಾಡಕ್ಟ್ ಮ್ಯಾನೇಜರ್, ರಿಕ್ರುಟರ್, ಸಾಫ್ಟವೇರ್ ಎಂಜಿನಿಯರ್, ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ, ಸಂಶೋಧನಾ ವಿಜ್ಞಾನಿ, ಮೆಕ್ಯಾನಿಕಲ್ ಎಂಜಿನಿಯರ್, ಡೆವಲಪರ್ ರಿಲೇಶನ್ಸ್ ಇಂಟರ್ನ, U/ಘಿ ಎಂಜಿನಿಯರ್, SಂP ಕ್ಲೌಡ ಕನ್ಸಲ್ಟಂಟ್, ಆಡಳಿತಾತ್ಮಕ ವ್ಯಾಪಾರ ಪಾಲುದಾರ ಮುಂತಾದುವು.

ನೇಮಕಾತಿ ಸ್ಥಳಗಳು: ಮೌಂಟೆನ್ ವ್ಯೂ, ಸಿಎ; ಆಸ್ಟಿನ್, ಟಿಎಕ್ಸ್; ಇಂಡಿಯಾನಾ ಪೊಲಿಸ್, ಐಎನ್; ಸ್ಯಾನ ಫ್ರಾನ್ಸಿಸ್ಕೊ, ಸಿಎ; ಪ್ರಾರ್, ಓಕೆ; ಚಿಕಾಗೊ, ಐಎಲ್ ಹಾಗೂ ಇನ್ನೂ ಕೆಲ ಸ್ಥಳಗಳು.

ಉದ್ಯೋಗಿಗಳ ಅಭಿಪ್ರಾಯ: ಸ್ವತಂತ್ರ ಮಾಧ್ಯಮ ವರದಿಗಾರಿಕೆಯಿಂದ (ಗೂಗಲ್ ಪ್ರೊಜೆಕ್ಟ್ ಶೀಲ್ಡ್) ಹಿಡಿದು ಪ್ರಕೃತಿ ವಿಕೋಪಗಳನ್ನು ನಿಭಾಯಿಸುವವರೆಗೆ ಹಲವಾರು ವೈವಿಧ್ಯಮಯ ಕೆಲಸಗಳಿವೆ. ಜಾಹೀರಾತುಗಳಿಗೆ ಸಂಬಂಧಿಸಿದ ಕೆಲಸ ಅಥವಾ ಯಂತ್ರಗಳಿಗೆ ತರಬೇತಿ ನೀಡುವ ಕೆಲಸ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸ ಇದ್ದೇ ಇದೆ. - ಸಾಫ್ಟವೇರ್ ಎಂಜಿನಿಯರ, ಗೂಗಲ್.

2. ಅರ್ನಸ್ಟ್ ಆಂಡ್ ಯಂಗ್ (Ernst and Young - EY)

ಕಂಪನಿ ರೇಟಿಂಗ್: 3.7

ನೇಮಕಾತಿ ಹುದ್ದೆಗಳು: ಅಶ್ಯುರನ್ಸ್ ಸರ್ವಿಸ್ ಸೀನಿಯರ್, ರಿಸ್ಕ್ ಅಡ್ವೈಸರ್, ಅನುಭವ ನಿರ್ವಹಣಾ ಮ್ಯಾನೇಜರ್, ತೆರಿಗೆ ಸಲಹಾಗಾರ, ಹಣಕಾಸು ಸೇವೆಗಳ ಹಿರಿಯ ನಿರ್ವಹಣಾಗಾರ, ಲೆಕ್ಕಪರಿಶೋಧಕ, ರಿಸ್ಕ್ ಮ್ಯಾನೇಜಮೆಂಟ ಆಪರೇಶನ್ಸ್ ಮತ್ತು ಕ್ವಾಲಿಟಿ ಕಂಪ್ಲಾಯನ್ಸ್ ಅಸೋಸಿಯೇಟ್, ಪೇ-ರೋಲ್ ಆಪರೇಷನ್ಸ್ ಅನಾಲಿಸ್ಟ್ ಇತ್ಯಾದಿ.

