For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್ ಸೌಲಭ್ಯ: ನಿಮಗೆ ಗೊತ್ತಿರಬೇಕಾದ ಸಂಗತಿಗಳೇನು?

ನೀವು ತತ್ ಕ್ಷಣದಲ್ಲಿ ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಬೇಕಿಂದಿದ್ದರೆ ಎಸ್‌ಬಿಐ ಬ್ಯಾಂಕ್ ತ್ವರಿತ ಪರಿಹಾರವನ್ನು ನೀಡುತ್ತಿದೆ.

|

ನೀವು ತತ್ ಕ್ಷಣದಲ್ಲಿ ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಬೇಕಿಂದಿದ್ದರೆ ಎಸ್‌ಬಿಐ ಬ್ಯಾಂಕ್ ತ್ವರಿತ ಪರಿಹಾರವನ್ನು ನೀಡುತ್ತಿದೆ.

ದೇಶದಾದ್ಯಂತ 22,500 ಶಾಖೆಗಳು ಹಾಗೂ 59,000 ಎಟಿಎಂಗಳು ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್ (ಐಎಂಟಿ) ಸೌಲಭ್ಯವನ್ನು ಒದಗಿಸುತ್ತಿವೆ.
ಡೆಬಿಟ್ ಕಾರ್ಡ್ ಇಲ್ಲದೆ ಅವನು/ಅವಳು ಈ ಸೌಲಭ್ಯ ಪಡೆಯಬಹುದಾಗಿದ್ದು, ಫಲಾನುಭವಿಯ ಮೊಬೈಲ್ ಸಂಖ್ಯೆ, ಹೆಸರು ಮತ್ತು ವಿಳಾಸ ಮಾತ್ರ ಕಳುಹಿಸುವವರಿಗೆ ತಿಳಿದಿರಬೇಕು.

ಇಲ್ಲಿವೆ ಎಸ್‌ಬಿಐ ಸೇವೆಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ..

ಎಸ್ಬಿಐ ಮನಿ ಟ್ರಾನ್ಸ್ಫರ್

ಎಸ್ಬಿಐ ಮನಿ ಟ್ರಾನ್ಸ್ಫರ್

ಮೊದಲು ನೀವು ಎಸ್‌ಬಿಐ ಸಿಸ್ಟಂನಲ್ಲಿ ಫಲಾನುಭವಿ (ಬೆನಿಫಿಶರಿ) ಯನ್ನು ನೋಂದಾಯಿಸಬೇಕು. ಫಲಾನುಭವಿಯು ಪೂರ್ತಿ ಮೊತ್ತವನ್ನು ಒಂದೇ ವಹಿವಾಟಲ್ಲಿ ವಿತ್‌ಡ್ರಾ ಮಾಡಬೇಕು. ಭಾಗಶಃ ವಿತ್‌ಡ್ರಾಕ್ಕೆ ಅವಕಾಶವಿರುವುದಿಲ್ಲ.

ಎಸ್‌ಬಿಐ ಐಎಂಟಿ (SBI IMTs) ಮಾಡುವ ಗ್ರಾಹಕರು ಫಲಾನುಭವಿಯ ಹೆಸರು ಹಾಗೂ ವಿಳಾಸವನ್ನು ಎಸ್ಎಂಎಸ್ (567676) ಮೂಲಕ ಒದಗಿಸಬೇಕು. ಎಸ್ಎಂಎಸ್ ಈ ರೀತಿ ಕಳುಹಿಸಬೇಕು: BREG 9912345678+BENEFICIARY NAME+PLACE+400706
ಅಂದರೆ, ಫಲಾನುಭವಿಯ ಮೊಬೈಲ್ ಸಂಖ್ಯೆ, ಬೆನಿಫಿಶರಿಯ ಹೆಸರು, ಬೆನಿಫಿಶರಿಯ ಸ್ಥಳ ಹಾಗೂ ಸ್ಥಳದ ಪಿನ್ ಕೋಡ್.

ವಹಿವಾಟು ಮಿತಿ

ವಹಿವಾಟು ಮಿತಿ

ಎಸ್ಬಿಐ ಐಎಂಟಿ ಮೂಲಕ ಒಂದು ಬಾರಿಗೆ ಕನಿಷ್ಠ ರೂ. 100 ಹಾಗೂ ಗರಿಷ್ಠ ರೂ. 10,000 ವಹಿವಾಟು ನಡೆಸಬಹುದಾಗಿದೆ. ಪ್ರತಿ ಫಲಾನುಭವಿಗೆ ಮಾಸಿಕ ಮಿತಿ ರೂ. 25,000 ಆಗಿದೆ. ಒಬ್ಬ ವ್ಯಕ್ತಿ ತಿಂಗಳಿಗೆ ಗರಿಷ್ಠ ರೂ. 50,000 ಕಳುಹಿಸಬಹುದು. ಹೆಚ್ಚೆಂದರೆ ಗರಿಷ್ಠ 10 ಫಲಾನುಭವಿಗಳಿಗೆ ಎಸ್ಬಿಐ ಐಎಂಟಿ ಮೂಲಕ ಹಣ ಕಳುಹಿಸಬಹುದು.

ಸೇವಾ ಶುಲ್ಕ

ಸೇವಾ ಶುಲ್ಕ

ಎಸ್ಬಿಐ ಐಎಂಟಿ ಮೂಲಕ ನಡೆಸಲ್ಪಡುವ ಪ್ರತಿ ವಹಿವಾಟಿ ಮೇಲಿನ ಹಣ ರವಾನಿಸುವ ವ್ಯಕ್ತಿಗೆ ರೂ. 25 ಶುಲ್ಕ ವಿಧಿಸಲಾಗುತ್ತದೆ. ಫಲಾನುಭವಿಗೆ ಯಾವುದೇ ಶುಲ್ಕವಿರುವುದಿಲ್ಲ.

Read more about: sbi interest rates money
English summary

SBI Instant Money Transfer Facility: Know these things..

SBI or State Bank of India offers a facility of instant money transfer (IMT) via which you can transfer money instantly.
Story first published: Saturday, September 15, 2018, 16:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X