For Quick Alerts
ALLOW NOTIFICATIONS  
For Daily Alerts

ಟಾಪ್ 10 ಅತೀ ಶ್ರೀಮಂತ ಭಾರತೀಯರು ಯಾರು ಗೊತ್ತಾ?

|

ಭಾರತದ ಅತೀ ಶ್ರೀಮಂತ ವ್ಯಕ್ತಿಗಳನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿ ಇರುತ್ತದೆ. ವಿಭಿನ್ನ ಸಂಗತಿಗಳನ್ನೊಳಗೊಂಡ ಅಂಕಿಅಂಶಗಳ ಸಂಶೋಧನಾ ವರದಿಗಳು ಪ್ರಕಟಣೆಯಾಗುತ್ತಲೇ ಇರುತ್ತವೆ. ಫೋರ್ಬ್ಸ್ ನಿಯತಕಾಲಿಕೆ ೨೦೧೮ರ ಭಾರತದ ಅತೀ ಶ್ರೀಮಂತ ಹತ್ತು ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತದ ಟಾಪ್ 10 ಅತಿ ಶ್ರೀಮಂತ ಮುಖ್ಯಮಂತ್ರಿಗಳು

ಮುಕೇಶ್ ಅಂಬಾನಿ
 

ಮುಕೇಶ್ ಅಂಬಾನಿ

ಎಲ್ಲರೂ ಊಹಿಸಬಲ್ಲ ಹೆಸರು ಎಂದರೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸತತವಾಗಿ ಕಳೆದ 11 ವರ್ಷಗಳಿಂದ ಮುಕೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಅಂಬಾನಿ ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ.

ನಿವ್ವಳ ಸಂಪತ್ತು: 47.7 ಬಿಲಿಯನ್ ಡಾಲರ್ ವಿಶ್ವದ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ

ಅಜೀಂ ಪ್ರೇಮ್ ಜೀ

ಫೋರ್ಬ್ಸ್ ಬಿಡುಗಡೆ ಮಾಡಿದ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಮುಖ ಉದ್ಯಮಿ ಅಜೀಂ ಪ್ರೇಮ್ ಜೀ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತೀಯ ಟೆಕ್ ಉದ್ಯಮಿ ಅಜೀಮ್ ಪ್ರೇಮ್ ಜೀಯವರ ವಿಪ್ರೊ ಭಾರತದ ಮೂರನೇ ಅತಿ ದೊಡ್ಡ ಹೊರಗುತ್ತಿಗೆದಾರ ಸಂಸ್ಥೆಯಾಗಿದೆ. 1966 ರಲ್ಲಿ ಅವರ ತಂದೆಯು ಮರಣ ಹೊಂದಿದ ನಂತರ ಅಧ್ಯಯನ ಅರ್ದಕ್ಕೆ ನಿಲ್ಲಿಸಿ ತಮ್ಮ ಕುಟುಂಬದ ಅಡುಗೆ ತೈಲ ವ್ಯಾಪಾರವನ್ನು ನೋಡಿಕೊಳ್ಳಲು ಹಿಂತಿರುಗಿದರು.

ನಿವ್ವಳ ಸಂಪತ್ತು: 21.2 ಶತಕೋಟಿ ಡಾಲರ್

ಹಿಂದುಜಾ ಕುಟುಂಬ

ಫೋರ್ಬ್ಸ್ ಪಟ್ಟಿಯಲ್ಲಿ ಹಿಂದುಜಾ ಸಹೋದರರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಸಹೋದರರಾದ ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ಇವರು ಹಿಂದೂಜಾ ಗ್ರೂಪ್ ನಿಯಂತ್ರಿಸುತ್ತಾರೆ.

ನಿವ್ವಳ ಸಂಪತ್ತು: 18.2 ಶತಕೋಟಿ ಡಾಲರ್

ಲಕ್ಷ್ಮಿ ಮಿತ್ತಲ್
 

ಲಕ್ಷ್ಮಿ ಮಿತ್ತಲ್

ಪಟ್ಟಿಯಲ್ಲಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮಿ ಮಿತ್ತಲ್ ವಿಶ್ವದ ಅತಿದೊಡ್ಡ ಉಕ್ಕು ತಯಾರಕ ಆರ್ಸೆಲರ್ ಮಿತ್ತಲ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2006 ರಲ್ಲಿ ಫ್ರಾನ್ಸ್ ನ ಅರ್ಸೆಲರ್ ಕಂಪನಿಯನ್ನು ವಿಲೀನಗೊಳಿಸಿದರು.