ನೇಮಕಾತಿ ಸ್ಥಳಗಳು: ಅಲ್ಫಾರೆಟ್ಟಾ, ಜಿಎ; ಸ್ಯಾನ ಫ್ರಾನ್ಸಿಸ್ಕೊ, ಸಿಎ; ಟೊರೊಂಟೊ; ಬೋಸ್ಟನ್, ಎಂಎ; ನ್ಯೂಯಾರ್ಕ್, ಎನ್‌ವೈ; ಕ್ಲೀವಲ್ಯಾಂಡ, ಓಎಚ್; ಸೆಕಾಕಸ್, ಎನ್‌ಜೆ ಹಾಗೂ ಇನ್ನಿತರ ಸ್ಥಳಗಳಲ್ಲಿ.

3. ಪೆಂಗ್ವಿನ ರ್‍ಯಾಂಡಮ್ ಹೌಸ್ (Penguin Random House)
 

3. ಪೆಂಗ್ವಿನ ರ್‍ಯಾಂಡಮ್ ಹೌಸ್ (Penguin Random House)

ಕಂಪನಿ ರೇಟಿಂಗ್: 3.8

ನೇಮಕಾತಿ ಹುದ್ದೆಗಳು: ಮಾರ್ಕೆಟಿಂಗ ಡಿಸೈನರ್, ಪ್ರಚಾರಕಾರ್ಯ ಸಹಾಯಕ, ಹಣಕಾಸು ವಿಭಾಗ ಹಿರಿಯ ಮ್ಯಾನೇಜರ, ಪ್ರೊಡಕ್ಷನ್ ಅಸಿಸ್ಟಂಟ್, ಸೀನಿಯರ ಎಡಿಟರ್, ಪ್ರೊಡಕ್ಷನ್ ಎಡಿಟರ್, ಆರ್ಟ ಡೈರೆಕ್ಟರ ಹಾಗೂ ಇನ್ನೂ ಹಲವಾರು ಹುದ್ದೆಗಳು.

ನೇಮಕಾತಿ ಸ್ಥಳಗಳು: ನ್ಯೂಯಾರ್ಕ, ಲಂಡನ್, ಕೊಲೊರಾಡೊ ಸ್ಪ್ರಿಂಗ್ಸ್ ಮುಂತಾದ ಸ್ಥಳಗಳಲ್ಲಿ.

4. ಕಾಸ್ಟಕೊ ಹೋಲ್‌ಸೇಲ್ (Costco Wholesale)

ಕಂಪನಿ ರೇಟಿಂಗ್: 3.9

ನೇಮಕಾತಿ ಹುದ್ದೆಗಳು: ಕ್ಯಾಶಿಯರ್, ಸ್ಟಾಕರ್, ಫಾರ್ಮಸಿ ಸೇಲ್ಸ್ ಅಸಿಸ್ಟಂಟ, ಬೇಕರಿ ರ್‍ಯಾಪರ್, ಕೇಕ್ ಡೆಕೊರೇಟರ, ಲೈಸೆನ್ಸಡ್ ಆಪ್ಟಿಶಿಯನ್, ಕ್ಯಾಶಿಯರ ಅಸಿಸ್ಟಂಟ್, ಡಿಪೊ ಸೊಲುಶನ್ಸ ಫಂಕ್ಷನಲ್ ಅನಾಲಿಸ್ಟ್, ಫೊರ್ಕಲಿಫ್ಟ್ ಡ್ರೈವರ್ ಮುಂತಾದುವು.

ನೇಮಕಾತಿ ಸ್ಥಳಗಳು : ಬ್ಯಾಟನ್ ರೋಷ್, ವಾಲ್ಲೆಜೊ, ಕಲಾಮಾಜೂ, ಇಸ್ಸಾಕಾ ಹಾಗೂ ಇನ್ನಿತರ ಸ್ಥಳಗಳಲ್ಲಿ.

