For Quick Alerts
ALLOW NOTIFICATIONS  
For Daily Alerts

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

|

ನಮ್ಮ ದೇಶದಲ್ಲಿ ಶ್ರೀಮಂತಿಕೆ, ಸಂಪತ್ತು, ಬಡತನ, ನಷ್ಟ ಹೀಗೆ ಹಲವಾರು ಸಂಗತಿಗಳು ವಾಸ್ತುಶಾಸ್ತ್ರದೊಂದಿಗೆ ಬೆಸೆದುಕೊಂಡಿದೆ. ಹಣ ಕಳೆದುಕೊಂಡಿರುವವರು ಇಲ್ಲವೇ ನಷ್ಟ ಎದುರಿಸುತ್ತಿರುವವರು ವಾಸ್ತುದೋಷದ ಬಗ್ಗೆ ಮಾತನಾಡುವುದನ್ನು ನಾವು ಕೇಳಿದ್ದೇವೆ.

ಪ್ರತಿಯೊಬ್ಬರ ಹಣ, ಸಂಪತ್ತು, ನೆಮ್ಮದಿ, ಸಂತಸ ವೃದ್ದಿಯಲ್ಲಿ ಮನೆಯ ಪಾತ್ರ ತುಂಬಾ ದೊಡ್ಡದು. ಮನೆಯ ನಾಲ್ಕು ಗೋಡೆಗಳಲ್ಲಿರುವ ಶಕ್ತಿಯೇ ಅದೃಷ್ಟ ಮತ್ತು ದುರಾದೃಷ್ಟಕ್ಕೆ ಕಾರಣ ಎಂದು ನಂಬುವವರು ಇದ್ದಾರೆ.

ಪರ್ಸ್/ವಾಲೆಟ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ...

ಹಾಗಿದ್ದರೆ ಯಾವ ವಸ್ತುಗಳು ಮನೆಯಲ್ಲಿರಬೇಕು, ಯಾವ ವಸ್ತುಗಳು ಇರಬಾರದು ಎಂಬುದನ್ನು ನೋಡೋಣ ಬನ್ನಿ...

ಹರಿದ/ಹಾಳಾದ ವಾಲೆಟ್, ಪರ್ಸ್
 

ಹರಿದ/ಹಾಳಾದ ವಾಲೆಟ್, ಪರ್ಸ್

ನಿಮ್ಮ ಬಳಿಯಿರುವ ಪರ್ಸ್ ಅಥವಾ ವಾಲೆಟ್ ಹರಿದು ಹೋಗಿದೆಯೆ/ಹಳೆಯದಾಗಿದೆಯೆ ನೋಡಿ. ನೀವು ಹಣ ಇಡುವ ಪರ್ಸ್/ವಾಲೆಟ್ ಒಳ್ಳೆಯ ಸ್ಥಿತಿಯಲ್ಲಿರಬೇಕು. ತುಕ್ಕು ಹಿಡಿದಿರಬಾರದು, ಮುರಿದು ಹೋಗಿರಬಾರದು. ಪರ್ಸ್ ನಲ್ಲಿ, ಲಾಕರ್ ನಲ್ಲಿ ಲಕ್ಷ್ಮೀ ಫೋಟೋ ಹಾಗೂ ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನಿಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ.

ಹರಿದ ಮತ್ತು ಹಾಳಾದ ಬಟ್ಟೆ

ಹರಿದ ಮತ್ತು ಹಾಳಾದ ಬಟ್ಟೆ

ಹರಿದ, ಹಾಳಾದ ಬಟ್ಟೆಗಳು ಎಲ್ಲರ ಮನೆಯೊಳಗೆ ಇರುವುದು ಸರ್ವೇಸಾಮಾನ್ಯ. ಒಂದು ವೇಳೆ ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಮೂಟೆ ಕಟ್ಟಿ ಮನೆಯ ಮೂಲೆಯಲ್ಲಿಡುವ ಹವ್ಯಾಸವಿದ್ದರೆ ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಅದನ್ನು ಇಟ್ಟುಕೊಳ್ಳುವುದು ಶುಭಕರವಲ್ಲ.

ಮುರಿದು ಹೋದ ಎಲೆಕ್ಟ್ರಾನಿಕ್ ಉಪಕರಣ

ಮುರಿದು ಹೋದ ಎಲೆಕ್ಟ್ರಾನಿಕ್ ಉಪಕರಣ

ಹಳೆಯ ಇಲ್ಲವೇ ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಏನಾದರೂ ಇದ್ದರೆ ಅದನ್ನು ಮನೆಯೊಳಗೆ ಇಡಬೇಡಿ. ಯಾಕಂದರೆ ಅದು ರಾಹು ಗ್ರಹದ ಕ್ರೋಧವನ್ನು ಆಕರ್ಷಿಸುತ್ತದೆ.

