For Quick Alerts
ALLOW NOTIFICATIONS  
For Daily Alerts

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ, ಗರ್ಭಿಣಿಯರ ಖಾತೆಗೆ ಹಣ

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಮೂಲಕ ಬಿಪಿಎಲ್ ಕುಟುಂಬದ ಗರ್ಭಿಣಿಯರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಸಮ್ಮಿಶ್ರ ಸರ್ಕಾರದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

|

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಮೂಲಕ ಬಿಪಿಎಲ್ ಕುಟುಂಬದ ಗರ್ಭಿಣಿಯರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಸಮ್ಮಿಶ್ರ ಸರ್ಕಾರದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಘೋಷಣೆ ಮಾಡಿದ್ದರು.

ಈ ಯೋಜನೆ ಮೂಲಕ ಹೆರಿಗೆ ಪೂರ್ವದ ಮೂರು ತಿಂಗಳು ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರದಂತೆ ಹಣ ಸಿಗಲಿದೆ. ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ 6 ಸಾವಿರ ಹಣ, ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

ಒಟ್ಟು 6000 ಸಹಾಯಧನ

ಒಟ್ಟು 6000 ಸಹಾಯಧನ

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ (Mathru shree scheme) ಮುಖಾಂತರ ಫಲಾನುಭವಿಗಳು ಒಟ್ಟು ರೂ. ೬೦೦೦ ಪಡೆಯಲಿದ್ದಾರೆ. ಇದನ್ನು ಎರಡು ಹಂತದಲ್ಲಿ ಅಂದರೆ ಹೆರಿಗೆ ಪೂರ್ವದ ಮೂರು ತಿಂಗಳು ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ಒಟ್ಟು ಆರು ಸಾವಿರ ನೀಡಲಾಗುತ್ತದೆ. ಮಾತೃಶ್ರೀ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ರೂ. 350 ಕೋಟಿಗಳನ್ನು ಮೀಸಲಿ ಇಡಲಾಗಿದೆ. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ಈ ಮೊತ್ತವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಕೆ ಹೇಗೆ?

ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ನೀವು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.

ಬೇಕಾಗುವ ದಾಖಲಾತಿಗಳು

ಬೇಕಾಗುವ ದಾಖಲಾತಿಗಳು

ತಾಯಿ ಕಾರ್ಡ್
ಆಧಾರ್ ಕಾರ್ಡ್
ಚುನಾವಣಾ ಚೀಟಿ
ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ
ಪತಿಯ ಆಧಾರ್ ಮತ್ತು ಚುನಾವಣಾ ಚೀಟಿ

English summary

Cabinet approves Mathru shree Scheme, How to apply

The Cabinet has approved a plan to transfer funds to the bank account of the BPL family through the Chief Minister's Mathru shree Scheme.
Story first published: Saturday, September 22, 2018, 13:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X