5. ಹೋಲ್ ಫುಡ್ಸ್ (Whole Foods)

ಕಂಪನಿ ರೇಟಿಂಗ್: 3.5

ನೇಮಕಾತಿ ಹುದ್ದೆಗಳು: ಗ್ರೋಸರಿ ಟೀಂ ಮೆಂಬರ್, ಕ್ಯಾಶಿಯರ, ಬೇಕರಿ ಟೀಂ ಮೆಂಬರ್, ಹೋಲ್ ಬಾಡಿ ಟೀಂ ಮೆಂಬರ್, ಸ್ಪೆಷಲಿಟಿ ಟೀಂ ಮೆಂಬರ, ಪಾರ್ಟ ಟೈಂ ಗ್ರೋಸರಿ ಟೀಂ ಮೆಂಬರ, ಚೆಫ್, ಸೀ ಫುಡ್ ಟೀಂ ಮೆಂಬರ ಇತ್ಯಾದಿ.

ನೇಮಕಾತಿ ಸ್ಥಳಗಳು: ನಾಪಾ, ಪೆಟಾಲುಮಾ, ಟಿಗಾರ್ಡ್, ವಿಚಿಟಾ, ಆಸ್ಟಿನ್, ಪೋರ್ಟಲ್ಯಾಂಡ ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ.

6. ಹಿಲ್ಟನ್ (Hilton)

ಕಂಪನಿ ರೇಟಿಂಗ್: 4

ನೇಮಕಾತಿ ಹುದ್ದೆಗಳು: ಇವೆಂಟ್ ಮ್ಯಾನೇಜರ, ಫ್ರಂಟ ಆಫೀಸ ಮ್ಯಾನೇಜರ, ಹೌಸ್ ಕೀಪರ, ಹೋಟೆಲ್ ಮ್ಯಾನೇಜರ, ಅಸಿಸ್ಟಂಟ್ ಡೈರೆಕ್ಟರ ಆಫ್ ಫುಡ್ ಆಂಡ ಬೆವರೇಜ, ಆನ್ ಕಾಲ್ ಬ್ಯಾಂಕ್ವೆಟ್ ಸರ್ವರ, ಇಂಟರನ್ಯಾಷನಲ್ ಸೇಲ್ಸ ಕೋ ಆರ್ಡಿನೇಟರ, ಸೆಕ್ಯುರಿಟಿ ಆಫೀಸರ, ಬಾರ್ಬಾಕ್ ಹಾಗೂ ಇನ್ನೂ ಹಲವಾರು ಹುದ್ದೆಗಳು.

ನೇಮಕಾತಿ ಸ್ಥಳಗಳು: ಸ್ಯಾನ ರಾಫೇಲ್, ನಾಪಾ, ಇಂಡಿಯಾನಾಪೊಲೀಸ್, ತಾಂಪಾ, ಮ್ಯಾಡಿಸನ ಹೈಟ್ಸ, ಆಗುಸ್ಟಾ, ಚಿಕಾಗೊ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ.

7. ಪಬ್ಲಿಕ್ಸ್ (Publix)

ಕಂಪನಿ ರೇಟಿಂಗ್: 3.7

ನೇಮಕಾತಿ ಹುದ್ದೆಗಳು: ಫಾರ್ಮಾಸಿಸ್ಟ್, ರಿಟೇಲ್ ಸೆಟಪ್ ಕೋ ಆರ್ಡಿನೇಟರ್, ಮೆಂಟೆನನ್ಸ ಟೆಕ್ನಿಶಿಯನ್, ಫುಡ್ ಕ್ಲರ್ಕ, ಅಸಿಸ್ಟಂಟ ಫಾರ್ಮಸಿ ಮ್ಯಾನೇಜರ್, ಬೆವರೇಜ ಸರ್ವರ್ ಹಾಗೂ ಇನ್ನೂ ಹಲವಾರು ಹುದ್ದೆಗಳು.

ನೇಮಕಾತಿ ಸ್ಥಳಗಳು : ಲೇಕಲ್ಯಾಂಡ, ಅಟ್ಲಾಂಟಾ, ಡಿಯರಫೀಲ್ಡ್ ಬೀಚ್ ಮುಂತಾದ ಸ್ಥಳಗಳಲ್ಲಿ.