ಜೇಡ ಬಲೆ

ಜೇಡ ಬಲೆ

ಮನೆಯೊಳಗೆ ಜೇಡ ಬಲೆ ಕಟ್ಟುವುದು ಸಾಮಾನ್ಯ. ಜೇಡದ ಬಲೆಗಳು ನಿಮ್ಮ ಏಳಿಗೆಯನ್ನು ಹತೋಟಿಯಲ್ಲಿಡುತ್ತವೆ. ನಿಮ್ಮ ಮನೆಯ ಶಾಂತಿ ಕದಡುತ್ತದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನಲ್ಲಿ ತೊಂದರೆ ಉಂಟು ಮಾಡುತ್ತದೆ. ಋಣಾತ್ಮಕ ಶಕ್ತಿಯನ್ನು ನಿವಾರಿಸಲು ಆಗಾಗ್ಗೆ ಮನೆಯನ್ನು ಲವಣಯುಕ್ತ ನೀರಿನಿಂದ ಶುಚಿಗೊಳಿಸುತ್ತಿರಬೇಕು.

ತೆರೆದ ಕಪಾಟು
 

ತೆರೆದ ಕಪಾಟು

ನಿಮ್ಮ ಮನೆಯಲ್ಲಿರುವ ಕಪಾಟು ಅಥವಾ ಅಲಮಾರು ಸದಾ ಮುಚ್ಚಿಟ್ಟಿರಬೇಕು. ಅಲಮಾರು ತೆರೆದಿದ್ದರೆ ಉತ್ಕರ್ಷ ಅಥವಾ ಅಭಿವೃದ್ಧಿ ನಿಮ್ಮ ಮನೆಯಿಂದ ಹೊರ ಹೋಗುತ್ತದೆ.

ಮುರಿದ ಹೋದ ವಿಗ್ರಹ

ಮುರಿದ ಹೋದ ವಿಗ್ರಹ

ಹರಿದು ಹೋದ ದೇವರ ಪಟಗಳು ಹಾಗೂ ಮುರಿದು ಹೋದ ವಿಗ್ರಹಗಳು ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ.

ಟೆರೆಸ್ ಸ್ವಚ್ಛತೆ

ಟೆರೆಸ್ ಸ್ವಚ್ಛತೆ

ಯಾವಾಗಲು ಮನೆಯ ಛಾವಣಿ ಅಥವಾ ಟೆರೆಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಬೇಡದ ವಸ್ತುಗಳನ್ನೆಲ್ಲ ಅಲ್ಲಿಟ್ಟು ಕಸದ ತೊಟ್ಟಿಯಂತೆ ಮಾಡಬೇಡಿ. ಮನೆಯ ಯಾವುದೇ ಮೂಲೆಯಲ್ಲಿ ಅನಗತ್ಯ ವಸ್ತುಗಳನ್ನು ಇಡಬೇಡಿ.

ಅನಗತ್ಯ ಫೋಟೋ ಬೇಡ

ಅನಗತ್ಯ ಫೋಟೋ ಬೇಡ

ಸಾಮಾನ್ಯವಾಗಿ ಎಲ್ಲರೂ ತಮ್ಮ ಗೋಡೆಗಳ ಮೇಲೆ ಸುಂದರ ಫೋಟೋಗಳನ್ನು ಹಾಕುತ್ತಾರೆ. ತಾಜ್ ಮಹಲ್, ನಟರಾಜ ವಿಗ್ರಹ, ಮಹಾಭಾರತದ ಫೋಟೋ, ಮುಳುಗುತ್ತಿರುವ ಹಡಗು ಮತ್ತು ಜಲಪಾತದ ಫೋಟೋಗಳನ್ನು ಹಾಕಬಾರದು. ಅವು ನಕರಾತ್ಮಕವಾಗಿದ್ದು ದುರಾದೃಷ್ಟವನ್ನು ಆಕರ್ಷಿಸುತ್ತವೆ.

ಮುರಿದ/ಒಡೆದ ವಸ್ತುಗಳು

ಮುರಿದ/ಒಡೆದ ವಸ್ತುಗಳು

ಮುರಿದ ಕುರ್ಚಿ, ಟೇಬಲ್, ಕಬೋರ್ಡ್, ಬೆಡ್ ಏನಾದರೂ ನಿಮ್ಮ ಮನೆಯಲ್ಲಿದ್ದರೆ ಅದನ್ನು ಮೊದಲು ಹೊರಗೆಸೆಯಿರಿ. ಅವು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸಿ, ನಿಮಗೆ ಹಣಕಾಸಿನ ಅಡಚಣೆ ಕಾಣಿಸಿಕೊಳ್ಳುತ್ತದೆ.

ಕೊನೆಮಾತು

ಕೊನೆಮಾತು

ವಾಸ್ತುಶಾಸ್ತ್ರವನ್ನು ನಂಬುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ನಮ್ಮಲ್ಲಿ ಅನೇಕರು ಇದನ್ನು ಮೂಡನಂಬಿಕೆ ಎಂದು ಕರೆಯುವವರು ಇದ್ದಾರೆ. ಧನ ಸಂಪತ್ತು ವೃದ್ಧಿಗೆ ಹಾಗು ಹಾನಿಗೆ ವಾಸ್ತುಶಾಸ್ತ್ರದ ಪ್ರಕಾರ ಅನೇಕ ನಂಬಿಕೆಗಳಿವೆ. ಆದರೆ ಅದೆಲ್ಲವನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ.

English summary

Keeping These Things at Home Increases Poverty in Life

Keeping These Things at Home Increases Poverty in Life.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more