For Quick Alerts
ALLOW NOTIFICATIONS  
For Daily Alerts

ಆಯುಷ್ಮಾನ್ ಭಾರತ್: ದತ್ತಾಂಶ ಗೌಪ್ಯತೆ ನೀತಿ ಹೊಂದಿರುವ ದೇಶದ ಮೊದಲ ಆರೋಗ್ಯ ಯೋಜನೆ

ದೇಶದ ಪ್ರಮುಖ ಆರೋಗ್ಯ ಯೋಜನೆ ಆಗಿರುವ ಆಯುಷ್ಮಾನ್ ಭಾರತ್ ಯೋಜನೆ ತನ್ನದೇಯಾದ ದತ್ತಾಂಶ ಗೌಪ್ಯತೆ ನೀತಿ ಹೊಂದಿರುವ ದೇಶದ ಮೊದಲ ಆರೋಗ್ಯ ಕಾರ್ಯಕ್ರಮವಾಗಿದೆ.

By Siddu
|

ದೇಶದ ಪ್ರಮುಖ ಆರೋಗ್ಯ ಯೋಜನೆ ಆಗಿರುವ ಆಯುಷ್ಮಾನ್ ಭಾರತ್ ಯೋಜನೆ ತನ್ನದೇಯಾದ ದತ್ತಾಂಶ ಗೌಪ್ಯತೆ ನೀತಿ ಹೊಂದಿರುವ ದೇಶದ ಮೊದಲ ಆರೋಗ್ಯ ಕಾರ್ಯಕ್ರಮವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನವನ್ನು ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂಬುದಾಗಿ ಕರೆಯುತ್ತಾರೆ.

ಆಯುಷ್ಮಾನ್ ಭಾರತ್ ಯೋಜನೆ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮದಿನ ಸೆಪ್ಟಂಬರ್ 25ರಂದು ಕಾರ್ಯರೂಪಕ್ಕೆ ಬರಲಿದೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಪಡೆಯಿರಿ

ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಏನಿದು ಆಯುಷ್ಮಾನ್ ಭಾರತ್ ಯೋಜನೆ?

ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ (ಎಬಿ-ಎನ್ಎಚ್ ಪಿಎಂ) ಭಾಗವಾಗಿರುವ ಆಯುಷ್ಮಾನ್ ಭಾರತ್ ಯೋಜನೆಯು 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಪ್ರಧಾನ ಮಂತ್ರಿ ಆರೋಗ್ಯ ಅಭಿಯಾನ ಮೊದಲ ಹಂತದಲ್ಲಿ ತ್ರಿಪುರ, ಛತ್ತೀಸ್‍ಗಢ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 70 ರಿಂದ 80 ಜಿಲ್ಲೆಗಳಲ್ಲಿ ಆರಂಭವಾಗಲಿದೆ.

ಸೆಪ್ಟಂಬರ್ 25ರಿಂದ ಯೋಜನೆ ಆರಂಭ

ಸೆಪ್ಟಂಬರ್ 25ರಿಂದ ಯೋಜನೆ ಆರಂಭ

ಆಯುಷ್ಮಾನ್ ಭಾರತ್ ಯೋಜನೆ ಪಂಡಿತ್ ದೀನ್ ದಯಾಳ ಉಪಾಧ್ಯಾಯರ ಜನ್ಮದಿನವಾದ ಸೆಪ್ಟಂಬರ್ 25ರಿಂದ ಜಾರಿಯಾಗಲಿದೆ. ಅಲ್ಲಿಯವರೆಗೆ ಬೇಕಾಗುವ ದಾಖಲಾತಿ ಹಾಗು ಇನ್ನಿತರ ಮಾಹಿತಿಯನ್ನು ತಿಳಿದುಕೊಂಡಿರುವುದು ಉತ್ತಮ.

ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು

ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು

ಫಲಾನುಭವಿಗಳು ಸಾಮಾನ್ಯ ದರ್ಜಯ ವಾರ್ಡ್ ಗಳಲ್ಲಿ ಶುಶ್ರೂಷೆ ಪಡೆಯಲಿದ್ದಾರೆ. ನೋಂದಣಿ ಶುಲ್ಕ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ, ಔಷಧಿಗಳು, ರೋಗಪತ್ತೆ ಪರೀಕ್ಷೆ (ಸ್ಕ್ಯಾನ್, ಎಕ್ಸರೇ) ವಿಮೆಯಡಿ ಸಿಗಲಿದೆ. ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗಲಿದ್ದು, ವಿಮೆ ಪಡೆದ ದಿನದಿಂದಲೇ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಧೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್, ಸರ್ಜರಿ
ಮಂಡಿ ಚಿಪ್ಪು ಅಳವಡಿಕೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

ಹೆಚ್ಚಿನ ಮಾಹಿತಿ/ನೋಂದಾಯಿಸಲು

ಹೆಚ್ಚಿನ ಮಾಹಿತಿ/ನೋಂದಾಯಿಸಲು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚ್ಇನ ಮಾಹಿತಿಗಳನ್ನು ಸೇರಿಸಲಾಗಿಲ್ಲ. https://abnhpm.gov.in/coming-soon and https://abnhpm.gov.in/
ಅಧಿಕೃತ ಅಂತರ್ಜಾಲ ತಾಣವನ್ನು ಸಂಪರ್ಕಿಸಿ "ಆನ್ಲೈನ್ ದಾಖಲಾತಿ" ಕೊಂಡಿಯನ್ನು ("Online Registration") ಕ್ಲಿಕ್ಕಿಸಿ. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದೇ ದಾಖಲಿಸಿ ಪೂರ್ಣವಾದ ಬಳಿಕ ಅರ್ಜಿಯನ್ನು ಸಲ್ಲಿಸಿ (Submit). ಈಗ ಅಂತರ್ಜಾಲ ತಾಣದಲ್ಲಿ ರಚನೆಗೊಂಡ ಅರ್ಜಿ ಸಂಖ್ಯೆ ಅಥವಾ ಉಲ್ಲೇಖ ಸಂಖ್ಯೆಯನ್ನು ತಪ್ಪಿಲ್ಲದೆ ಬರೆದಿಡಿ .

English summary

Ayushman Bharat: Becomes 1st healthcare scheme with privacy policy

Ayushman Bharat or Modicare, has become the first healthcare program in the country to have its own data privacy policy.
Story first published: Wednesday, August 29, 2018, 12:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X