8. ಆಪಲ್ (Apple)

ಕಂಪನಿ ರೇಟಿಂಗ್: 4.0

ನೇಮಕಾತಿ ಹುದ್ದೆಗಳು: ಜೀನಿಯಸ್, ವೆರಿಫಿಕೇಶನ್ ಎಂಜಿನಿಯರ್, ಎಂಜಿನಿಯರಿಂಗ್ ಪ್ರಾಜೆಕ್ಟ ಮ್ಯಾನೇಜರ, ಐಫೋನ ಬಾಯರ್, ಆಪಲ್ ಟೆಕ್ನಿಕಲ್ ಸ್ಪೆಷಲಿಸ್ಟ, ಆಪಲ್ ಕೇರ ಆಟ್ ಹೋಂ ಟೀಂ ಮ್ಯಾನೇಜರ, ಆಪಲ್ ಟಿವಿ ಪ್ರಾಡಕ್ಟ್ ಡಿಸೈನ ಇಂಟರ್ನಶಿಪ್, ಬಿಸಿನೆಸ್ ಟ್ರಾವೆಲರ್ ಸ್ಪೆಷಲಿಸ್ಟ್, ಪಾರ್ಟ ಟೈಂ ರಿಸೆಲ್ಲರ್ ಸ್ಪೆಷಲಿಸ್ಟ್ ಮುಂತಾದುವು.

ನೇಮಕಾತಿ ಸ್ಥಳಗಳು: ಸಾಂತಾ ಕ್ಲಾರಾ, ಆಸ್ಟಿನ್, ಲಾಸ ವೇಗಸ್, ಚಾರ್ಲ್ಸಟನ್, ಚಾಪೆಲ ಹಿಲ್, ಮೇಡನ್ ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ.

9. ಸ್ಟಾರಬಕ್ಸ್ (Starbucks)

ಕಂಪನಿ ರೇಟಿಂಗ್: 3.6

ನೇಮಕಾತಿ ಹುದ್ದೆಗಳು: ಬರಿಸ್ತಾ, ಶಿಫ್ಟ ಸುಪರವೈಸರ, ಸ್ಟೋರ ಮ್ಯಾನೇಜರ ಇತ್ಯಾದಿ.

ನೇಮಕಾತಿ ಸ್ಥಳಗಳು: ಡಬ್ಲಿನ್, ಸ್ಯಾನ ಫ್ರಾನ್ಸಿಸ್ಕೊ, ಕಾಂಪ್ಟನ, ಸಿಯಾಟಲ್, ಚಿಕಾಗೊ, ಅರ್ಕಾಡಿಯಾ, ಡೆನ್ವರ್, ಬೋಸ್ಟನ ಮುಂತಾದೆಡೆ.

10. ನಾರ್ಡಸ್ಟ್ರಾಮ (Nordstrom)

ಕಂಪನಿ ರೇಟಿಂಗ್: 3.6

ನೇಮಕಾತಿ ಹುದ್ದೆಗಳು: ರಿಟೇಲ ಸೇಲ್ಸ್, ಸ್ವಚ್ಛತಾ ಕೆಲಸ, ರಿಟೇಲ ಸೇಲ್ಸ್, ಕ್ಲೀನಿಂಗ, ಸ್ಟಾಕ್ ಮತ್ತು ನಿರ್ವಹಣೆ, ಬಾರಟೆಂಡರ, ಬರಿಸ್ತಾ, ಸ್ಪಾ ಎಸ್ಥೆಟಿಶಿಯನ್, ಕಾಸ್ಮೆಟಿಕ್ ಬ್ಯೂಟಿ ಸ್ಟೈಲಿಸ್ಟ, ಸೀಸನಲ್ ಆಲ್ಟರೇಶನ್ಸ್ ಆಂಡ ಟೇಲರ ಶಾಪ್ ಅಪ್ರೆಂಟಿಸ್, ಸೀನಿಯರ ಸೈಟ ರಿಲಯಬಿಲಿಟಿ ಎಂಜಿನೀಯರ, ರಿಕ್ರುಟರ್, ಸೋಶಿಯಲ್ ಮೀಡಿಯಾ ಮ್ಯಾನೇಜರ ಇತ್ಯಾದಿ.

ನೇಮಕಾತಿ ಸ್ಥಳಗಳು : ಫೀನಿಕ್ಸ್, ಲಾಸ ವೇಗಸ್, ಸ್ಕಾಟ್ಸಡೇಲ್, ವಾಶಿಂಗ್ಟನ್ ಡಿಸಿ, ಆರ್ಲಿಂಗ್ಟನ್, ಬೆಥೆಸ್ಡಾ ಮುಂತಾದ ಸ್ಥಳಗಳು.

