'ಚೀನಾ ಮತ್ತು ಯುಎಸ್ಎ ವ್ಯಾಪಾರ ಯುದ್ದ' ಅತೀಹೆಚ್ಚು ಅಪಾಯದಲ್ಲಿರುವ 10 ದೇಶಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಜಾಗತಿಕವಾಗಿ ವ್ಯಾಪಾರ ಯುದ್ದ (trade war) ಅತೀ ಕೆಟ್ಟ ದುಷ್ಪರಿಣಾಮ ಬೀರುತ್ತಿದೆ. ಚೀನಾ ಮತ್ತು ಯುಎಸ್ಎ ನಡುವಿನ ವ್ಯಾಪಾರ ಯುದ್ದ ಜಗತ್ತಿನ ಚಿಕ್ಕ, ದೊಡ್ಡ ಹೀಗೆ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ.

  ಜಾಗತಿಕ ಮೌಲ್ಯ, ವ್ಯಾಪಾರ ವಹಿವಾಟುಗಳಿಗಾಗಿ ದೇಶಗಳು ಸರಪಳಿಯಂತೆ ಕಾರ್ಯನಿರ್ವಹಿಸುತ್ತವೆ.
  ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ದೇಶಗಳು ಇತರೆ ದೇಶಗಳಿಗಿಂತ ಹೆಚ್ಚು ಅಪಾಯದ ಸ್ಥಿತಿಯಲ್ಲಿವೆ. ಆದರೆ ಕಚ್ಚಾವಸ್ತುಗಳನ್ನು ಬಳಸಿ ಸರಕುಗಳ ಉತ್ಪಾದನೆ ಮಾಡಿ ರಪ್ತು ಮಾಡುವ ದೇಶಗಳು ಪ್ರಾಬಲ್ಯ ಸಾಧಿಸುತ್ತವೆ. ಚೀನಾ-ಅಮೇರಿಕಾ ಟ್ರೇಡ್ ವಾರ್: ಭಾರತದ ಮೇಲಾಗುವ ಪರಿಣಾಮಗಳೇನು?

  ಒಟ್ಟಾರೆಯಾಗಿ ಜಾಗತಿಕ ವ್ಯಾಪಾರ ಯುದ್ಧದ ಸಂದರ್ಭದಲ್ಲಿ ಅಗ್ರ 10 ದೇಶಗಳು ಅಪಾಯದಲ್ಲಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ. (ಇಲ್ಲಿ ಶೇಕಡಾವಾರು ಎಂಬುದು ದೇಶದ ರಫ್ತುಗಳು ಎಷ್ಟು ಪ್ರಮಾಣದಲ್ಲಿ ಜಾಗತಿಕ ಪೂರೈಕೆ ಸರಪಳಿಗಳ ಭಾಗವಾಗಿದೆ ಎಂಬುದನ್ನು ತೋರಿಸುತ್ತದೆ.)

  10. ಐರ್ಲೆಂಡ್: 59.2%

  ದೇಶವು ಯುರೋಪ್ ನಲ್ಲಿ ಗೂಗಲ್ ಎಚ್ಕ್ಯೂ (Google HQ) ನೆಲೆಯಾಗಿದೆ. ಇದರ ಆರ್ಥಿಕತೆಯು ಹೈ-ಟೆಕ್ ಮತ್ತು ಬ್ಯಾಂಕಿಂಗ್ ಸೇವೆಗಳಿಂದ ಪ್ರಾಬಲ್ಯ ಹೊಂದಿದೆ. ಇದು ವಿದೇಶಿ ನೇರ ಹೂಡಿಕೆಗೆ ಮುಂಚೂಣಿಯಲ್ಲಿದ್ದು, ಜಾಗತಿಕ ಆರ್ಥಿಕತೆಯ ಏರುಪೇರುಗಳಿಗೆ ಗುರಿಯಾಗುತ್ತದೆ. ಜಗತ್ತಿನ ಈ 10 ದೇಶಗಳ ಆರ್ಥಿಕತೆ ತುಂಬಾ ಅಪಾಯದಲ್ಲಿದೆ!