ನಿವ್ವಳ ಸಂಪತ್ತು: 18.2 ಶತಕೋಟಿ ಡಾಲರ್

ಪಲ್ಲೋಂಜಿ ಮಿಸ್ತ್ರಿ

ಭಾರತದಲ್ಲಿ ಶ್ರೀಮಂತರ ಪಟ್ಟಿಯಲ್ಲಿ, ಭಾರತದ ಕನಸ್ಟ್ರಕ್ಷನ್ ಉದ್ಯಮಿ ಮತ್ತು ಶಪೂರ್ಜಿ ಪಲೋಂಜಿ ಗ್ರೂಪ್ ಅಧ್ಯಕ್ಷ ಪಲ್ಲೋಂಜಿ ಮಿಸ್ತ್ರಿ ಸ್ಥಾನ ಪಡೆದಿದ್ದಾರೆ.

ನಿವ್ವಳ ಸಂಪತ್ತು: 15.4 ಶತಕೋಟಿ ಡಾಲರ್

ಗೋದ್ರೆಜ್ ಗ್ರೂಪ್

ಫೋರ್ಬ್ಸ್ ಬಿಡುಗಡೆ ಮಾಡಿರುವ ಭಾರತ ಶ್ರೀಮಂತರ ಪಟ್ಟಿಯಲ್ಲಿ ಗೋದ್ರೆಜ್ ಗ್ರೂಪ್ ಆರನೇ ಸ್ಥಾನದಲ್ಲಿದೆ. ಗೋದ್ರೆಜ್ ಗ್ರೂಪ್ಅನ್ನು ಗೋದ್ರೆಜ್ ಕುಟುಂಬದವರು ನಿಯಂತ್ರಿಸುತ್ತಿದ್ದ, 120 ವರ್ಷಗಳಿಂದ ಗ್ರಾಹಕ ಸರಕುಗಳನ್ನು ಪೂರೈಸುತ್ತಿದೆ.

ನಿವ್ವಳ ಸಂಪತ್ತು: 14.2 ಶತಕೋಟಿ ಡಾಲರ್

ಶಿವ ನಾಡರ್

ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶಿವ ನಾಡರ್ ಅವರು ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ನಿವ್ವಳ ಸಂಪತ್ತು: 13.6 ಶತಕೋಟಿ ಡಾಲರ್

ಕುಮಾರ್ ಬಿರ್ಲಾ

ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಬಿರ್ಲಾ ಎಂಟನೆಯ ಸ್ಥಾನದಲ್ಲಿದ್ದಾರೆ. ಸಿಮೆಂಟ್, ಅಲ್ಯೂಮಿನಿಯಮ್ ನಿಂದ ಹಿಡಿದು ಟೆಲಿಕಾಂ, ಹಣಕಾಸು ಸೇವೆಗಳವರೆಗೂ ಇದು ವ್ಯಾಪಿಸಿದೆ. ಇವರ ತಂದೆ ಆದಿತ್ಯ ಬಿರ್ಲಾ ನಿಧನರ ನಂತರ, 28 ನೇ ವಯಸ್ಸಿನಿಂದ ಕುಟುಂಬದ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ.

ನಿವ್ವಳ ಸಂಪತ್ತು: 12.7 ಶತಕೋಟಿ ಡಾಲರ್

ದಿಲೀಪ್ ಶಾಂಘ್ವಿ

ಸನ್ ಫಾರ್ಮಾಸ್ಯುಟಿಕಲ್ಸ್ ಅಧ್ಯಕ್ಷ ದಿಲೀಪ್ ಶಾಂಘ್ವಿ ಶ್ರೀಮಂತ ಪಟ್ಟಿಯಲ್ಲಿ ಒಂಬತ್ತನೆಯ ಸ್ಥಾನದಲ್ಲಿದ್ದಾರೆ. ನಿವ್ವಳ ಮೌಲ್ಯ: 12.1 ಬಿಲಿಯನ್ ಡಾಲರ್

ಗೌತಮ್ ಅದಾನಿ

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಫೋರ್ಬ್ಸ್ನ ಭಾರತದ ಶ್ರೀಮಂತ ಪಟ್ಟಿಯಲ್ಲಿದ್ದು, ಅದಾನಿ ಗ್ರೂಪ್ ವ್ಯವಹಾರ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ರಿಯಲ್ ಎಸ್ಟೇಟ್ ಮತ್ತು ಸರಕುಗಳನ್ನೂ ಒಳಗೊಂಡಿದೆ.

ನಿವ್ವಳ ಮೌಲ್ಯ: 12.1 ಶತಕೋಟಿ ಡಾಲರ್ ಹಣವನ್ನು ಸಂಪಾದಿಸಿದ್ದಾರೆ.

Read more about: india money reliance finance news
English summary

Top 10 richest Indians 2018

Reliance chairman Mukesh Ambani tops the India Rich List 2018 with a net worth of $47.7 billion.
Story first published: Thursday, September 27, 2018, 11:24 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more