For Quick Alerts
ALLOW NOTIFICATIONS  
For Daily Alerts

ರಾಜ್ಯದ ಜನತೆಗೆ ಸಿಹಿಸುದ್ದಿ, ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ ರೂ. 2 ಇಳಿಕೆ

ಕಲಬುರ್ಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸಮ್ಮಿಶ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ ರೂ. ೨ ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸಲು ನಿರ್ಧರಿಸಲಾಗಿದೆ ಎಂ

|

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸಕಾ್ರ ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದೆ. ಸತತ ಗಗನಮುಖಿಯಾಗಿ ಏರುತ್ತಿರುವ ತೈಲ ದರದಿಂದಾಗಿ ವಾಹನ ಸವಾರರು ಬೇಸತ್ತು ಹೋಗಿರುವ ಹಿನ್ನೆಲೆಯಲ್ಲಿ
ಕೇಂದ್ರ, ರಾಜ್ಯ ಸರ್ಕಾರಗಳು ಜನರ ಆಕ್ರೋಶಕ್ಕೆ ಒಳಗಾಗಿದ್ದವು. ರಾಜ್ಯದಲ್ಲಿ ತೈಲ ದರ ರೂ. 2 ಇಳಿಕೆ ಮಾಡುವುದಾಗಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಸದ್ಯಕ್ಕೆ ಟಿವಿ, ಫ್ರಿಡ್ಜ್ ಬೆಲೆ ಏರಿಕೆ ಇಲ್ಲ, ಯಾಕೆ ಗೊತ್ತಾ?

ಪ್ರತಿ ಲೀಟರ್ ದರ 2 ರೂ. ಇಳಿಕೆ

ಪ್ರತಿ ಲೀಟರ್ ದರ 2 ರೂ. ಇಳಿಕೆ

ಕಲಬುರ್ಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸಮ್ಮಿಶ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ ರೂ. ೨ ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಸಾರ್ವಜನಿಕರ ಒತ್ತಾಯ

ಸಾರ್ವಜನಿಕರ ಒತ್ತಾಯ

ಕಳೆದ ಕೆಲ ದಿನಗಳಿಂದ ಸತತವಾಗಿ ತೈಲ ದರಗಳು ಏರುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೈಲ ದರಗಳ
ಮೇಲಿನ ಸೆಸ್ ಇಳಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ರೂ. 2 ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ರಾಜಸ್ಥಾನ, ಆಂಧ್ರದಲ್ಲೂ ಕಡಿತ

ರಾಜಸ್ಥಾನ, ಆಂಧ್ರದಲ್ಲೂ ಕಡಿತ

ರಾಜಸ್ಥಾನದ ವಸುಂಧರಾ ರಾಜೇ ಸರ್ಕಾರವೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಪ್ರತಿ ಲೀಟರ್ ಗೆ ರೂ. 2 ಕಡಿತವನ್ನು ಪ್ರಕಟಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೈಲ ತೆರಿಗೆಯನ್ನು ಕಡಿತಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಪಕ್ಷಗಳು ದೇಶದಾದ್ಯಂತ ಭಾರತ ಬಂದ್ ಮಾಡಿದ್ದವು.

ತೈಲ ಬೆಲೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆಗೆ ಕಾರಣ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 84.59/ಲೀಟರ್
ಡೀಸೆಲ್: 76.16/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 84.7/ಲೀಟರ್
ಡೀಸೆಲ್: 76.22/ಲೀಟರ್

ಧಾರವಾಡ:
ಪೆಟ್ರೋಲ್: 84.7/ಲೀಟರ್
ಡೀಸೆಲ್: 76.22/ಲೀಟರ್

ಮೈಸೂರು:
ಪೆಟ್ರೋಲ್: 84.46/ಲೀಟರ್
ಡೀಸೆಲ್: 75.98/ಲೀಟರ್

ಮಂಗಳೂರು:
ಪೆಟ್ರೋಲ್: 84/ಲೀಟರ್
ಡೀಸೆಲ್: 75.55/ಲೀಟರ್

ಬೆಳಗಾವಿ:
ಪೆಟ್ರೋಲ್: 84.84/ಲೀಟರ್
ಡೀಸೆಲ್: 76.29/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 89.29/ಲೀಟರ್
ಡೀಸೆಲ್: 78.26/ಲೀಟರ್

ದೆಹಲಿ:
ಪೆಟ್ರೋಲ್: 82.06/ಲೀಟರ್
ಡೀಸೆಲ್: 73.72/ಲೀಟರ್

ಚೆನ್ನೈ:
ಪೆಟ್ರೋಲ್: 83.91/ಲೀಟರ್
ಡೀಸೆಲ್: 77.94/ಲೀಟರ್

ಹೈದರಾಬಾದ್:
ಪೆಟ್ರೋಲ್: 87.01/ಲೀಟರ್
ಡೀಸೆಲ್: 80.25/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 83.91/ಲೀಟರ್
ಡೀಸೆಲ್: 75.63/ಲೀಟರ್

ಗುವಾಹಟಿ:
ಪೆಟ್ರೋಲ್: 84.59/ಲೀಟರ್
ಡೀಸೆಲ್: 77.23/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 81.37/ಲೀಟರ್
ಡೀಸೆಲ್: 79.36/ಲೀಟರ್

ಜೈಪುರ:
ಪೆಟ್ರೋಲ್: 82.64/ಲೀಟರ್
ಡೀಸೆಲ್: 76.12/ಲೀಟರ್

ಪಣಜಿ:
ಪೆಟ್ರೋಲ್: 75.70/ಲೀಟರ್
ಡೀಸೆಲ್: 75.18ಲೀಟರ್

ಲಖನೌ:
ಪೆಟ್ರೋಲ್: 81.63/ಲೀಟರ್
ಡೀಸೆಲ್: 73.9/ಲೀಟರ್

English summary

Karnataka Announces Rs. 2-Cut For Petrol, Diesel

Karnataka Chief Minister HD Kumaraswamy today announced that his government is reducing the prices of petrol and diesel by Rs. 2.
Story first published: Monday, September 17, 2018, 12:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X