  9. ಐಸ್ಲ್ಯಾಂಡ್: 59.3%

  ಈ ಪಟ್ಟಿಯಲ್ಲಿರುವ ಇತರ ದೇಶಗಳಂತೆ, ಐಸ್ಲ್ಯಾಂಡ್ ಮಾರುಕಟ್ಟೆಯ ಚಂಚಲತೆ ಹಿನ್ನೆಲೆಯಲ್ಲಿ ತುಲನಾತ್ಮಕವಾಗಿ ತುಂಬಾ ಚಿಕ್ಕದಾಗಿದ್ದು, ಸೂಕ್ಷ್ಮವಾಗಿರುತ್ತದೆ. ಇದು ಪ್ರವಾಸೋದ್ಯಮ, ಮೀನು ಸಂಸ್ಕರಣೆ ಮತ್ತು ಅಲ್ಯೂಮಿನಿಯಂ ಸ್ಮೆಲ್ಟಿಂಗ್ ನಂತಹ ಪ್ರಮುಖ ಕೈಗಾರಿಕೆಗಳನ್ನು ಒಳಗೊಂಡಿದೆ. ಇದರ ಹೆಚ್ಚಿನ ರಫ್ತುಗಳು ಇಯು, ಯುಎಸ್ ಮತ್ತು ಜಪಾನ್ ದೇಶಗಳಿಗೆ ಹೋಗುತ್ತದೆ.

  8. ಮಲೇಷ್ಯಾ: 60.4%

  ಚೀನಾವು ಮಲೆಷ್ಯಾದ ಅತಿ ದೊಡ್ಡ ವ್ಯಾಪಾರಿ ಪಾಲುದಾರವಾಗಿದ್ದು, ಇದು ಸಂಭಾವ್ಯವಗಿ ವ್ಯಾಪಾರ ಯುದ್ಧಕ್ಕೆ ಗುರಿಯಾಗುತ್ತದೆ. ತವರ, ರಬ್ಬರ್, ಪಾಮ್ ಎಣ್ಣೆ ಮತ್ತು ಹಣಕಾಸು ಪ್ರಮುಖ ಕೈಗಾರಿಕೆಗಳಾಗಿವೆ.

  7. ಸಿಂಗಾಪುರ್: 61.6%

  ಹೆಚ್ಚು ಅಭಿವೃದ್ಧಿ ಹೊಂದಿರುವ ಸಿಂಗಾಪುರ್ ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಗೆ ವಿಶ್ವದಲ್ಲೇ ಅತ್ಯಂತಪ್ರಮುಖವಾಗಿದೆ. ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು ಮತ್ತು ಹಣಕಾಸು ಸೇವೆಗಳನ್ನು ರಫ್ತು ಮಾಡುತ್ತದೆ. ಸಿಂಗಾಪುರ್ ಮತ್ತು ಚೀನಾ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್ ಗಿಂತ ಹೆಚ್ಚಿದೆ.

  6. ದಕ್ಷಿಣ ಕೊರಿಯಾ: 62.1%

  ದಕ್ಷಿಣ ಕೊರಿಯಾ ವಿಶ್ವದಲ್ಲಿ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ವಿದ್ಯುತ್ ಯಂತ್ರಗಳು, ಕಾರುಗಳು, ಉಕ್ಕು ಮತ್ತು ಹಡಗುಗಳನ್ನು ಉತ್ಪಾದಿಸುತ್ತದೆ. ಯುಎಸ್, ಚೀನಾ, ಮತ್ತು ಸಿಂಗಾಪುರ್ ಇದರ ಅಗ್ರ ವ್ಯಾಪಾರ ಪಾಲುದಾರರು.

