For Quick Alerts
ALLOW NOTIFICATIONS  
For Daily Alerts

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಹಾಗು 2 ಲಕ್ಷದವರೆಗೆ ವಿಮಾ ಸೌಲಭ್ಯ

14 ಲಕ್ಷ ಅಂಗನವಾಡಿ ಕಾರ್ಮಿಕರಿಗೆ ಗೌರವಧನ ತಿಂಗಳಿಗೆ ರೂ. 3,000 ರಿಂದ ರೂ. 4,500ಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ, ಅಂಗನವಾಡಿ ಸಹಾಯಕರ ಗೌರವಧನ ತಿಂಗಳಿಗೆ ರೂ. 1,500 ರಿಂದ 2,250 ಕ್ಕೆ ಹೆಚ್ಚಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ

|

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಶೀಘ್ರದಲ್ಲಿಯೇ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಅಪಘಾತ ವಿಮೆ ಹಾಗು ಇನ್ನಿತರ ಪ್ರಯೋಜನ ಸಿಗಲಿದೆ. ಕಳೆದ ತಿಂಗಳು ಪ್ರಧಾನಿ ಮೋದಿಯವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ ಶೇ. 50 ಕ್ಕೂ ಹೆಚ್ಚು ಏರಿಕೆ ಮಾಡುವುದಾಗಿ ಘೋಷಿಸಿದರು. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಗೌರವಧನ ಹೆಚ್ಚಳ

ಗೌರವಧನ ಹೆಚ್ಚಳ

14 ಲಕ್ಷ ಅಂಗನವಾಡಿ ಕಾರ್ಮಿಕರಿಗೆ ಗೌರವಧನ ತಿಂಗಳಿಗೆ ರೂ. 3,000 ರಿಂದ ರೂ. 4,500ಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ, ಅಂಗನವಾಡಿ ಸಹಾಯಕರ ಗೌರವಧನ ತಿಂಗಳಿಗೆ ರೂ. 1,500 ರಿಂದ 2,250 ಕ್ಕೆ ಹೆಚ್ಚಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದಾರೆ. ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ 6 ಸಾವಿರ ಹಣ, ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

2 ಲಕ್ಷದವರೆಗೆ ಅಪಘಾತ ವಿಮೆ

2 ಲಕ್ಷದವರೆಗೆ ಅಪಘಾತ ವಿಮೆ

ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ (ಪಿಎಂಜೆಜೆವೈ) ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ(ಪಿಎಂಎಸ್ಬಿವೈ) ಅನುಕ್ರಮವಾಗಿ ರೂ. 2 ಲಕ್ಷದವರೆಗೆ ಜೀವನ ಮತ್ತು ಅಪಘಾತ ವಿಮೆ ಸಿಗಲಿದೆ. ಪಿಎಂಜೆಜೆವೈ ವಾರ್ಷಿಕ ವಿಮಾ ಪ್ರೀಮಿಯಂ ಮೊತ್ತ 330 ಮತ್ತು ಪಿಎಂಎಸ್ಬಿವೈ ಪ್ರೀಮಿಯಂ ಮೊತ್ತ ರೂ. 12.

ಅಸಂಘಟಿತ ವಲಯ
 

ಅಸಂಘಟಿತ ವಲಯ

ಪ್ರಧಾನಿ ನರೇಂದ್ರ ಮೋದಿ 40 ಕೋಟಿ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿದ್ದಾರೆ. ಅವರ ಜೀವನಮಟ್ಟವನ್ನು ಸುಧಾರಣೆಗೆ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

ಕಾರ್ಮಿಕರ ಕಲ್ಯಾಣ

ಕಾರ್ಮಿಕರ ಕಲ್ಯಾಣ

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ (construction workers) ಕಲ್ಯಾಣಕ್ಕಾಗಿ 40,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಈ ನಿಧಿಯನ್ನು ಸುಮಾರು 5 ಕೋಟಿ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯಗಳಿಂದ ಬಳಸಲಾಗುತ್ತಿದೆ. ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಕಾ್ರ ಕಾಳಜಿ ವಹಿಸಿದೆ.

ರೋಜಗಾರ್ ಪ್ರೋತ್ಸಾಹನ್ ಯೋಜನೆ

ರೋಜಗಾರ್ ಪ್ರೋತ್ಸಾಹನ್ ಯೋಜನೆ

ಪ್ರಧಾನ ಮಂತ್ರಿ ರೋಜಗಾರ್ ಪ್ರೋತ್ಸಾಹನ್ ಯೋಜನೆ ಮೂಲಕ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಸಚಿವಾಲಯವು ಪ್ರಯತ್ನಗಳನ್ನು ಮಾಡುತ್ತಿದೆ. ಸುಮಾರು 87,000 ಸಂಘಟನೆಗಳ ಸುಮಾರು 72 ಲಕ್ಷ ಉದ್ಯೋಗಿಗಳಿಗೆ ಇಪಿಎಫ್ ಕೊಡುಗೆಗಾಗಿ ಸರ್ಕಾರ ರೂ. 1,744 ಕೋಟಿ ಖರ್ಚು ಮಾಡಿದೆ.

English summary

Anganwadi and Asha workers to get Pay Hike

The honorarium of 14 lakh Anganwadi workers have been increased from Rs 3,000 per month to Rs 4,500 per month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X