For Quick Alerts
ALLOW NOTIFICATIONS  
For Daily Alerts

ಆರ್ಬಿಐ ಶಾಕಿಂಗ್ ನ್ಯೂಸ್! 100, 50ರ ನೋಟು ಪಡೆಯುವ ಮುನ್ನ ಚೆಕ್ ಮಾಡಿ..

ರೂ. 2000 ಹಾಗು ರೂ. 500 ನೋಟುಗಳ ವಹಿವಾಟು ಮಾಡುವಾಗ ಅದು ಅಸಲಿಯೋ ಇಲ್ಲವೆ ನಕಲಿಯೋ ಎಂಬುದನ್ನು ಪರೀಕ್ಷಿಸಿ ಪಡೆಯುತ್ತೆವೆ. ಆದರೆ ರೂ. 50, 100 ನೋಟುಗಳು ಪಡೆಯುವಾಗ ಅಸಲಿ/ನಕಲಿ ಬಗ್ಗೆ ಗಮನ ಹರಿಸುವುದಿಲ್ಲ.

By Siddu
|

ರೂ. 2000 ಹಾಗು ರೂ. 500 ನೋಟುಗಳ ವಹಿವಾಟು ಮಾಡುವಾಗ ಅದು ಅಸಲಿಯೋ ಇಲ್ಲವೆ ನಕಲಿಯೋ ಎಂಬುದನ್ನು ಪರೀಕ್ಷಿಸಿ ಪಡೆಯುತ್ತೆವೆ. ಆದರೆ ರೂ. 50, 100 ನೋಟುಗಳು ಪಡೆಯುವಾಗ ಅಸಲಿ/ನಕಲಿ ಬಗ್ಗೆ ಗಮನ ಹರಿಸುವುದಿಲ್ಲ. ಈ ಬಗ್ಗೆ ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ನಕಲಿ ನೋಟ್ ಹಾವಳಿ

ನಕಲಿ ನೋಟ್ ಹಾವಳಿ

50 ಹಾಗೂ 100 ರೂಪಾಯಿಯ ನೋಟುಗಳ ವಹಿವಾಟಿನ ಸಂದರ್ಭದಲ್ಲಿ ಯಾರೂ ಕೂಡ ಎಚ್ಚರಿಕೆ ವಹಿಸಿಕೊಳ್ಳದಿರುವುದರಿಂದ, ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು ರೂ. 50 ಹಾಗೂ 100 ನಕಲಿ ನೋಟುಗಳನ್ನು ಕಳೆದ ಸಾಲಿನಲ್ಲಿ ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡಲಾಗಿದೆ.

ಆರ್ಬಿಐ ವರದಿ

ಆರ್ಬಿಐ ವರದಿ

ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಅನ್ವಯ, ಕಳೆದ ವರ್ಷ 5,22,783 ನಕಲಿ ನೋಟು ಸಿಕ್ಕಿವೆ. ಅದರಲ್ಲಿ ಶೇ. 63.9 ರಷ್ಟು ನಕಲಿ ನೋಟುಗಳನ್ನು ಬ್ಯಾಂಕುಗಳಲ್ಲಿ ಹಿಡಿಯಲಾಗಿದೆ. 2017-2018 ರಲ್ಲಿ ನಕಲಿ ರೂ. 100 ನೋಟುಗಳ ಪ್ರಮಾಣದಲ್ಲಿ ಶೇ. 35 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರರ ರು. 50 ನಕಲಿ ನೋಟಿನಲ್ಲಿ ಶೇ. 154.3 ರಷ್ಟು ಏರಿಕೆಯಾಗಿದೆ.

ನಕಲಿ ನೋಟುಗಳ ಏರಿಕೆ ಪ್ರಮಾಣ

ನಕಲಿ ನೋಟುಗಳ ಏರಿಕೆ ಪ್ರಮಾಣ

2016-17ರ ವರ್ಷದಲ್ಲಿ, 50 ರ ನಕಲಿ ನೋಟುಗಳ ಸಂಖ್ಯೆ 9,222 ಆಗಿತ್ತು, ಇದು 2017-18ರಲ್ಲಿ 23,447 ಕ್ಕೆ ಏರಿದೆ.
ಅದೇ ರೀತಿ, 2016-17ರಲ್ಲಿ 100 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆ 1,77,195 ಆಗಿತ್ತು. ಇದು 2017-18ರಲ್ಲಿ 239,182 ಕ್ಕೆ ಏರಿಕೆ ಕಂಡಿದೆ. ಅಂದರೆ ನಕಲಿ ನೋಟುಗಳ ಪ್ರಮಾಣ ಭಾರೀ ಏರಿಕೆಯಾಗಿರುವುದು ಚಿಂತಾಜನಕವಾಗಿದೆ.

Read more about: rbi notes money banking finance news
English summary

RBI: Counterfeit note-of Rs-50, 100 increased by 154% in 2017-18

RBI report says Counterfeit note-of Rs-50, 100 increased by 154% in 2017-18.
Story first published: Thursday, August 30, 2018, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X