  5. ಜೆಕ್ ಗಣರಾಜ್ಯ: 64.7%

  ಇದರ ಪ್ರಮುಖ ವ್ಯಾಪಾರಿ ಪಾಲುದಾರರು ಜರ್ಮನಿ ಮತ್ತು ಇತರ EU ದೇಶಗಳಾಗಿವೆ. ಆದರೆ ಹೈಟೆಕ್ ಎಂಜಿನಿಯರಿಂಗ್ ನಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ. 2050ರಲ್ಲಿ ಪ್ರಪಂಚ ಆಳುವ ದೇಶಗಳು

  4. ಹಂಗೇರಿ: 65.1%

  ಹಂಗೇರಿ ವಿದೇಶಿ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾಗಿರುವ ರಫ್ತು-ಆಧಾರಿತ ಮಾರುಕಟ್ಟೆಯ ಆರ್ಥಿಕತೆಯನ್ನು ಹೊಂದಿದೆ. ಕೃಷಿ, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರಾಸಾಯನಿಕಗಳು ಎಲ್ಲಾ ಪ್ರಮುಖ ಉದ್ಯಮಗಳಾಗಿವೆ.

  3. ಸ್ಲೋವಾಕ್ ಗಣರಾಜ್ಯ: 67.3%

  ಸ್ಲೋವಾಕಿಯಾವು ಪ್ರಬಲ ಸೇವೆಗಳು, ಭಾರೀ ಉದ್ಯಮ ಮತ್ತು ಕೃಷಿ ವಲಯಗಳನ್ನು ಹೊಂದಿದೆ. ಅದರ ವಿದೇಶಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ವ್ಯಾಪಾರ ಯುದ್ಧವು ತೀವ್ರ ಪರಿಣಾಮ ಬೀರಬಹುದು.

  2. ತೈವಾನ್: 67.6%

  ವಿಶ್ವದಲ್ಲಿಯೇ ಅತೀ ಜಾಗತೀಕರಣಗೊಂಡಿರುವ ತೈವಾನ್ ಬಂಡವಾಳ ಮತ್ತು ತಂತ್ರಜ್ಞಾನ-ತೀವ್ರತೆಯ ಆರ್ಥಿಕತೆ ಹೊಂದಿದೆ. ಇದರ ಪ್ರಮುಖ ರಫ್ತುಗಳಲ್ಲಿ ಅರೆವಾಹಕಗಳು, ಕಂಪ್ಯೂಟರ್ ಮತ್ತು ಪ್ಲಾಸ್ಟಿಕ್ ಗಳಂತಹ ವಿದ್ಯುತ್ ಯಂತ್ರಗಳು ಸೇರಿವೆ. ಜಾಗತಿಕ ಆರ್ಥಿಕ ಕುಸಿತಕ್ಕೆ ತೈವಾನ್ ಕುಖ್ಯಾತವಾಗಿದೆ.

  1. ಲಕ್ಸೆಂಬರ್ಗ್: 70.8%

  ಲಕ್ಸೆಂಬರ್ಗ್ ಪ್ರಮುಖವಾಗಿ ಬ್ಯಾಂಕಿಂಗ್, ಮಾಹಿತಿ ಸೇವೆಗಳು, ಉಕ್ಕು ಮತ್ತು ಇತರ ಕೈಗಾರಿಕಾ ಉತ್ಪನ್ನ ವ್ಯಾಪಾರ ಒಳಗೊಂಡಿದೆ. ಯೂರೋಪಿನ ಅತೀ ಸಣ್ಣ ದೇಶವಾಗಿರುವ ಇದು, ಕತಾರ್ ನಂತರದ ಎರಡನೇ ಅತಿ ಹೆಚ್ಚು GDP ಯನ್ನು ಹೊಂದಿದೆ. ಇದು ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ.

  English summary

  Trade War between the US and China, These 10 countries most at risk

  A trade war between China and the US could impact smaller, global countries more severely than either of the two countries at the heart of the trade dispute.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more