11. ಹೋಂ ಡಿಪೊ (Home Depot)

ಕಂಪನಿ ರೇಟಿಂಗ್: 3.5

ನೇಮಕಾತಿ ಹುದ್ದೆಗಳು: ವಿಭಾಗ ನಿರ್ವಾಹಕ, ಗ್ರಾಹಕ ಮಾರಾಟ ಸೇವೆ, ಸ್ಟೋರ ಸಪೋರ್ಟ, ಕ್ಯಾಶಿಯರ, ಅಸಿಸ್ಟಂಟ ಸ್ಟೋರ್ ಮ್ಯಾನೇಜರ, ಔಟಸೈಡ ಸೇಲ್ಸ್ ಕನ್ಸಲ್ಟಂಟ್, ವೇರಹೌಸ್ ಅಸೋಸಿಯೇಟ್, ಪ್ರಾಡಕ್ಟ ಮ್ಯಾನೇಜರ, ಅನಾಲಿಸ್ಟ್ ಇತ್ಯಾದಿ.

ನೇಮಕಾತಿ ಸ್ಥಳಗಳು: ಕೊಲೊನಿಯಲ್ ಹೈಟ್ಸ, ಸೌಥ ಪ್ಲೇನಫೀಲ್ಡ, ಸ್ಯಾನ ಡಿಯೆಗೊ, ಕೆನ್ನೆಸಾ, ಅಟ್ಲಾಂಟಾ, ಡಾಲಿ ಸಿಟಿ ಮುಂತಾದುವು.

12. ಐಬಿಎಂ (IBM)

ಕಂಪನಿ ರೇಟಿಂಗ್: 3.9

ನೇಮಕಾತಿ ಹುದ್ದೆಗಳು: ಫೈನಾನ್ಸಿಯಲ ಬ್ಲಾಕ್‌ಚೇನ್ ಎಂಜಿನಿಯರ, ಲೀಡ ರಿಕ್ರುಟರ್, ಒಪ್ಪಂದ ಹಾಗೂ ಮಾತುಕತೆ ವೃತ್ತಿಪರ ವ್ಯಕ್ತಿ, ಪ್ರಾಡಕ್ಟ ಮ್ಯಾನೇಜರ, ಆರಂಭಿಕ ಹಂತದ ಸಿಸ್ಟಂ ಸೇವಾ ಪ್ರತಿನಿಧಿ, ಸಂಶೋಧನಾ ಸ್ಟಾಫ ಮೆಂಬರ, ಕ್ಲೈಂಟ್ ಸೊಲುಶನ್ ಪ್ರತಿನಿಧಿ ಇತ್ಯಾದಿ.

ನೇಮಕಾತಿ ಸ್ಥಳಗಳು : ಸ್ಯಾನ ಫ್ರಾನ್ಸಿಸ್ಕೊ, ರ್‍ಯಾಲೆ ಡುರ್ಹಾಮ್, ಆಸ್ಟಿನ್, ನ್ಯೂಯಾರ್ಕ ಮುಂತಾದೆಡೆ.

13. ಬ್ಯಾಂಕ ಆಫ್ ಅಮೆರಿಕಾ (Bank of America)

ಕಂಪನಿ ರೇಟಿಂಗ್: 3.5

ನೇಮಕಾತಿ ಹುದ್ದೆಗಳು: ಗ್ರಾಹಕ ಸೇವಾ ಪ್ರತಿನಿಧಿ, ಗ್ರಾಹಕ ಅಸೋಸಿಯೇಟ್, ಅನಾಲಿಸ್ಟ, ಎಕ್ಸೆಕ್ಯುಟಿವ ಅಸಿಸ್ಟಂಟ, ರಿಲೇಶನಶಿಪ್ ಮ್ಯಾನೇಜರ, ಗ್ರಾಹಕ ಬ್ಯಾಂಕಿಂಗ ಮಾರುಕಟ್ಟೆ ಮ್ಯಾನೇಜರ, ಟ್ರೆಜರಿ ಸೊಲುಶನ್ಸ್ ಅನಾಲಿಸ್ಟ, ಸಣ್ಣ ವ್ಯವಹಾರ ಸಲಹಾಗಾರ ಇತ್ಯಾದಿ.

ನೇಮಕಾತಿ ಸ್ಥಳಗಳು : ಟುಲ್ಸಾ, ವಿಲ್ಮಿಂಗ್ಟನ್, ನ್ಯೂಯಾರ್ಕ, ಪ್ಲೆಮೌತ್, ಗ್ರ್ಯಾಂಡ ರ್‍ಯಾಪಿಡ್ಸ್, ಡೆ ಮೊಯಿನ್ಸ್, ಸಿನ್ಸಿನಾಟ್ಟಿ, ಕ್ಲೀವಲ್ಯಾಂಡ, ಲೆಬನಾನ, ಫಿಲಡೆಲ್ಫಿಯಾ ಇತ್ಯಾದಿ.

14. ಚಿಪೋಟಲ್ (Chipotle)

ಕಂಪನಿ ರೇಟಿಂಗ್: 3.4

ನೇಮಕಾತಿ ಹುದ್ದೆಗಳು: ಡಿಸ್ಟ್ರಿಕ್ಟ ಮ್ಯಾನೇಜರ, ಕಿಚನ ಮ್ಯಾನೇಜರ, ಸರ್ವಿಸ ಮ್ಯಾನೇಜರ, ರೆಸ್ಟೊರೆಂಟ್ ಟೀಂ ಮೆಂಬರ, ಜನರಲ್ ಮ್ಯಾನೇಜರ, ರೆಸ್ಟೊರೆಂಟ್ ಶಿಫ್ಟ ಲೀಡರ ಇತ್ಯಾದಿ.

ನೇಮಕಾತಿ ಸ್ಥಳಗಳು : ಸ್ಯಾಂಡಿ, ವೊಬರ್ನ, ಪ್ಲೀಸಂಟ ಹಿಲ್, ಕಾನ್ಸಾಸ ಸಿಟಿ, ಎಸ್ತೆರೊ, ಕೊಲೊರಾಡೊ ಸ್ಪ್ರಿಂಗ್ಸ, ಫಿಲಡೆಲ್ಫಿಯಾ, ಅಲಾಮೆಡಾ, ಡೆನ್ವರ, ಮಿನ್ನಿಯಾಪೊಲೀಸ್, ಈಸ್ಟ ಪಾಯಿಂಟ, ಗಾರ್ನರ ಇತ್ಯಾದಿ.

15. ಲೋವೆಸ್ (Lowe's)

ಕಂಪನಿ ರೇಟಿಂಗ್: 3.3

ನೇಮಕಾತಿ ಹುದ್ದೆಗಳು: ಪ್ಲಂಬಿಂಗ ಅಸೋಸಿಯೇಟ್, ಕಮರ್ಶಿಯಲ್ ಸೇಲ್ಸ ಲೋಡರ, ಲುಂಬರ ಅಸೋಸಿಯೇಟ್, ಫ್ರಂಟ ಎಂಡ ಕ್ಯಾಶಿಯರ-ಸೀಸನಲ್, ಇಂಟರನೆಟ್ ನಿರ್ವಹಣೆ, ಸೀಸನಲ್ ಗ್ರಾಹಕ ಸೇವಾ ಸಹಕಾರಿ, ಡೆಲಿವರಿ ಪುಲ್ಲರ, ಸೇಲ್ಸ್ ಮ್ಯಾನೇಜರ ಇತ್ಯಾದಿ.

ನೇಮಕಾತಿ ಸ್ಥಳಗಳು: ವೆಸ್ಟಬರೋ, ಓಮಾಹಾ, ಮೂರ್ಸವಿಲೆ, ಸಿಲ್ವರಥೋರ್ನ, ಮ್ಯಾಡಿಸನ ಹೈಟ್ಸ್, ಸ್ಯಾನ ಫ್ರಾನ್ಸಿಸ್ಕೊ, ಯಾಂಕರ್ಸ, ಪ್ಯಾರಿಸ, ಅಲ್ಕೊವಾ, ರಿಜರಲ್ಯಾಂಡ, ಕೊಲಂಬಸ್ ಮುಂತಾದುವು.

English summary

15 More Companies That No Longer Require a Degree

With college tuition soaring nationwide, many Americans don’t have the time or money to earn a college degree.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more